ಒಂದೇ ನಂಬರ್‌ನಲ್ಲಿ ಎರಡು ಕಾರು- ಕೊನೆಗೂ ಸಿಕ್ಕಿ ಬಿದ್ದ ನಕಲಿ ಕಾರು ಮಾಲೀಕ..!

ಭಾರತೀಯ ಆಟೋಮೋಬೈಲ್ ಮಾರುಕಟ್ಟೆಯು, ವಿಶ್ವದಲ್ಲಿಯೇ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಪ್ರತಿ ತಿಂಗಳು ಲಕ್ಷಾಂತರ ವಾಹನಗಳು ಭಾರತದಲ್ಲಿರುವ ಆರ್‍‍ಟಿ‍ಒಗಳ ಮೂಲಕ ರಿಜಿಸ್ಟರ್ ಆಗುತ್ತಲೇ ಇರುತ್ತವೆ. ಚಾಸೀಸ್ ನಂಬರ್, ಕಲರ್, ಮಾಡೆಲ್ ಹೆಸರು ಸೇರಿದಂತೆ ಅನೇಕ ಮಾಹಿತಿಗಳನ್ನು ಪಡೆದ ನಂತರ ಹೊಸ ರಿಜಿಸ್ಟರ್ ನಂಬರ್‍‍ಗಳನ್ನು ನೀಡಲಾಗುತ್ತದೆ.

ಒಂದೇ ನಂಬರಿನಲ್ಲಿ ಎರಡು ಕಾರು, ಕೊನೆಗೂ ಸಿಕ್ಕಿ ಬಿದ್ದ ನಕಲಿ ಕಾರು ಮಾಲೀಕ..!

ಹೊಸದಾಗಿ ರಿಜಿಸ್ಟರ್ ಆಗುವ ವಾಹನಗಳಿಗೆ ವಿಭಿನ್ನವಾದ ನಂಬರ್‍‍ಗಳನ್ನು ನೀಡಲಾಗುತ್ತದೆ. ಆದರೆ ಇಲ್ಲೊಂದು ವಿಲಕ್ಷಣ ಪ್ರಕರಣದಲ್ಲಿ ಒಂದೇ ಮಾದರಿಯ ಎರಡು ಕಾರುಗಳು ಒಂದೇ ರಿಜಿಸ್ಟ್ರೇಷನ್ ನಂಬರ್ ಹೊಂದಿದ್ದ ಪ್ರಕರಣ ಬಯಲಿಗೆ ಬಂದಿದೆ.ಈ ಘಟನೆ ನಡೆದಿರುವುದು, ಜಮ್ಮು ಕಾಶ್ಮೀರದ ಕಥುವಾದಲ್ಲಿ. ಈ ಘಟನೆಯ ಬಗ್ಗೆ ಡೈಲಿ ಎಕ್ಸೆಲ್‍‍ಸಿಯರ್ ವರದಿ ಮಾಡಿದೆ. ಎರಡು ಹ್ಯುಂಡೈ ವರ್ನಾ ಸೆಡಾನ್ ವಾಹನಗಳು, ಒಂದೇ ಬಣ್ಣವನ್ನು ಹೊಂದಿ, ಒಂದೇ ರಿಜಿಸ್ಟ್ರೇಷನ್ ನಂಬರ್ ಹೊಂದಿ ಕಾರ್ಯಾಚರಣೆ ಮಾಡುತ್ತಿದ್ದ ಪ್ರಕರಣ ಬಯಲಿಗೆ ಬಂದಿದೆ.

ಎರಡೂ ವಾಹನಗಳೂ 1.6 ಲೀಟರಿನ ಡೀಸೆಲ್ ಎಂಜಿನ್ ಹೊಂದಿವೆ. ಕಥುವಾದಲ್ಲಿರುವ ಲಖನ್‍‍ಪುರ್‍‍ನ ನಿವಾಸಿ ಜತಿಂದರ್ ಶರ್ಮಾರವರು ತಮ್ಮ ಬಳಿಯಿರುವ ಹುಂಡೈ ವರ್ನಾದ ವಾಹನದಂತೆಯೇ ಇನ್ನೊಂದು ವಾಹನವಿದ್ದು, ತಮ್ಮ ವಾಹನದ ರಿಜಿಸ್ಟ್ರೇಷನ್ ನಂಬರನ್ನೇ ಹೊಂದಿರುವ ಬಗ್ಗೆ ದೂರು ನೀಡಿದ ನಂತರ ಪ್ರಕರಣ ಬಯಲಿಗೆ ಬಂದಿದೆ.

ಒಂದೇ ನಂಬರಿನಲ್ಲಿ ಎರಡು ಕಾರು, ಕೊನೆಗೂ ಸಿಕ್ಕಿ ಬಿದ್ದ ನಕಲಿ ಕಾರು ಮಾಲೀಕ..!

