ಗೌರಿಬಿದನೂರಿನಲ್ಲಿ ಶುರುವಾಯ್ತು ಭಾರತದ ಮೊದಲ ವೈದ್ಯಕೀಯ ಡ್ರೋನ್ ವಿತರಣಾ ಪ್ರಯೋಗ

ಭಾರತದ ಮೊದಲ ವೈದ್ಯಕೀಯ ಡ್ರೋನ್ ವಿತರಣಾ ಪ್ರಯೋಗವನ್ನು ಬೆಂಗಳೂರಿನಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಗೌರಿಬಿದನೂರಿನಲ್ಲಿ ಇಂದಿನಿಂದ ಆರಂಭಿಸಲಾಗಿದೆ.

ಗೌರಿಬಿದನೂರಿನಲ್ಲಿ ಶುರುವಾಯ್ತು ಭಾರತದ ಮೊದಲ ವೈದ್ಯಕೀಯ ಡ್ರೋನ್ ವಿತರಣಾ ಪ್ರಯೋಗ

ಬೆಂಗಳೂರು ಮೂಲದ ಥ್ರೊಟಲ್ ಏರೋಸ್ಪೇಸ್ ಸಿಸ್ಟಮ್ಸ್ ನೇತೃತ್ವದ ಸಂಸ್ಥೆಗಳ ಒಕ್ಕೂಟವು ಡ್ರೋನ್ ವಿತರಣೆಯನ್ನು ಪರೀಕ್ಷಿಸುತ್ತಿದೆ. ನಾಗರಿಕ ವಿಮಾನಯಾನಮಹಾನಿರ್ದೇಶಕರು (ಡಿಜಿಸಿಎ) ಈ ಪರೀಕ್ಷೆಗೆ 2020ರ ಮಾರ್ಚ್‌ನಲ್ಲಿ ಅನುಮತಿ ನೀಡಿದ್ದರು.

ಗೌರಿಬಿದನೂರಿನಲ್ಲಿ ಶುರುವಾಯ್ತು ಭಾರತದ ಮೊದಲ ವೈದ್ಯಕೀಯ ಡ್ರೋನ್ ವಿತರಣಾ ಪ್ರಯೋಗ

ಕರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ಏಜೆನ್ಸಿಯಿಂದ ಅನುಮತಿ ಪಡೆಯಲು ವಿಳಂಬವಾಗಿತ್ತು. ಈ ವಿತರಣಾ ಡ್ರೋನ್ ಅನ್ನು ಮುಂದಿನ 30-45 ದಿನಗಳವರೆಗೆಪರೀಕ್ಷಿಸಲಾಗುವುದು.

ಗೌರಿಬಿದನೂರಿನಲ್ಲಿ ಶುರುವಾಯ್ತು ಭಾರತದ ಮೊದಲ ವೈದ್ಯಕೀಯ ಡ್ರೋನ್ ವಿತರಣಾ ಪ್ರಯೋಗ

ಈ ಪರೀಕ್ಷೆಯಲ್ಲಿ ಬೆಂಗಳೂರಿನ 80 ಕಿ.ಮೀ ಪ್ರದೇಶದಲ್ಲಿ 30-45 ದಿನಗಳವರೆಗೆ ಡ್ರೋನ್ ಮೂಲಕ ವೈದ್ಯಕೀಯ ಉಪಕರಣ ಹಾಗೂ ಅಗತ್ಯ ಔಷಧಿಗಳನ್ನು ವಿತರಿಸಲಾಗುತ್ತದೆ. ತಾಂತ್ರಿಕ ದೋಷ ಹಾಗೂ ವಿತರಣೆಯಲ್ಲಿನ ತೊಂದರೆಗಳನ್ನು ಕಂಡು ಹಿಡಿದು ಅವುಗಳನ್ನು ಸರಿಪಡಿಸಲು ಈ ಪ್ರಯೋಗವನ್ನು ನಡೆಸಲಾಗುತ್ತಿದೆ.

ಗೌರಿಬಿದನೂರಿನಲ್ಲಿ ಶುರುವಾಯ್ತು ಭಾರತದ ಮೊದಲ ವೈದ್ಯಕೀಯ ಡ್ರೋನ್ ವಿತರಣಾ ಪ್ರಯೋಗ

ಈ ಪ್ರಯೋಗದಲ್ಲಿ ಎರಡು ರೀತಿಯ ಡ್ರೋನ್‌ಗಳನ್ನು ಬಳಸಲಾಗುತ್ತದೆ. ಇವುಗಳ ಪೇಲೋಡ್ ಸಾಮರ್ಥ್ಯವು 1 ಕೆ.ಜಿ ಹಾಗೂ 2 ಕೆ.ಜಿಯಾಗಿದೆ. ಈ ಡ್ರೋನ್‌ಗಳು 12-15 ಕಿ.ಮೀ ಸಂಚರಿಸಲಿವೆ.

