ವಿಮಾನದ ಬೋರ್ಡಿಂಗ್ ಪಾಸ್‌ ಬಗ್ಗೆ ನಿಮಗೆಷ್ಟು ಗೊತ್ತು?: ಇದು ಹ್ಯಾಕರ್‌ಗಳ ಕೈ ಸೇರಿದರೆ ನಿಧಿ ಸಿಕ್ಕಂತೆ!

ಸುಖಕರ ಹಾಗೂ ಕಡಿಮೆ ಸಮಯದಲ್ಲಿ ನಿಮ್ಮ ಗಮ್ಯ ಸ್ಥಳಗಳಿಗೆ ಕೊಂಡೊಯ್ಯುವ ವಿಮಾನಗಳು ಈಗ ಪ್ರತಿಯೊಬ್ಬರ ಪ್ರಯಾಣಕ್ಕೂ ಲಭ್ಯವಿದೆ. ಆದರೆ ಇದು ಬಸ್‌ ಹಾಗೂ ರೈಲು ಪ್ರಯಾಣದಂತಲ್ಲ, ಬದಲಾಗಿ ವಾಯುಯಾನ ಮಾಡಬೇಕೆಂದರೆ ಏರ್‌ಪೋರ್ಟ್‌ಗಳಲ್ಲಿ ಕಟ್ಟುನಿಟ್ಟಿನ ನಿಯಮಗಳು ಇರುತ್ತವೆ.

ವಿಮಾನದ ಬೋರ್ಡಿಂಗ್ ಪಾಸ್‌ ಬಗ್ಗೆ ನಿಮಗೆಷ್ಟು ಗೊತ್ತು?: ಇದು ಹ್ಯಾಕರ್‌ಗಳ ಕೈ ಸೇರಿದರೆ ನಿಧಿ ಸಿಕ್ಕಂತೆ!

ಈ ನಿಟ್ಟಿನಲ್ಲಿ ಪ್ರಯಾಣ ಬಯಸುವ ಪ್ರತಿಯೊಬ್ಬರಿಗೂ ಬೋರ್ಡಿಂಗ್ ಪಾಸ್ ನೀಡಲಾಗುತ್ತದೆ. ಈ ಬೋರ್ಡಿಂಗ್ ಪಾಸ್ ನಿಮ್ಮ ಪ್ರಯಾಣವನ್ನು ಖಚಿತಪಡಿಸುತ್ತದೆ. ಆದರೆ ಇದು ಕೇವಲ ಪ್ರಯಾಣ ಮಾಡಲು ಮಾತ್ರ ಸೀಮಿತವಾಗಿದ್ದರೂ, ನಿಮ್ಮ ಅತ್ಯಮೂಲ್ಯದವಾದ ಮಾಹಿತಿಯನ್ನು ಒಳಗೊಂಡಿರುತ್ತದೆ. ಬಹುತೇಕ ಜನರು ಇದನ್ನು ಪ್ರಯಾಣದ ಬಳಿಕ ಹಾರಿದು ಹಾಕದೇ ಹಾಗೇ ಬಿಸಾಡುತ್ತಾರೆ.

ವಿಮಾನದ ಬೋರ್ಡಿಂಗ್ ಪಾಸ್‌ ಬಗ್ಗೆ ನಿಮಗೆಷ್ಟು ಗೊತ್ತು?: ಇದು ಹ್ಯಾಕರ್‌ಗಳ ಕೈ ಸೇರಿದರೆ ನಿಧಿ ಸಿಕ್ಕಂತೆ!

ಈ ಸಣ್ಣ ನಿರ್ಲಕ್ಷ್ಯವು ನಿಮಗೆ ಹಲವಾರು ಸಮಸ್ಯೆಗಳನ್ನು ಉಂಟುಮಾಡುವ ಸಾಧ್ಯತೆಯಿದೆ. ಏಕೆಂದರೆ ಬೋರ್ಡಿಂಗ್ ಪಾಸ್‌ಗಳು ನಿಮ್ಮ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಒಳಗೊಂಡಿರುವುದರಿಂದ ಇತರರು ಅದನ್ನು ದುರುಪಯೋಗಪಡಿಸಿಕೊಳ್ಳಬಹುದು. ಸಾಮನ್ಯ ಕಳ್ಳರಿಂದ ಅಷ್ಟೇನು ಹೆದರುವ ಅವಶ್ಯಕತೆ ಇಲ್ಲ ಎಂದುಕೊಳ್ಳಬೇಡಿ.

