ನೋಡ ನೋಡುತ್ತಿದ್ದಂತೆ ಕಂದಕದಲ್ಲಿ ಮುಳುಗಿ ಕಣ್ಮರೆಯಾದ ಹ್ಯುಂಡೈ ವೆನ್ಯೂ ಕಾರು

ಮಳೆಗಾಲದಲ್ಲಿ ಭಾರೀ ಮಳೆಯಾದಾಗ ನಾನಾ ರೀತಿಯ ತೊಂದರೆಗಳು ಎದುರಾಗುತ್ತವೆ. ನೀರಿನ ಹರಿವು ಸರಿಯಾಗಿ ಸಾಗಲು ಸೂಕ್ತ ವ್ಯವಸ್ಥೆ ಇಲ್ಲದೇ ಹೋದರೆ ರಸ್ತೆಯಲ್ಲಿರುವ ವಾಹನಗಳು ಕೊಚ್ಚಿಕೊಂಡು ಹೋಗುವ ದೃಶ್ಯಗಳು ಸಾಮಾನ್ಯ.

ನೋಡ ನೋಡುತ್ತಿದ್ದಂತೆ ಕಂದಕದಲ್ಲಿ ಮುಳುಗಿ ಕಣ್ಮರೆಯಾದ ಹ್ಯುಂಡೈ ವೆನ್ಯೂ ಕಾರು

ಕೆಲವೊಮ್ಮೆ ಮನುಷ್ಯರು ಸಹ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಹಲವಾರು ಘಟನೆಗಳು ವರದಿಯಾಗಿವೆ. ಕಳೆದ ವರ್ಷ ಕೊಡಗಿನಲ್ಲಿ ಸುರಿದ ಭಾರೀ ಮಳೆ ಜನರನ್ನು ಸಂಕಷ್ಟಕ್ಕೆ ದೂಡಿತ್ತು. ಭಾರೀ ಮಳೆಯಿಂದಾಗಿ ತಲಕಾವೇರಿ ಬಳಿ ಗುಡ್ಡ ಕುಸಿದು ಅಲ್ಲಿನ ಅರ್ಚಕರು ವಾಸವಿದ್ದ ಮನೆ ಕುಸಿದು, ಅರ್ಚಕರು ಸಾವನ್ನಪ್ಪಿದ್ದರು.

ನೋಡ ನೋಡುತ್ತಿದ್ದಂತೆ ಕಂದಕದಲ್ಲಿ ಮುಳುಗಿ ಕಣ್ಮರೆಯಾದ ಹ್ಯುಂಡೈ ವೆನ್ಯೂ ಕಾರು

ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಇದರಿಂದ ಅಲ್ಲಿನ ಹಲವು ಪ್ರದೇಶಗಳು ಪ್ರವಾಹದ ಪರಿಸ್ಥಿತಿ ಎದುರಿಸುತ್ತಿವೆ. ಭಾರಿ ಮಳೆಯಿಂದಾಗಿ ವಾಹನ ಸಂಚಾರಕ್ಕೂ ತೊಂದರೆಯಾಗಿದೆ.

ನೋಡ ನೋಡುತ್ತಿದ್ದಂತೆ ಕಂದಕದಲ್ಲಿ ಮುಳುಗಿ ಕಣ್ಮರೆಯಾದ ಹ್ಯುಂಡೈ ವೆನ್ಯೂ ಕಾರು

ಮುಂಬೈನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಕಾರೊಂದು ಇದ್ದಕ್ಕಿದ್ದಂತೆ ಕಂದಕಕ್ಕೆ ಬಿದ್ದು ಕಣ್ಮರೆಯಾದ ಘಟನೆ ವರದಿಯಾಗಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ನೋಡ ನೋಡುತ್ತಿದ್ದಂತೆ ಕಂದಕದಲ್ಲಿ ಮುಳುಗಿ ಕಣ್ಮರೆಯಾದ ಹ್ಯುಂಡೈ ವೆನ್ಯೂ ಕಾರು

ಮುಂಬೈನ ಘಾಟ್ಕೊಪರ್'ನ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿದ್ದ ಹ್ಯುಂಡೈ ವೆನ್ಯೂ ಕಾರು ಇದ್ದಕ್ಕಿದ್ದಂತೆ ಅಲ್ಲಿದ್ದ ಕಂದಕದಲ್ಲಿ ಮುಳುಗಿದೆ. ಕೆಲವೇ ಕೆಲವು ಸೆಕೆಂಡುಗಳಲ್ಲಿ ಆ ಕಾರು ಕಂದಕದ ನೀರಿನಲ್ಲಿ ಮುಳುಗಿದೆ.

