YouTube

ಬೈಕ್ ಕಳ್ಳತನವಾಗಿ ಒಂದು ವರ್ಷವಾದ್ರೂ ಟ್ರಾಫಿಕ್ ಪೊಲೀಸರಿಂದ ಇ-ಚಲನ್ ತಪ್ಪಿಲ್ಲ ಈ ಮಾಲೀಕನಿಗೆ..!

ನಿಮ್ಮ ವಾಹನ ಕಳ್ಳತನವಾಗಿ ವರ್ಷಗಳಾದರೂ ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆ ಇನ್ನೂ ಮಾಡ್ತಿದ್ದೀರಾ ಅಂತ ಇ-ಚಲನ್ ನಿಮ್ಮ ಮನೆಗೆ ಬಂದರೇ ಎಷ್ಟು ಆಶ್ಚರ್ಯ ಆಗುತ್ತೆ ಆಲ್ವಾ.? ಇಲ್ಲಿ ನಡೆದದ್ದು ಕೂಡಾ ಅದೇ ರೀತಿಯಾಗಿ ಹೈದ್ರಾಬಾದ್‍ನಲ್ಲಿನ ವ್ಯಕ್ತಿಯೊಬ್ಬ ತನ್ನ ಬೈಕ್ ಕಳುವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರೂ ಸಹ ಇನ್ನೂ ಆತನ ಮನೆಗೆ ಇ-ಚಲನ್‍ ಬರುತ್ತಿವೆ ಹೊರತು ಬೈಕ್ ಮಾತ್ರ ಸಿಕ್ಕಿಲ್ಲ.

ಬೈಕ್ ಕಳುವಾಗಿ ಒಂದು ವರ್ಷವಾದರೂ ಇಂದಿಗೂ ಇ-ಚಲನ್ ಪಡೆಯುತ್ತಿರುವ ಮಾಲೀಕ

ಈ ಘಟನೆಯು ಹೈದ್ರಾಬಾದ್‍ನ ಕುಶೈಗೂಡಾನಲ್ಲಿ ನಡೆದಿದ್ದು, ಅದೇ ಏರಿಯಾದ ನಿವಾಸಿಯೊಬ್ಬ ಕಳುವಾದ ತನ್ನ ಯಮಹಾ ಎಫ್‍ಜೆಡ್ ಬೈಕ್‌ಗಾಗಿ ಹುಡುಕಾಟ ನಡೆಸುತ್ತಲೇ ಇಂದಿಗೂ ಸಹ ಇ-ಚಲನ್ ಅನ್ನು ಸ್ವೀಕರಿಸುತ್ತಿದ್ದಾರೆ. ಇದು ಪೊಲೀಸರ ನಿರ್ಲಕ್ಷ್ಯ ಮತ್ತು ಅವರ ಡೇಟಾಬೇಸ್ ಅನ್ನು ನವೀಕರಿಸುವಲ್ಲಿ ವಿಫಲರಾಗಿದ್ದಾರೆ ಎಂಡು ಸೂಕ್ಷ್ಮವಾಗಿ ತಿಳಿಯುತ್ತದೆ.

ಬೈಕ್ ಕಳುವಾಗಿ ಒಂದು ವರ್ಷವಾದರೂ ಇಂದಿಗೂ ಇ-ಚಲನ್ ಪಡೆಯುತ್ತಿರುವ ಮಾಲೀಕ

ಜನವರಿ 2018ರಲ್ಲಿ ತನ್ನ ಬೈಕ್ ಕಳುವಾದ ಕಾರಣ ಜನವರಿ 2019ರಲ್ಲಿ ಶೇಷಾದ್ರಿ ಎಂಬಾತನು ಕುಶಾಯಿಗೂಡಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ತಮ್ಮ ಮನೆಯ ಮುಂದೆ ಪಾರ್ಕಿಂಗ್ ಮಾಡಲಾದ ತನ್ನ (AP 29AF 9635)ನೋಂದಣಿ ಸಂಖ್ಯೆ ಹೊಂದಿರುವ ಯಮಹಾ ಎಫ್‍ಜೆಡ್ ಬೈಕ್ ಕಳುವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾನೆ.

