ವ್ಯಾಲೆಟ್ ಪಾರ್ಕಿಂಗ್‍‍ನಲ್ಲಿ ವಾಹನಗಳಿಗೆ ಹಾನಿಯಾದರೆ ಹೋಟೆಲ್‍‍ಗಳದ್ದೇ ಜವಾಬ್ದಾರಿ..!

ಭಾರತದಲ್ಲಿ ವಾಹನಗಳ ಸಂಖ್ಯೆ ವಿಪರೀತವಾಗಿ ಹೆಚ್ಚಿದ್ದು, ವಾಹನಗಳನ್ನು ಪಾರ್ಕಿಂಗ್ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ. ಪಾರ್ಕಿಂಗ್‍‍ಗಾಗಿ ದುಬಾರಿ ದರವನ್ನು ವಿಧಿಸುವ ಮಾಲ್‍‍ಗಳು, ಹೋಟೆಲ್‍‍ಗಳು ವಾಹನಕ್ಕೆ ಏನಾದರೂ ತೊಂದರೆಯಾದರೇ ಅವುಗಳ ಜವಾಬ್ದಾರಿಯನ್ನು ಹೊರಲು ಸಿದ್ದರಿರುವುದಿಲ್ಲ.

ವ್ಯಾಲೆಟ್ ಪಾರ್ಕಿಂಗ್‍‍ನಲ್ಲಿ ವಾಹನಗಳಿಗೆ ಹಾನಿಯಾದರೆ ಹೋಟೆಲ್‍‍ಗಳದ್ದೇ ಜವಾಬ್ದಾರಿ..!

ಆದರೆ ಇನ್ನು ಮುಂದೆ ಆ ರೀತಿಯಾಗುವುದಿಲ್ಲ. ವ್ಯಾಲೆಟ್ ಪಾರ್ಕಿಂಗ್ ನೀಡುವ ಹೋಟೆಲ್‌ಗಳು ಆ ವಾಹನವು ಕಳ್ಳತನವಾದರೆ ಅಥವಾ ಹಾನಿಯಾದರೆ ಅದರ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ ಎಂದು ಭಾರತದ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ವ್ಯಾಲೆಟ್ ಪಾರ್ಕಿಂಗ್‍‍ನಲ್ಲಿ ವಾಹನಗಳಿಗೆ ಹಾನಿಯಾದರೆ ಹೋಟೆಲ್‍‍ಗಳದ್ದೇ ಜವಾಬ್ದಾರಿ..!

ಹೋಟೆಲ್‌ನ ಸಿಬ್ಬಂದಿ ವ್ಯಾಲೆಟ್ ಪಾರ್ಕಿಂಗ್‍‍ನಲ್ಲಿ ವಾಹನವನ್ನು ಪಾರ್ಕಿಂಗ್ ಮಾಡಿದಾಗ ವಾಹನಗಳು ಮಾಲೀಕರ ಜವಾಬ್ದಾರಿ ಎಂದು ಪರಿಹಾರವನ್ನು ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ವ್ಯಾಲೆಟ್ ಪಾರ್ಕಿಂಗ್‍‍ನಲ್ಲಿ ವಾಹನಗಳಿಗೆ ಹಾನಿಯಾದರೆ ಹೋಟೆಲ್‍‍ಗಳದ್ದೇ ಜವಾಬ್ದಾರಿ..!

ಸ್ಪರ್ಧಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ 5 ಸ್ಟಾರ್ ಹೋಟೆಲ್‍‍ವೊಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನಂತರ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ವ್ಯಕ್ತಿಯೊಬ್ಬ 5 ಸ್ಟಾರ್ ಹೋಟೆಲಿನಲ್ಲಿ ತನ್ನ ಕಾರ್ ಅನ್ನು ವ್ಯಾಲೆಟ್ ಪಾರ್ಕಿಂಗ್‍‍ಗೆ ನೀಡಿದ್ದ. ಆದರೆ ಆತ ಮತ್ತೆ ತನ್ನ ಕಾರ್ ಅನ್ನು ಹಿಂದಕ್ಕೆ ಪಡೆಯಲಿಲ್ಲ.

ವ್ಯಾಲೆಟ್ ಪಾರ್ಕಿಂಗ್‍‍ನಲ್ಲಿ ವಾಹನಗಳಿಗೆ ಹಾನಿಯಾದರೆ ಹೋಟೆಲ್‍‍ಗಳದ್ದೇ ಜವಾಬ್ದಾರಿ..!