ವಿಮಾನದ ಬೋರ್ಡಿಂಗ್ ಪಾಸ್‌ ಬಗ್ಗೆ ನಿಮಗೆಷ್ಟು ಗೊತ್ತು?: ಇದು ಹ್ಯಾಕರ್‌ಗಳ ಕೈ ಸೇರಿದರೆ ನಿಧಿ ಸಿಕ್ಕಂತೆ!

ಒಂದು ವೇಳೆ ಈ ಮಾಹಿತಿ ಪರಿಣಿತ ಹ್ಯಾಕರ್‌ಗಳ ಕೈಗೆ ಸಿಕ್ಕರೆ ಏನಾಗುತ್ತದೆ ಗೊತ್ತಾ? ನಿಮ್ಮ ಊಹೆಗೂ ನಿಲುಕದು. ಅಂತಹ ಕೆಲವು ಉದಾಹರಣೆಗಳನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ. ಸುದ್ದಿಗೆ ಹೋಗುವ ಮುನ್ನ ನಿಮ್ಮ ಬೋರ್ಡಿಂಗ್ ಪಾಸ್‌ನಲ್ಲಿ ಯಾವೆಲ್ಲ ಮಾಹಿತಿ ಇರುತ್ತದೆ ಎಂಬುದನ್ನು ತಿಳಿಯುವುದು ಮುಖ್ಯ.

ವಿಮಾನದ ಬೋರ್ಡಿಂಗ್ ಪಾಸ್‌ ಬಗ್ಗೆ ನಿಮಗೆಷ್ಟು ಗೊತ್ತು?: ಇದು ಹ್ಯಾಕರ್‌ಗಳ ಕೈ ಸೇರಿದರೆ ನಿಧಿ ಸಿಕ್ಕಂತೆ!

ನಿಮ್ಮ ಬೋರ್ಡಿಂಗ್ ಈ ಪಾಸ್ ಮಾಹಿತಿಯನ್ನು ಒಳಗೊಂಡಿರುತ್ತದೆ

ಪ್ರಯಾಣಿಕರ ಹೆಸರು, ಫೋನ್ ಸಂಖ್ಯೆ, ಆನ್‌ಲೈನ್ ಬುಕಿಂಗ್ (ಇ-ಮೇಲ್ ವಿಳಾಸ), ಸಂಪರ್ಕಿಸುವ ವಿಮಾನಗಳ ಬಗ್ಗೆ ಮಾಹಿತಿ, ಆಸನ ಸಂಖ್ಯೆ, ಆಗಾಗ್ಗೆ ಫ್ಲೈಯರ್ ಸಂಖ್ಯೆ, ವಿಮಾನ ಸಂಖ್ಯೆ, ಬೋರ್ಡಿಂಗ್ ಗೇಟ್ ಸಂಖ್ಯೆಯನ್ನು ಬೋರ್ಡಿಂಗ್ ಪಾಸ್ ಒಳಗೊಂಡಿರುತ್ತದೆ. ಹಾಗಾಗಿ ಈ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ವಿಮಾನಯಾನ ಸಂಸ್ಥೆ ಮೊದಲೇ ತಿಳಿಸಿರುತ್ತದೆ.

ವಿಮಾನದ ಬೋರ್ಡಿಂಗ್ ಪಾಸ್‌ ಬಗ್ಗೆ ನಿಮಗೆಷ್ಟು ಗೊತ್ತು?: ಇದು ಹ್ಯಾಕರ್‌ಗಳ ಕೈ ಸೇರಿದರೆ ನಿಧಿ ಸಿಕ್ಕಂತೆ!

