ಐಷಾರಾಮಿ ಜೆಟ್ ವಿಮಾನ ಅನಾವರಣಗೊಳಿಸಿದ Honda

ವಿಶ್ವದ ಅತಿ ದೊಡ್ಡ ಸ್ಕೂಟರ್, ಮೋಟಾರ್ ಸೈಕಲ್ ಹಾಗೂ ಕಾರುಗಳನ್ನು ಉತ್ಪಾದಿಸುವ ಹೋಂಡಾ (Honda) ಕಂಪನಿಯು ಹೊಸ ಮಾದರಿಯ ಜೆಟ್ ವಿಮಾನಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಯಾಗಿದೆ. ಕಂಪನಿಯು ಈ ಜೆಟ್ ವಿಮಾನವನ್ನು ಅನಾವರಣಗೊಳಿಸಿದೆ. ಹೆಚ್ಚು ಇಂಧನ ಮಿತವ್ಯಯ ನೀಡಲು ಹೊಸ ವಿಮಾನವನ್ನು ವಿನ್ಯಾಸಗೊಳಿಸಲಾಗಿದೆ ಎಂದು Honda ಕಂಪನಿ ಹೇಳಿದೆ.

ಐಷಾರಾಮಿ ಜೆಟ್ ವಿಮಾನ ಅನಾವರಣಗೊಳಿಸಿದ Honda

ಇದೊಂದು ಸಣ್ಣ ಐಷಾರಾಮಿ ವಿಮಾನವಾಗಿದೆ. ಹೋಂಡಾ ಈ ಜೆಟ್ ವಿಮಾನವನ್ನು ವೈಯಕ್ತಿಕ ಬಳಕೆಗಾಗಿ ವಿನ್ಯಾಸಗೊಳಿಸಿದೆ. ಹೋಂಡಾ ಕಂಪನಿಯು ಇತ್ತೀಚಿನ ದಿನಗಳಲ್ಲಿ ವಿಮಾನ ಉತ್ಪಾದನೆಯ ಮೇಲೆ ಹೆಚ್ಚು ಕಾರ್ಯ ನಿರ್ವಹಿಸುತ್ತಿದೆ. ಕಂಪನಿಯು ತನ್ನ ಹೊಸ ಹೋಂಡಾ ಜೆಟ್ 2600 ಕಾನ್ಸೆಪ್ಟ್ ಮಾದರಿಯನ್ನು ಇತ್ತೀಚೆಗೆ ಲಾಸ್ ವೇಗಾಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಿತು.

ಐಷಾರಾಮಿ ಜೆಟ್ ವಿಮಾನ ಅನಾವರಣಗೊಳಿಸಿದ Honda

ಈ ಜೆಟ್ ವಿಮಾನವು 2,625 ನಾಟಿಕಲ್ ಮೈಲುಗಳ ವ್ಯಾಪ್ತಿಯನ್ನು ಹೊಂದಿದೆ. ಅಂದರೆ ಸುಮಾರು 4,800 ಕಿಮೀ ವ್ಯಾಪ್ತಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಹೋಂಡಾ ಕಂಪನಿಯು ಈ ಜೆಟ್ ವಿಮಾನಕ್ಕೆ ಎಲೈಟ್ ಎಸ್ ಎಂಬ ಹೆಸರನ್ನಿಟ್ಟಿದೆ. ಅನಾವರಣಗೊಂಡಿರುವ ಹೋಂಡಾ ಜೆಟ್ 2600 ಕಾನ್ಸೆಪ್ಟ್ ವಿಮಾನ ಹಾಗೂ ಐಷಾರಾಮಿ ವಿಮಾನಗಳ ನಡುವೆ ಕೆಲವು ಫೀಚರ್ ಗಳು ಹೊಂದಾಣಿಕೆಯಾಗುತ್ತವೆ.

