ಸದ್ಯದಲ್ಲೇ ನಿರ್ಮಾಣವಾಗಲಿದೆ ದೇಶದ ಮೊದಲ ಸೂಪರ್ ಎಕ್ಸ್‌ಪ್ರೆಸ್ ವೇ...

By Praveen Sannamani

ದೇಶದ ಎರಡನೇ ಅತಿದೊಡ್ಡ ಆದಾಯ ಮೂಲವಾಗಿರುವ ಸಾರಿಗೆ ವ್ಯವಸ್ಥೆಯಲ್ಲಿ ದಿನದಿಂದ ದಿನಕ್ಕೆ ಹೊಸ ಬದಲಾವಣೆಗಳಾಗುತ್ತಿದ್ದು, ಇದೀಗ ಪ್ರಯಾಣದ ಅವಧಿಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಸೂಪರ್ ಎಕ್ಸ್‌ಪ್ರೆಸ್ ವೇ ಗಳ ನಿರ್ಮಾಣಕ್ಕಾಗಿ ಬೃಹತ್ ಯೋಜನೆ ರೂಪಿಸಲಾಗುತ್ತಿದೆ.

ಸದ್ಯದಲ್ಲೇ ನಿರ್ಮಾಣವಾಗಲಿದೆ ದೇಶದ ಮೊದಲ ಸೂಪರ್ ಎಕ್ಸ್‌ಪ್ರೆಸ್ ವೇ...

ವರದಿಗಳ ಪ್ರಕಾರ ಕೇಂದ್ರ ಸರ್ಕಾರವು ರೂಪಿಸಿರುವ ಸೂಪರ್ ಎಕ್ಸ್‌ಪ್ರೆಸ್ ವೇ ಯೋಜನೆಯಲ್ಲಿ ಮೊದಲ ಹಂತವಾಗಿ ಮುಂಬೈ ಮತ್ತು ದೆಹಲಿ ನಡುವೆ ಸೂಪರ್ ಎಕ್ಸ್‌ಪ್ರೆಸ್ ವೇ ನಿರ್ಮಾಣಗೊಳ್ಳಲಿದ್ದು, ತದನಂತರವಷ್ಟೇ ದೇಶದ ಇತರೆ ಮಹಾನಗರಗಳ ನಡುವೆಯೂ ಉದ್ದೇಶಿತ ಸೂಪರ್ ಎಕ್ಸ್‌ಪ್ರೆಸ್ ವೇ ಗಳನ್ನು ಪರಿಚಯಿಸಲಾಗುತ್ತದೆ.

ಸದ್ಯದಲ್ಲೇ ನಿರ್ಮಾಣವಾಗಲಿದೆ ದೇಶದ ಮೊದಲ ಸೂಪರ್ ಎಕ್ಸ್‌ಪ್ರೆಸ್ ವೇ...

ಇನ್ನು ಸಾಮಾನ್ಯ ಎಕ್ಸ್‌ಪ್ರೆಸ್‌ ವೇ ಗಳಿಂತಲೂ ಹೆಚ್ಚಿನ ಮೂಲಸೌಕರ್ಯಗಳನ್ನು ಹೊಂದಿರುವ ಸೂಪರ್‌ ಎಕ್ಸ್‌ಪ್ರೆಸ್ ವೇ ಗಳು ಯಾವುದೇ ಅಡೆತಡೆಗಳಲ್ಲಿದೆ ವೇಗದ ಪ್ರಯಾಣಕ್ಕೆ ಅನುಕೂಲಕವಾಗಲಿದ್ದು, ಈ ಮೂಲಕ ಪ್ರಯಾಣ ಅವಧಿಯು ಅರ್ಧಷ್ಟು ತಗ್ಗಲಿದೆ.

ಸದ್ಯದಲ್ಲೇ ನಿರ್ಮಾಣವಾಗಲಿದೆ ದೇಶದ ಮೊದಲ ಸೂಪರ್ ಎಕ್ಸ್‌ಪ್ರೆಸ್ ವೇ...

