ಪೆಟ್ರೋಲ್ ಬಂಕ್‌ಗಳಲ್ಲಿ ನಿಲ್ಲದ ಹಗಲು ದರೋಡೆ- ಇಂಧನ ತುಂಬಿಸುವ ಮುನ್ನ ಹುಷಾರ್..!!

ಇತ್ತೀಚೆಗೆ ಕೆಲವು ಬಂಕ್‌ಗಳಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ತುಂಬಿಸುವುದಕ್ಕೆ ವಾಹನ ಸವಾರರು ಹಿಂದೆ ಮುಂದೆ ಯೋಚಿಸುವಂತಾಗಿದೆ. ಹಣದಾಸೆಗೆ ಬಿದ್ದಿರುವ ಪೆಟ್ರೋಲ್ ಪಂಪ್ ಮಾಲೀಕರು ಗ್ರಾಹಕರ ಕಣ್ತಪ್ಪಿಸಿ ಯಾಮಾರಿಸುತ್ತಿದ್ದಾರೆ.

By Praveen Sannamani

ಇತ್ತೀಚೆಗೆ ಕೆಲವು ಬಂಕ್‌ಗಳಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ತುಂಬಿಸುವುದಕ್ಕೆ ವಾಹನ ಸವಾರರು ಹಿಂದೆ ಮುಂದೆ ಯೋಚಿಸುವಂತಾಗಿದೆ. ಹಣದಾಸೆಗೆ ಬಿದ್ದಿರುವ ಪೆಟ್ರೋಲ್ ಪಂಪ್ ಮಾಲೀಕರು ಗ್ರಾಹಕರ ಕಣ್ತಪ್ಪಿಸಿ ಯಾಮಾರಿಸುತ್ತಿದ್ದು, ಮೋಸದ ವ್ಯಾಪಾರದಿಂದ ವಾಹನ ಸವಾರರು ಬೇಸತ್ತು ಹೋಗಿದ್ದಾರೆ.

ಪೆಟ್ರೋಲ್ ಬಂಕ್‌ಗಳಲ್ಲಿ ನಿಲ್ಲದ ಹಗಲು ದರೋಡೆ- ಇಂಧನ ತುಂಬಿಸುವ ಮುನ್ನ ಹುಷಾರ್..!!

ಪೆಟ್ರೋಲ್ ಬಂಕ್ ನಡೆಯುತ್ತಿರುವ ಮೋಸದ ವ್ಯಾಪಾರ ಹೊಸ ಸಮಸ್ಯೆ ಏನು ಅಲ್ಲಾ. ಆದ್ರೆ ಸಮಸ್ಯೆ ಬಗ್ಗೆ ಸಂಬಂಧಪಟ್ಟವರಿಗೆ ಗೊತ್ತಿದ್ದರೂ ಕಣ್ಮುಚ್ಚಿ ಕುಳಿತಿರುವುದು ಮಾತ್ರ ದುರಷ್ಟಕರ. ಯಾಕೆಂದ್ರೆ ಪೆಟ್ರೋಲ್ ಬಂಕ್‌ಗಳಲ್ಲಿ ವಾಹನ ಸವಾರರಿಗೆ ಆಗುತ್ತಿರುವ ಮೋಸ ಅಷ್ಟಿಷ್ಟಲ್ಲ. ಮೊನ್ನೆ ಕೂಡಾ ಹ್ಯುಂಡೈ ಐ20 ಕಾರು ಮಾಲೀಕರೊಬ್ಬರು ಪೆಟ್ರೋಲ್ ಬಂಕ್ ಒಂದರ ಕರ್ಮಕಾಂಡವನ್ನು ಬಿಚ್ಚಿಟ್ಟಿದ್ದಾರೆ.

ಪೆಟ್ರೋಲ್ ಬಂಕ್‌ಗಳಲ್ಲಿ ನಿಲ್ಲದ ಹಗಲು ದರೋಡೆ- ಇಂಧನ ತುಂಬಿಸುವ ಮುನ್ನ ಹುಷಾರ್..!!

ಕಳೆದ ಕೆಲ ದಿನಗಳ ಹಿಂದೆ ಪೆಟ್ರೋಲ್ ಬಂಕ್‌ಗಳಲ್ಲಿ ವಾಹನ ಸವಾರರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಹತ್ತಾರು ಪ್ರಕರಣಗಳು ದಾಖಲಾಗಿ ಭಾರೀ ಚರ್ಚೆಗೆ ಕಾರಣವಾಗಿದ್ದವು. ಆದ್ರೆ ಇದೀಗ ಅದೇ ಸಮಸ್ಯೆ ಮತ್ತೆ ಉಲ್ಬಣಗೊಂಡಿದೆ.

