ಸ್ವಾತಂತ್ರ್ಯ ಸಂಭ್ರಮ: ಭಾರತದ ಆಟೋ ಮೊಬೈಲ್ ಉದ್ಯಮದ ದಿಕ್ಕನ್ನು ಬದಲಿಸಿದ ಜನಪ್ರಿಯ ಕಾರುಗಳಿವು

ಸ್ವಾತಂತ್ರ್ಯ ಭಾರತದ ನಂತರ ದೇಶಿಯ ಆಟೋ ಮೊಬೈಲ್ ಉದ್ಯಮವು ಹಲವಾರು ಬದಲಾವಣೆಗಳನ್ನು ಕಂಡಿದೆ. ಕಳೆದ ಕೆಲವು ದಶಕಗಳಲ್ಲಿ ಹೊಸ ದಿಕ್ಕಿನತ್ತ ಮುಖ ಮಾಡಿರುವ ಆಟೋ ಉದ್ಯಮದ ದಿಕ್ಕನ್ನು ಬದಲಿಸುವಲ್ಲಿ ಹಲವು ವಾಹನ ಕಾರಣ ಅಂದ್ರೆ ತಪ್ಪಾಗುವುದಿಲ್ಲ. ಹಾಗಾದ್ರೆ ಹಲವು ವರ್ಷಗಳ ಕಾಲ ಭಾರತದಲ್ಲಿ ಜನಪ್ರಿಯವಾಗಿದ್ದ ಕಾರುಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಸ್ವಾತಂತ್ರ್ಯ ಸಂಭ್ರಮ: ಭಾರತದ ಆಟೋ ಮೊಬೈಲ್ ಉದ್ಯಮದ ದಿಕ್ಕನ್ನು ಬದಲಿಸಿದ ಜನಪ್ರಿಯ ಕಾರುಗಳಿವು

1. ಮಾರುತಿ 800

ಮಾರುತಿ 800 ನಮ್ಮ ದೇಶದಲ್ಲಿ ಹೆಚ್ಚು ಜನಪ್ರಿಯವಾಗಿದ್ದ ಕಾರು. ಈ ಕಾರ್ ಅನ್ನು ಭಾರತದಲ್ಲಿ ಲಕ್ಷಾಂತರ ಜನರು ಬಳಸಿದ್ದಾರೆ. ಈ ಕಾರನ್ನು 1983ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಲಾಯಿತು. ಈ ಕಾರು 2014ರವರೆಗೆ ಮಾರಾಟವಾಗುತ್ತಿತ್ತು. ಮಾರುತಿ ಸುಜುಕಿ ಕಂಪನಿಯು ಈ ಕಾರಿನ ಉತ್ಪಾದನೆಯನ್ನು 2014ರಲ್ಲಿ ಸ್ಥಗಿತಗೊಳಿಸಿತು.

ಸ್ವಾತಂತ್ರ್ಯ ಸಂಭ್ರಮ: ಭಾರತದ ಆಟೋ ಮೊಬೈಲ್ ಉದ್ಯಮದ ದಿಕ್ಕನ್ನು ಬದಲಿಸಿದ ಜನಪ್ರಿಯ ಕಾರುಗಳಿವು

2. ಹಿಂದೂಸ್ತಾನ್ ಅಂಬಾಸಿಡರ್

ಹಿಂದೂಸ್ತಾನ್ ಮೋಟಾರ್ಸ್ ಕಂಪನಿಯ ಅಂಬಾಸಿಡರ್ ಭಾರತದ ಮತ್ತೊಂದು ಜನಪ್ರಿಯ ಕಾರು. ಈ ಕಾರ್ ಅನ್ನು 1958ರಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಲಾಯಿತು.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಸ್ವಾತಂತ್ರ್ಯ ಸಂಭ್ರಮ: ಭಾರತದ ಆಟೋ ಮೊಬೈಲ್ ಉದ್ಯಮದ ದಿಕ್ಕನ್ನು ಬದಲಿಸಿದ ಜನಪ್ರಿಯ ಕಾರುಗಳಿವು

