ಆಟೋಮ್ಯಾಟಿಕ್ ಹೆಡ್‌ಲೈಟ್‌ಗಳು ಕಾರ್ಯ ನಿರ್ವಹಿಸುವ ವಿಧಾನಗಳಿವು

ಪ್ರತಿ ದಿನ ಆಟೋ ಮೊಬೈಲ್ ಉದ್ಯಮಕ್ಕೆ ಹೊಸ ಹೊಸ ತಂತ್ರಜ್ಞಾನಗಳು ಲಗ್ಗೆ ಇಡುತ್ತಿವೆ. ಇದರಿಂದ ವಾಹನಗಳು ಅತ್ಯಾಧುನಿಕವಾಗುತ್ತಿವೆ. ಈ ನವೀನ ಸೌಲಭ್ಯಗಳು ವಾಹನ ಸವಾರರಿಗೆ ಹಲವು ರೀತಿಯಲ್ಲಿ ನೆರವಾಗುತ್ತವೆ. ಜೊತೆಗೆ ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸುತ್ತವೆ. ಅಂತಹ ಫೀಚರ್ ಗಳಲ್ಲಿ ಆಟೋಮ್ಯಾಟಿಕ್ ಹೆಡ್‌ಲೈಟ್‌ಗಳು ಸಹ ಸೇರಿವೆ.

ಆಟೋಮ್ಯಾಟಿಕ್ ಹೆಡ್‌ಲೈಟ್‌ಗಳು ಕಾರ್ಯ ನಿರ್ವಹಿಸುವ ವಿಧಾನಗಳಿವು

ಈಗ ಮಾರಾಟವಾಗುತ್ತಿರುವ ಹಲವು ಕಾರುಗಳಲ್ಲಿ ಆಟೋಮ್ಯಾಟಿಕ್ ಹೆಡ್‌ಲೈಟ್‌ಗಳನ್ನು ಅಳವಡಿಸಲಾಗಿದೆ. ಆದರೆ ಆಟೋಮ್ಯಾಟಿಕ್ ಹೆಡ್‌ಲೈಟ್‌ಗಳು ಹೇಗೆ ಕೆಲಸ ಮಾಡುತ್ತವೆ ಎಂದು ಅನೇಕ ಜನರಿಗೆ ತಿಳಿದಿಲ್ಲ. ಈ ಲೇಖನದಲ್ಲಿ ಆಟೋಮ್ಯಾಟಿಕ್ ಹೆಡ್‌ಲೈಟ್ ಫೀಚರ್ ಗಳ ಕಾರ್ಯ ವಿಧಾನದ ಬಗೆಗಿನ ವಿವರಗಳನ್ನು ನೋಡೋಣ.

ಆಟೋಮ್ಯಾಟಿಕ್ ಹೆಡ್‌ಲೈಟ್‌ಗಳು ಕಾರ್ಯ ನಿರ್ವಹಿಸುವ ವಿಧಾನಗಳಿವು

ಆಂಬಿಯೆಂಟ್ ಲೈಟಿಂಗ್ ನಿರ್ದಿಷ್ಟ ಮಟ್ಟಕ್ಕಿಂತ ಕಡಿಮೆಯಾದಾಗ, ಹೆಡ್‌ಲ್ಯಾಂಪ್‌ಗಳು ಆಟೋಮ್ಯಾಟಿಕ್ ಆಗಿ ಆನ್ ಆಗುತ್ತವೆ. ಸರಳವಾಗಿ ಹೇಳುವುದಾದರೆ, ಕತ್ತಲಾದಾಗ ಹೆಡ್‌ಲ್ಯಾಂಪ್‌ಗಳು ಆನ್ ಆಗುತ್ತವೆ. ಇದೇ ವೇಳೆ ಬೆಳಕು ಹೆಚ್ಚಾಗಿದ್ದರೆ ಹೆಡ್‌ಲ್ಯಾಂಪ್‌ಗಳು ಆಟೋಮ್ಯಾಟಿಕ್ ಆಗಿ ಆಫ್ ಆಗುತ್ತವೆ. ಈ ಕಾರಣಕ್ಕೆ ಈ ಹೆಡ್ ಲ್ಯಾಂಪ್ ಗಳನ್ನು ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು ಎನ್ನಲಾಗುತ್ತದೆ.