ಪೆಟ್ರೋಲ್ ಬಂಕ್‌ಗಳಲ್ಲಿ ನಿಲ್ಲದ ಹಗಲು ದರೋಡೆ- ಇಂಧನ ತುಂಬಿಸುವ ಮುನ್ನ ಹುಷಾರ್..!!

ಹ್ಯುಂಡೈ ಐ20 ಕಾರು ಮಾಲೀಕನೊಬ್ಬನಿಗೆ ಕೇರಳದ ತಿರುವನಂತಪುರಂ ಬಳಿಯು ಇದೇ ರೀತಿ ಅನುಭವವಾಗಿದ್ದು, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹಾಯ್ದು ಹೊಗುವಾಗ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಪೆಟ್ರೋಲ್ ಬಂಕ್‌ನಲ್ಲಿ ತನ್ನ ಕಾರಿಗೆ ಫುಲ್ ಟ್ಯಾಂಕ್ ಡೀಸೆಲ್ ಹಾಕಿಸಿಕೊಂಡಿದ್ದ.

ಪೆಟ್ರೋಲ್ ಬಂಕ್‌ಗಳಲ್ಲಿ ನಿಲ್ಲದ ಹಗಲು ದರೋಡೆ- ಇಂಧನ ತುಂಬಿಸುವ ಮುನ್ನ ಹುಷಾರ್..!!

ಆದ್ರೆ ಕಾರಿನ ಫ್ಯೂಲ್ ಟ್ಯಾಂಕ್ ಅನ್ನು ಭರ್ತಿ ಮಾಡಿಸಿದ್ದ ಐ20 ಕಾರು ಮಾಲೀಕನಿಗೆ ಶಾಕ್ ಕಾದಿತ್ತು. ಕೇವಲ 45 ಲೀಟರ್ ಫ್ಯೂಲ್ ಟ್ಯಾಂಕ್ ಸಾಮರ್ಥ್ಯದ ಕಾರಿಗೆ ಬಂಕ್ ಸಿಬ್ಬಂದಿಯು 49 ಲೀಟರ್ ಡೀಸೆಲ್ ತುಂಬಿಸಿರುವುದನ್ನು ನೋಡಿ ಕಾರು ಮಾಲೀಕ ದಂಗಾಗಿದ್ದಾನೆ.

ಪೆಟ್ರೋಲ್ ಬಂಕ್‌ಗಳಲ್ಲಿ ನಿಲ್ಲದ ಹಗಲು ದರೋಡೆ- ಇಂಧನ ತುಂಬಿಸುವ ಮುನ್ನ ಹುಷಾರ್..!!

ಈ ಬಗ್ಗೆ ಸಿಬ್ಬಂದಿ ಜೊತೆ ವಾಗ್ವಾದ ಮಾಡಿದ ಕಾರು ಮಾಲೀಕ ಅನಿಶ್ ಜಾಯ್ ಅವರು ಮಾಹಾಮೋಸದ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ತಕ್ಷಣವೇ ಪೆಟ್ರೋಲ್ ಬಂಕ್‌ಗೆ ಭೇಟಿ ನೀಡಿದ ಪೊಲೀಸರು ಮೀಟರ್ ರೀಡಿಂಗ್ ಪರಿಶೀಲನೆ ಮಾಡಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ.

ಪೆಟ್ರೋಲ್ ಬಂಕ್‌ಗಳಲ್ಲಿ ನಿಲ್ಲದ ಹಗಲು ದರೋಡೆ- ಇಂಧನ ತುಂಬಿಸುವ ಮುನ್ನ ಹುಷಾರ್..!!

ಆಗ ತಾಂತ್ರಿಕ ದೋಷಗಳಿಂದ ಈ ರೀತಿಯಾಗಿದೆ ಎಂದು ತಪ್ಪೊಪ್ಪಿಕೊಂಡ ಬಂಕ್ ಮಾಲೀಕರು ಸಮಸ್ಯೆಯನ್ನು ಕೂಡಲೇ ಬಗೆಹರಿಸುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದು, ಪೆಟ್ರೋಲ್ ಬಂಕ್‌ನ ಒಂದು ಪಾಯಿಂಟ್‌ನಲ್ಲಿ ಮಾತ್ರ ಹೀಗೆ ಆಗಿರುವ ಬಗ್ಗೆ ದೂರುದಾರ ಅನಿಶ್ ಜಾಯ್ ಬಳಿ ಕ್ಷೆಮೆಯಾಚಿಸಿದ್ದಾರೆ.

