ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಭಾರತದಲ್ಲಿ ವಾಹನ ಕಳ್ಳತನ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈಗ ತೆಲಂಗಾಣದ ಸೈಬರಾಬಾದ್‌ನಲ್ಲಿಯೂ ವಿಲಕ್ಷಣ ಕಳ್ಳತನದ ಪ್ರಕರಣವೊಂದು ವರದಿಯಾಗಿದೆ. ಈ ವಿಲಕ್ಷಣ ಕಳ್ಳತನದ ಆರೋಪದ ಮೇಲೆ ಎಂಜಿನಿಯರಿಂಗ್ ಪದವೀಧರ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಈ ಎಂಜಿನಿಯರಿಂಗ್ ಪದವೀಧರ ವಾಹನಗಳನ್ನು ಕದ್ದು ಅವುಗಳನ್ನು ಸೆಕೆಂಡ್ ಹ್ಯಾಂಡ್ ವಾಹನ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದ. ಬಂಧಿತ ಯುವಕನನ್ನು ಗುಡತಿ ಮಹೇಶ್ ಕುಮಾರ್ ಎಂದು ಗುರುತಿಸಲಾಗಿದೆ.

ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಆರೋಪಿಯು ದುಬಾರಿ ಬೆಲೆಯ ವಾಹನಗಳನ್ನು ಸಹ ಅತಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ. ಅವನು ಇತ್ತೀಚೆಗೆ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬೈಕ್ ಕದ್ದು, ಕದ್ದ ಬೈಕಿನಲ್ಲಿಯೇ ಲಡಾಖ್‌ ಪ್ರವಾಸ ಕೈಗೊಂಡಿದ್ದ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಪ್ರವಾಸದಿಂದ ಹಿಂದಿರುಗಿದ ಆತನನ್ನು ಆಂಧ್ರಪ್ರದೇಶ ಪೊಲೀಸರು ಬೈಕ್‌ ಸಮೇತ ವಶಕ್ಕೆ ಪಡೆದಿದ್ದಾರೆ. ಗುಡತಿ ಮಹೇಶ್ ಪ್ರವಾಸ ಮಾಡುವುದರಲ್ಲಿ ಆಸಕ್ತಿ ಹೊಂದಿದ್ದ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಭವಿಷ್ಯದಲ್ಲಿ ಟ್ರಾವೆಲ್ ಏಜೆನ್ಸಿ ಸ್ಥಾಪಿಸುವುದು ಆತನ ಕನಸಾಗಿತ್ತು. ಮಹೇಶ್ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಪ್ರದೇಶಕ್ಕೆ ಸೇರಿದವನು. ಅವನ ಪ್ರವಾಸದ ಆಸಕ್ತಿ ಇತ್ತೀಚಿಗೆ ಆರಂಭವಾಗಿಲ್ಲ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಆತ ಬಾಲ್ಯದಿಂದಲೂ ಪ್ರವಾಸದಲ್ಲಿ ಆಸಕ್ತಿ ಹೊಂದಿದ್ದ. ಈ ಕಾರಣಕ್ಕೆ ಅವನು ಹೆಚ್ಚು ಸ್ನೇಹಿತರನ್ನು ಹೊಂದಿದ್ದ. ಆತ ಪ್ರವಾಸಕ್ಕೆ ತೆರಳಿದ ವೇಳೆ ಹೆಚ್ಚು ಹೆಚ್ಚು ಜನರು ಆತನಿಗೆ ಸ್ನೇಹಿತರಾಗಿದ್ದರು.

ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಆತ ತನ್ನ ಜೀವನದ ಬಹುಭಾಗವನ್ನು ಪ್ರವಾಸ ಮಾಡುವುದರಲ್ಲಿಯೇ ಕಳೆದಿದ್ದಾನೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಪ್ರವಾಸಕ್ಕೆ ತೆರಳಲು ಆತನಿಗೆ ವಾಹನದ ಅಗತ್ಯವಿತ್ತು. ಆದರೆ ಆತನ ಬಳಿ ವಾಹನ ಖರೀದಿಸುವಷ್ಟು ಹಣವಿರಲಿಲ್ಲ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಈ ಕಾರಣಕ್ಕೆ ಅವನಲ್ಲಿದ್ದ ಅಪರಾಧ ಮನಸ್ಸು ಜಾಗೃತವಾಗಿದೆ. ಮಹೇಶ್ ತನ್ನ ಆಪ್ತ ಸ್ನೇಹಿತರ ವಾಹನಗಳ ದಾಖಲೆಗಳನ್ನು ಅವರಿಗೆ ತಿಳಿಯದಂತೆ ನಕಲು ಮಾಡಿ ಬಾಡಿಗೆ ಕಾರು ಕಂಪನಿಗಳಿಗೆ ಆ ವಾಹನಗಳನ್ನು ಬಾಡಿಗೆಗೆ ನೀಡುತ್ತಿದ್ದ.

ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಕೆಲವು ವಾಹನಗಳನ್ನು ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮೂಲಕ ಹಣ ಸಂಪಾದಿಸಿದ್ದಾನೆ. ಅವನು ಹಲವಾರು ತಿಂಗಳುಗಳಿಂದಈ ಕೆಲಸ ಮಾಡುತ್ತಿದ್ದರೂ ಆತನ ಸ್ನೇಹಿತರಿಗೆ ಇದರ ಬಗ್ಗೆ ತಿಳಿದಿರಲಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ವಾಹನಗಳನ್ನು ಕದ್ದು ಸೆಕೆಂಡ್ ಹ್ಯಾಂಡ್ ವಾಹನ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದ ಮಹೇಶ್'ನ ಕಾರ್ಯಕ್ಕೆ ಪೊಲೀಸ್ ಇಲಾಖೆಯೇ ಆಶ್ಚರ್ಯ ವ್ಯಕ್ತ ಪಡಿಸಿದೆ. ಜೂಮ್ ಕಾರ್, ರೆವ್'ನಂತಹ ಕಂಪನಿಗಳಿಂದ ವಾಹನಗಳ ಬಾಡಿಗೆ ಪಡೆಯುವ ಮೂಲಕ ಮಹೇಶ್ ಕೈ ಚಳಕ ತೋರಿಸಿದ್ದಾನೆ.

ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಮಹೇಶ್ ಕುಮಾರ್ ವಾಹನಗಳನ್ನು ಕದ್ದ ತಕ್ಷಣ ಅವುಗಳಲ್ಲಿದ್ದ ಕಣ್ಗಾವಲು ಉಪಕರಣಗಳನ್ನು ತೆಗೆದು ಹಾಕುತ್ತಿದ್ದ. ಇದಾದ ನಂತರ ಆ ವಾಹನಗಳನ್ನು ಬೇರೆ ಪ್ರದೇಶದಲ್ಲಿ ಮಾರಾಟ ಮಾಡುತ್ತಿದ್ದ. ಅವನು ಮೊಬೈಲ್ ಫೋನ್'ಗಳನ್ನು ಸಹ ಕದಿಯುತ್ತಿದ್ದ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ.

Most Read Articles

Kannada
English summary
Hyderabad police arrests engineering graduate for stealing Royal Enfield bike. Read in Kannada.
Story first published: Friday, April 16, 2021, 10:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X