ಐಷಾರಾಮಿ ಜೆಟ್ ವಿಮಾನ ಅನಾವರಣಗೊಳಿಸಿದ Honda

ಹೊಸ ಎಲೈಟ್ ಜೆಟ್ ವಿಮಾನವು ಹೆಚ್ಚು ಇಂಧನ ಮಿತವ್ಯಯ ನೀಡುವುದರ ಜೊತೆಗೆ ಹೆಚ್ಚಿನ ವೇಗದಲ್ಲಿ ಚಲಿಸುತ್ತದೆ. ಈ ಜೆಟ್ ವಿಮಾನವು ಈಗ ಬಳಕೆಯಲ್ಲಿರುವ ಲಘು ಜೆಟ್‌ಗಳಿಗಿಂತ 20% ಹೆಚ್ಚು ಇಂಧನ ಮಿತವ್ಯಯವನ್ನು ನೀಡುತ್ತದೆ ಎಂದು ಹೇಳಲಾಗಿದೆ. ಈ ವಿಮಾನದ ಗರಿಷ್ಠ ಕ್ರೂಸ್ ವೇಗ 422KTAS, ಗರಿಷ್ಠ ಕ್ರೂಸ್ ಎತ್ತರ FL430, NBAA IFR ಶ್ರೇಣಿ 1437 nm ಹಾಗೂ ಪ್ಯಾಕೇಜ್ ಸ್ಪೇಸ್ 66 ಘನ ಅಡಿಗಳಾಗಿದೆ.ಸಿಟಿ ಸೆಡಾನ್ ಕಾರಿನ ಮೇಲೂ ಈ ಕೊಡುಗೆ ಲಭ್ಯವಿದ್ದು, ರೂ. 53 ಸಾವಿರಗಳವರೆಗೆ ಕೊಡುಗೆ ಲಭ್ಯವಿರಲಿದೆ.ಹೋಂಡಾ ಕಂಪನಿಯು ಹೊಸ ತಲೆಮಾರಿನ ಸಿಟಿ ಸೆಡಾನ್ ಕಾರಿನ ಮಾರಾಟದ ನಡುವೆಯೂ ನಾಲ್ಕನೇ ತಲೆಮಾರಿನ ಸಿಟಿ ಸೆಡಾನ್ ಕಾರಿನ ಮಾರಾಟವನ್ನು ಸಹ ಮುಂದುವರೆಸಿದೆ. ಹೊಸ ಸಿಟಿ ಕಾರಿನ ಮೇಲೆ ಕ್ಯಾಶ್‌ಬ್ಯಾಕ್, ಎಕ್ಸ್‌ಚೆಂಜ್, ಆಕ್ಸೆಸರಿಸ್ ಸೇರಿದಂತೆ ಹಲವು ಕೊಡುಗೆಗಳನ್ನು ನೀಡಲಾಗುತ್ತದೆ.

ಐಷಾರಾಮಿ ಜೆಟ್ ವಿಮಾನ ಅನಾವರಣಗೊಳಿಸಿದ Honda

ಹೊಸ ಹೋಂಡಾ ಜೆಟ್ ಎಲೈಟ್ ಎಸ್ ಐಷಾರಾಮಿ ವಿಮಾನವನ್ನು ಕೆಲವು ಅದ್ಭುತ ಫೀಚರ್ ಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಹೋಂಡಾ ಕಂಪನಿಯು ಈ ಜೆಟ್ ವಿಮಾನವನ್ನು ವಿಶ್ವದ ಅತ್ಯಾಧುನಿಕ ಲೈಟ್ ಜೆಟ್ ವಿಮಾನವೆಂದು ಉಲ್ಲೇಖಿಸುತ್ತದೆ. ಹೋಂಡಾ ಜೆಟ್ ಎಲೈಟ್ ಎಸ್ ವಿಮಾನವನ್ನು ಮೂರು ಕ್ಯಾಬಿನ್ ಸಂರಚನೆಗಳಲ್ಲಿ ನೀಡಲು ನಿರ್ಧರಿಸಿದೆ.