ಭಾರತದಲ್ಲಿ ಬಿಡುಗಡೆಯಾಗುವ ಮೊದಲು ಈ ಕಾರ್ ಅನ್ನು ಬ್ರಿಟನ್‌ನಲ್ಲಿ ಮೋರಿಸ್ ಆಕ್ಸ್‌ಫರ್ಡ್ ಎಂಬ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿತ್ತು. ಈ ಕಾರು ರಾಜಕಾರಣಿಗಳ ಹಾಗೂ ಸೆಲೆಬ್ರಿಟಿಗಳ ನೆಚ್ಚಿನ ಕಾರ್ ಆಗಿತ್ತು. ಈ ಕಾರಿನ ಉತ್ಪಾದನೆಯನ್ನು 2014ರಲ್ಲಿ ಸ್ಥಗಿತಗೊಳಿಸಲಾಯಿತು.

ಸ್ವಾತಂತ್ರ್ಯ ಸಂಭ್ರಮ: ಭಾರತದ ಆಟೋ ಮೊಬೈಲ್ ಉದ್ಯಮದ ದಿಕ್ಕನ್ನು ಬದಲಿಸಿದ ಜನಪ್ರಿಯ ಕಾರುಗಳಿವು

3. ಟಾಟಾ ನ್ಯಾನೋ

ಟಾಟಾ ಮೋಟಾರ್ಸ್ ಜನರಿಗೆ ಕಡಿಮೆ ಬೆಲೆಯ ಕಾರ್ ಅನ್ನು ಮಾರಾಟ ಮಾಡುವುದಾಗಿ ಭರವಸೆ ನೀಡಿತ್ತು. ನೀಡಿದ ಭರವಸೆಯಂತೆ ಟಾಟಾ ನ್ಯಾನೋವನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಯಿತು.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಸ್ವಾತಂತ್ರ್ಯ ಸಂಭ್ರಮ: ಭಾರತದ ಆಟೋ ಮೊಬೈಲ್ ಉದ್ಯಮದ ದಿಕ್ಕನ್ನು ಬದಲಿಸಿದ ಜನಪ್ರಿಯ ಕಾರುಗಳಿವು

ಈ ಕಾರು ದೇಶಿಯ ಮಾರುಕಟ್ಟೆಯ ಅಗ್ಗದ ಕಾರು ಎಂಬ ಹೆಗ್ಗಳಿಕೆಯನ್ನು ಹೊಂದಿತ್ತು. ಟಾಟಾ ಮೋಟಾರ್ಸ್ ಈ ಕಾರ್ ಅನ್ನು 2009ರಲ್ಲಿ ಬಿಡುಗಡೆಗೊಳಿಸಿತು. ಆದರೆ ಈ ಕಾರು ನಿರೀಕ್ಷಿಸಿದಷ್ಟು ಮಟ್ಟದಲ್ಲಿ ಯಶಸ್ಸನ್ನು ಕಾಣಲಿಲ್ಲ.

ಸ್ವಾತಂತ್ರ್ಯ ಸಂಭ್ರಮ: ಭಾರತದ ಆಟೋ ಮೊಬೈಲ್ ಉದ್ಯಮದ ದಿಕ್ಕನ್ನು ಬದಲಿಸಿದ ಜನಪ್ರಿಯ ಕಾರುಗಳಿವು

4. ಹ್ಯುಂಡೈ ಸ್ಯಾಂಟ್ರೋ

ಸ್ಯಾಂಟ್ರೋ ದಕ್ಷಿಣ ಕೊರಿಯಾ ಮೂಲದ ಕಾರು ತಯಾರಕ ಕಂಪನಿಯಾದ ಹ್ಯುಂಡೈನ ಅತ್ಯಂತ ಜನಪ್ರಿಯ ಹ್ಯಾಚ್‌ಬ್ಯಾಕ್ ಟಾಲ್‌ಬಾಯ್ ಕಾರು. ಮೊದಲ ತಲೆಮಾರಿನ ಸ್ಯಾಂಟ್ರೋ ಕಾರ್ ಅನ್ನು 1997ರಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಯಿತು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಸ್ವಾತಂತ್ರ್ಯ ಸಂಭ್ರಮ: ಭಾರತದ ಆಟೋ ಮೊಬೈಲ್ ಉದ್ಯಮದ ದಿಕ್ಕನ್ನು ಬದಲಿಸಿದ ಜನಪ್ರಿಯ ಕಾರುಗಳಿವು

