ಇನ್ಮುಂದೆ ಬಂಕ್‍‍ಗಳಲ್ಲಿ ಬಾಟಲ್‍‍ಗಳಿಗೆ ಪೆಟ್ರೋಲ್ ಹಾಕಲ್ಲ..!

ವಾಹನಗಳಲ್ಲಿ ಏಕಾ‍ಏಕಿ ಪೆಟ್ರೋಲ್ ಅಥವಾ ಡೀಸೆಲ್ ಖಾಲಿಯಾದಾಗ ಪೆಟ್ರೋಲ್ ಬಂಕ್‍‍ಗಳವರೆಗೆ ವಾಹನಗಳನ್ನು ತಳ್ಳಿಕೊಂಡು ಹೋಗುವುದು ಯಾರಿಗೆ ಆಗಲಿ ತ್ರಾಸದಾಯಕ ಕೆಲಸ. ಈ ಕಾರಣಕ್ಕೆ ತಕ್ಷಣಕ್ಕೆ ನೆನಪಾಗುವುದು ಖಾಲಿ ವಾಟರ್ ಬಾಟಲ್‍‍ಗಳು.

ಇನ್ಮುಂದೆ ಬಂಕ್‍‍ಗಳಲ್ಲಿ ಬಾಟಲ್‍‍ಗಳಿಗೆ ಪೆಟ್ರೋಲ್ ಹಾಕಲ್ಲ..!

ಖಾಲಿ ವಾಟರ್ ಬಾಟಲ್‍‍ಗಳನ್ನು ತೆಗೆದುಕೊಂಡು ಹೋದರೆ ಹಿಂದೆ ಮುಂದೆ ನೋಡದ ಪೆಟ್ರೋಲ್ ಬಂಕ್‍‍ನವರು ಆ ಬಾಟಲ್‍‍ಗಳಲ್ಲಿ ಪೆಟ್ರೋಲ್, ಡೀಸೆಲ್ ಹಾಕುತ್ತಾರೆ. ಆದರೆ ಇನ್ನು ಮುಂದೆ ಹೀಗೆ ಖಾಲಿ ವಾಟರ್ ಬಾಟಲ್ ಹಿಡಿದು ಪೆಟ್ರೋಲ್ ಬಂಕಿಗೆ ಹೋದರೆ, ಪೆಟ್ರೋಲ್ - ಡೀಸೆಲ್ ಸಿಗುವುದಿಲ್ಲ.

ಇನ್ಮುಂದೆ ಬಂಕ್‍‍ಗಳಲ್ಲಿ ಬಾಟಲ್‍‍ಗಳಿಗೆ ಪೆಟ್ರೋಲ್ ಹಾಕಲ್ಲ..!

ತಮಿಳುನಾಡಿನ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೆಷನ್‍‍ನವರು ಇನ್ನು ಮುಂದೆ ತಮಿಳುನಾಡಿನಲ್ಲಿ ವಾಟರ್ ಬಾಟಲ್‍‍ಗಳಿಗೆ ಪೆಟ್ರೋಲ್ - ಡೀಸೆಲ್ ಹಾಕದಂತೆ ಕರೆ ನೀಡಿದ್ದಾರೆ. ಇನ್ನು ಮುಂದೆ ವಾಹನಗಳನ್ನು ಬಂಕ್‍‍ಗಳಿಗೆ ತಂದರೆ ಮಾತ್ರ ಪೆಟ್ರೋಲ್ ನೀಡುವಂತೆ ತಿಳಿಸಲಾಗಿದೆ.

ಇನ್ಮುಂದೆ ಬಂಕ್‍‍ಗಳಲ್ಲಿ ಬಾಟಲ್‍‍ಗಳಿಗೆ ಪೆಟ್ರೋಲ್ ಹಾಕಲ್ಲ..!

ತಮಿಳುನಾಡು ಪೆಟ್ರೋಲ್ ಡೀಲರ್ಸ್ ಅಸೋಸಿಯೆಷನ್‍‍ನವರು ಈ ರೀತಿ ಏಕಾ‍ಏಕಿ ಈ ನಿರ್ಧಾರ ಕೈಗೊಳ್ಳಲು ಕಾರಣ, ಕಳೆದ ವಾರ ನಡೆದ ಹೈದರಾಬಾದ್‍‍ನ ಪಶುವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ.