ಪೆಟ್ರೋಲ್ ಬಂಕ್‌ಗಳಲ್ಲಿ ನಿಲ್ಲದ ಹಗಲು ದರೋಡೆ- ಇಂಧನ ತುಂಬಿಸುವ ಮುನ್ನ ಹುಷಾರ್..!!

ಘಟನೆ ಕುರಿತು ಅನಿಶ್ ಜಾಯ್ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದು, ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ತುಂಬಿಸುವಾಗ ಎಚ್ಚರಿಕೆ ವಹಿಸಬೇಕು ಇಲ್ಲವಾದ್ರೆ ವಾಹನ ಸವಾರರ ಜೇಬಿಗೆ ಕತ್ತರಿ ಖಾಯಂ ಎನ್ನುವ ಬಗ್ಗೆ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

ಪೆಟ್ರೋಲ್ ಬಂಕ್‌ಗಳಲ್ಲಿ ನಿಲ್ಲದ ಹಗಲು ದರೋಡೆ- ಇಂಧನ ತುಂಬಿಸುವ ಮುನ್ನ ಹುಷಾರ್..!!

ಇದಷ್ಟೇ ಅಲ್ಲದೇ ಕಳೆದ ಕೆಲ ದಿನಗಳ ಹಿಂದಷ್ಟೇ ಉತ್ತರ ಪ್ರದೇಶದಲ್ಲಿ ಪೆಟ್ರೋಲ್ ಬಂಕ್‌ಗಳ ಮೇಲೆ ದಾಳಿ ನಡೆಸಿದ್ದ ಎಸ್ಐಟಿ(ವಿಶೇಷ ತನಿಖಾ ದಳ) ಅಧಿಕಾರಿಗಳು, ಗ್ರಾಹಕರಿಗೆ ಮೋಸ ಮಾಡುತ್ತಿದ್ದ ನೂರಾರು ಪೆಟ್ರೋಲ್ ಬಂಕ್‌ಗಳಲ್ಲಿ ಬೀಗ ಜಡಿದ್ದಿದ್ದರು.

ಪೆಟ್ರೋಲ್ ಬಂಕ್‌ಗಳಲ್ಲಿ ನಿಲ್ಲದ ಹಗಲು ದರೋಡೆ- ಇಂಧನ ತುಂಬಿಸುವ ಮುನ್ನ ಹುಷಾರ್..!!

ಗ್ರಾಹಕರ ನೀಡಿದ ದೂರುಗಳ ಆಧಾರದ ಮೇಲೆ ದಾಳಿ ನಡೆಸಿದ್ದ ಎಸ್ಐಟಿ ತಂಡದ ಅಧಿಕಾರಿಗಳು, ಗ್ರಾಹಕರ ನೆಪದಲ್ಲಿ ಪೆಟ್ರೋಲ್ ಬಂಕ್ ಮಾಲೀಕ ಕಳ್ಳಾಟವನ್ನು ಬಹಿರಂಗಗೊಳಿಸಿದ್ದರು.

ಪೆಟ್ರೋಲ್ ಬಂಕ್‌ಗಳಲ್ಲಿ ನಿಲ್ಲದ ಹಗಲು ದರೋಡೆ- ಇಂಧನ ತುಂಬಿಸುವ ಮುನ್ನ ಹುಷಾರ್..!!

ರಿಮೋಟ್ ಕಂಟ್ರೋಲ್ ಮೂಲಕ ನಡೆಯುತ್ತೆ ಕಳ್ಳ ದಂಧೆ

ಹೌದು.. ಇದು ನಿಮಗೆ ನಂಬಲು ಸಾಧ್ಯವಾಗದಿದ್ದರು ನಿಜ. ಉತ್ತರ ಪ್ರದೇಶದಲ್ಲಿ ನಡೆದ ದಾಳಿ ವೇಳೆ ನೂರಾರು ರಿಮೋಟ್‌ಗಳು ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು ಮಾತ್ರ ಸುಳ್ಳಲ್ಲ.

