ಭಾರತದ ಮೊದಲ ಗ್ರೀನ್ ಹೈಡ್ರೋಜನ್ ಘಟಕವನ್ನು ಸ್ಥಾಪಿಸಲಿದೆ ಇಂಡಿಯನ್ ಆಯಿಲ್

ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಭಾರತದ ಮೊದಲ ಗ್ರೀನ್ ಹೈಡ್ರೋಜನ್ ಘಟಕವನ್ನು ಉತ್ತರ ಪ್ರದೇಶದ ಮಥುರಾ ರಿಫೈನರಿಯಲ್ಲಿ ಸ್ಥಾಪಿಸುವುದಾಗಿ ತಿಳಿಸಿದೆ.

ಭಾರತದ ಮೊದಲ ಗ್ರೀನ್ ಹೈಡ್ರೋಜನ್ ಘಟಕವನ್ನು ಸ್ಥಾಪಿಸಲಿದೆ ಇಂಡಿಯನ್ ಆಯಿಲ್

ಈ ಘಟಕವು ದೇಶದಲ್ಲಿ ಶುದ್ಧ ಶಕ್ತಿಯನ್ನು ಪೂರೈಸಲಿದೆ ಎಂದು ಕಂಪನಿ ಹೇಳಿದೆ. ಹೈಡ್ರೋಜನ್ ಶಕ್ತಿಯ ಶುದ್ಧ ರೂಪವಾಗಿದ್ದು, ಪ್ರಪಂಚದ ಹಲವು ದೇಶಗಳು ಹೈಡ್ರೋಜನ್ ಅನ್ನು ಶುದ್ಧ ಶಕ್ತಿಯಾಗಿ ಬಳಸುವ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿವೆ.

ಭಾರತದ ಮೊದಲ ಗ್ರೀನ್ ಹೈಡ್ರೋಜನ್ ಘಟಕವನ್ನು ಸ್ಥಾಪಿಸಲಿದೆ ಇಂಡಿಯನ್ ಆಯಿಲ್

ಗ್ರೀನ್ ಹೈಡ್ರೋಜನ್ ಅನ್ನು ಸೌರ ಶಕ್ತಿ ಅಥವಾ ಗಾಳಿಯಂತಹ ನವೀಕರಿಸಬಹುದಾದ ಇಂಧನ ಮೂಲಗಳನ್ನು ಬಳಸಿಕೊಂಡು ನೀರಿನಿಂದ ಎಲೆಕ್ಟ್ರೊಲಿಸಿಸ್ ಮೂಲಕ ಪಡೆಯಲಾಗುತ್ತದೆ. ಬಯೋಮಾಸ್ ಆಧಾರಿತ ಹೈಡ್ರೋಜನ್ ಉತ್ಪಾದನಾ ತಂತ್ರಜ್ಞಾನಗಳು ಸಹ ಹಸಿರು ವರ್ಗದಲ್ಲಿವೆ.

ಭಾರತದ ಮೊದಲ ಗ್ರೀನ್ ಹೈಡ್ರೋಜನ್ ಘಟಕವನ್ನು ಸ್ಥಾಪಿಸಲಿದೆ ಇಂಡಿಯನ್ ಆಯಿಲ್

ಮತ್ತೊಂದೆಡೆ ಕಂದು ಹಾಗೂ ಬೂದು ಹೈಡ್ರೋಜನ್'ಗಳು ಕ್ರಮವಾಗಿ ಕಲ್ಲಿದ್ದಲು ಅನಿಲೀಕರಣ ಹಾಗೂ ನೈಸರ್ಗಿಕ ಅನಿಲದ ಮೂಲಕ ಉತ್ಪತ್ತಿಯಾಗುತ್ತವೆ. ಈ ಪ್ರಕ್ರಿಯೆಯು ಹೈಡ್ರೋಜನ್ ತಯಾರಿಕೆಯಲ್ಲಿ ಅಪಾರ ಪ್ರಮಾಣದ ಕಾರ್ಬನ್ ಡೈಆಕ್ಸೈಡ್ ಹಾಗೂ ಇತರ ಹಾನಿಕಾರಕ ಅನಿಲಗಳನ್ನು ಬಿಡುಗಡೆಗೊಳಿಸುತ್ತದೆ.

ಭಾರತದ ಮೊದಲ ಗ್ರೀನ್ ಹೈಡ್ರೋಜನ್ ಘಟಕವನ್ನು ಸ್ಥಾಪಿಸಲಿದೆ ಇಂಡಿಯನ್ ಆಯಿಲ್

ಇಂಡಿಯನ್ ಆಯಿಲ್ ವಿವಿಧ ಹೈಡ್ರೋಜನ್ ಉತ್ಪಾದನಾ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ, ಮಥುರಾ ರಿಫೈನರಿಯಲ್ಲಿನ ಯೋಜನೆಯು ಭಾರತದ ತೈಲ ಹಾಗೂ ಅನಿಲ ಕ್ಷೇತ್ರದಲ್ಲಿ ಹಸಿರು ಹೈಡ್ರೋಜನ್ ಅನ್ನು ಪರಿಚಯಿಸುವಲ್ಲಿ ಮೊದಲ ಹೆಜ್ಜೆಯಾಗಲಿದೆ.

