ಉಚಿತವಾಗಿ ಆಕ್ಸಿಜನ್ ಪೂರೈಸುವ ಆಕ್ಸಿಟ್ಯಾಕ್ಸಿ ಸೇವೆಗೆ ಚಾಲನೆ ನೀಡಿದ ಐ‌ಎಎಸ್ ಅಧಿಕಾರಿ

ಕರೋನಾ ವೈರಸ್ ಎರಡನೇ ಎಲೆ ಭಾರತದಲ್ಲಿ ಆರ್ಭಟಿಸುತ್ತಿರುವುದರಿಂದ ದೇಶದಲ್ಲಿ ಪ್ರತಿ ದಿನ 3 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಇತರ ರಾಜ್ಯಗಳಂತೆ ರಾಷ್ಟ್ರ ರಾಜಧಾನಿ ದೆಹಲಿ ಸಹ ಕರೋನಾ ವೈರಸ್ ಎರಡನೇ ಅಲೆಗೆ ತತ್ತರಿಸಿದೆ.

ಉಚಿತವಾಗಿ ಆಕ್ಸಿಜನ್ ಪೂರೈಸುವ ಆಕ್ಸಿಟ್ಯಾಕ್ಸಿ ಸೇವೆಗೆ ಚಾಲನೆ ನೀಡಿದ ಐ‌ಎಎಸ್ ಅಧಿಕಾರಿ

ಎರಡನೇ ಅಲೆಯಲ್ಲಿ ಜನರು ಉಸಿರಾಟದ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ದೆಹಲಿ ಸೇರಿದಂತೆ ಇತರ ನಗರಗಳಲ್ಲಿ ಆಕ್ಸಿಜನ್ ಕೊರತೆ ಎದುರಾಗಿದೆ.ಹಲವು ನಗರಗಳಲ್ಲಿ ಆಕ್ಸಿಜನ್ ಸಿಲಿಂಡರ್ ಹಾಗೂ ಕಾನ್ಸನ್'ಟೆಟರ್ ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ವರದಿಗಳಾಗುತ್ತಿವೆ.

ಉಚಿತವಾಗಿ ಆಕ್ಸಿಜನ್ ಪೂರೈಸುವ ಆಕ್ಸಿಟ್ಯಾಕ್ಸಿ ಸೇವೆಗೆ ಚಾಲನೆ ನೀಡಿದ ಐ‌ಎಎಸ್ ಅಧಿಕಾರಿ

ಈ ಸಂಕಷ್ಟದ ಸಮಯದಲ್ಲಿ ಕೆಲವು ವಾಹನ ತಯಾರಕ ಕಂಪನಿಗಳು ಹಾಗೂ ಎನ್‌ಜಿಒಗಳು ಅಗತ್ಯವಿರುವವರ ಪ್ರಾಣ ಉಳಿಸಲು ಆಕ್ಸಿಜನ್ ಪೂರೈಸುತ್ತಿವೆ. ಈಗ ಯುನೈಟೆಡ್ ಬೈ ಬ್ಲಡ್ ಸಹ ಆಕ್ಸಿಜನ್ ಪೂರೈಸಲು ಮುಂದಾಗಿದೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಉಚಿತವಾಗಿ ಆಕ್ಸಿಜನ್ ಪೂರೈಸುವ ಆಕ್ಸಿಟ್ಯಾಕ್ಸಿ ಸೇವೆಗೆ ಚಾಲನೆ ನೀಡಿದ ಐ‌ಎಎಸ್ ಅಧಿಕಾರಿ

ಯುನೈಟೆಡ್ ಬೈ ಬ್ಲಡ್ ಎಂಬ ಸಂಘಟನೆಯನ್ನು ಐಎಎಸ್ ಅಧಿಕಾರಿ ಕಂ ನಟ ಅಭಿಷೇಕ್ ಸಿಂಗ್ ನಿರ್ವಹಿಸುತ್ತಿದ್ದಾರೆ. ಅವರು ಯಾವುದೇ ವಿತರಣಾ ಶುಲ್ಕ ಪಡೆಯದೇ ದೆಹಲಿ ಎನ್‌ಸಿಆರ್‌ನಲ್ಲಿರುವ ಜನರ ಮನೆ ಬಾಗಿಲಿಗೆ ಆಕ್ಸಿಜನ್ ಸಾಗಿಸುವ ಆಕ್ಸಿಟಾಕ್ಸಿ ಎಂಬ ಸೇವೆಯನ್ನು ಆರಂಭಿಸಿದ್ದಾರೆ.