ಆಟೋಮ್ಯಾಟಿಕ್ ಹೆಡ್‌ಲೈಟ್‌ಗಳು ಕಾರ್ಯ ನಿರ್ವಹಿಸುವ ವಿಧಾನಗಳಿವು

ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ?

ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು ಫೋಟೋ ಎಲೆಕ್ಟ್ರಿಕ್ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತವೆ. ಅಂದರೆ, ಬೆಳಕಿನ ಕಿರಣಗಳಿಂದ ವಿದ್ಯುತ್ ಉತ್ಪಾದನೆಯಾಗುತ್ತದೆ. ಫೋಟೊ ಎಲೆಕ್ಟ್ರಿಕ್ ಸೆನ್ಸಾರ್ ಗಳನ್ನು ಕಾರಿನ ಡ್ಯಾಶ್ ಬೋರ್ಡ್ ಅಥವಾ ಇಂಟೀರಿಯರ್ ರೇರ್ ವೀವ್ ಮಿರರ್'ನ ಹಿಂಭಾಗದಲ್ಲಿ ಅಳವಡಿಸಲಾಗಿರುತ್ತದೆ. ಇದು ಆಂಬಿಯೆಂಟ್ ಲೈಟ್ ಪಡೆಯುತ್ತದೆ.

ಆಟೋಮ್ಯಾಟಿಕ್ ಹೆಡ್‌ಲೈಟ್‌ಗಳು ಕಾರ್ಯ ನಿರ್ವಹಿಸುವ ವಿಧಾನಗಳಿವು

ಈ ಸೆನ್ಸಾರ್ ಸೂರ್ಯನ ಬೆಳಕು ಹಾಗೂ ಬೀದಿ ಬೆಳಕನ್ನು ಪ್ರತ್ಯೇಕಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಸೆನ್ಸಾರ್ ಮೇಲೆ ಸೂರ್ಯನ ಬೆಳಕು ಬಿದ್ದಾಗ, ವಿದ್ಯುತ್ ಉತ್ಪಾದನೆ ಆರಂಭವಾಗುತ್ತದೆ. ಈ ಎಲೆಕ್ಟ್ರಿಸಿಟಿಯನ್ನು ಎಲೆಕ್ಟ್ರಾನಿಕ್ ಕಂಟ್ರೋಲ್ ಯುನಿಟ್ ಗ್ರಹಿಸುತ್ತದೆ. ಈ ಎಲೆಕ್ಟ್ರಾನಿಕ್ ಕಂಟ್ರೋಲ್ ಯುನಿಟ್ ಕಾರಿನ ಲೈಟಿಂಗ್ ಸರ್ಕ್ಯೂಟ್ ಅನ್ನು ನಿಯಂತ್ರಿಸುತ್ತದೆ.

