ಹಿಂದೊಮ್ಮೆ ಜನಪ್ರಿಯವಾಗಿದ್ದ ನ್ಯಾಚ್ ಬ್ಯಾಕ್ ಕಾರುಗಳ ಬಗೆಗಿನ ಸಂಗತಿಗಳಿವು

ಕಾರನ್ನು ಖರೀದಿಸ ಬಯಸುವವರು ಮೊದಲು ಆ ಕಾರಿನ ಬಾಡಿ ಸ್ಟೈಲ್ ಹೇಗಿದೆ ಎಂಬುದರತ್ತ ಗಮನ ಹರಿಸುತ್ತಾರೆ. ಭಾರತದಲ್ಲಿ ಹ್ಯಾಚ್ ಬ್ಯಾಕ್, ಎಸ್‌ಯುವಿ ಹಾಗೂ ಸೆಡಾನ್ ಗಳಂತಹ ಹಲವು ರೀತಿಯ ಕಾರುಗಳನ್ನು ಮಾರಾಟ ಮಾಡಲಾಗುತ್ತದೆ. ಈ ಎಲ್ಲಾ ಮಾದರಿಯ ಕಾರುಗಳು ಸಾಕಷ್ಟು ಜನಪ್ರಿಯತೆಯನ್ನು ಸಹ ಪಡೆದಿವೆ.

ಹಿಂದೊಮ್ಮೆ ಜನಪ್ರಿಯವಾಗಿದ್ದ ನ್ಯಾಚ್ ಬ್ಯಾಕ್ ಕಾರುಗಳ ಬಗೆಗಿನ ಸಂಗತಿಗಳಿವು

ಕಾರುಗಳ ಬಾಡಿ ಸ್ಟೈಲ್, ಬಾಡಿ ವಿನ್ಯಾಸವನ್ನು ಆಧರಿಸಿ ಆ ಕಾರುಗಳನ್ನು ಹ್ಯಾಚ್ ಬ್ಯಾಕ್, ಎಸ್‌ಯುವಿ, ಸೆಡಾನ್ ಎಂದು ವಿಂಗಡಿಸಲಾಗುತ್ತದೆ. Maruti Suzuki Baleno, Tata Altroz ಕಾರುಗಳು ಹ್ಯಾಚ್ ಬ್ಯಾಕ್ ಕಾರುಗಳಿಗೆ ಉದಾಹರಣೆಯಾಗಿವೆ. ಇನ್ನು Maruti Suzuki Vitara Brezza, Tata Nexon ಎಸ್‌ಯುವಿ ಕಾರುಗಳಿಗೆ ಉದಾಹರಣೆಗಳಾದರೆ, Maruti Suzuki Ciaz, Honda City ಸೆಡಾನ್ ಕಾರುಗಳಿಗೆ ಉದಾಹರಣೆಗಳಾಗಿವೆ.

ಹಿಂದೊಮ್ಮೆ ಜನಪ್ರಿಯವಾಗಿದ್ದ ನ್ಯಾಚ್ ಬ್ಯಾಕ್ ಕಾರುಗಳ ಬಗೆಗಿನ ಸಂಗತಿಗಳಿವು

ಈ ಮಾದರಿಗಳಲ್ಲೂ ಹಲವಾರು ಉಪವಿಭಾಗಗಳಿವೆ. ಹ್ಯಾಚ್ ಬ್ಯಾಕ್ ಕಾರುಗಳಲ್ಲಿ ಎಂಟ್ರಿ ಲೆವೆಲ್ ಹ್ಯಾಚ್ ಬ್ಯಾಕ್ ಹಾಗೂ ಪ್ರೀಮಿಯಂ ಹ್ಯಾಚ್ ಬ್ಯಾಕ್ ಎಂಬ ಉಪ ವಿಭಾಗಗಳಿವೆ. ಇನ್ನು ಎಸ್‌ಯುವಿಯಲ್ಲಿ ಕಾಂಪ್ಯಾಕ್ಟ್ ಎಸ್‌ಯುವಿ, ಮಧ್ಯಮ ಗಾತ್ರದ ಎಸ್‌ಯುವಿ ಹಾಗೂ ಪೂರ್ಣ ಗಾತ್ರದ ಎಸ್‌ಯುವಿ ಎಂಬ ಹಲವಾರು ಬಹಳಷ್ಟು ಉಪ ವಿಭಾಗಗಳಿವೆ.