ಐಷಾರಾಮಿ ಜೆಟ್ ವಿಮಾನ ಅನಾವರಣಗೊಳಿಸಿದ Honda

ಈ ವಿಮಾನವು ನಾಲ್ಕು ಆಸನ, ಎರಡು ಆಸನ ಹಾಗೂ ಕೋಚ್ ಮಾದರಿಯ ನಾಲ್ಕು ಆಸನ ಆಯ್ಕೆಗಳಲ್ಲಿ ಲಭ್ಯವಿರಲಿದೆ. ನಾಲ್ಕು ಆಸನಗಳ ಆಯ್ಕೆಯಲ್ಲಿ ಎರಡು ಆಸನಗಳು ಪರಸ್ಪರ ಎದುರಾಗಿರಲಿವೆ. ಎರಡನೆಯ ಎರಡು ಆಸನಗಳು ಗರಿಷ್ಠ ಸೌಕರ್ಯದೊಂದಿಗೆ ಲಭ್ಯವಿದ್ದರೆ ಕೊನೆಯ ನಾಲ್ಕು ಆಸನಗಳು ಆರಾಮದಾಯಕ ಹಾಸಿಗೆಯನ್ನು ಹೊಂದಿರಲಿವೆ. ಈ ಮೂಲಕ ಹೋಂಡಾ ಕಂಪನಿಯು ತನ್ನ ಗ್ರಾಹಕರಿಗೆ ಹಲವು ಫೀಚರ್ ಗಳನ್ನು ನೀಡಲು ನಿರ್ಧರಿಸಿದೆ.

ಐಷಾರಾಮಿ ಜೆಟ್ ವಿಮಾನ ಅನಾವರಣಗೊಳಿಸಿದ Honda

ಹೊಸ ಹೋಂಡಾ ಜೆಟ್ ಎಲೈಟ್ ಎಸ್ ಐಷಾರಾಮಿ ವಿಮಾನವನ್ನು ಎಲೈಟ್ ಗ್ರಾಹಕರನ್ನು ಆಕರ್ಷಿಸಲು ಅಭಿವೃದ್ಧಿಪಡಿಸಲಾಗಿದೆ. ಈ ಜೆಟ್ ವಿಮಾನದಲ್ಲಿರುವ ಸೀಟುಗಳು ಇದಕ್ಕೆ ಪುಷ್ಟಿ ನೀಡುತ್ತವೆ. ಇತ್ತೀಚೆಗಷ್ಟೇ ಅನಾವರಣಗೊಂಡಿರುವ ಹೋಂಡಾ ಜೆಟ್ 2600 ಕಾನ್ಸೆಪ್ಟ್ ವಿಮಾನವನ್ನು ಶೀಘ್ರವೇ ಉತ್ಪಾದಿಸುವ ನಿರೀಕ್ಷೆಗಳಿವೆ. ಈ ವಿಮಾನವನ್ನು ವಿಶ್ವದ ಅಗ್ಗದ ಹಾಗೂ ಅತ್ಯಂತ ಪರಿಣಾಮಕಾರಿಯಾದ ವಿಮಾನವೆಂದು ಪರಿಗಣಿಸಲಾಗಿದೆ. ಈ ವಿಮಾನವು ಭವಿಷ್ಯದಲ್ಲಿ ವಿಮಾನಯಾನ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನುಂಟು ಮಾಡುವ ನಿರೀಕ್ಷೆಗಳಿವೆ.

ಐಷಾರಾಮಿ ಜೆಟ್ ವಿಮಾನ ಅನಾವರಣಗೊಳಿಸಿದ Honda

ಮುಂಬರುವ ಹಬ್ಬಗಳ ಸಂದರ್ಭದಲ್ಲಿ ಹೊಸ ವಾಹನಗಳ ಖರೀದಿಯನ್ನು ಉತ್ತೇಜಿಸಲು ವಾಹನ ತಯಾರಕ ಕಂಪನಿಗಳು ಪ್ರಮುಖ ವಾಹನಗಳ ಖರೀದಿ ಮೇಲೆ ಆಕರ್ಷಕ ಕೊಡುಗೆಗಳನ್ನು ನೀಡುತ್ತಿವೆ. ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ಸಹ ತನ್ನ ಪ್ರಮುಖ ಕಾರುಗಳ ಖರೀದಿ ಮೇಲೆ ಹಲವು ಕೊಡುಗೆಗಳನ್ನು ನೀಡುತ್ತಿದೆ. ಕೋವಿಡ್ ಕಾರಣದಿಂದ ಮಾರಾಟದಲ್ಲಿ ಕುಸಿತ ದಾಖಲಿಸಿದ್ದ ವಾಹನ ತಯಾರಕ ಕಂಪನಿಗಳು ಈಗ ಚೇತರಿಸಿಕೊಳ್ಳುತ್ತಿವೆ.