ಹಾಗಾಗಿ ಬೋರ್ಡಿಂಗ್ ಪಾಸ್ ಎಂಬುದು ಬರೀ ಕಾಗದವಲ್ಲ. ಇಷ್ಟೆಲ್ಲಾ ಮಾಹಿತಿ ಒಳಗೊಂಡಿರುವ ಬೋರ್ಡಿಂಗ್ ಪಾಸ್‌ಗಳು ಹ್ಯಾಕರ್‌ಗಳಿಗೆ ನಿಮ್ಮ ಬಗ್ಗೆ ಮಾಹಿತಿ ನೀಡುವ ನಿಧಿಯಾಗುತ್ತದೆ. ಅದಕ್ಕಾಗಿಯೇ ಬೋರ್ಡಿಂಗ್ ಪಾಸ್‌ಗಳನ್ನು ಪ್ರಯಾಣದ ನಂತರ ಅಜಾಗರೂಕತೆಯಿಂದ ಎಲ್ಲೆಂದರಲ್ಲಿ ಎಸೆಯಬಾರದು.

ವಿಮಾನದ ಬೋರ್ಡಿಂಗ್ ಪಾಸ್‌ ಬಗ್ಗೆ ನಿಮಗೆಷ್ಟು ಗೊತ್ತು?: ಇದು ಹ್ಯಾಕರ್‌ಗಳ ಕೈ ಸೇರಿದರೆ ನಿಧಿ ಸಿಕ್ಕಂತೆ!

ಕೆಲವರು ಬೋರ್ಡಿಂಗ್ ಪಾಸ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ನಾವು ವಿಮಾನದಲ್ಲಿ ಪ್ರಯಾಣಿಸಲಿದ್ದೇವೆ ಎಂದು ಎಲ್ಲರೊಂದಿಗೆ ಹಂಚಿಕೊಳ್ಳುತ್ತಾರೆ. ಇದರಿಂದ ನಿಮ್ಮ ಬಗೆಗಿನ ಮಾಹಿತಿಯೂ ಹ್ಯಾಕರ್‌ಗಳ ಕೈ ಸೇರುವ ಸಂಭವವಿರುತ್ತದೆ. ಹಾಗಾಗಿ ಬೋರ್ಡಿಂಗ್ ಪಾಸ್ ವಿಚಾರದಲ್ಲಿ ಯಾವಾಗಲೂ ಉದಾಸೀನ ಮಾಡಬೇಡಿ.

ವಿಮಾನದ ಬೋರ್ಡಿಂಗ್ ಪಾಸ್‌ ಬಗ್ಗೆ ನಿಮಗೆಷ್ಟು ಗೊತ್ತು?: ಇದು ಹ್ಯಾಕರ್‌ಗಳ ಕೈ ಸೇರಿದರೆ ನಿಧಿ ಸಿಕ್ಕಂತೆ!

ಬೋರ್ಡಿಂಗ್ ಪಾಸ್‌ಗಳ ಮೂಲಕ ನಿಮ್ಮ ಪ್ರಯಾಣದ ದಿನಾಂಕಗಳನ್ನು ತಿಳಿಯಬಹುದು. ಬೋರ್ಡಿಂಗ್ ಪಾಸ್‌ಗಳಿಂದ ಮಾಹಿತಿಯನ್ನು ಪಡೆಯಲು ಇದು ಸುಲಭವಾದ ಮಾರ್ಗಗಳಲ್ಲಿ ಒಂದಾಗಿದೆ. ಉದಾಹರಣೆಗೆ, ನೀವು ಮತ್ತು ನಿಮ್ಮ ಕುಟುಂಬ 1 ವಾರ ಪ್ರಯಾಣ ಮಾಡುತ್ತಿದ್ದೀರಿ ಎಂದುಕ್ಕೊಳ್ಳೊಣ. ಈ ಮಾಹಿತಿ ಕಳ್ಳರ ಕೈಗೆ ಸಿಕ್ಕರೆ ಏನಾಗುತ್ತದೆ?

ವಿಮಾನದ ಬೋರ್ಡಿಂಗ್ ಪಾಸ್‌ ಬಗ್ಗೆ ನಿಮಗೆಷ್ಟು ಗೊತ್ತು?: ಇದು ಹ್ಯಾಕರ್‌ಗಳ ಕೈ ಸೇರಿದರೆ ನಿಧಿ ಸಿಕ್ಕಂತೆ!