ಬೈಕ್ ಕಳುವಾಗಿ ಒಂದು ವರ್ಷವಾದರೂ ಇಂದಿಗೂ ಇ-ಚಲನ್ ಪಡೆಯುತ್ತಿರುವ ಮಾಲೀಕ

2018ರ ಜನವರಿಯಲ್ಲಿ ರಾಚಕೊಂಡ ಕಮಿಷನರೇಟ್ ಅಡಿಯಲ್ಲಿ ಕುಶೈಗುಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದೂ, ಆದಾಗ್ಯೂ, ಬೈಕ್ ಇಲ್ಲಿಯವರೆಗು ಕಂಡುಬರಲಿಲ್ಲ ಹಾಗು, ಶೇಷಾದ್ರಿಗೆ ದಾರಿ ತೋಚದೆಯೆ ಮತ್ತೊಮ್ಮೆ 2019 ಜನವರಿಯಲ್ಲಿ, ತನ್ನ ಬೈಕು ವಿರುದ್ಧ ನೋಂದಾಯಿಸಲಾದ ವಿವಿಧ ದಿನಾಂಕಗಳ ಒಟ್ಟು ಆರು ಚಾಲನ್‍ಗಳನ್ನು ಆತ ಸ್ವೀಕರಿಸಿದ್ದ.

ಬೈಕ್ ಕಳುವಾಗಿ ಒಂದು ವರ್ಷವಾದರೂ ಇಂದಿಗೂ ಇ-ಚಲನ್ ಪಡೆಯುತ್ತಿರುವ ಮಾಲೀಕ

ಶೇಷಾದ್ರಿಯ ಕೈಗೆ ಸಿಕ್ಕ ಆ 6 ಇ-ಚಲನ್ ಅನ್ನು ಕಂಡಾಗ ಆತನಿಗೆ ಒಂದು ಅಚ್ಚರಿಯ ಸಂಗತಿ ಎದುರಾಗಿತ್ತು. ಅದೇನೆಂದರೆ ಬೈಕ್ ಕಳುವಾಗಿದ್ದು, ಜನವರಿ 2018ರಲ್ಲಿ ಆದರೆ ಜೂನ್ ನಿಂದ ಡಿಸೆಂಬರ್ 2018ರ ವರೆಗು ತಾನು ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆ ಮಾಡುರುವುದಾಗಿ ಒಟ್ಟು 6 ಇ-ಚಲನ್‍ಗಳು ನೋಂದಣಿಯಾಗಿದ್ದವು.

ಬೈಕ್ ಕಳುವಾಗಿ ಒಂದು ವರ್ಷವಾದರೂ ಇಂದಿಗೂ ಇ-ಚಲನ್ ಪಡೆಯುತ್ತಿರುವ ಮಾಲೀಕ

ನಂತರ ಸಿಗ್ನಲ್‍‍ಗಳಲ್ಲಿ ಅಳವಡಿಸಲಾದ ಸಿಸಿಟಿವಿ ಫುಟೇಜ್‍ನಲ್ಲಿ ಕಂಡಾಗ, ಆ -ಚಲನ್‍ನಲ್ಲಿ ಸವಾರನು ಹೆಲ್ಮೆಟ್ ಹಾಕದೆಯೆ ವಾಹನ ಚಾಲನೆ ಮಾಡುತ್ತಿದ್ದ ಎಂದು 6 ಬಾರಿ ಸಿಕ್ಕಿಕೊಂಡಿದ್ದಾನೆ. ಮತ್ತು ಈ ದೃಶ್ಯಗಳಿಗೆ ಸಾಕ್ಷಿಯಾಗಿ ಸಿಸಿಟಿವಿಯಲ್ಲಿ ಚಿತ್ರಗಳನ್ನು ಸಹ ಸೆರೆಹಿಡಿಯಲಾಗಿತ್ತು. ಇದನ್ನು ಅರಿತ ಪೊಲೀಸರು ಈ ಕುರಿತಾಗಿ ವಿಚಾರಣೆಯನ್ನು ನಡೆಸುತ್ತೇವೆ ಎಂದು ಹೇಳಿದ್ದರು.