ಹಿಂದೊಮ್ಮೆ ಜನಪ್ರಿಯವಾಗಿದ್ದ ನ್ಯಾಚ್ ಬ್ಯಾಕ್ ಕಾರುಗಳ ಬಗೆಗಿನ ಸಂಗತಿಗಳಿವು

ಸೆಡಾನ್ ಕಾರುಗಳಲ್ಲಿ ಕಾಂಪ್ಯಾಕ್ಟ್ ಸೆಡಾನ್ ಹಾಗೂ ಮಧ್ಯಮ ಗಾತ್ರದ ಸೆಡಾನ್ ನಂತಹ ಉಪವಿಭಾಗಗಳಿವೆ. ಪಿಕ್ ಅಪ್ ಹಾಗೂ ಲಿಮೋಸಿನ್ ನಂತಹ ಬಾಡಿ ಶೈಲಿಯ ಕಾರುಗಳೂ ಇವೆ. ಇವುಗಳಲ್ಲಿ ಲಿಮೋಸಿನ್ ಕಾರುಗಳು ಉದ್ದವಾಗಿರುತ್ತವೆ. ಲಿಮೋಸಿನ್ ಕಾರುಗಳು ಸಾಕಷ್ಟು ಐಷಾರಾಮಿ ಫೀಚರ್ ಗಳನ್ನು ಹೊಂದಿರುತ್ತವೆ ಎಂಬುದು ಗಮನಾರ್ಹ.

ಹಿಂದೊಮ್ಮೆ ಜನಪ್ರಿಯವಾಗಿದ್ದ ನ್ಯಾಚ್ ಬ್ಯಾಕ್ ಕಾರುಗಳ ಬಗೆಗಿನ ಸಂಗತಿಗಳಿವು

ವಿಶ್ವದ ಹಲವು ನಾಯಕರು ಹಾಗೂ ದೊಡ್ಡ ದೊಡ್ಡ ಉದ್ಯಮಿಗಳು ಲಿಮೋಸಿನ್ ಕಾರುಗಳನ್ನು ಬಳಸುತ್ತಾರೆ. ಆಟೋ ಮೊಬೈಲ್ ಬಗ್ಗೆ ಆಸಕ್ತಿ ಹೊಂದಿರುವವರಿಗೆ ಕಾರುಗಳ ಬಾಡಿ ಶೈಲಿಯ ಬಗ್ಗೆ ಹಲವು ಸಂಗತಿಗಳು ತಿಳಿದಿರುತ್ತವೆ. ಆದರೆ ಸಾಕಷ್ಟು ಜನರಿಗೆ ನಾಚ್ ಬ್ಯಾಕ್ ಕಾರುಗಳ ಬಗ್ಗೆ ತಿಳಿದಿರುವುದಿಲ್ಲ. ಹ್ಯಾಚ್ ಬ್ಯಾಕ್ ರೀತಿಯಲ್ಲಿಯೇ ನಾಚ್ ಬ್ಯಾಕ್ ಸಹ ಒಂದು ರೀತಿಯ ಕಾರಿನ ಬಾಡಿ ಶೈಲಿಯಾಗಿದೆ.

ಹಿಂದೊಮ್ಮೆ ಜನಪ್ರಿಯವಾಗಿದ್ದ ನ್ಯಾಚ್ ಬ್ಯಾಕ್ ಕಾರುಗಳ ಬಗೆಗಿನ ಸಂಗತಿಗಳಿವು

ಆದರೆ ಈ ಕಾರುಗಳ ಬಗ್ಗೆ ಹೆಚ್ಚು ಸುದ್ದಿಯಾಗುವುದಿಲ್ಲ. ಒಂದು ಕಾಲದಲ್ಲಿ ಅಮೆರಿಕಾದಂತಹ ಅಭಿವೃದ್ಧಿ ಹೊಂದಿದ ದೇಶಗಳ ರಸ್ತೆಯಲ್ಲಿ ನಾಚ್ ಬ್ಯಾಕ್ ಮಾದರಿಯ ಕಾರುಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಕಾಣಬಹುದಾಗಿತ್ತು. ನಾಚ್ ಬ್ಯಾಕ್ ಕಾರುಗಳು 1960 ರ ದಶಕದಿಂದ 1980 ರ ದಶಕದವರೆಗೆ ಅಮೆರಿಕದಂತಹ ದೇಶಗಳಲ್ಲಿ ಹೆಚ್ಚು ಬೇಡಿಕೆಯನ್ನು ಹೊಂದಿದ್ದವು.