ಐಷಾರಾಮಿ ಜೆಟ್ ವಿಮಾನ ಅನಾವರಣಗೊಳಿಸಿದ Honda

ಹೋಂಡಾ ಕಾರು ಕಂಪನಿಯು ತನ್ನ Amaze, Jazz, WR-V, City ಸೇರಿದಂತೆ ವಿವಿಧ ಕಾರು ಮಾದರಿಗಳ ಮೇಲೆ ಅಕ್ಟೋಬರ್ ತಿಂಗಳಿನಲ್ಲಿ ಹಲವು ಕೊಡುಗೆಗಳನ್ನು ನೀಡುತ್ತಿದೆ. ಈ ಕೊಡುಗೆಗಳು ಈ ತಿಂಗಳಾಂತ್ಯವರೆಗೆ ಲಭ್ಯವಿರಲಿದ್ದು, ಅಮೇಜ್, ಜಾಝ್ ಹಾಗೂ ಡಬ್ಲ್ಯುಆರ್ ವಿ ಕಾರುಗಳ ಮೇಲೆ ಗರಿಷ್ಠ ರೂ.53 ಸಾವಿರಗಳವರೆಗೆ ರಿಯಾಯಿತಿ ನೀಡಲಾಗುತ್ತದೆ.

ಐಷಾರಾಮಿ ಜೆಟ್ ವಿಮಾನ ಅನಾವರಣಗೊಳಿಸಿದ Honda

ಹೋಂಡಾ ಕಂಪನಿಯು ಅಮೇಜ್ ಸೆಡಾನ್ ಕಾರಿನ ಎಎಂಟಿ ಆವೃತ್ತಿ ಸೇರಿದಂತೆ ಎಲ್ಲಾ ಮಾದರಿಗಳ ಮೇಲೂ ರೂ. 18 ಸಾವಿರಗಳವರೆಗೆ ಕೊಡುಗೆ ನೀಡುತ್ತಿದೆ. ಈ ಕೊಡುಗೆಗಳಲ್ಲಿ ಕ್ಯಾಶ್‌‌ಬ್ಯಾಕ್, ಎಕ್ಸ್‌ಚೆಂಜ್ ಗಳು ಸೇರಿವೆ. ಹೋಂಡಾ ಕಂಪನಿಯು ಇತ್ತೀಚಿಗಷ್ಟೇ ಬಿಡುಗಡೆಗೊಳಿಸಿದ 2021ರ ಅಮೇಜ್ ಮಾದರಿಯ ಮೇಲೆ ಯಾವುದೇ ಕೊಡುಗೆಗಳನ್ನು ನೀಡುತ್ತಿಲ್ಲ. 2020ರ ಮಾದರಿಯ ಮೇಲೆ ಈ ಕೊಡುಗೆಗಳನ್ನು ನೀಡುತ್ತಿದೆ.

ಐಷಾರಾಮಿ ಜೆಟ್ ವಿಮಾನ ಅನಾವರಣಗೊಳಿಸಿದ Honda

ಈ ಕೊಡುಗೆಗಳು ಹಳೆಯ ಸ್ಟಾಕ್ ಮುಗಿಯುವವರೆಗೂ ಮಾತ್ರ ಈ ಲಭ್ಯವಿರಲಿವೆ. ಕಂಪನಿಯು ತನ್ನ ಕ್ರಾಸ್ಒವರ್ ಎಸ್‌ಯುುವಿ ಮಾದರಿಯಾದ ಡಬ್ಲ್ಯುಆರ್ ವಿಯ ಎಲ್ಲಾ ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳ ಮೇಲೂ ರೂ. 40 ಸಾವಿರಗಳವರೆಗೆ ಕೊಡುಗೆಗಳನ್ನು ನೀಡುತ್ತಿದೆ. ಈ ಕೊಡುಗೆಗಳಲ್ಲಿ ಕ್ಯಾಶ್ ಬ್ಯಾಕ್, ಉಚಿತ ಆಕ್ಸೆಸರಿಸ್ ಪ್ಯಾಕೇಜ್ ಗಳನ್ನು ನೀಡಲಾಗುತ್ತದೆ.

Most Read Articles

Kannada
Read more on ಹೋಂಡಾ honda
English summary
Honda unveils elite s luxury jet aircraft details
Story first published: Thursday, October 14, 2021, 17:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X