ಪಾರ್ಕಿಂಗ್ ಮಾಡಲಾಗಿದ್ದ ಕಾರ್ ಅನ್ನು ಅಪರಿಚಿತರು ಅಲ್ಲಿಂದ ಕೊಂಡೊಯ್ದಿದ್ದರು. ವಿಮೆ ಕಂಪನಿಯು ಕಾರಿನ ಮಾಲೀಕನಿಗೆ ವಿಮಾ ಹಣವನ್ನು ಪಾವತಿಸಿತು. ಆದರೂ ಸಹ ಆ ವ್ಯಕ್ತಿಯು 5 ಸ್ಟಾರ್ ಹೋಟೆಲ್‌ನಿಂದ ಪರಿಹಾರವನ್ನು ಕೋರಿದರು.

ವ್ಯಾಲೆಟ್ ಪಾರ್ಕಿಂಗ್‍‍ನಲ್ಲಿ ವಾಹನಗಳಿಗೆ ಹಾನಿಯಾದರೆ ಹೋಟೆಲ್‍‍ಗಳದ್ದೇ ಜವಾಬ್ದಾರಿ..!

ಆದರೆ ಹೋಟೆಲ್ ಪರಿಹಾರ ನೀಡಲು ನಿರಾಕರಿಸಿತು. ಕಾರಿನ ಮಾಲೀಕರು ಸ್ಪರ್ಧಾ ಆಯೋಗದ ಮೊರೆ ಹೋಗಿದ್ದರು. ಸ್ಪರ್ಧಾ ಆಯೋಗವು ಕಾರಿನ ಮಾಲೀಕರ ಪರವಾಗಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ 5 ಸ್ಟಾರ್ ಹೋಟೆಲಿನ ಮಾಲೀಕರು ಸುಪ್ರೀಂ ಕೋರ್ಟಿನ ಮೊರೆ ಹೋಗಿದ್ದರು.

ವ್ಯಾಲೆಟ್ ಪಾರ್ಕಿಂಗ್‍‍ನಲ್ಲಿ ವಾಹನಗಳಿಗೆ ಹಾನಿಯಾದರೆ ಹೋಟೆಲ್‍‍ಗಳದ್ದೇ ಜವಾಬ್ದಾರಿ..!

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಎಂ.ಶಾಂತನಗೌಡರ್ ಹಾಗೂ ನ್ಯಾಯಮೂರ್ತಿ ಅಜಯ್ ರಸ್ತೋಗಿರವರುಗಳಿದ್ದ ಪೀಠವು, ವಾಹನವನ್ನು ಪಡೆದ ನಂತರ ಹೋಟೆಲ್ ಸಿಬ್ಬಂದಿ ಅಥವಾ ವ್ಯಾಲೆಟ್‍‍ನವರು, ಆ ವಾಹನದ ಮಾಲೀಕರಿಗೆ ವಾಹನವನ್ನು ಸುರಕ್ಷಿತ ಸ್ಥಿತಿಯಲ್ಲಿ ಹಿಂದಿರುಗಿಸುವ ಬಾಧ್ಯತೆಯನ್ನು ಹೊಂದಿರುತ್ತಾರೆ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ವ್ಯಾಲೆಟ್ ಪಾರ್ಕಿಂಗ್‍‍ನಲ್ಲಿ ವಾಹನಗಳಿಗೆ ಹಾನಿಯಾದರೆ ಹೋಟೆಲ್‍‍ಗಳದ್ದೇ ಜವಾಬ್ದಾರಿ..!

ಯಾವುದೇ ಸಂದರ್ಭದಲ್ಲಿ ತನ್ನ ಅತಿಥಿಯ ವಾಹನಕ್ಕೆ ಸಂಬಂಧಿಸಿದಂತೆ ಹೋಟೆಲಿನ ಮಾಲೀಕರು ಅದರ ನಿರ್ಲಕ್ಷ್ಯ ಅಥವಾ ಅದರ ಸೇವಕರ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಪುರಾವೆಯ ಈ ಹೊರೆ ಬಿಡುಗಡೆಯಾದ ನಂತರವೇ ವಿನಾಯಿತಿ ಷರತ್ತು ಜಾರಿಗೆ ಬರಬಹುದು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ವ್ಯಾಲೆಟ್ ಪಾರ್ಕಿಂಗ್‍‍ನಲ್ಲಿ ವಾಹನಗಳಿಗೆ ಹಾನಿಯಾದರೆ ಹೋಟೆಲ್‍‍ಗಳದ್ದೇ ಜವಾಬ್ದಾರಿ..!