ಇನ್ಮುಂದೆ ಬಂಕ್‍‍ಗಳಲ್ಲಿ ಬಾಟಲ್‍‍ಗಳಿಗೆ ಪೆಟ್ರೋಲ್ ಹಾಕಲ್ಲ..!

ಕಳೆದ ವಾರ ಹೈದರಾಬಾದ್‍‍ನ ಪಶುವೈದ್ಯೆಯನ್ನು ಸಾಮೂಹಿಕ ಅತ್ಯಾಚಾರವೆಸಗಿ, ನಂತರ ಪೆಟ್ರೋಲ್ ಸುರಿದು ಕೊಲೆ ಮಾಡಲಾಗಿತ್ತು. ಈ ಘಟನೆಯು ದೇಶಾದ್ಯಂತ ಜನಾಕ್ರೋಶಕ್ಕೆ ಕಾರಣವಾಗಿತ್ತು. ಈ ಘಟನೆಯ ಸಂಬಂಧ ನಾಲ್ವರನ್ನು ಬಂಧಿಸಿದ್ದ ಪೊಲೀಸರು ಸ್ಥಳ ಮಹಜರು ವೇಳೆ ಎನ್‍‍ಕೌಂಟ‍‍ರ್ ಮಾಡಿದ್ದರು.

ಇನ್ಮುಂದೆ ಬಂಕ್‍‍ಗಳಲ್ಲಿ ಬಾಟಲ್‍‍ಗಳಿಗೆ ಪೆಟ್ರೋಲ್ ಹಾಕಲ್ಲ..!

ಅತ್ಯಾಚಾರವೆಸಗಿದ ಬಳಿಕ ಬಾಟಲ್‍‍ನಲ್ಲಿದ್ದ ಪೆಟ್ರೋಲ್ ಅನ್ನು ಪಶುವೈದ್ಯೆಯ ಮೇಲೆ ಸುರಿದು ಕೊಲೆ ಮಾಡಿರುವುದಾಗಿ ಆರೋಪಿಗಳು ತನಿಖೆಯಲ್ಲಿ ಬಾಯಿ ಬಿಟ್ಟಿದ್ದರು. ಈ ಕಾರಣಕ್ಕೆ ವಾಟರ್ ಬಾಟಲ್‍‍ಗಳಲ್ಲಿ ಪೆಟ್ರೋಲ್ ಮಾರಾಟ ಮಾಡುವುದನ್ನು ನಿಷೇಧಿಸಬೇಕೆಂದು ದೇಶಾದ್ಯಂತ ಒತ್ತಾಯಿಸಲಾಗುತ್ತಿದೆ.

ಇನ್ಮುಂದೆ ಬಂಕ್‍‍ಗಳಲ್ಲಿ ಬಾಟಲ್‍‍ಗಳಿಗೆ ಪೆಟ್ರೋಲ್ ಹಾಕಲ್ಲ..!

ಈ ಒತ್ತಾಯಕ್ಕೆ ಮಣಿದಿರುವ ತಮಿಳುನಾಡು ಪೆಟ್ರೋಲ್ ಡೀಲರ್ಸ್ ಅಸೋಸಿಯೇಷನ್ ಇನ್ನು ಮುಂದೆ ತಮಿಳುನಾಡಿನಲ್ಲಿ ವಾಟರ್ ಬಾಟಲ್‍‍ಗಳಿಗೆ ಪೆಟ್ರೋಲ್ ಹಾಕದಂತೆ ಕರೆ ನೀಡಿದೆ. ಇದರ ಜೊತೆಗೆ ತಮಿಳುನಾಡು ಸರ್ಕಾರವೂ ಸಹ ಬಾಟಲ್‍‍ಗಳಲ್ಲಿ ಪೆಟ್ರೋಲ್ ಹಾಕಿ ಮಾರಾಟ ಮಾಡದಂತೆ ಸೂಚಿಸಿದೆ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಇನ್ಮುಂದೆ ಬಂಕ್‍‍ಗಳಲ್ಲಿ ಬಾಟಲ್‍‍ಗಳಿಗೆ ಪೆಟ್ರೋಲ್ ಹಾಕಲ್ಲ..!