ಉಚಿತವಾಗಿ ಆಕ್ಸಿಜನ್ ಪೂರೈಸುವ ಆಕ್ಸಿಟ್ಯಾಕ್ಸಿ ಸೇವೆಗೆ ಚಾಲನೆ ನೀಡಿದ ಐ‌ಎಎಸ್ ಅಧಿಕಾರಿ

ಆಕ್ಸಿಜನ್ ತುಂಬಿಸಲು ಮನೆಯಿಂದ ಹೊರಗೆ ಹೋಗಲು ಸಾಧ್ಯವಾಗದವರಿಗೆ ಆಕ್ಸಿಟಾಕ್ಸಿ ನೆರವಾಗಲಿದೆ. ಈ ಸೇವೆಯು ಸೋಂಕಿತರ ಕುಟುಂಬದವರು ಮನೆಯಿಂದ ಹೊರಬರುವುದನ್ನು ತಡೆಯುವುದಲ್ಲದೆ ಬೇರೆಯವರಿಗೆ ಸೋಂಕು ಹರಡದಂತೆ ತಡೆಯಲು ನೆರವಾಗುತ್ತದೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಉಚಿತವಾಗಿ ಆಕ್ಸಿಜನ್ ಪೂರೈಸುವ ಆಕ್ಸಿಟ್ಯಾಕ್ಸಿ ಸೇವೆಗೆ ಚಾಲನೆ ನೀಡಿದ ಐ‌ಎಎಸ್ ಅಧಿಕಾರಿ

ಈ ಎನ್‌ಜಿ‌ಒ, ವಾಹನಗಳನ್ನು ಚಾಲನೆ ಮಾಡಲು ಸಾಧ್ಯವಾಗದ ಹಾಗೂ ವಾಹನಗಳನ್ನು ಹೊಂದಿರದ ಹಿರಿಯ ನಾಗರಿಕರಿಗೆ ಸಹ ನೆರವಾಗಲಿದೆ. ಯುನೈಟೆಡ್ ಬೈಬ್ಲೂಡ್.ಕಾಮ್ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್‌ಗೆ ಹೋಗಿ ಈ ಸೌಲಭ್ಯವನ್ನು ಪಡೆಯ ಬಹುದು.

ಉಚಿತವಾಗಿ ಆಕ್ಸಿಜನ್ ಪೂರೈಸುವ ಆಕ್ಸಿಟ್ಯಾಕ್ಸಿ ಸೇವೆಗೆ ಚಾಲನೆ ನೀಡಿದ ಐ‌ಎಎಸ್ ಅಧಿಕಾರಿ

ಆಕ್ಸಿಜನ್ ಮಾತ್ರವಲ್ಲದೇ ರಕ್ತದ ಪ್ಲಾಸ್ಮಾ ಅಗತ್ಯವಿರುವವವರಿಗೆ ಸಹ ಈ ಎನ್‌ಜಿಒ ನೆರವಾಗುತ್ತದೆ. ಇದಕ್ಕಾಗಿ ಈ ಎನ್‌ಜಿಒ ತನ್ನ ಅರ್ಜಿಯಲ್ಲಿ ಪ್ಲಾಸ್ಮಾ ದಾನಿಗಳ ಹಾಗೂ ಪ್ಲಾಸ್ಮಾ ಅಗತ್ಯವಿರುವವರ ನೋಂದಣಿಯನ್ನು ಆರಂಭಿಸಿದೆ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಉಚಿತವಾಗಿ ಆಕ್ಸಿಜನ್ ಪೂರೈಸುವ ಆಕ್ಸಿಟ್ಯಾಕ್ಸಿ ಸೇವೆಗೆ ಚಾಲನೆ ನೀಡಿದ ಐ‌ಎಎಸ್ ಅಧಿಕಾರಿ

ದೆಹಲಿ-ಎನ್‌ಸಿಆರ್‌ನಲ್ಲಿ ಆಕ್ಸಿಟಾಕ್ಸಿ ಸೇವೆಯ ಮೂಲಕ ಆಕ್ಸಿಜನ್ ಸಿಲಿಂಡರ್ ರಿಫಿಲ್ ಮಾಡಿಸಲು +9999999547 ನಂಬರನ್ನು ಸಂಪರ್ಕಿಸಬೇಕೆಂದು ಯುನೈಟೆಡ್ ಬೈ ಬ್ಲಡ್ ಹೇಳಿದೆ. ಈ ಸೇವೆಯನ್ನು ಪಡೆಯ ಬಯಸುವವರು ಈ ಕೆಳಕಂಡ ಮಾಹಿತಿಯನ್ನು ಒದಗಿಸಬೇಕಾಗುತ್ತದೆ.