ಪೆಟ್ರೋಲ್ ಬಂಕ್‌ಗಳಲ್ಲಿ ನಿಲ್ಲದ ಹಗಲು ದರೋಡೆ- ಇಂಧನ ತುಂಬಿಸುವ ಮುನ್ನ ಹುಷಾರ್..!!

ನೀವು ಒಂದು ಲೀಟರ್ ಪೆಟ್ರೋಲ್ ಅಥವಾ ಡೀಸೆಲ್ ಹಾಕಿಸಿದ್ದರೆ ನಿಮ್ಮ ವಾಹನದಲ್ಲಿ ಕೇವಲ 900ಮಿ. ಲೀಟರ್ ಮಾತ್ರ ತುಂಬಿಕೊಳ್ಳುತ್ತದೆ. ಆದ್ರೆ ಮೀಟರ್‌ನಲ್ಲಿ ಮಾತ್ರ 1 ಲೀಟರ್ ಹಾಕಿದ್ದಾಗಿ ಲೆಕ್ಕ ತೋರಿಸುತ್ತದೆ.

ಪೆಟ್ರೋಲ್ ಬಂಕ್‌ಗಳಲ್ಲಿ ನಿಲ್ಲದ ಹಗಲು ದರೋಡೆ- ಇಂಧನ ತುಂಬಿಸುವ ಮುನ್ನ ಹುಷಾರ್..!!

ಇದಲ್ಲದೇ ದೇಶಾದ್ಯಂತ ಸುಮಾರು 25 ಸಾವಿರಕ್ಕೂ ಹೆಚ್ಚು ಪೆಟ್ರೋಲ್ ಬಂಕ್‌ಗಳಲ್ಲಿ ಈ ರೀತಿಯಾಗಿ ಮೋಸ ನಡೆಯುತ್ತಿದ್ದು, ಮೋಸದ ವ್ಯವಹಾರ ಪತ್ತೆ ಹಚ್ಚಲು ಸಾಧ್ಯವಾಗದೇ ವಾಹನನ ಸವಾರರು ಪರದಾಡುತ್ತಿದ್ದಾರೆ.

ಪೆಟ್ರೋಲ್ ಬಂಕ್‌ಗಳಲ್ಲಿ ನಿಲ್ಲದ ಹಗಲು ದರೋಡೆ- ಇಂಧನ ತುಂಬಿಸುವ ಮುನ್ನ ಹುಷಾರ್..!!

ಬೆಂಗಳೂರಿನಲ್ಲೂ ಭಾರೀ ಮೋಸ

ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ವಾಹನ ಸಂಖ್ಯೆ ಎರುತ್ತಲೇ ಇದ್ದು, ಪೆಟ್ರೋಲ್ ಬಂಕ್ ಸಂಖ್ಯೆ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿವೆ. ಲಾಭವನ್ನೇ ಮುಂದಿಟ್ಟುಕೊಂಡು ಬಂಕ್ ಮಾಲೀಕರು ವಾಹನ ಸವಾರರಿಗೆ ಮೋಸ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.

ಪೆಟ್ರೋಲ್ ಬಂಕ್‌ಗಳಲ್ಲಿ ನಿಲ್ಲದ ಹಗಲು ದರೋಡೆ- ಇಂಧನ ತುಂಬಿಸುವ ಮುನ್ನ ಹುಷಾರ್..!!

ಮೋಸ ಹೋಗ್ಬೇಡಿ

ವಾಹನ ಸವಾರರೇ ಪೆಟ್ರೋಲ್ ತುಂಬಿಸುವ ವಿಚಾರದಲ್ಲಿ ಮೋಸ ಹೋಗುವ ಮುನ್ನ ಹುಷಾರ್ ಆಗಿ ವ್ಯವಹಾರ ಮಾಡುವುದು ಒಳಿತು. ಜೊತೆಗೆ ನಿಮ್ಮ ನಂಬುಗೆಯ ಪೆಟ್ರೋಲ್ ಬಂಕ್‌ನಲ್ಲೇ ಪೆಟ್ರೋಲ್, ಡಿಸೇಲ್ ತುಂಬಿಸಿ.

Most Read Articles

Kannada
Read more on auto news off beat
English summary
Hyundai i20 with 45 L fuel tank, gets filled with 49 L diesel.
Story first published: Saturday, May 19, 2018, 15:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X