Just In
- 13 min ago
ಅತ್ಯಾಧುನಿಕ ಫೀಚರ್ಸ್ಗಳೊಂದಿಗೆ ಹೀರೋ ಪ್ಯಾಶನ್ ಎಕ್ಸ್ಟೆಕ್ ಬೈಕ್ ಬಿಡುಗಡೆ
- 40 min ago
ಪ್ರಯಾಣಿಕ ಕಾರು ಮಾದರಿಗಳಿಗಾಗಿ 5 ಸ್ಟಾರ್ ರೇಟಿಂಗ್ ಹೊಂದಿರುವ ಟೈರ್ ಬಿಡುಗಡೆ ಮಾಡಿದ ಮೈಕೆಲಿನ್
- 2 hrs ago
ಬರೋಬ್ಬರಿ 40 ವೆರಿಯೆಂಟ್ಗಳನ್ನು ಹೊಂದಿರಲಿದೆ ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್
- 2 hrs ago
ನಟ ಕಾರ್ತಿಕ್ ಆರ್ಯನ್ಗೆ ರೂ.3.72 ಕೋಟಿ ಮೌಲ್ಯದ ಕಾರ್ ಗಿಫ್ಟ್ ನೀಡಿದ ನಿರ್ಮಾಪಕ ಭೂಷಣ್ ಕುಮಾರ್
Don't Miss!
- Sports
ENG vs NZ 2ನೇ ಟೆಸ್ಟ್: ನೆಲಕಚ್ಚಿದ್ದ ಇಂಗ್ಲೆಂಡ್ಗೆ ಬೈರ್ಸ್ಟೋ, ಓವರ್ಟನ್ ಆಸರೆ; 3ನೇ ದಿನದ ಲೈವ್ ಸ್ಕೋರ್
- Lifestyle
ಅಪಘಾತದಿಂದ ಕ್ಷಣಾರ್ಧದಲ್ಲಿ ಮಗುವಿನ ರಕ್ಷಿಸಿ, ತಾಯಿಯ ಮೊಬೈಲ್ ಪುಡಿ ಮಾಡಿದ ಸೈನಿಕ: ಸೈನಿಕನ ಕಾರ್ಯಕ್ಕೆ ನೆಟ್ಟಿಗರು ಫುಲ್ ಫಿದಾ
- News
ಉಪಯೋಗಿಸಿದ ಕಾರು ಮಾರಾಟ ನಿಲ್ಲಿಸಿದ ಓಲಾ!
- Movies
ಕನ್ನಡದ 'ಯುವರಾಜ್'ಗಾಗಿ ಬಂದಳು ಮಿಸ್ವರ್ಲ್ಡ್ ಮಾನುಷಿ ಚಿಲ್ಲರ್!
- Finance
ಪಿಎಂ ಕಿಸಾನ್ 12ನೇ ಕಂತು: ಶೀಘ್ರ ಈ ಕಾರ್ಯ ಮಾಡಿ
- Technology
ಚಂದಾದಾರರ ಕುಸಿತವನ್ನು ತಡೆಗಟ್ಟಲು ನೆಟ್ಫ್ಲಿಕ್ಸ್ನಿಂದ ಹೊಸ ಪ್ಲಾನ್!
- Education
Vijayapura District Court Recruitment 2022 : 28 ಜವಾನ, ಆದೇಶ ಜಾರಿಕಾರ ಮತ್ತು ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಭಾರತಕ್ಕೆ ಹಾರುವ ಕಾರುಗಳನ್ನು ತರಲು ಸಜ್ಜಾದ ಕೇಂದ್ರ ಸರ್ಕಾರ: ಯುಎಸ್, ಕೆನಡಾದೊಂದಗೆ ಮಾತುಕತೆ
ಭಾರತದ ಪ್ರಮುಖ ನಗರಗಳಲ್ಲಿ ದಿನ ಕಳೆದಂತೆ ವಾಹನ ಖರೀದಿದಾರರ ಸಂಖ್ಯೆ ಹೆಚ್ಚಾಗುತ್ತಿದ್ದು, ರಸ್ತೆಗಳಲ್ಲಿ ವಾಹನ ದಟ್ಟನೆ ಮಿತಿ ಮೀರಿ ಬೆಳೆಯುತ್ತಿದೆ. ಕೆಲವೊಮ್ಮೆ ಒಂದು ಕಿ.ಮೀ ಪ್ರಯಾಣಿಸಲು ಗಂಟೆಗಟ್ಟಲೇ ಸಮಯವಾಗುತ್ತಿದೆ. ಪ್ರಯಾಣಿಕರು ತಮ್ಮ ನಿತ್ಯವಸರ ಕೆಲಸಗಳನ್ನು ಮುಗಿಸಿಕೊಳ್ಳಲು ಟ್ರಾಫಿಕ್ ಜಾಮ್ ಸಮಸ್ಯೆಯಿಂದ ಪರದಾಡುವಂತಾಗಿದೆ.

ಈ ಸಮಸ್ಯೆಯನ್ನು ಪರಿಹರಿಸಲು ಭಾರತ ಸರ್ಕಾರವು ತನ್ನ ಅರ್ಬನ್ ಮೊಬಿಲಿಟಿ ಸ್ಕೀಮ್ ಅಡಿಯಲ್ಲಿ ದೇಶದಲ್ಲಿ ಹಾರುವ ಕಾರುಗಳ ಸೇವೆಯನ್ನು ಪ್ರಾರಂಭಿಸಲು ಯೋಜಿಸುತ್ತಿದೆ. ಇತ್ತೀಚೆಗೆ ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಯುಎಸ್ ಮತ್ತು ಕೆನಡಾದಲ್ಲಿ ಪ್ರಯೋಗಗಳನ್ನು ಪೂರ್ಣಗೊಳಿಸಿದ ನಂತರ ಟೇಕ್-ಆಫ್ ಮತ್ತು ಲ್ಯಾಂಡಿಂಗ್ ಎಲೆಕ್ಟ್ರಿಕ್ ವಾಹನಗಳನ್ನು (ಇವಿಟಿಒಎಲ್) ಭಾರತಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ.