ಬೈಕ್ ಕಳುವಾಗಿ ಒಂದು ವರ್ಷವಾದರೂ ಇಂದಿಗೂ ಇ-ಚಲನ್ ಪಡೆಯುತ್ತಿರುವ ಮಾಲೀಕ

ಇನ್ನು ಯಮಹಾ ಎಫ್‌ಜೆಡ್ ವಿರುದ್ಧ ಬಿಡುಗಡೆಯಾದ ಆರು ಚಲನ್‍ಗಳ ದಂಡದ ಮೊತ್ತ ರೂ. 810. ಇದರಲ್ಲಿ ರೂ. 600 (ಒಂದು ಹೆಲ್ಮೆಟ್ ಧರಿಸದಿರಲು ಪ್ರತೀ ರೂ 100) ಮತ್ತು ರೂ. 35 (ಬಳಕೆದಾರ ಶುಲ್ಕ). ಪ್ರಕರಣದ ಎಫ್ಐಆರ್ ವಿವರಗಳೊಂದಿಗೆ (ಕುಶೈಗುಡಾ ಪೊಲೀಸ್ ಠಾಣೆಯ 65/2018) ಮತ್ತು ಬೈಕು ಮಾಲೀಕರಿಗೆ ನೀಡಲಾದ ಚಾಲನ್‍ಗಳೊಂದಿಗೆ ಇಡೀ ಪ್ರಕರಣವನ್ನು ಬಳಕೆದಾರರಿಂದ ಫೇಸ್‍ಬುಕ್‍ನಲ್ಲಿ ಹಂಚಿಕೊಳ್ಳಲಾಗಿದೆ.

MOST READ: ಬೆಂಗಳೂರಿಗೂ ಎಂಟ್ರಿ ಕೊಟ್ಟ ಬಜಾಜ್ ಕ್ಯೂಟ್ - ಊಬರ್‍‍ನಲ್ಲಿ ಈಗಲೇ ನಿಮ್ಮ ರೈಡ್ ಬುಕ್ ಮಾಡಿಕೊಳ್ಳಿ

ಬೈಕ್ ಕಳುವಾಗಿ ಒಂದು ವರ್ಷವಾದರೂ ಇಂದಿಗೂ ಇ-ಚಲನ್ ಪಡೆಯುತ್ತಿರುವ ಮಾಲೀಕ

ಫೇಸ್‍ಬುಕ್ ಪೋಸ್ಟ್ ಪ್ರಕಾರ "ಬೈಕು ಕಳ್ಳತನವಾಗಿದೆ ಎಂದು 2018 ರ ಜನವರಿಯಲ್ಲಿ ಕುಶೈಗುಡ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಯಿತು. ಕುಶೈಗುಡ ಪೊಲೀಸರು ವಿಶ್ರಾಂತಿ ಪಡೆಯುವ ಮನಸ್ಥಿತಿಯಲ್ಲಿದ್ದಾರೆ ಎಂದು ತೋರುತ್ತಿದೆ. ಈ ದೂರು ದಾಖಲಾದ ನಂತರ, ವಿವಿಧ ಉಲ್ಲಂಘನೆಗಳಿಗೆ ಆರು ಚಾಲನ್ಗಳನ್ನು ನೀಡಲಾಯಿತು. ಛಾಯಾಚಿತ್ರಗಳು ಕೂಡ ಲಭ್ಯವಿವೆ. ಕಳುವಾಗಿದ್ದ ಬೈಕ್ ಮನೆಗೆ ಬರದಿದ್ದರೂ, ಚಲನ್‍‍ಗಳು ಮಾತ್ರ ಸರಿಯಾದ ಸಮಯದಲ್ಲಿ ಮನೆಯ ವಿಳಾಸಕ್ಕೆ ಬರುತ್ತಿದ್ದವು ಎಂದು" ಅದರಲಿದೆ.

MOST READ: ತನ್ನ ಸ್ವಂತ ಐಷಾರಾಮಿ ಕಾರನ್ನು ಕದ್ದು ಇದೀಗ ಪೊಲೀಸರ ಅತಿಥಿಯಾದ ವ್ಯಾಪಾರಿ..