ಅವರು ತಕ್ಷಣವೇ ನಿಮ್ಮ ಮನೆ ಲೂಟಿ ಮಾಡಲು ಹೊರಡುಬಿಡುತ್ತಾರೆ. ಅವರು ನಿಮ್ಮ ವಾಹನಗಳು ಮತ್ತು ದುಬಾರಿ ವಸ್ತುಗಳನ್ನು ಕದಿಯುವ ಸಾಧ್ಯತೆ ಹೆಚ್ಚು. ನೀವು ಇದ್ದಕ್ಕಿದ್ದಂತೆ ಮನೆಗೆ ಬರುತ್ತೀರಿ ಎಂಬ ಭಯ ಅವರಿಗಿಲ್ಲ. ಏಕೆಂದರೆ ಅವರಿಗೆ ನಿಮ್ಮ ಪ್ರಯಾಣದ ಯೋಜನೆ ಮೊದಲೇ ತಿಳಿದಿರುತ್ತದೆ.

ವಿಮಾನದ ಬೋರ್ಡಿಂಗ್ ಪಾಸ್‌ ಬಗ್ಗೆ ನಿಮಗೆಷ್ಟು ಗೊತ್ತು?: ಇದು ಹ್ಯಾಕರ್‌ಗಳ ಕೈ ಸೇರಿದರೆ ನಿಧಿ ಸಿಕ್ಕಂತೆ!

ಪ್ರಯಾಣದ ದಿನಾಂಕ ಬಳಿಕ ಬೋರ್ಡಿಂಗ್ ಪಾಸ್‌ಗಳಲ್ಲಿ ನಿಮ್ಮ ಸೀಟ್ ಸಂಖ್ಯೆ ಇರುತ್ತದೆ, ಯಾರಾದರೂ ನಿಮ್ಮ ಸೀಟನ್ನು ಬದಲಾಯಿಸುವ ಸಾಧ್ಯತೆಗಳಿರುತ್ತವೆ. ಏರ್‌ಲೈನ್‌ಗೆ ಕರೆ ಮಾಡಿ ನಿಮ್ಮಂತೆಯೇ ನಟಿಸಿ ಸೀಟುಗಳನ್ನು ಬದಲಾಯಿಸುವ ಅಪಾಯವಿದೆ. ಸಾಮಾನ್ಯವಾಗಿ ಇದು ಸುಲಭದ ಕೆಲಸವಲ್ಲ. ಆದರೆ ಅವರು ಇದನ್ನು ಮಾಡಲು ಸಾಧ್ಯವಾದರೆ, ಕೊನೆಯ ಕ್ಷಣದಲ್ಲಿ ಸೀಟು ಬದಲಾಯಿಸಬಹುದು.

ವಿಮಾನದ ಬೋರ್ಡಿಂಗ್ ಪಾಸ್‌ ಬಗ್ಗೆ ನಿಮಗೆಷ್ಟು ಗೊತ್ತು?: ಇದು ಹ್ಯಾಕರ್‌ಗಳ ಕೈ ಸೇರಿದರೆ ನಿಧಿ ಸಿಕ್ಕಂತೆ!

ಒಂದು ವೇಳೆ ಹಾಗೆಯೇ ಆದಲ್ಲಿ ಶೌಚಾಲಯದ ಬಳಿ ಕುಳಿತು ದೂರದ ಪ್ರಯಾಣ ಮಾಡಬೇಕಾದ ಬಿಕ್ಕಟ್ಟಿಗೂ ಕಾರಣವಾಗಬಹುದು. ಆಸನಗಳನ್ನು ಬದಲಾಯಿಸುವಂತೆಯೇ, ನಿಮ್ಮ ಪ್ರಯಾಣದ ದಿನಾಂಕವನ್ನು ಯಾರಾದರೂ ಬದಲಾಯಿಸುವ ಅವಕಾಶಗಳೂ ಇವೆ. ಇದನ್ನು ಮಾಡುವುದು ಇನ್ನೂ ಕಷ್ಟ.

