ಶೀಘ್ರದಲ್ಲೇ ಹಳಿಗಿಳಿಯಲಿದೆ ಸ್ಲೀಪರ್ ಕ್ಲಾಸ್ ಸೌಲಭ್ಯದ ಟ್ರೈನ್ 19

ಸ್ವದೇಶಿ ನಿರ್ಮಿತ ಸೆಮಿ ಹೈಸ್ಪೀಡ್ ರೈಲು ಟ್ರೈನ್ 18(ವಂದೇ ಭಾರತ್ ಎಕ್ಸ್‌ಪ್ರೆಸ್) ಯಶಸ್ವಿಯ ನಂತರ ಮತ್ತೊಂದು ಬೃಹತ್ ಯೋಜನೆಗೆ ಮುಂದಾಗಿರುವ ರೈಲ್ವೆ ಇಲಾಖೆಯು ಸುಸಜ್ಜಿತ ಮಾದರಿಯ ಸ್ಲೀಪರ್ ಕ್ಲಾಸ್ ವರ್ಷನ್ ಟ್ರೈನ್ 19 ಮಾದರಿಯನ್ನು ಅಭಿವೃದ್ಧಿಗೊಳಿಸಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಹೊಸ ರೈಲು ಮಾದರಿಯನ್ನು ಹಳಿಗಿಳಿಸುವ ಯೋಜನೆಯಲ್ಲಿದೆ.

ಶೀಘ್ರದಲ್ಲೇ ಹಳಿಗಿಳಿಯಲಿದೆ ಸ್ಲೀಪರ್ ಕ್ಲಾಸ್ ವರ್ಷನ್ ಟ್ರೈನ್ 19

ಸದ್ಯ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ದೆಹಲಿ ಟು ವಾರಾಣಾಸಿ ನಡುವೆ ಸಂಚರಿಸುತ್ತಿದ್ದು, ಪ್ರಯಾಣದ ಅವಧಿಯು 8 ಗಂಟೆಗೆ ಇಳಿಕೆಯಾಗಿದೆ. ಮೊನ್ನೆಯಷ್ಟೇ ಈ ಹೊಸ ರೈಲು ಬರೋಬ್ಬರಿ 1 ಲಕ್ಷ ಕಿ.ಮಿ ಪ್ರಯಾಣದ ಗುರಿತಲುಪಿದೆ. ಇದೀಗ ಮತ್ತಷ್ಟ ಹೊಸ ಬದಲಾವಣೆಯೊಂದಿಗೆ ಹಳಿಗಿಳಿಯುವ ಸೂಚನೆ ನೀಡಿದ್ದು, ಶೀಘ್ರದಲ್ಲೇ ಸ್ಲೀಪರ್ ವರ್ಷನ್‌ನಲ್ಲಿ ಸೇವೆಗೆ ಲಭ್ಯವಾಗಲಿದೆ.

ಶೀಘ್ರದಲ್ಲೇ ಹಳಿಗಿಳಿಯಲಿದೆ ಸ್ಲೀಪರ್ ಕ್ಲಾಸ್ ವರ್ಷನ್ ಟ್ರೈನ್ 19

ಹೌದು, ಪ್ರಯಾಣಿಕರ ಆದ್ಯತೆಯೆಂತೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಗಳಲ್ಲಿ ಕೆಲವು ಬದಲಾವಣೆಗಳನ್ನು ತರಲು ಮುಂದಾಗಿರುವ ರೈಲ್ವೆ ಇಲಾಖೆಯು ಮುಂದಿನ ಕೆಲವೇ ದಿನಗಳಲ್ಲಿ ಸ್ಲೀಪರ್ ಕ್ಲಾಸ್ ಮಾದರಿಯನ್ನು ಹಳಿಗಿಳಿಸುವ ಮಹತ್ವದ ಯೋಜನೆಗೆ ಚಾಲನೆ ನೀಡಿದೆ.

ಶೀಘ್ರದಲ್ಲೇ ಹಳಿಗಿಳಿಯಲಿದೆ ಸ್ಲೀಪರ್ ಕ್ಲಾಸ್ ವರ್ಷನ್ ಟ್ರೈನ್ 19

ಚೆನ್ನೈನಲ್ಲಿರುವ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ(ಐಸಿಎಫ್‌)ನಲ್ಲಿ ಸ್ಲೀಪರ್ ಕ್ಲಾಸ್ ವರ್ಷನ್ ಟ್ರೈನ್ 19 ಮಾದರಿಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಹೊಸ ಟ್ರೈನ್ ಮಾದರಿಯನ್ನು ಭಾರತೀಯ ರೈಲ್ವೆ ಇಲಾಖೆಗೆ ಮಾತ್ರವಲ್ಲದೇ ವಿದೇಶಿ ಮಾರುಕಟ್ಟೆಗಳಿಗೂ ರಫ್ತು ಮಾಡುವ ಗುರಿಹೊಂದಲಾಗಿದೆ.