ಹಲವಾರು ಫೀಚರ್ ಗಳನ್ನು ಹೊಂದಿದ್ದ ಸ್ಯಾಂಟ್ರೋ ಕಾರ್ ಅನ್ನು ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು. ಹ್ಯುಂಡೈ ಕಂಪನಿಯು 2019ರಲ್ಲಿ ಹೊಸ ತಲೆಮಾರಿನ ಸ್ಯಾಂಟ್ರೋ ಕಾರ್ ಅನ್ನು ಬಿಡುಗಡೆಗೊಳಿಸಿತು.

ಸ್ವಾತಂತ್ರ್ಯ ಸಂಭ್ರಮ: ಭಾರತದ ಆಟೋ ಮೊಬೈಲ್ ಉದ್ಯಮದ ದಿಕ್ಕನ್ನು ಬದಲಿಸಿದ ಜನಪ್ರಿಯ ಕಾರುಗಳಿವು

5. ಟಾಟಾ ಇಂಡಿಕಾ

ಟಾಟಾ ಇಂಡಿಕಾ ಬಿಡುಗಡೆಯೊಂದಿಗೆ, ಟಾಟಾ ಮೋಟಾರ್ಸ್ ಕಂಪನಿಯು ಪ್ಯಾಸೆಂಜರ್ ವೆಹಿಕಲ್ ಸೆಗ್ ಮೆಂಟಿಗೆ ಕಾಲಿಟ್ಟಿತು. ಟಾಟಾ ಇಂಡಿಕಾ ಭಾರತದಲ್ಲಿ ಅಭಿವೃದ್ಧಿಯಾದ ಮೊದಲ ಪ್ಯಾಸೆಂಜರ್ ಕಾರು. 1998ರಲ್ಲಿ ಬಿಡುಗಡೆಯಾದ ಈ ಕಾರು ಬಿಡುಗಡೆಯಾದಾಗಿನಿಂದ ಜನಪ್ರಿಯತೆಯನ್ನು ಹೊಂದಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಸ್ವಾತಂತ್ರ್ಯ ಸಂಭ್ರಮ: ಭಾರತದ ಆಟೋ ಮೊಬೈಲ್ ಉದ್ಯಮದ ದಿಕ್ಕನ್ನು ಬದಲಿಸಿದ ಜನಪ್ರಿಯ ಕಾರುಗಳಿವು

ಈ ಕಾರು ಸಾಕಷ್ಟು ಜನಪ್ರಿಯವಾದ ಕಾರಣಕ್ಕೆ ಟಾಟಾ ಮೋಟಾರ್ಸ್ ಇಂಡಿಕಾ ಕಾರ್ ಅನ್ನು ವಿಸ್ಟಾ, ಮೊನ್ಜಾ, ಇಂಡಿಕಾ ವಿ2 ಹಾಗೂ ಇಂಡಿಕಾ ಸಿಎಸ್ ಎಂಬ ವಿವಿಧ ಆವೃತ್ತಿಗಳನ್ನು ಬಿಡುಗಡೆಗೊಳಿಸಿತು.

ಸ್ವಾತಂತ್ರ್ಯ ಸಂಭ್ರಮ: ಭಾರತದ ಆಟೋ ಮೊಬೈಲ್ ಉದ್ಯಮದ ದಿಕ್ಕನ್ನು ಬದಲಿಸಿದ ಜನಪ್ರಿಯ ಕಾರುಗಳಿವು

6. ಪ್ರೀಮಿಯರ್ ಪದ್ಮಿನಿ (ಫಿಯೆಟ್ 100)

ಪ್ರೀಮಿಯರ್ ಪದ್ಮಿನಿ ಕಾರು ಹಿಂದೂಸ್ತಾನ್ ಅಂಬಾಸಿಡರ್ ನಂತೆ ಭಾರತದಲ್ಲಿದ್ದ ಅಪ್ರತಿಮ ಕಾರುಗಳಲ್ಲಿ ಒಂದು. ಈ ಕಾರನ್ನು 1973 - 1998ರ ನಡುವೆ ಮಾರಾಟ ಮಾಡಲಾಯಿತು. ಮಾರಾಟ ಸ್ಥಗಿತಗೊಂಡ ಇಷ್ಟು ವರ್ಷಗಳ ನಂತರವೂ ಈ ಕಾರ್ ಅನ್ನು ಮುಂಬೈನ ಬೀದಿಗಳಲ್ಲಿ ಕಾಣಬಹುದು.