ವಿಮಾನದ ಬೋರ್ಡಿಂಗ್ ಪಾಸ್‌ ಬಗ್ಗೆ ನಿಮಗೆಷ್ಟು ಗೊತ್ತು?: ಇದು ಹ್ಯಾಕರ್‌ಗಳ ಕೈ ಸೇರಿದರೆ ನಿಧಿ ಸಿಕ್ಕಂತೆ!

ಏಕೆಂದರೆ ಇದಕ್ಕಾಗಿ ನೀವು ನಿರ್ದಿಷ್ಟ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಆದರೆ ಅವರು ಶುಲ್ಕವನ್ನು ಪಾವತಿಸದೆ ಅಥವಾ ಬೇರೆ ರೀತಿಯಲ್ಲಿ ಮಾಡಿದರೆ, ನೀವು ತೊಂದರೆಗಳನ್ನು ಎದುರಿಸಬಹುದು. ನಿಮ್ಮ ಮಾಹಿತಿಯೊಂದಿಗೆ ಅಪರಾಧಿಗಳು ನಿಮ್ಮನ್ನು ಬ್ಲ್ಯಾಕ್ ಮೇಲ್ ಮಾಡುವ ಅವಕಾಶಗಳೂ ಇವೆ.

ವಿಮಾನದ ಬೋರ್ಡಿಂಗ್ ಪಾಸ್‌ ಬಗ್ಗೆ ನಿಮಗೆಷ್ಟು ಗೊತ್ತು?: ಇದು ಹ್ಯಾಕರ್‌ಗಳ ಕೈ ಸೇರಿದರೆ ನಿಧಿ ಸಿಕ್ಕಂತೆ!

ಅಲ್ಲದೇ ಬೋರ್ಡಿಂಗ್ ಪಾಸ್ ನಲ್ಲಿರುವ 'ಫ್ರೆಕ್ವೆಂಟ್ ಫ್ಲೈಯರ್ ನಂಬರ್' ಬಳಸಿಕೊಂಡು ಹ್ಯಾಕರ್‌ಗಳು ತೊಂದರೆ ಕೊಡುವ ಸಾಧ್ಯತೆ ಇದೆ. 'ಫ್ರೆಕ್ವೆಂಟ್ ಫ್ಲೈಯರ್ ನಂಬರ್' ಎಂಬುದು ಏರ್‌ಲೈನ್‌ನ ವಿಮಾನಗಳಲ್ಲಿ ನಿಯಮಿತವಾಗಿ ಪ್ರಯಾಣಿಸುವ ಪ್ರಯಾಣಿಕರಿಗೆ ನೀಡುವಂತದ್ದು.

ವಿಮಾನದ ಬೋರ್ಡಿಂಗ್ ಪಾಸ್‌ ಬಗ್ಗೆ ನಿಮಗೆಷ್ಟು ಗೊತ್ತು?: ಇದು ಹ್ಯಾಕರ್‌ಗಳ ಕೈ ಸೇರಿದರೆ ನಿಧಿ ಸಿಕ್ಕಂತೆ!

'ಫ್ರೆಕ್ವೆಂಟ್ ಫ್ಲೈಯರ್ ನಂಬರ್' ಯೋಜನೆಗೆ ನೋಂದಾಯಿಸಿಕೊಳ್ಳಬಹುದಾದ ಪ್ರಯಾಣಿಕರಿಗೆ ಏರ್‌ಲೈನ್ಸ್ ಈ ಸಂಖ್ಯೆಗಳನ್ನು ನಿಯೋಜಿಸುತ್ತದೆ. ನೀವು ನಿರಂತರವಾಗಿ ಪ್ರಯಾಣ ಮಾಡುವಾಗ ನೀವು 'ಪಾಯಿಂಟ್'ಗಳನ್ನು ಪಡೆಯುತ್ತೀರಿ. ಇದರ ನಂತರ ನೀವು ಫ್ಲೈಟ್‌ಗಳಿಗಾಗಿ ಅಥವಾ ಬಹುಮಾನಗಳನ್ನು ಪಡೆಯಲು ನಿಮ್ಮ ಆಯ್ಕೆಯ 'ರಿಡೀಮ್' ಮಾಡಬಹುದು.