ಸ್ಪೇಸಿಫಿಕೇಷನ್‍‍ಗಳ ಹೊರತಾಗಿ, ಎರಡೂ ವಾಹನಗಳು ಜೆಕೆ08 ಹೆಚ್0088 ರಿಜಿಸ್ಟ್ರೇಷನ್ ನಂಬರನ್ನೇ ಹೊಂದಿದ್ದವು. ದೂರನ್ನು ಸ್ವೀಕರಿಸಿದ ಪೊಲೀಸರು ತನಿಖೆ ಆರಂಭಿಸಿ, ಇದೇ ರಿಜಿಸ್ಟ್ರೇಷನ್ ನಂಬರ್ ಹೊಂದಿದ್ದ ಕಾರನ್ನು ಪತ್ತೆ ಹಚ್ಚಿದರು. ಈ ಕಾರು ಕಥುವಾದ ನಿವಾಸಿ ಮೊಹಮ್ಮದ್ ರಫೀಕ್ ಎಂಬುವವರಿಗೆ ಸೇರಿತ್ತು.

ಒಂದೇ ನಂಬರಿನಲ್ಲಿ ಎರಡು ಕಾರು, ಕೊನೆಗೂ ಸಿಕ್ಕಿ ಬಿದ್ದ ನಕಲಿ ಕಾರು ಮಾಲೀಕ..!

ಮೊಹಮ್ಮದ್ ರಫೀಕ್ ರವರಿಗೆ ಸೇರಿದ್ದ ಕಾರು ಆರ್‍‍ಟಿ‍ಒ ದಾಖಲೆಗಳ ಪ್ರಕಾರ ನಿಜವಾದ ರಿಜಿಸ್ಟ್ರೇಷನ್ ನಂಬರ್ ಹೊಂದಿತ್ತು. ಪೊಲೀಸರು ದೂರುದಾರರಿಗೆ ಕಾರನ್ನು ಮಾರಾಟ ಮಾಡಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಎರಡೂ ಕಾರುಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಈ ಡೂಪ್ಲಿಕೇಟ್ ನಂಬರ್ ಪ್ಲೇಟಿನ ಹಿಂದೆ ಅಡಗಿರುವ ನಿಜವಾದ ಕಾರಣವನ್ನು ಹುಡುಕುತ್ತಿದ್ದಾರೆ.

ಒಂದೇ ನಂಬರಿನಲ್ಲಿ ಎರಡು ಕಾರು, ಕೊನೆಗೂ ಸಿಕ್ಕಿ ಬಿದ್ದ ನಕಲಿ ಕಾರು ಮಾಲೀಕ..!

ರೋಡ್ ಟ್ಯಾಕ್ಸ್ ಹಾಗೂ ರಿಜಿಸ್ಟ್ರೇಷನ್ ಹಣವನ್ನು ಉಳಿಸುವ ಉದ್ದೇಶದಿಂದ ದೂರುದಾರರಿಗೆ ಕಾರನ್ನು ಮಾರಾಟ ಮಾಡಿದ ವ್ಯಕ್ತಿಯು ಆರ್‍‍ಟಿ‍ಒದಲ್ಲಿ ಕಾರನ್ನು ರಿಜಿಸ್ಟ್ರೇಷನ್ ಮಾಡಿಸದೇ ಇರುವ ಸಾಧ್ಯತೆಗಳಿವೆ.

ಒಂದೇ ನಂಬರಿನಲ್ಲಿ ಎರಡು ಕಾರು, ಕೊನೆಗೂ ಸಿಕ್ಕಿ ಬಿದ್ದ ನಕಲಿ ಕಾರು ಮಾಲೀಕ..!

ಅದರ ಬದಲಿಗೆ ಅದೇ ರೀತಿಯಲ್ಲಿರುವ ಕಾರಿನ ನಂಬರನ್ನೇ ಬಳಸಿಕೊಂಡಿರುವ ಸಾಧ್ಯತೆಗಳಿವೆ. ಈ ಮೊದಲು ಸಹ ಡೂಪ್ಲಿಕೇಟ್ ನಂಬರ್‍‍ಪ್ಲೇಟ್‍‍ಗಳನ್ನು ಹೊಂದಿದ್ದ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿದ್ದವು. ಆದರೆ ಇದೇ ಮೊದಲ ಬಾರಿಗೆ ಒಂದೇ ಕಂಪನಿಯ, ಒಂದೇ ಬಣ್ಣ ಹೊಂದಿರುವ, ಒಂದೇ ಮಾದರಿಯ ಎರಡು ಕಾರುಗಳಿಗೆ, ಒಂದೇ ರಿಜಿಸ್ಟ್ರೇಷನ್ ನಂಬರ್ ಹಾಕಲಾಗಿದೆ.

ಒಂದೇ ನಂಬರಿನಲ್ಲಿ ಎರಡು ಕಾರು, ಕೊನೆಗೂ ಸಿಕ್ಕಿ ಬಿದ್ದ ನಕಲಿ ಕಾರು ಮಾಲೀಕ..!