ಭಾರತದ ಮೊದಲ ಗ್ರೀನ್ ಹೈಡ್ರೋಜನ್ ಘಟಕವನ್ನು ಸ್ಥಾಪಿಸಲಿದೆ ಇಂಡಿಯನ್ ಆಯಿಲ್

ಈ ಮಹತ್ವಾಕಾಂಕ್ಷೆಯ ಯೋಜನೆಯ ಬಗ್ಗೆ ಮಾತನಾಡಿರುವ ಇಂಡಿಯನ್ ಆಯಿಲ್ ಅಧ್ಯಕ್ಷರಾದ ಶ್ರೀಕಾಂತ್ ಮಾಧವ್ ವೈದ್ಯರವರು, ಮುಂದಿನ ಹತ್ತು ವರ್ಷಗಳಲ್ಲಿ ಪೆಟ್ರೋಕೆಮಿಕಲ್ಸ್, ಹೈಡ್ರೋಜನ್ ಹಾಗೂ ಎಲೆಕ್ಟ್ರಿಕ್ ವಾಹನಗಳ ಬಳಕೆಯತ್ತ ಗಮನಹರಿಸಲು ಇಂಡಿಯನ್ ಆಯಿಲ್ ಕಾರ್ಯತಂತ್ರ ಸಿದ್ಧಪಡಿಸಿದೆ ಎಂದು ಹೇಳಿದರು.

ಭಾರತದ ಮೊದಲ ಗ್ರೀನ್ ಹೈಡ್ರೋಜನ್ ಘಟಕವನ್ನು ಸ್ಥಾಪಿಸಲಿದೆ ಇಂಡಿಯನ್ ಆಯಿಲ್

ಗ್ರೀನ್ ಎನರ್ಜಿ ಲ್ಯಾಂಡ್‌ಸ್ಕೇಪ್‌ನಲ್ಲಿ ಇಂಡಿಯನ್ ಆಯಿಲ್ ಹೆಜ್ಜೆ ಗುರುತಿನ ಬಗ್ಗೆ ಮಾಹಿತಿ ಹಂಚಿಕೊಂಡ ವೈದ್ಯರವರು, ಇಂಡಿಯನ್ ಆಯಿಲ್ ರಾಜಸ್ಥಾನದಲ್ಲಿ ಗಾಳಿಯಿಂದ ವಿದ್ಯುತ್ ತಯಾರಿಸುವ ಯೋಜನೆಯನ್ನು ಹೊಂದಿದೆ.

ಭಾರತದ ಮೊದಲ ಗ್ರೀನ್ ಹೈಡ್ರೋಜನ್ ಘಟಕವನ್ನು ಸ್ಥಾಪಿಸಲಿದೆ ಇಂಡಿಯನ್ ಆಯಿಲ್

ಇಲ್ಲಿ ಉತ್ಪಾದಿಸುವ ವಿದ್ಯುತ್ ಅನ್ನು ಮಥುರಾದ ರಿಫೈನರಿಯಲ್ಲಿ ಎಲೆಕ್ಟ್ರೋಲಿಸಿಸ್ ಮೂಲಕ ಗ್ರೀನ್ ಹೈಡ್ರೋಜನ್ ಉತ್ಪಾದಿಸಲು ಬಳಸಲಾಗುತ್ತದೆ. ಟಿಟಿಝಡ್ (ತಾಜ್ ಟ್ರೆಪೆಜಿಯಂ ಝೋನ್) ಗೆ ಸಮೀಪವಿರುವ ಕಾರಣ ಮಥುರಾ ರಿಫೈನರಿಯನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಯೋಜನೆಯ ಬಗ್ಗೆ ವಿವರ ನೀಡಿದರು.

ಭಾರತದ ಮೊದಲ ಗ್ರೀನ್ ಹೈಡ್ರೋಜನ್ ಘಟಕವನ್ನು ಸ್ಥಾಪಿಸಲಿದೆ ಇಂಡಿಯನ್ ಆಯಿಲ್

ಭವಿಷ್ಯದಲ್ಲಿ ಕಚ್ಚಾ ತೈಲಕ್ಕೆ ಇಂಧನವನ್ನು ತಯಾರಿಸಲು ಕಾರ್ಬನ್ ಮುಕ್ತ ಗ್ರೀನ್ ಹೈಡ್ರೋಜನ್ ಅನ್ನು ರಿಫೈನರಿಯಲ್ಲಿ ಬಳಸಲಾಗುತ್ತದೆ. ಇಂಡಿಯನ್ ಆಯಿಲ್, ಹೈಡ್ರೋಜನ್ ಉತ್ಪಾದನೆಯ ವಿವಿಧ ತಂತ್ರಜ್ಞಾನಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ.

ಭಾರತದ ಮೊದಲ ಗ್ರೀನ್ ಹೈಡ್ರೋಜನ್ ಘಟಕವನ್ನು ಸ್ಥಾಪಿಸಲಿದೆ ಇಂಡಿಯನ್ ಆಯಿಲ್

ಇಂಡಿಯನ್ ಆಯಿಲ್ ಮುಂದಿನ ಹತ್ತು ವರ್ಷಗಳಲ್ಲಿ ಪೆಟ್ರೋಕೆಮಿಕಲ್ಸ್, ಹೈಡ್ರೋಜನ್ ಹಾಗೂ ಎಲೆಕ್ಟ್ರಿಕ್ ಮೊಬಿಲಿಟಿಯಲ್ಲಿ ಪ್ರಮುಖ ತಯಾರಕರಾಗಲು ಕಾರ್ಯ ತಂತ್ರವನ್ನು ರೂಪಿಸಿದೆ.

ಗಮನಿಸಿ: ಈ ಲೇಖನದಲ್ಲಿ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
India's first green hydrogen production plant to be set up by Indian Oil Corporation. Read in Kannada.
Story first published: Monday, July 26, 2021, 18:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X