ಗೌರಿಬಿದನೂರಿನಲ್ಲಿ ಶುರುವಾಯ್ತು ಭಾರತದ ಮೊದಲ ವೈದ್ಯಕೀಯ ಡ್ರೋನ್ ವಿತರಣಾ ಪ್ರಯೋಗ

ಈ ಡ್ರೋನ್‌ಗಳಿಗೆ ರಾನ್ ಡಿಂಟ್ ಎಂಬ ಡೆಲಿವರಿ ಸಾಫ್ಟ್‌ವೇರ್ ನೆರವಾಗುತ್ತದೆ. ಭಾರತದಲ್ಲಿ ವಿಶಾಲ ಪ್ರದೇಶದಲ್ಲಿ ಸಾಗಾಣಿಕೆ ನಡೆಸಲು ಸಾಧ್ಯವಾಗುವಂತೆ ಮಾಡಲು ಡ್ರೋನ್ ಹಾರಾಟದ ಮೇಲಿನ ನಿರ್ಬಂಧಗಳನ್ನು ಸಡಿಲಿಸಲಾಗುತ್ತಿದೆ.

ಗೌರಿಬಿದನೂರಿನಲ್ಲಿ ಶುರುವಾಯ್ತು ಭಾರತದ ಮೊದಲ ವೈದ್ಯಕೀಯ ಡ್ರೋನ್ ವಿತರಣಾ ಪ್ರಯೋಗ

ಇದರಿಂದ ಆಪರೇಟರ್‌ಗಳು ಡ್ರೋನ್‌ಗಳನ್ನು ವಿತರಣೆಯಂತಹ ಉದ್ದೇಶಗಳಿಗೆ ಬಳಸಲು ಸಾಧ್ಯವಾಗಲಿದೆ. ಮೇ ತಿಂಗಳಲ್ಲಿ ಡ್ರೋನ್‌ಗಳ ಬಿಯಾಂಡ್ ವಿಷುಯಲ್ ಲೈನ್ ಸೈಟ್ (ಬಿವಿಎಲ್‌ಒಎಸ್) ಪೈಲಟ್ ವಿಮಾನಗಳನ್ನು ನಿರ್ವಹಿಸಲು ಯುಎಎಸ್ ನಿಯಮಗಳಿಗೆ ಅನುಸಾರವಾಗಿ ಸರ್ಕಾರವು 20 ಯುನಿಟ್'ಗಳಿಗೆ ಷರತ್ತು ಬದ್ಧ ವಿನಾಯಿತಿ ನೀಡಿತ್ತು.

ಗೌರಿಬಿದನೂರಿನಲ್ಲಿ ಶುರುವಾಯ್ತು ಭಾರತದ ಮೊದಲ ವೈದ್ಯಕೀಯ ಡ್ರೋನ್ ವಿತರಣಾ ಪ್ರಯೋಗ

ದೂರದ ಪ್ರದೇಶಗಳಿಗೆ ಕೋವಿಡ್ -19 ಲಸಿಕೆಯನ್ನು ತಲುಪಿಸುವುದಕ್ಕೆ ಡ್ರೋನ್‌ಗಳನ್ನು ಬಳಸಲು ಸರ್ಕಾರವು ಚಿಂತನೆ ನಡೆಸಿದೆ. ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ನಡೆಸಿದ ಅಧ್ಯಯನದ ನಂತರ ಕೇಂದ್ರ ಸರ್ಕಾರವು ದೇಶದ ಕಠಿಣ ಭೂಪ್ರದೇಶಗಳಿಗೆ ಮಾನವರಹಿತ ವೈಮಾನಿಕ ವಾಹನಗಳ ಮೂಲಕ ಕೋವಿಡ್ 19 ಲಸಿಕೆಗಳನ್ನು ತಲುಪಿಸುವ ಯೋಜನೆಯನ್ನು ಹೊಂದಿದೆ.

ಗೌರಿಬಿದನೂರಿನಲ್ಲಿ ಶುರುವಾಯ್ತು ಭಾರತದ ಮೊದಲ ವೈದ್ಯಕೀಯ ಡ್ರೋನ್ ವಿತರಣಾ ಪ್ರಯೋಗ

ಭಾರತೀಯ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಪರವಾಗಿ ಹೆಚ್‌ಎಎಲ್ ಇನ್ಫ್ರಾ ಟೆಕ್ ಸರ್ವೀಸಸ್ ಲಿಮಿಟೆಡ್ ಯುಎವಿಗಳಿಂದ ಲಸಿಕೆ ಹಾಗೂ ಔಷಧಿಗಳನ್ನು ವಿತರಿಸಲು ಜೂನ್ 11ರಂದು ಎಕ್ಸ್ ಪ್ರೆಶನ್ ಆಫ್ ಇಂಟರೆಸ್ಟ್'ಗೆ (ಇಒಐ) ಆಹ್ವಾನ ನೀಡಿತ್ತು. ಐಸಿಎಂಆರ್ 35 ಕಿ.ಮೀ ಪ್ರಯಾಣಿಸುವ, ಕನಿಷ್ಠ 100 ಮೀಟರ್ ಎತ್ತರದಲ್ಲಿ ಹಾರಬಲ್ಲ ಯುಎವಿಗಳನ್ನು ಬಯಸಿದೆ.

Most Read Articles

Kannada
English summary
India's first medical drone delivery trial started in Gauribidanur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X