ಇದಕ್ಕಾಗಿಯೇ ಸೂಪರ್ ಎಕ್ಸ್‌ಪ್ರೆಸ್ ವೇ ಗಳ ನಿರ್ಮಾಣ ಮಾಡಲು ಬರೋಬ್ಬರಿ 8 ಲಕ್ಷ ಕೋಟಿ ಬಂಡವಾಳ ಹೂಡಿಕೆ ಮಾಡಲಾಗುತ್ತಿದ್ದು, ಭಾರತ್‌ಮಾಲಾ ಯೋಜನೆ ಅಡಿಯಲ್ಲೇ 1,837ಕಿ.ಮೀ ಸೂಪರ್ ಎಕ್ಸ್‌ಪ್ರೆಸ್ ವೇ ಸಿದ್ದಗೊಳಿಸಲಾಗುತ್ತದೆ. ಇದರಲ್ಲಿ ಮೊದಲ ಹಂತವಾಗಿ ಮುಂಬೈ ಮತ್ತು ದೆಹಲಿ ನಡುವೆ ಮೊದಲ ಸೂಪರ್ ಎಕ್ಸ್‌ಪ್ರೆಸ್ ವೇ ನಿರ್ಮಾಣಗೊಳ್ಳಲಿದೆ.

ಸದ್ಯದಲ್ಲೇ ನಿರ್ಮಾಣವಾಗಲಿದೆ ದೇಶದ ಮೊದಲ ಸೂಪರ್ ಎಕ್ಸ್‌ಪ್ರೆಸ್ ವೇ...

ಮುಂಬೈ ಮತ್ತು ದೆಹಲಿ ನಡುವೆ ನಿರ್ಮಾಣವಾಗುವ 1,200 ಕಿಮಿ ಸೂಪರ್ ಎಕ್ಸ್‌ಪ್ರೆಸ್ ವೇ ಮಾರ್ಗದಲ್ಲಿ ಪ್ರಮುಖ ನಗರಗಳಿಗೂ ಸಂಪರ್ಕ ಹೊಂದಲಿದ್ದು, ಜೈಪುರ ಮತ್ತು ವಡೋದರಾ ಹಾಗೂ ಜೈಪುರ ಮತ್ತು ದೆಹಲಿ, ಮುಂಬೈ ಮತ್ತು ವಡೋದರಾ ನಡುವಿನ ಪ್ರಯಾಣದ ಅವಧಿಯು ಗಣನೀಯವಾಗಿ ಇಳಿಕೆಯಾಗಲಿದೆ.

ಸದ್ಯದಲ್ಲೇ ನಿರ್ಮಾಣವಾಗಲಿದೆ ದೇಶದ ಮೊದಲ ಸೂಪರ್ ಎಕ್ಸ್‌ಪ್ರೆಸ್ ವೇ...

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಸೂಪರ್ ಎಕ್ಸ್‌ಪ್ರೆಸ್ ವೇ ಗಳಲ್ಲಿನ ವಾಹನಗಳ ಚಾಲನಾ ಸಾಮರ್ಥ್ಯವು ಅಧಿಕ ಮಟ್ಟದಲ್ಲಿದ್ದು, ಪ್ರತಿ ಗಂಟೆಗೆ 150 ಕಿಮಿ ಟಾಪ್ ಸ್ಪೀಡ್‌ನಲ್ಲಿ ವಾಹನಗಳನ್ನು ಚಾಲನೆ ಮಾಡಬಹುದಾದ ಅವಕಾಶವಿರುತ್ತದೆ.

ಸದ್ಯದಲ್ಲೇ ನಿರ್ಮಾಣವಾಗಲಿದೆ ದೇಶದ ಮೊದಲ ಸೂಪರ್ ಎಕ್ಸ್‌ಪ್ರೆಸ್ ವೇ...