ಉಚಿತವಾಗಿ ಆಕ್ಸಿಜನ್ ಪೂರೈಸುವ ಆಕ್ಸಿಟ್ಯಾಕ್ಸಿ ಸೇವೆಗೆ ಚಾಲನೆ ನೀಡಿದ ಐ‌ಎಎಸ್ ಅಧಿಕಾರಿ

- ಆಕ್ಸಿಮೀಟರ್‌ನಲ್ಲಿ ರೋಗಿಯ ಆಕ್ಸಿಜನ್ ಮಟ್ಟವು 95%ಗಿಂತ ಕಡಿಮೆಯಿರುವುದನ್ನು ತೋರಿಸುವ ಫೋಟೋ

- ಡಾಕ್ಟರ್ ಪ್ರಿಸ್ಕ್ರಿಪ್ಷನ್

- ರಿಫಿಲ್ ಮಾಡಿಸಲು ಖಾಲಿ ಸಿಲಿಂಡರ್

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಉಚಿತವಾಗಿ ಆಕ್ಸಿಜನ್ ಪೂರೈಸುವ ಆಕ್ಸಿಟ್ಯಾಕ್ಸಿ ಸೇವೆಗೆ ಚಾಲನೆ ನೀಡಿದ ಐ‌ಎಎಸ್ ಅಧಿಕಾರಿ

ಎನ್‌ಜಿಒಗಳಾದ ಟರ್ನ್ ಯುವರ್ ಕನ್ಸರ್ನ್ ಇಂಟು ಆಕ್ಷನ್ ಫೌಂಡೇಶನ್ (ಟಿವೈಸಿಐಎ) ಹಾಗೂ ವಾಹನ ತಯಾರಕ ಕಂಪನಿಗಳಾದ ಮಹೀಂದ್ರಾ ಅಂಡ್ ಮಹೀಂದ್ರಾ ಹಾಗೂ ಎಂಜಿ ಮೋಟಾರ್ ಕಂಪನಿಗಳು ಸಹ ಕೋವಿಡ್ -19 ಪೀಡಿತ ಪ್ರದೇಶಗಳಲ್ಲಿ ಆಕ್ಸಿಜನ್ ಪೂರೈಸುತ್ತಿವೆ.

ಉಚಿತವಾಗಿ ಆಕ್ಸಿಜನ್ ಪೂರೈಸುವ ಆಕ್ಸಿಟ್ಯಾಕ್ಸಿ ಸೇವೆಗೆ ಚಾಲನೆ ನೀಡಿದ ಐ‌ಎಎಸ್ ಅಧಿಕಾರಿ

ಟಿವೈಸಿಐಎ ರಾಷ್ಟ್ರ ರಾಜಧಾನಿಯಲ್ಲಿ 10 ಆಟೋ ರಿಕ್ಷಾ ಆಂಬುಲೆನ್ಸ್‌ಗಳನ್ನು ನಿರ್ವಹಿಸುತ್ತಿದೆ. ಈ ಆಟೋ ರಿಕ್ಷಾ ಆಂಬುಲೆನ್ಸ್‌ಗಳು ಸೋಂಕಿತರಿಗೆ ತಕ್ಷಣವೇ ನೆರವು ನೀಡುತ್ತವೆ. ಈ ವಾಹನಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗಿದ್ದು, ಆಕ್ಸಿಜನ್ ಒದಗಿಸಲಾಗಿದೆ.

ಗಮನಿಸಿ: ಈ ಲೇಖನದಲ್ಲಿ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
IAS Officer launches Oxytaxi service for free delivery of oxygen. Read in Kannada.
Story first published: Monday, May 17, 2021, 14:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X