ಆಟೋಮ್ಯಾಟಿಕ್ ಹೆಡ್‌ಲೈಟ್‌ಗಳು ಕಾರ್ಯ ನಿರ್ವಹಿಸುವ ವಿಧಾನಗಳಿವು

ಸೆನ್ಸಾರ್ ಗಳಿಂದ ಪವರ್ ಪಡೆಯುವಾಗ ಅದು ಹೆಡ್‌ಲ್ಯಾಂಪ್‌ಗಳನ್ನು ಆಫ್ ಮಾಡುತ್ತದೆ. ಇದೇ ವೇಳೆ ನೈಸರ್ಗಿಕ ಬೆಳಕು ಮಸುಕಾಗಲು ಆರಂಭಿಸಿದ ತಕ್ಷಣ ಫೋಟೊ ಎಲೆಕ್ಟ್ರಿಕ್ ಸೆನ್ಸಾರ್ ವಿದ್ಯುತ್ ಉತ್ಪಾದನೆಯನ್ನು ನಿಲ್ಲಿಸುತ್ತದೆ. ನಂತರ ಎಲೆಕ್ಟ್ರಾನಿಕ್ ಕಂಟ್ರೋಲ್ ಯುನಿಟ್ ಹೆಡ್‌ಲ್ಯಾಂಪ್‌ಗಳನ್ನು ಆನ್ ಮಾಡುತ್ತದೆ.

ಆಟೋಮ್ಯಾಟಿಕ್ ಹೆಡ್‌ಲೈಟ್‌ಗಳು ಕಾರ್ಯ ನಿರ್ವಹಿಸುವ ವಿಧಾನಗಳಿವು

ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳ ಫೀಚರ್ ಈ ರೀತಿ ಕಾರ್ಯನಿರ್ವಹಿಸುತ್ತದೆ. ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು ಪರಿಸರದಲ್ಲಿರುವ ಬೆಳಕಿನ ಪ್ರಮಾಣವನ್ನು ಅವಲಂಬಿಸಿ ಆಟೋಮ್ಯಾಟಿಕ್ ಆಗಿ ಆನ್ ಅಥವಾ ಆಫ್ ಆಗುತ್ತವೆ. ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು ಚಾಲಕರಿಗೆ, ಹೆಡ್‌ಲ್ಯಾಪ್‌ಗಳನ್ನು ಮ್ಯಾನುಯಲ್ ಆಗಿ ಆನ್ ಅಥವಾ ಆಫ್ ಮಾಡುವ ಅಗತ್ಯವನ್ನು ಇಲ್ಲವಾಗಿಸುತ್ತವೆ.

ಆಟೋಮ್ಯಾಟಿಕ್ ಹೆಡ್‌ಲೈಟ್‌ಗಳು ಕಾರ್ಯ ನಿರ್ವಹಿಸುವ ವಿಧಾನಗಳಿವು

ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್ ತಂತ್ರಜ್ಞಾನದಲ್ಲಿ ಬಳಸುವ ಫೋಟೊ ಎಲೆಕ್ಟ್ರಿಕ್ ಸೆನ್ಸಾರ್‌ನ ಜೀವಿತಾವಧಿ ದೀರ್ಘವಾಗಿದೆ. ಈ ಸೆನ್ಸಾರ್ ಬಹಳ ದಿನಗಳವರೆಗೆ ಕಾರ್ಯ ನಿರ್ವಹಿಸುತ್ತದೆ. ಈ ಸೆನ್ಸಾರ್ ಅನ್ನು ಕಾರಿನ ಒಳಭಾಗದಲ್ಲಿ ಅಳವಡಿಸಲಾಗಿರುತ್ತದೆ. ಇದರಿಂದ ಸೆನ್ಸಾರ್ ಹಾನಿಗೊಳಗಾಗುವ ಸಾಧ್ಯತೆಗಳು ಕಡಿಮೆ ಎಂದೇ ಹೇಳಬಹುದು.

ಆಟೋಮ್ಯಾಟಿಕ್ ಹೆಡ್‌ಲೈಟ್‌ಗಳು ಕಾರ್ಯ ನಿರ್ವಹಿಸುವ ವಿಧಾನಗಳಿವು

ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಹೊಂದಿರುವ ಕಾರುಗಳು ಸ್ವಿಚ್ ಹೊಂದಿರುತ್ತವೆ. ಈ ಸ್ವಿಚ್ ಮೂಲಕ ಆನ್ ಅಥವಾ ಆಫ್ ಮಾಡಬಹುದು. ಆದರೆ ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ ಫೀಚರ್ ಅನ್ನು ಯಾವಾಗಲೂ ಆನ್ ಮಾಡುವುದು ಉತ್ತಮ. ಏಕೆಂದರೆ ಈ ಫೀಚರ್ ಅಗತ್ಯವಿದ್ದಾಗ ಹೆಡ್‌ಲ್ಯಾಂಪ್‌ಗಳನ್ನು ಆನ್ ಮಾಡಿ, ಅಗತ್ಯವಿಲ್ಲದಿದ್ದಾಗ ಆಫ್ ಮಾಡುತ್ತದೆ.