ಶೀಘ್ರದಲ್ಲೇ ಹಳಿಗಿಳಿಯಲಿದೆ ಸ್ಲೀಪರ್ ಕ್ಲಾಸ್ ವರ್ಷನ್ ಟ್ರೈನ್ 19

ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಸ್ಲೀಪರ್ ಕ್ಲಾಸ್ ಸೌಲಭ್ಯವನ್ನು ಪರಿಚಯಿಸುತ್ತಿರುವ ಬಗ್ಗೆ ಮಾತನಾಡಿರುವ ರೈಲ್ವೆ ಮಂಡಳಿ ಸದಸ್ಯ ರಾಜೇಶ್ ಅಗರ್ವಾಲ್ ಅವರು, ಭಾರತೀಯ ರೈಲ್ವೆ ಇಲಾಖೆಗೆ ಮಾತ್ರವಲ್ಲದೆ ವಿದೇಶಿ ಮಾರುಕಟ್ಟೆಯಲ್ಲಿ ಬೇಡಿಕೆಯೆಂತೆ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಸ್ಲೀಪರ್ ಕ್ಲಾಸ್ ಸೌಲಭ್ಯ ಹೊಂದಿರುವ ಒಟ್ಟು 40 ಟ್ರೈನ್ 19 ಸೆಮಿ ಹೈಸ್ಪೀಡ್ ರೈಲುಗಳನ್ನು ಉತ್ಪಾದನೆ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ

ಶೀಘ್ರದಲ್ಲೇ ಹಳಿಗಿಳಿಯಲಿದೆ ಸ್ಲೀಪರ್ ಕ್ಲಾಸ್ ವರ್ಷನ್ ಟ್ರೈನ್ 19

ಅತಿ ಕಡಿಮೆ ಖರ್ಚಿನಲ್ಲಿ ಉತ್ಪಾದನೆಯಾಗಿರುವ ಅತ್ಯಾಧುನಿಕ ಸೌಲಭ್ಯ ಪ್ರೇರಿತ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಈಗಾಗಲೇ ದಕ್ಷಿಣ ಅಮೆರಿಕ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳಿಂದ ಬೇಡಿಕೆ ಬಂದಿದ್ದು, ಸದ್ಯ ಭಾರತೀಯ ರೈಲ್ವೆ ಇಲಾಖೆಯಲ್ಲಿನ ಬೇಡಿಕೆ ಪೂರೈಸಿದ ನಂತರವಷ್ಟೇ ರಫ್ತು ಮಾದರಿಗಳಿಗೆ ಆದ್ಯತೆ ನೀಡುವುದಾಗಿ ಮಾಹಿತಿ ನೀಡಿದ್ದಾರೆ.

ಶೀಘ್ರದಲ್ಲೇ ಹಳಿಗಿಳಿಯಲಿದೆ ಸ್ಲೀಪರ್ ಕ್ಲಾಸ್ ವರ್ಷನ್ ಟ್ರೈನ್ 19

ಇನ್ನು ಭಾರತದಲ್ಲಿ ನಿರ್ಮಾಣಗೊಂಡಿರುವ ಟ್ರೈನ್ 18 ಕೇವಲ 100 ಕೋಟಿ ನಿರ್ಮಾಣಗೊಂಡಿದ್ದರೂ ಇದು ವಿದೇಶಿಗಳಲ್ಲಿ ನಿರ್ಮಾಣವಾಗಬೇಕಾದ್ರೆ ಕನಿಷ್ಠ ರೂ.200 ಕೋಟಿಯಿಂದ ರೂ. 250 ಕೋಟಿ ಖರ್ಚಾಗಲಿದೆಯೆಂತೆ. ಹೀಗಾಗಿ ಭಾರತದಲ್ಲಿ ಸ್ಥಳೀಯವಾಗಿ ನಿರ್ಮಾಣವಾಗಿರುವ ಟ್ರೈನ್ 18 ಖರೀದಿಗೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಪಡೆದುಕೊಳ್ಳುತ್ತಿದೆ.