ಚಿತ್ರ ಕೃಪೆ: ಇಸಾ ಶಮೀಹ್/ ವೀಕೀ ಕಾಮನ್ಸ್

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಸ್ವಾತಂತ್ರ್ಯ ಸಂಭ್ರಮ: ಭಾರತದ ಆಟೋ ಮೊಬೈಲ್ ಉದ್ಯಮದ ದಿಕ್ಕನ್ನು ಬದಲಿಸಿದ ಜನಪ್ರಿಯ ಕಾರುಗಳಿವು

7. ಮಹೀಂದ್ರಾ ಸ್ಕಾರ್ಪಿಯೋ

ಮಹೀಂದ್ರಾ ಸ್ಕಾರ್ಪಿಯೋವನ್ನು 2002ರಲ್ಲಿ ಮೊದಲ ಬಾರಿಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಯಿತು. ಅಂದಿನಿಂದ ಈ ಎಸ್ ಯುವಿ ಭಾರತೀಯರ ನೆಚ್ಚಿನ ಕಾರ್ ಆಗಿದೆ. ಈ ಕಾರು ಮಹೀಂದ್ರಾ ಕಂಪನಿಯು ಮೊದಲ ಬಾರಿಗೆ ದೇಶಿಯವಾಗಿ ಅಭಿವೃದ್ಧಿ ಪಡಿಸಿದ ಪ್ಯಾಸೆಂಜರ್ ಕಾರು.

ಸ್ವಾತಂತ್ರ್ಯ ಸಂಭ್ರಮ: ಭಾರತದ ಆಟೋ ಮೊಬೈಲ್ ಉದ್ಯಮದ ದಿಕ್ಕನ್ನು ಬದಲಿಸಿದ ಜನಪ್ರಿಯ ಕಾರುಗಳಿವು

2014ರ ವೇಳೆಗೆ ಈ ಕಾರಿನಲ್ಲಿ ಕೆಲವು ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿ, ಹೊಸ ನೋಟ ಹಾಗೂ ವಿನ್ಯಾಸದೊಂದಿಗೆ ಬಿಡುಗಡೆಗೊಳಿಸಲಾಯಿತು.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಸ್ವಾತಂತ್ರ್ಯ ಸಂಭ್ರಮ: ಭಾರತದ ಆಟೋ ಮೊಬೈಲ್ ಉದ್ಯಮದ ದಿಕ್ಕನ್ನು ಬದಲಿಸಿದ ಜನಪ್ರಿಯ ಕಾರುಗಳಿವು

8. ಮಾರುತಿ ಜಿಪ್ಸಿ

ಮಾರುತಿ ಜಿಪ್ಸಿ ದೇಶಿಯ ಮಾರುಕಟ್ಟೆಯಲ್ಲಿ ಮೋಡಿ ಮಾಡಿದ್ದ ಮತ್ತೊಂದು ಕಾರು. ಭಾರತದಲ್ಲಿ ಎಸ್‌ಯುವಿಗಳು ಜನಪ್ರಿಯವಾಗುವ ಮೊದಲೇ ಜಿಪ್ಸಿ ಕಾರು ಜನಪ್ರಿಯವಾಗಿತ್ತು. 4x4 ಮಾದರಿಯ ಈ ಆಫ್-ರೋಡರ್ ಕಾರು ಹಲವು ರ‍್ಯಾಲಿಗಳಲ್ಲಿ ಭಾಗವಹಿಸಿ ವಿಜಯಶಾಲಿಯಾಗಿತ್ತು. ಈ ಕಾರ್ ಅನ್ನು ಭಾರತೀಯ ಸೇನೆಯಲ್ಲಿಯೂ ಸಹ ಬಳಸಲಾಗುತ್ತದೆ.

Most Read Articles

Kannada
English summary
Iconic cars of India which changed the course of Indian auto industry. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X