ಹಿಂದೊಮ್ಮೆ ಜನಪ್ರಿಯವಾಗಿದ್ದ ನ್ಯಾಚ್ ಬ್ಯಾಕ್ ಕಾರುಗಳ ಬಗೆಗಿನ ಸಂಗತಿಗಳಿವು

ಆದರೆ ಇತ್ತೀಚಿನ ದಿನಗಳಲ್ಲಿ ಅಮೆರಿಕಾ ಹಾಗೂ ಯುರೋಪ್ ಮೂಲದ ಕಾರು ತಯಾರಕ ಕಂಪನಿಗಳು ಬಹಳ ಕಡಿಮೆ ಸಂಖ್ಯೆಯಲ್ಲಿ ನಾಚ್ ಬ್ಯಾಕ್ ಕಾರುಗಳನ್ನು ಉತ್ಪಾದಿಸುತ್ತಿವೆ. ನಾಚ್‌ ಬ್ಯಾಕ್‌ನ ವ್ಯಾಖ್ಯಾನಕ್ಕೆ ಸರಿ ಹೊಂದುವಂತಹ ಕಾರುಗಳು ಅತಿ ಕಡಿಮೆ ಸಂಖ್ಯೆಯಲ್ಲಿ ಬಿಡುಗಡೆಯಾಗುತ್ತಿವೆ. ನಾಚ್‌ ಬ್ಯಾಕ್ ಕಾರುಗಳಿಗೆ ನಿಖರವಾದ ವ್ಯಾಖ್ಯಾನವಿಲ್ಲ.

ಹಿಂದೊಮ್ಮೆ ಜನಪ್ರಿಯವಾಗಿದ್ದ ನ್ಯಾಚ್ ಬ್ಯಾಕ್ ಕಾರುಗಳ ಬಗೆಗಿನ ಸಂಗತಿಗಳಿವು

ಎಸ್‌ಯುವಿ ಮಾದರಿಯ ಕಾರುಗಳಾದರೆ ಅವುಗಳನ್ನು ನಿರ್ದಿಷ್ಟವಾಗಿ ವ್ಯಾಖ್ಯಾನ ನೀಡಬಹುದು. ನಾಚ್ ಬ್ಯಾಕ್ ಕಾರುಗಳಿಗೆ ಅಂತಹ ನಿಖರವಾದ ವ್ಯಾಖ್ಯಾನವಿಲ್ಲದಿದ್ದರೂ, ಆಟೋ ಮೊಬೈಲ್ ಉದ್ಯಮವು ತನ್ನದೇ ಆದ ಕೆಲವು ವ್ಯಾಖ್ಯಾನಗಳನ್ನು ಮುಂದಿಡುತ್ತದೆ. ಕಾರಿನ ಹಿಂಭಾಗವು, ಮುಂಭಾಗ ಅಥವಾ ಹಿಂಭಾಗದ ಭಾಗಗಳಿಗಿಂತ ಚಿಕ್ಕದಾಗಿದ್ದರೆ ಅಂತಹ ಕಾರ್ ಅನ್ನು ನಾಚ್‌ ಬ್ಯಾಕ್ ಕಾರು ಎಂದು ಕರೆಯಲಾಗುತ್ತದೆ.

ಹಿಂದೊಮ್ಮೆ ಜನಪ್ರಿಯವಾಗಿದ್ದ ನ್ಯಾಚ್ ಬ್ಯಾಕ್ ಕಾರುಗಳ ಬಗೆಗಿನ ಸಂಗತಿಗಳಿವು

ನಾಚ್‌ ಬ್ಯಾಕ್ ಕಾರುಗಳ ಹಿಂಭಾಗದ ವಿಂಡೋಗಳನ್ನು ಇತರ ಕಾರುಗಳಿಗೆ ಹೋಲಿಸಿದರೆ ತುಂಬಾ ನೇರವಾಗಿ ಅಥವಾ ನೇರವಾಗಿರುವ ಸ್ಥಾನದಲ್ಲಿ ಇರಿಸಲಾಗುತ್ತದೆ. ಆದರೆ ನಿಖರವಾದ ವ್ಯಾಖ್ಯಾನದ ಕೊರತೆಯಿಂದಾಗಿ, ಕೆಲವು ಸೆಡಾನ್‌ ಕಾರುಗಳನ್ನು ನಿಖರವಾಗಿ ವ್ಯಾಖ್ಯಾನಿಸಲು ನಾಚ್‌ ಬ್ಯಾಕ್ ಎಂಬ ಪದವನ್ನು ಬಳಸಲಾಗುತ್ತದೆ.