ವಾಹನಗಳ ಮಾರಾಟದ ನಂತರ ಡೀಲರ್‍‍‍ಗಳು ಹೊಸ ರಿಜಿಸ್ಟ್ರೇಷನ್ ನಂಬರ್‍‍ಗಾಗಿ ಸ್ಥಳೀಯ ಆರ್‍‍ಟಿ‍ಒಗಳಲ್ಲಿ ಅರ್ಜಿ ಸಲ್ಲಿಸುತ್ತಾರೆ. ಆರ್‍‍‍ಟಿ‍ಒ ಕಚೇರಿಯಲ್ಲಿ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ನಂತರ ಹೊಸ ರಿಜಿಸ್ಟ್ರೇಷನ್ ನಂಬರ್ ನೀಡಲಾಗುತ್ತದೆ.

MOST READ: ದಿನವಿಡಿ ಸೇವೆ ನೀಡಲಿದೆ ಪಂಕ್ಚರ್ ಡಾಕ್ಟರ್

ಒಂದೇ ನಂಬರಿನಲ್ಲಿ ಎರಡು ಕಾರು, ಕೊನೆಗೂ ಸಿಕ್ಕಿ ಬಿದ್ದ ನಕಲಿ ಕಾರು ಮಾಲೀಕ..!

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್‍ (ಹೆಚ್‍ಎಸ್‍ಆರ್‍‍ಪಿ)ಯನ್ನು ಸರಿಯಾಗಿ ಅಳವಡಿಸದ ಕಾರಣ ಇತ್ತೀಚಿಗಷ್ಟೇ ಹೊಸ ವಾಹನಗಳ ನೋಂದಣಿಯನ್ನು ನಿಲ್ಲಿಸಲಾಗಿತ್ತು. ಹೆಚ್‍ಎಸ್‍ಆರ್‍‍ಪಿಯನ್ನು ಸರಿಯಾಗಿ ಅಳವಡಿಸಿಕೊಂಡರೆ ಈ ರೀತಿಯ ಅಕ್ರಮಗಳನ್ನು ತಡೆಗಟ್ಟಬಹುದು. ಹೆಚ್‍ಎಸ್‍ಆರ್‍‍ಪಿ‍‍ಗಳನ್ನು ವಿಶೇಷವಾಗಿ ತಯಾರಿಸಲಾಗಿದ್ದು, ಇದಕ್ಕಾಗಿಯೇ ಇರುವ ಉಪಕರಣಗಳನ್ನು ಬಳಸಿ, ಪರಿಣಿತರು ವಾಹನಗಳಲ್ಲಿ ಅಳವಡಿಸುತ್ತಾರೆ.

ಒಂದೇ ನಂಬರಿನಲ್ಲಿ ಎರಡು ಕಾರು, ಕೊನೆಗೂ ಸಿಕ್ಕಿ ಬಿದ್ದ ನಕಲಿ ಕಾರು ಮಾಲೀಕ..!

ಈ ರೀತಿಯ ಪ್ರಕರಣಗಳನ್ನು ತಡೆಗಟ್ಟಲು, ಹೊಸ ವಾಹನವನ್ನು ಕೊಳ್ಳುವ ಮುನ್ನ ಮುನ್ನೆಚ್ಚರಿಕೆ ವಹಿಸುವುದು ಒಳ್ಳೆಯದು. ರಿಜಿಸ್ಟ್ರೇಷನ್ ದಾಖಲೆಗಳು, ಕಾರಿನ ಮಾಹಿತಿಗಳಾದ ಚಾಸೀಸ್ ನಂಬರ್, ವಿ‍ಐ‍ಎನ್ ನಂಬರ್‍‍ಗಳ ಜೊತೆ ಹೊಂದಾಣಿಕೆಯಾದರೆ ಮಾತ್ರ ಮುಂದುವರಿಯುವುದು ಸೂಕ್ತ.

ಒಂದೇ ನಂಬರಿನಲ್ಲಿ ಎರಡು ಕಾರು, ಕೊನೆಗೂ ಸಿಕ್ಕಿ ಬಿದ್ದ ನಕಲಿ ಕಾರು ಮಾಲೀಕ..!

ರಿಜಿಸ್ಟರ್ ಆಗದ ವಾಹನಗಳಿಗೆ ವಿಮೆ ನೀಡಲಾಗುವುದಿಲ್ಲ. ನಕಲಿ ರಿಜಿಸ್ಟ್ರೇಷನ್ ನಂಬರ್‍‍ಗಳನ್ನು ಬಳಸುವುದು ಭಾರತದಲ್ಲಿ ಕಾನೂನು ಬಾಹಿರ. ಆದ್ದರಿಂದ ವಾಹನಗಳ ಡೀಲರ್‍‍ಗಳನ್ನು ಅತಿಯಾಗಿ ನಂಬದೇ, ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ವಾಹನಗಳನ್ನು ಖರೀದಿಸುವುದು ಲೇಸು.

Source: Daily Excelsior

Most Read Articles

Kannada
English summary
Hyundai Verna sedans with the same number plate BUSTED by cops, owner arrested - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X