ಆಟೋಮ್ಯಾಟಿಕ್ ಹೆಡ್‌ಲೈಟ್‌ಗಳು ಕಾರ್ಯ ನಿರ್ವಹಿಸುವ ವಿಧಾನಗಳಿವು

ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು ಸುರಕ್ಷಿತ ಪ್ರಯಾಣಕ್ಕೆ ನೆರವಾಗುತ್ತವೆ. ಈಗ ಬಿಡುಗಡೆಯಾಗುತ್ತಿರುವ ಬಹುತೇಕ ಕಾರುಗಳಲ್ಲಿ ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳನ್ನು ನೀಡಲಾಗಿರುತ್ತದೆ. ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ Tata Altroz ನಂತಹ ವಿವಿಧ ಕಾರುಗಳಲ್ಲಿ ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳನ್ನು ನೀಡಲಾಗಿದೆ.

ಆಟೋಮ್ಯಾಟಿಕ್ ಹೆಡ್‌ಲೈಟ್‌ಗಳು ಕಾರ್ಯ ನಿರ್ವಹಿಸುವ ವಿಧಾನಗಳಿವು

ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳನ್ನು ಹಿಂದೆ ದುಬಾರಿ ಬೆಲೆಯ ಐಷಾರಾಮಿ ಕಾರುಗಳಲ್ಲಿ ಮಾತ್ರ ನೀಡಲಾಗುತ್ತಿತ್ತು. ಆದರೆ ಈಗ ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ ಸಾಮಾನ್ಯ ಕಾರುಗಳಲ್ಲಿಯೂ ಲಭ್ಯವಿದೆ. ಒಂದು ಕಾಲದಲ್ಲಿ ಐಷಾರಾಮಿ ಕಾರುಗಳಲ್ಲಿ ಮಾತ್ರ ಕಂಡುಬರುತ್ತಿದ್ದ ಫೀಚರ್ ಗಳು ಈಗ ಸಾಮಾನ್ಯ ಕಾರುಗಳಲ್ಲೂ ಕಂಡು ಬರುತ್ತಿರುವುದು ಗಮನಾರ್ಹ.

ಕ್ಲಚ್ ಕಾರಿನ ಪ್ರಮುಖ ಭಾಗಗಳಲ್ಲಿ ಒಂದಾಗಿದೆ. ಆದರೆ ಕೆಲವರು ಕ್ಲಚ್ ಬಳಸುವಾಗ ಸಾಕಷ್ಟು ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಕ್ಲಚ್‌ನ ಜೀವಿತಾವಧಿ ಕಡಿಮೆಯಾಗುತ್ತದೆ. ಆದರೆ ಕೆಲವು ಸರಳ ವಿಧಾನಗಳ ಮೂಲಕ ಕ್ಲಚ್'ನ ಜೀವಿತಾವಧಿಯನ್ನು ಹೆಚ್ಚಿಸಬಹುದು.