ಹೀಗಾಗಿಯೇ ಸೂಪರ್ ಎಕ್ಸ್‌ಪ್ರೆಸ್ ವೇ ಗಳು ಸಂಪೂರ್ಣ ಹಿಡಿತದಲ್ಲಿರುವ ರಸ್ತೆಗಳಾಗಲಿದ್ದು, ಅಂತಾರಾಷ್ಟ್ರೀಯ ಗುಣಮಟ್ಟ ಹೊಂದಿರುತ್ತದೆ. ಜೊತೆಗ ಪ್ರತಿ ಕಿಮೀ ರಸ್ತೆ ನಿರ್ಮಾಣಕ್ಕೆ 14ರಿಂದ 18 ಕೋಟಿ ಖರ್ಚಾಗಲಿದ್ದು, ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಅಂತರ್‌ರಾಜ್ಯ ರಸ್ತೆ, ರಾಜ್ಯ ರಸ್ತೆಗಳು ಸಹ ಎಕ್ಸ್‌ಪ್ರೆಸ್ ವೇ ಗಳಿಗೆ ಸಂಪರ್ಕ್ ಕಲ್ಪಿಸುತ್ತವೆ.

ಸದ್ಯದಲ್ಲೇ ನಿರ್ಮಾಣವಾಗಲಿದೆ ದೇಶದ ಮೊದಲ ಸೂಪರ್ ಎಕ್ಸ್‌ಪ್ರೆಸ್ ವೇ...

ಯೋಜನೆಯ ಉದ್ದೇಶ?

ವಿಶೇಷವೆಂದರೆ ಭಾರತ್‌ಮಾಲಾದಡಿ ನಿರ್ಮಾಣವಾಗುತ್ತಿರುವ ಸೂಪರ್ ಎಕ್ಸ್‌ಪ್ರೆಸ್ ವೇ ಗಳು ಸರಕು ಸಾಗಣೆಯನ್ನು ತ್ವರಿತಗೊಳಿಸಲು ಸಹಕಾರಿಯಾಗಲಿದ್ದು, ಈ ಮೂಲಕ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುವುದು ಇದರ‌ ಮುಖ್ಯ ಉದ್ದೇಶವಾಗಿದೆ.

ಸದ್ಯದಲ್ಲೇ ನಿರ್ಮಾಣವಾಗಲಿದೆ ದೇಶದ ಮೊದಲ ಸೂಪರ್ ಎಕ್ಸ್‌ಪ್ರೆಸ್ ವೇ...

ಇದಲ್ಲದೇ ಈ ಬೃಹತ್ ಯೋಜನೆಯಿಂದ 14.2 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿಸಲಿದ್ದರೆ ಪರೋಕ್ಷವಾಗಿ ಇದಕ್ಕಿಂತ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತದೆ. ಜೊತೆಗೆ ಉಕ್ಕು, ಸಿಮೆಂಟ್‌, ಪೇಂಟ್‌ ಮತ್ತಿತರ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದ ಉದ್ದಿಮೆಗಳಲ್ಲಿ ಹೆಚ್ಚಿನ ಚಟುವಟಿಕೆ ನಡೆಯಲಿದೆ ಎನ್ನುವುದು ಉದ್ಯಮಿಗಳ ಅಭಿಮತವಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

01. ಹೆಲ್ಮೆಟ್ ವಿಚಾರವಾಗಿ ಮಾರಾಮಾರಿ- ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪೊಲೀಸರು..

02. ವಾಹನ ಸವಾರರ ಜೀವಕ್ಕೆ ಕುತ್ತು ತರುತಂತೆ ಟೈರ್ ಕಿಲ್ಲರ್ ಹಂಪ್?

03. ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್- ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!

04. 30 ಕೋಟಿಗೂ ಹೆಚ್ಚು ಬೆಲೆಬಾಳುವ ಈ ಐಷಾರಾಮಿ ಎಸ್‌ಯುವಿ ಕಾರಿನ ವಿಶೇಷತೆ ಏನು?

05. ರಾತ್ರಿ ವೇಳೆ ಹೈವೇ ಡ್ರೈವಿಂಗ್ ಮಾಡುವ ಮುನ್ನ ಇರಲಿ ಎಚ್ಚರ...

Most Read Articles

Kannada
Read more on national highway
English summary
India To Get Super Expressways Soon — Will Reduce Travel Time By Half.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X