ಅಂತಹ ನಷ್ಟ ಅಥವಾ ಹಾನಿಯನ್ನು ವಿನಾಯಿತಿ ಷರತ್ತು ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದು ಸಾಬೀತುಪಡಿಸುವ ಹೊರೆ ಹೋಟೆಲ್‌ನ ಮೇಲೂ ಇರುತ್ತದೆ. ವಾಹನವನ್ನು ಹಿಂದಿರುಗಿಸುವಲ್ಲಿನ ವೈಫಲ್ಯವು ಜಾಮೀನು ಸಂಬಂಧದ ಮೂಲದಲ್ಲಿ ಹೊಡೆಯುತ್ತದೆ ಮತ್ತು ಹೋಟೆಲ್ ವಿರುದ್ಧ ನಿರ್ಲಕ್ಷ್ಯ ಪ್ರಕರಣಕ್ಕೆ ಕಾರಣವಾಗುತ್ತದೆ ಎಂದು ಹೇಳಿದೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ವ್ಯಾಲೆಟ್ ಪಾರ್ಕಿಂಗ್‍‍ನಲ್ಲಿ ವಾಹನಗಳಿಗೆ ಹಾನಿಯಾದರೆ ಹೋಟೆಲ್‍‍ಗಳದ್ದೇ ಜವಾಬ್ದಾರಿ..!

ಇನ್ನು ಮುಂದೆ ವ್ಯಾಲೆಟ್ ಅಥವಾ ಸ್ಟಾಫ್ ಪಾರ್ಕಿಂಗ್ ಮಾಡುವ ವಾಹನಗಳನ್ನು ಅದೇ ಸ್ಥಿತಿಯಲ್ಲಿ ಹಿಂತಿರುಗಿಸುವಂತೆ ಮಾಡುವ ಜವಾಬ್ದಾರಿಯು ಹೋಟೆಲ್‌ಗಳ ಮೇಲಿರುತ್ತದೆ. ತಮ್ಮ ವಾಹನಗಳನ್ನು ವಾಹನ ನಿಲುಗಡೆ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡುವವರಿಗೆ ಇದು ಅನ್ವಯಿಸುವುದಿಲ್ಲ.

ವ್ಯಾಲೆಟ್ ಪಾರ್ಕಿಂಗ್‍‍ನಲ್ಲಿ ವಾಹನಗಳಿಗೆ ಹಾನಿಯಾದರೆ ಹೋಟೆಲ್‍‍ಗಳದ್ದೇ ಜವಾಬ್ದಾರಿ..!

ಬೇರೆ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕಿಂಗ್ ಮಾಡಿದಾಗ ಉಂಟಾಗುವ ಕಳ್ಳತನ ಅಥವಾ ಹಾನಿಗಳಿಂದ ಕಾರಿನ ಮಾಲೀಕರಿಗೆ ಯಾವುದೇ ರಕ್ಷಣೆ ಸಿಗುವುದಿಲ್ಲ. ವಾಹನ ಮಾಲೀಕರು ಬೇರೆ ವಾಹನ ನಿಲುಗಡೆ ಸ್ಥಳದಲ್ಲಿ ಪಾರ್ಕಿಂಗ್ ಮಾಡುವ ಬಗ್ಗೆಯೂ ನ್ಯಾಯಾಲಯವು ಹೇಳಿದೆ.

ವ್ಯಾಲೆಟ್ ಪಾರ್ಕಿಂಗ್‍‍ನಲ್ಲಿ ವಾಹನಗಳಿಗೆ ಹಾನಿಯಾದರೆ ಹೋಟೆಲ್‍‍ಗಳದ್ದೇ ಜವಾಬ್ದಾರಿ..!

ಸೂಕ್ತವಾದ ಪಾರ್ಕಿಂಗ್ ಸ್ಥಳವನ್ನು ಹುಡುಕಿ, ವಾಹನವನ್ನು ಸರಿಯಾಗಿ ನಿಲ್ಲಿಸುವುದು, ಹಿಂತಿರುಗುವುದು ಹಾಗೂ ಪಾರ್ಕಿಂಗ್ ಟೋಕನ್ ಅಥವಾ ಸ್ಲಿಪ್ ಅನ್ನು ತೋರಿಸಿದ ನಂತರ ವಾಹನವನ್ನು ಹೊರತೆಗೆಯುವುದು ಮಾಲೀಕರ ಜವಾಬ್ದಾರಿಯಾಗಿದೆ ಎಂದು ಹೇಳಿದೆ.

ವ್ಯಾಲೆಟ್ ಪಾರ್ಕಿಂಗ್‍‍ನಲ್ಲಿ ವಾಹನಗಳಿಗೆ ಹಾನಿಯಾದರೆ ಹೋಟೆಲ್‍‍ಗಳದ್ದೇ ಜವಾಬ್ದಾರಿ..!

ಮಾಲ್‌ಗಳು, ರೈಲ್ವೆ ನಿಲ್ದಾಣಗಳು, ಆಸ್ಪತ್ರೆಗಳು ಮುಂತಾದ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡುವ ವಾಹನಗಳಿಗೆ ಮಾಲೀಕರ ಜವಾಬ್ದಾರಿ ಎಂಬ ಷರತ್ತು ಈಗಲೂ ಅನ್ವಯಿಸುತ್ತದೆ.

Most Read Articles

Kannada
English summary
Hotel responsible for theft damage during valet parking new supreme court order - Read in Kannada
Story first published: Tuesday, November 19, 2019, 10:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X