ವಿಮಾನದ ಬೋರ್ಡಿಂಗ್ ಪಾಸ್‌ ಬಗ್ಗೆ ನಿಮಗೆಷ್ಟು ಗೊತ್ತು?: ಇದು ಹ್ಯಾಕರ್‌ಗಳ ಕೈ ಸೇರಿದರೆ ನಿಧಿ ಸಿಕ್ಕಂತೆ!

ಹ್ಯಾಕಿಂಗ್ ಸರ್ವವ್ಯಾಪಿಯಾಗಿರುವ ಇಂದಿನ ದಿನಗಳಲ್ಲಿ ಹ್ಯಾಕರ್ ಗಳು ಅದನ್ನು ದುರ್ಬಳಕೆ ಮಾಡಿಕೊಳ್ಳುವ ಅವಕಾಶಗಳಿವೆ. ನಿಮ್ಮ ಬೋರ್ಡಿಂಗ್ ಪಾಸ್‌ನಲ್ಲಿ ಬಾರ್‌ಕೋಡ್ ಕೂಡ ಇರುತ್ತದೆ. ಅದರಲ್ಲಿ, ನಿಮ್ಮ ಜನ್ಮ ದಿನಾಂಕ ಮತ್ತು ಬಿಲ್ಲಿಂಗ್ ವಿಳಾಸದಂತಹ ವಿವಿಧ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.

ವಿಮಾನದ ಬೋರ್ಡಿಂಗ್ ಪಾಸ್‌ ಬಗ್ಗೆ ನಿಮಗೆಷ್ಟು ಗೊತ್ತು?: ಇದು ಹ್ಯಾಕರ್‌ಗಳ ಕೈ ಸೇರಿದರೆ ನಿಧಿ ಸಿಕ್ಕಂತೆ!

ಹ್ಯಾಕರ್‌ಗಳು ಬಾರ್‌ಕೋಡ್‌ನಿಂದ ಈ ಮಾಹಿತಿಯನ್ನು ಪಡೆದರೆ, ಅವರು ಅದನ್ನು ನಿಮ್ಮ ವಿರುದ್ಧ ತಪ್ಪು ರೀತಿಯಲ್ಲಿ ಬಳಸುವ ಸಾಧ್ಯತೆಗಳಿವೆ. ನಾವು ಇಲ್ಲಿ ಹೇಳಿರುವ ವಿವಿಧ ವಿಷಯಗಳು ನಿಮಗೆ ಅಸಾಧ್ಯವೆನಿಸಬಹುದು. ಆದರೆ ಅವುಗಳನ್ನು ಅಲ್ಲಗಳೆಯುವಂತಿಲ್ಲ.

ವಿಮಾನದ ಬೋರ್ಡಿಂಗ್ ಪಾಸ್‌ ಬಗ್ಗೆ ನಿಮಗೆಷ್ಟು ಗೊತ್ತು?: ಇದು ಹ್ಯಾಕರ್‌ಗಳ ಕೈ ಸೇರಿದರೆ ನಿಧಿ ಸಿಕ್ಕಂತೆ!

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ವಿಮಾನ ಪ್ರಯಾಣಕ್ಕಾಗಿ ಎಷ್ಟೋ ಹಣ ನೀಡುವ ಪ್ರಯಾಣಿಕರಿಗೆ ಪ್ರಯಾಣದ ಬಳಿಕ ಬೋರ್ಡಿಂಗ್ ಪಾಸ್‌ಗಳನ್ನು ನಾಶಪಡಿಸುವುದು ಕಷ್ಟದ ವಿಷಯವಲ್ಲ. ಯಾರೋ ಖದೀಮರಿಗೆ ಸಿಕ್ಕಿ ನೀವು ನಷ್ಟ ಹೋಗುವ ಮೊದಲೇ ಬೋರ್ಡಿಂಗ್ ಪಾಸ್‌ಗಳನ್ನು ಪ್ರಯಾಣದ ಬಳಿಕ ಗುರುತು ಸಿಗದಂತೆ ನಾಶಪಡಿಸುವುದು ಉತ್ತಮ.

Most Read Articles

Kannada
Read more on ವಿಮಾನ plane
English summary
How much do you know about the flight boarding pass
Story first published: Monday, June 13, 2022, 16:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X