ಆಟೋಮ್ಯಾಟಿಕ್ ಹೆಡ್‌ಲೈಟ್‌ಗಳು ಕಾರ್ಯ ನಿರ್ವಹಿಸುವ ವಿಧಾನಗಳಿವು

ಹಲವು ಕಾರು ಚಾಲಕರು ತಮ್ಮ ಪಾದಗಳನ್ನು ಕ್ಲಚ್ ಪೆಡಲ್ ಮೇಲೆ ಇಟ್ಟು ವಿಶ್ರಾಂತಿ ಪಡೆಯುವ ಅಭ್ಯಾಸವನ್ನು ಹೊಂದಿದ್ದಾರೆ. ಆದರೆ ಇದು ನಿಜಕ್ಕೂ ಕೆಟ್ಟ ಅಭ್ಯಾಸ ಎಂದು ಹಲವರಿಗೆ ತಿಳಿದಿಲ್ಲ. ಕ್ಲಚ್ ಮೇಲೆ ಅನಗತ್ಯವಾಗಿ ಪಾದಗಳನ್ನು ಇರಿಸಿದರೆ, ಕ್ಲಚ್‌ನ ಜೀವಿತಾವಧಿ ಕಡಿಮೆಯಾಗುತ್ತದೆ. ಹಾಗಾಗಿ ಕ್ಲಚ್ ಬಳಸುವಾಗ ಮಾತ್ರ ಪಾದವನ್ನು ಕ್ಲಚ್ ಮೇಲೆ ಇಟ್ಟರೆ ಒಳ್ಳೆಯದು.ಬಳಕೆಯಲ್ಲಿಲ್ಲದಿದ್ದಾಗ ಅನಗತ್ಯವಾಗಿ ಕ್ಲಚ್ ಮೇಲೆ ಪಾದ ಇಡುವುದನ್ನು ತಪ್ಪಿಸಿ. ಅಗತ್ಯವಿದ್ದಾಗ ಕ್ಲಚ್ ಪೆಡಲ್ ಅನ್ನು ಸಂಪೂರ್ಣವಾಗಿ ಒತ್ತಿರಿ. ಅಗತ್ಯವಿಲ್ಲದಿದ್ದಾಗ ನಿಮ್ಮ ಪಾದವನ್ನು ಅದರ ಮೇಲೆ ಇಡಬೇಡಿ. ಕಾರ್ ಕ್ಲಚ್‌ನ ಜೀವಿತಾವಧಿಯನ್ನು ಹೆಚ್ಚಿಸುವ ಸರಳ ಮಾರ್ಗಗಳಲ್ಲಿ ಇದು ಸಹ ಒಂದು.ಸಿಗ್ನಲ್‌ನಲ್ಲಿ ಕಾಯುತ್ತಿರುವಾಗ ಕಾರ್ ಅನ್ನು ನ್ಯೂಟ್ರಲ್'ನಲ್ಲಿಡಿ. ಇದು ತುಂಬಾ ಸರಳ ವಿಧಾನ. ಆದರೆ ಹಲವಾರು ಚಾಲಕರು ಸಿಗ್ನಲ್‌ಗಳಲ್ಲಿ ಕಾಯುವಾಗ ಕ್ಲಚ್ ಅನ್ನು ಬಳಸುತ್ತಾರೆ. ಸಿಗ್ನಲ್‌ಗಳಿಗಾಗಿ ಕಾಯುತ್ತಿರುವಾಗ ಕ್ಲಚ್ ಅನ್ನು ತುಳಿಯುವುದು ಕೆಟ್ಟ ಅಭ್ಯಾಸ.ಆದರೆ ಕೆಲವರು ಕೆಲವೇ ಕೆಲವು ಸೆಕೆಂಡುಗಳು ಮಾತ್ರ ಕ್ಲಚ್ ತುಳಿಯುತ್ತೇವೆ ಎಂದು ಲಘುವಾಗಿ ಪರಿಗಣಿಸುತ್ತಾರೆ. ಕ್ಲಚ್ ಬಳಕೆ 10 ಸೆಕೆಂಡುಗಳಾಗಿದ್ದರೂ ಅನಗತ್ಯ ಬಳಕೆ ಹೆಚ್ಚಾಗುತ್ತದೆ ಎಂದು ಅವರು ತಿಳಿಯುವುದಿಲ್ಲ.

Most Read Articles

Kannada
English summary
Important things about automatic headlights details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X