ಬೈಕ್ ಕಳುವಾಗಿ ಒಂದು ವರ್ಷವಾದರೂ ಇಂದಿಗೂ ಇ-ಚಲನ್ ಪಡೆಯುತ್ತಿರುವ ಮಾಲೀಕ

ಇದು ಡೇಟಾಬೇಸ್ ಅಪ್ಡೇಟ್ ನಿರ್ಲಕ್ಷ್ಯದ ಒಂದು ಸಂಗತಿಯಾಗಿದೆ. ಬೈಕು ನಷ್ಟವನ್ನು ವರದಿ ಮಾಡಿದಲ್ಲಿ ಪ್ರಕರಣದ ಮಾಲೀಕನ ವಿವರಗಳೊಂದಿಗೆ ಎಲ್ಲಾ ವಾಹನಗಳ ರೆಕಾರ್ಡ್ ಅನ್ನು ಇರಿಸಿಕೊಳ್ಳುವ ಡೇಟಾಬೇಸ್ ನವೀಕರಿಸಬೇಕಾಗಿದೆ.

MOST READ: ಕಳೆದ 18 ವರ್ಷಗಳಲ್ಲಿ ಮೊದಲ ಬಾರಿಗೆ ನೆಲಕಚ್ಚಿದ ಹೊಸ ವಾಹನಗಳ ಮಾರಾಟ

ಬೈಕ್ ಕಳುವಾಗಿ ಒಂದು ವರ್ಷವಾದರೂ ಇಂದಿಗೂ ಇ-ಚಲನ್ ಪಡೆಯುತ್ತಿರುವ ಮಾಲೀಕ

ಇನ್ನು ಮುಂದೆ ಇಂತಹ ಪರಿಸ್ಥಿತಿಗಳು ಬರುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಇದನ್ನು ಮಾಡಲಾಗುತ್ತದೆ ಎಂದು ಪೊಲೀಸರು ಹೆಳಿದ್ದರೆ. ಅದೇ ಕಾರಣಕ್ಕಾಗಿ, ವ್ಯಕ್ತಿಯು ತನ್ನ ವಾಹನವನ್ನು ಮಾರಿದಾಗ, ಅದನ್ನು ಖರೀದಿದಾರನ ಹೆಸರಿಗೆ ವರ್ಗಾಯಿಸಬೇಕಾಗಿತ್ತು. ಇದನ್ನು ಮಾಡದಿದ್ದರೆ ಮತ್ತು ಯಾವುದೇ ಕಾನೂನುಬಾಹಿರ ಘಟನೆಯಲ್ಲಿ ವಾಹನವು ಸಿಕ್ಕಿಹಾಕಿಕೊಂಡರೆ ಪೊಲೀಸರು ತಮ್ಮ ಡೇಟಾಬೇಸ್ ಮೂಲಕ ನೋಂದಣಿ ಫಲಕಗಳನ್ನು ರನ್ ಮಾಡಿ ವಾಹನದ ಮಾಲೀಕರನ್ನು ಸಂಪರ್ಕಿಸಬೇಕಾಗುತ್ತದೆ.

ಬೈಕ್ ಕಳುವಾಗಿ ಒಂದು ವರ್ಷವಾದರೂ ಇಂದಿಗೂ ಇ-ಚಲನ್ ಪಡೆಯುತ್ತಿರುವ ಮಾಲೀಕ

ಆದ್ದರಿಂದ, ಇನ್ನು ಮುಂದೇ ನೀವು ಯಾವುದೇ ವಾಹನವನ್ನು ಮಾರಾಟ ಮಾಡಿದರೆ ಅಥವಾ ವರ್ಗಾಯಿಸಬೇಕಾದರೆ ಸರಿಯಾಗಿ ದಾಖಲೆಗಳ ಕಾರ್ಯವನು ಪೂರ್ಣಗೊಳಿಸಿದ್ದಲ್ಲಿ ಇಂತಹ ಘಟನೆಗಳು ಸಂಭವಿಸುವುದಿಲ್ಲ.

Source: NewIndianExpress

Most Read Articles

Kannada
English summary
Hyderabad Man Getting Traffic Challans Even After Losing His Yamaha FZ Bike Bofore An Year. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X