ಹಿಂದೊಮ್ಮೆ ಜನಪ್ರಿಯವಾಗಿದ್ದ ನ್ಯಾಚ್ ಬ್ಯಾಕ್ ಕಾರುಗಳ ಬಗೆಗಿನ ಸಂಗತಿಗಳಿವು

ಭಾರತದ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾದ Tata Tigor ಕಾರು ಇದಕ್ಕೆ ಉದಾಹರಣೆಯಾಗಿದೆ. ಈ ಕಾರ್ ಅನ್ನು ಸೆಡಾನ್ ಹಾಗೂ ನಾಚ್ ಬ್ಯಾಕ್ ಎಂದು ವ್ಯಾಖ್ಯಾನಿಸಲಾಗುತ್ತದೆ. Tata Tigor ಕಾರ್ ಅನ್ನು ಸೆಡಾನ್ ನಾಚ್ ಬ್ಯಾಕ್ ಎಂದೂ ಸಹ ಕರೆಯಲಾಗುತ್ತದೆ. ಸಾಮಾನ್ಯವಾಗಿ ನಾಚ್‌ ಬ್ಯಾಕ್ ಪದವನ್ನು ಭಾರತದಲ್ಲಿ ಉಪಯೋಗಿಸುವುದು ತೀರಾ ಕಡಿಮೆ ಎಂದೇ ಹೇಳಬಹುದು.

ಹಿಂದೊಮ್ಮೆ ಜನಪ್ರಿಯವಾಗಿದ್ದ ನ್ಯಾಚ್ ಬ್ಯಾಕ್ ಕಾರುಗಳ ಬಗೆಗಿನ ಸಂಗತಿಗಳಿವು

ಇತ್ತೀಚಿಗೆ ಭಾರತೀಯ ಗ್ರಾಹಕರು ಎಸ್‌ಯುವಿಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಮತ್ತೊಂದೆಡೆ ಸೆಡಾನ್ ಕಾರುಗಳು ನಿಧಾನವಾಗಿ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿವೆ. ಮಳೆಗಾಲದಲ್ಲಿ ಪ್ರವಾಹಕ್ಕೆ ತುತ್ತಾಗುವ ಮುಂಬಯಿಯಂತಹ ಮಹಾ ನಗರಗಳಿಗೆ ಎಸ್‌ಯುವಿಗಳು ಸೂಕ್ತವಾಗಿವೆ. ಎಲ್ಲಾ 4 ವ್ಹೀಲ್'ಗಳಿಗೆ ಎಂಜಿನ್ ಪವರ್ ಹೋಗುವುದರಿಂದ ಎಸ್‌ಯುವಿಗಳು ಯಾವುದೇ ರಸ್ತೆಯಲ್ಲಿ ಸರಾಗವಾಗಿ ಸಾಗುತ್ತವೆ.

ಹಿಂದೊಮ್ಮೆ ಜನಪ್ರಿಯವಾಗಿದ್ದ ನ್ಯಾಚ್ ಬ್ಯಾಕ್ ಕಾರುಗಳ ಬಗೆಗಿನ ಸಂಗತಿಗಳಿವು

ಮತ್ತೊಂದೆಡೆ ಸೆಡಾನ್ ಕಾರುಗಳ ಪರ್ಫಾಮೆನ್ಸ್ ಹಾಗೂ ಮೆಂಟೆನೆನ್ಸ್ ಉತ್ತಮವಾಗಿರುತ್ತದೆ. ಪ್ರಯಾಣಿಕರಿಗೆ ಹೆಚ್ಚು ಸ್ಥಳಾವಕಾಶವು ಸಹ ದೊರೆಯುತ್ತದೆ. ಸೆಡಾನ್ ಕಾರುಗಳು ದೈನಂದಿನ ಬಳಕೆಗೆ ಸೂಕ್ತವಾಗಿವೆ. ಹ್ಯಾಚ್‌ಬ್ಯಾಕ್ ಕಾರುಗಳಿಗಿಂತ ಭಿನ್ನವಾದ ಕಾರುಗಳನ್ನು ಬಯಸುವವರಿಗೆ ಸೆಡಾನ್ ಕಾರುಗಳು ಪ್ರಾಥಮಿಕ ಆಯ್ಕೆಯಾಗಿವೆ. ಒಂದು ನಾಣ್ಯದಲ್ಲಿ ಎರಡು ಮುಖಗಳಿರುವಂತೆಯೇ ಎಸ್‌ಯುವಿ ಹಾಗೂ ಸೆಡಾನ್ ಕಾರುಗಳಲ್ಲಿಯೂ ಸಾಧಕ ಬಾಧಕಗಳಿವೆ. ಆದರೂ ಗ್ರಾಹಕರು ತಮ್ಮ ಅಗತ್ಯಗಳಿಗೆ ಸರಿಹೊಂದುವ ಕಾರನ್ನು ಖರೀದಿಸುವುದು ಒಳ್ಳೆಯದು.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Important things about notchback body style cars details
Story first published: Friday, September 24, 2021, 10:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X