ಶೀಘ್ರದಲ್ಲೇ ಹಳಿಗಿಳಿಯಲಿದೆ ಸ್ಲೀಪರ್ ಕ್ಲಾಸ್ ವರ್ಷನ್ ಟ್ರೈನ್ 19

ಹೊಸ ರೈಲಿನಲ್ಲಿ ಒಟ್ಟು 16 ಬೋಗಿಗಳಿದ್ದು, ಇವುಗಲ್ಲಿ 52 ಆಸನಗಳ ಹೊಂದಿರುವ ಎರಡು ಎಕ್ಸಿಕ್ಯುಟಿವ್‌ ಬೋಗಿಗಳನ್ನು ನೀಡಲಾಗಿದೆ. ಉಳಿದವು 78 ಆಸನಗಳ ಸಾಮಾನ್ಯ ಬೋಗಿಗಳಿದ್ದು, ಸಂಪೂರ್ಣ ಹವಾನಿಯಂತ್ರಣ, ಸಿಸಿಟಿವಿ ಸೌಲಭ್ಯ, ಜಿಪಿಎಸ್ ಆಧರಿತ ಮಾಹಿತಿ ಫಲಕ, ಸ್ವಯಂ ಚಾಲಿತ ಬಾಗಿಲು ಸೌಲಭ್ಯ ಪಡೆದಿವೆ.

ಶೀಘ್ರದಲ್ಲೇ ಹಳಿಗಿಳಿಯಲಿದೆ ಸ್ಲೀಪರ್ ಕ್ಲಾಸ್ ವರ್ಷನ್ ಟ್ರೈನ್ 19

ಇದೀಗ ಹೊಸದಾಗಿ ನಿರ್ಮಾಣ ಮಾಡಲು ಯೋಜಿಸಿರುವ ಟ್ರೈನ್ 19 ಮಾದರಿಯು ಹೆಚ್ಚುವರಿಯಾಗಿ ಸ್ಲೀಪರ್ ಕ್ಲಾಸ್ ಬೋಗಿಯನ್ನು ಪಡೆದುಕೊಳ್ಳಲಿದ್ದು, ಈ ಹಿಂದಿನಂತೆಯೇ ಹಲವು ಸೌಲಭ್ಯಗಳನ್ನು ಹೊಸ ರೈಲಿನಲ್ಲೂ ಮುಂದುವರಿಸಲಾಗಿಯೆಂತೆ.

ಶೀಘ್ರದಲ್ಲೇ ಹಳಿಗಿಳಿಯಲಿದೆ ಸ್ಲೀಪರ್ ಕ್ಲಾಸ್ ವರ್ಷನ್ ಟ್ರೈನ್ 19

ಇದಲ್ಲದೇ ದೀರ್ಘಾವಧಿ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹೊಸ ರೈಲಿನಲ್ಲಿ ವಿಶೇಷ ಮನೋರಂಜನಾ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ವೈ ಫೈ, ವ್ಯಾಕ್ಯೂಮ್ ಟಾಯ್ಲೆಟ್, ಲಗೇಜ್‌ಗೆ ಪ್ರತ್ಯೇಕ ಜಾಗ ಮೀಸಲು, ಅಂಗವಿಕಲರಿಗಾಗಿ ಪ್ರತ್ಯೇಕ ಶೌಚಾಲಯ ವ್ಯವಸ್ಥೆಯನ್ನು ಇದರಲ್ಲಿ ಅಳವಡಿಸಲಾಗಿದೆ.

ಶೀಘ್ರದಲ್ಲೇ ಹಳಿಗಿಳಿಯಲಿದೆ ಸ್ಲೀಪರ್ ಕ್ಲಾಸ್ ವರ್ಷನ್ ಟ್ರೈನ್ 19

ಒಟ್ಟಿನಲ್ಲಿ ಭಾರತೀಯ ರೈಲ್ವೆ ಇಲಾಖೆಯಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿರುವ ಟ್ರೈನ್ 18 ಮಾದರಿಯು ಮುಂಬರುವ ದಿನಗಳಲ್ಲಿ ಹೊಸ ಬದಲಾವಣೆಗ ಮತ್ತಷ್ಟು ಜನಪ್ರಿಯತೆ ಗಳಿಸಲಿದ್ದು, 2020ರ ಆರಂಭದಲ್ಲಿ ದೇಶದ ಇತರೆ ಮೆಟ್ರೋ ನಗರಗಳ ನಡುವಿನ ಸಂಪರ್ಕಕ್ಕೂ ಟ್ರೈನ್ 19 ಸೇವೆಯನ್ನು ಆರಂಭಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

Most Read Articles

Kannada
Read more on ರೈಲು train
English summary
After successfully developing Train 18, now named Vande Bharat Express, the Integral Coach Factory (ICF) in Chennai, has now decided to take up the design, development and production of Train 19, a sleeper version of Train 18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X