ನೋಡ ನೋಡುತ್ತಿದ್ದಂತೆ ಕಂದಕದಲ್ಲಿ ಮುಳುಗಿ ಕಣ್ಮರೆಯಾದ ಹ್ಯುಂಡೈ ವೆನ್ಯೂ ಕಾರು

ಆ ಪಾರ್ಕಿಂಗ್ ಪ್ರದೇಶದ ಬಳಿ ವಾಸಿಸುವ ನಿವಾಸಿಯೊಬ್ಬರು ಈ ಘಟನೆಯ ವೀಡಿಯೊವನ್ನು ರೆಕಾರ್ಡ್ ಮಾಡಿ ಶೇರ್ ಮಾಡಿದ್ದಾರೆ. ಈ ವೀಡಿಯೊದಲ್ಲಿ ಕಾರುಕಂದಕಕ್ಕೆ ಬಿದ್ದು ಕಣ್ಮರೆಯಾಗುವುದನ್ನು ಕಾಣಬಹುದು.

ನೋಡ ನೋಡುತ್ತಿದ್ದಂತೆ ಕಂದಕದಲ್ಲಿ ಮುಳುಗಿ ಕಣ್ಮರೆಯಾದ ಹ್ಯುಂಡೈ ವೆನ್ಯೂ ಕಾರು

ವರದಿಗಳ ಪ್ರಕಾರ ಈ ಕಾರು ಮುಳುಗಿದ ಸ್ಥಳದ ಕೆಳಗೆ ಬಾವಿಯಿದೆ. ಆ ಬಾವಿಯನ್ನು ಕಾಂಕ್ರೀಟ್ ಚಪ್ಪಡಿಗಳಿಂದ ಮುಚ್ಚಲಾಗಿತ್ತು. ಕಾರನ್ನು ಆ ಬಾವಿಯ ಮೇಲೆ ನಿಲ್ಲಿಸಲಾಗಿತ್ತು. ಭಾರಿ ಮಳೆಯಿಂದಾಗಿ ಕಾಂಕ್ರೀಟ್ ಚಪ್ಪಡಿ ಮುರಿದು ಕಾರು ಕೆಳಗಿರುವ ಬಾವಿಯೊಳಗೆ ಬಿದ್ದಿದೆ.

ನೋಡ ನೋಡುತ್ತಿದ್ದಂತೆ ಕಂದಕದಲ್ಲಿ ಮುಳುಗಿ ಕಣ್ಮರೆಯಾದ ಹ್ಯುಂಡೈ ವೆನ್ಯೂ ಕಾರು

ಬಾವಿ ಚಿಕ್ಕ ಗಾತ್ರದಲ್ಲಿದ್ದ ಕಾರಣ ಒಂದು ಕಾರು ಮಾತ್ರ ಆ ಬಾವಿಯೊಳಗೆ ಬಿದ್ದಿದೆ. ಹಲವು ಕಾರುಗಳನ್ನು ಆ ಬಾವಿಯ ಸಮೀಪದಲ್ಲೇ ನಿಲ್ಲಿಸಲಾಗಿದ್ದರೂ ಅವುಗಳಿಗೆ ಯಾವುದೇ ತೊಂದರೆಯಾಗಿಲ್ಲ.

ಮನೆಯ ಹೊರಗೆ ಕಾರುಗಳನ್ನು ಪಾರ್ಕ್ ಮಾಡುವಾಗ ಬಹಳ ಜಾಗರೂಕರಾಗಿರುವುದು ಅವಶ್ಯಕ. ಅದರಲ್ಲೂ ಮಳೆಗಾಲದಲ್ಲಿ ಕಾರುಗಳನ್ನು ಸುರಕ್ಷಿತ ಪ್ರದೇಶದಲ್ಲಿ ಪಾರ್ಕ್ ಮಾಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

ನೋಡ ನೋಡುತ್ತಿದ್ದಂತೆ ಕಂದಕದಲ್ಲಿ ಮುಳುಗಿ ಕಣ್ಮರೆಯಾದ ಹ್ಯುಂಡೈ ವೆನ್ಯೂ ಕಾರು

ಒಳಚರಂಡಿ, ಬಾವಿ, ಹಳೆಯ ಕಟ್ಟಡ, ಶಿಥಿಲವಾದ ಗೋಡೆ, ಮರ ಸೇರಿದಂತೆ ವಾಹನಗಳಿಗೆ ಹಾನಿಯುಂಟು ಮಾಡುವ ವಸ್ತುಗಳಿಂದ ದೂರ ವಾಹನಗಳನ್ನು ಪಾರ್ಕ್ ಮಾಡುವುದು ಉತ್ತಮ. ಇಲ್ಲದಿದ್ದರೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಾಹನಗಳಿಗೆ ಹಾನಿಯಾಗುವುದು ಖಚಿತ.

ಗಮನಿಸಿ: ಕೊನೆಯ ಚಿತ್ರವನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Hyundai Venue car drowns into sink hole in Mumbai. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X