ಆದರೆ ಕೆಲವರು ಈ ನಿಷೇಧವನ್ನು ತೆಗೆದು ಹಾಕುವಂತೆ ಸಾಮಾಜಿಕ ಜಾಲತಾಣಗಳ ಮೂಲಕ ಒತ್ತಾಯಿಸುತ್ತಿದ್ದಾರೆ. ಏಕಾ‍ಏಕಿ ಪೆಟ್ರೋಲ್ ಖಾಲಿಯಾದರೆ ಪೆಟ್ರೋಲ್ ಬಂಕ್‍‍ಗಳವರೆಗೆ ವಾಹನಗಳನ್ನು ತಳ್ಳಿಕೊಂಡು ಹೋಗುವುದು ಕಷ್ಟವಾಗುವ ಕಾರಣ ಈ ನಿಷೇಧವನ್ನು ತೆಗೆದುಹಾಕುವಂತೆ ಒತ್ತಾಯಿಸಲಾಗುತ್ತಿದೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಇನ್ಮುಂದೆ ಬಂಕ್‍‍ಗಳಲ್ಲಿ ಬಾಟಲ್‍‍ಗಳಿಗೆ ಪೆಟ್ರೋಲ್ ಹಾಕಲ್ಲ..!

ಕೆಲವು ಪೆಟ್ರೋಲ್ ಬಂಕ್‍‍ಗಳಲ್ಲಿ ಪೆಟ್ರೋಲ್ - ಡೀಸೆಲ್ ಅನ್ನು ಬಾಟಲ್‍‍ಗಳಿಗೆ ತುಂಬಿಸಿ ಮಾರಾಟ ಮಾಡುವುದಿಲ್ಲ. ಬಾಟಲ್‍‍ಗಳಿಗೆ ತುಂಬಿಸಿದರೆ ಎಷ್ಟು ಲೀಟರ್ ಪೆಟ್ರೋಲ್ ಹಾಕಲಾಗಿದೆ ಎಂಬುದು ತಿಳಿದು ಬರುವ ಕಾರಣಕ್ಕೆ ಪೆಟ್ರೋಲ್ ಬಂಕ್‍‍ನವರೇ ವಾಟರ್ ಬಾಟಲ್‍‍ಗಳಿಗೆ ಪೆಟ್ರೋಲ್ ಹಾಕಲು ಹಿಂದೇಟು ಹಾಕುತ್ತಾರೆ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಇನ್ಮುಂದೆ ಬಂಕ್‍‍ಗಳಲ್ಲಿ ಬಾಟಲ್‍‍ಗಳಿಗೆ ಪೆಟ್ರೋಲ್ ಹಾಕಲ್ಲ..!

ತಮಿಳುನಾಡು ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್‍‍ನವರ ಈ ನಿರ್ಧಾರಕ್ಕೆ ಕೆಲವರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಯಾವುದೇ ವಾಹನ ಮಾಲೀಕರು ತಮ್ಮ ವಾಹನಗಳನ್ನು ಹೊರತೆಗೆಯುವ ಮುನ್ನ ವಾಹನದಲ್ಲಿ ಎಷ್ಟು ಪ್ರಮಾಣದ ಪೆಟ್ರೋಲ್ ಇದೆ ಎಂಬುದನ್ನು ಖಚಿತಪಡಿಸಿಕೊಂಡು ವಾಹನ ಹೊರತೆಗೆದರೆ ಪೆಟ್ರೋಲ್ ಖಾಲಿಯಾದಾಗ ಪೆಟ್ರೋಲ್ ಬಂಕ್‍‍ಗಳವರೆಗೆ ತಳ್ಳಿಕೊಂಡು ಹೋಗುವುದು ತಪ್ಪುತ್ತದೆ.

Most Read Articles

Kannada
English summary
No more petrol in bottles from pumps - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X