ಪ್ರಸ್ತುತ ಯುಎಸ್ ಮತ್ತು ಕೆನಡಾದ ವಾಯುಪಡೆಗಳು ಈ ಹಾರುವ ಕಾರುಗಳನ್ನು ಪರೀಕ್ಷಿಸುತ್ತಿವೆ ಎಂದು ವಿಮಾನಯಾನ ಸಚಿವರು ತಿಳಿಸಿದ್ದಾರೆ. ಪ್ರಯೋಗಗಳು ಪೂರ್ಣಗೊಂಡ ನಂತರ, ಅವರಿಗೆ ವಿಮಾನಯಾನ ಪರವಾನಗಿ ಮತ್ತು ಹಾರಾಟಕ್ಕೆ ಪ್ರಮಾಣೀಕರಣವನ್ನು ನೀಡಲಾಗುತ್ತದೆ.

ಈ ಪ್ರಕ್ರಿಯೆಯ ಪೂರ್ಣಗೊಂಡ ನಂತರ, ಭಾರತದಲ್ಲಿ ಹೂಡಿಕೆ ಮಾಡಲು ಮತ್ತು ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಹಾರುವ ಕಾರು ತಯಾರಕರನ್ನು ಪ್ರೋತ್ಸಾಹಿಸಲಾಗುತ್ತದೆ. ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಈಗಾಗಲೇ ಹಾರುವ ಕಾರುಗಳನ್ನು ತಯಾರಿಸುವ ಯುಎಸ್ ಮತ್ತು ಕೆನಡಾದ ಹಲವು ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ದೇಶದ ಪ್ರತಿ ಪ್ರಮುಖ ನಗರಗಳಲ್ಲಿ ಫ್ಲೈಯಿಂಗ್ ಕಾರ್ ನೆಟ್ವರ್ಕ್ ಕಾರ್ಯನಿರ್ವಹಿಸಲಿದೆ ಎಂದು ಅವರು ಹೇಳಿದರು. ನಾಗರಿಕ ವಿಮಾನಯಾನದ ಈ ತಂತ್ರಜ್ಞಾನವನ್ನು ಪರೀಕ್ಷಿಸುವ ಕೆಲಸವನ್ನು ವಾಯುಪಡೆ ಮಾಡಲಿದೆ ಎಂದು ಸಿಂಧಿಯಾ ಹೇಳಿದ್ದಾರೆ. ಯಶಸ್ವಿ ಪ್ರಯೋಗಗಳ ನಂತರವೇ ಈ ಹಾರುವ ಕಾರುಗಳನ್ನು ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಓಡಿಸಲು ಅನುಮತಿಸಲಾಗುವುದು.

ಈ ಯೋಜನೆಗೆ ಬಲವಾದ ಪರಿಸರ ವ್ಯವಸ್ಥೆಯ ಅಗತ್ಯತೆಯ ಬಗ್ಗೆಯೂ ಸಿಂಧಿಯಾ ಮಾತನಾಡಿದರು. ಟೇಕ್-ಆಫ್ ಮತ್ತು ಲ್ಯಾಂಡಿಂಗ್ ವಾಹನಗಳಿಗೆ ಭಾರಿ ಹೂಡಿಕೆಯ ಅಗತ್ಯವಿದೆ ಎಂದ ಅವರು, ಇದಕ್ಕಾಗಿ ಸರ್ಕಾರ ಮೂಲಸೌಕರ್ಯ ಕಲ್ಪಿಸಲು ಹೆಚ್ಚಿನ ವೆಚ್ಚ ಮಾಡಬೇಕಾಗಿದೆ. ಇದು ದೂರದ ಪ್ರದೇಶಗಳ ನಡುವೆ ಮತ್ತು ನಗರಗಳ ನಡುವೆ ಸಂಪರ್ಕವನ್ನು ಸುಧಾರಿಸುತ್ತದೆ ಎಂದು ಹೇಳಿದರು.

ಹಾರುವ ಕಾರುಗಳನ್ನು ಹಲವು ವರ್ಷಗಳಿಂದ ಸಂಶೋಧಿಸಿ ಅಭಿವೃದ್ಧಿಪಡಿಸಲಾಗಿದೆ. ಅನೇಕ ಕಂಪನಿಗಳು ತಮ್ಮ ಹಾರುವ ಕಾರು ಮಾದರಿಗಳನ್ನು ಸಂಪೂರ್ಣವಾಗಿ ಸಿದ್ಧಪಡಿಸಿವೆ ಮತ್ತು ನೈಜ ಪರಿಸರದಲ್ಲಿ ಪರೀಕ್ಷೆಯನ್ನು ಪ್ರಾರಂಭಿಸಿವೆ. ಇತ್ತೀಚೆಗೆ, ನೆದರ್ಲ್ಯಾಂಡ್ಸ್ ಕಂಪನಿ PAL-V ಹಾರುವ ಕಾರಿನ ಉತ್ಪಾದನಾ ಮಾದರಿಯನ್ನು ಸಿದ್ಧಪಡಿಸಿದೆ.

ಇದೀಗ ಉಡಾವಣೆಯ ಅಂತಿಮ ಹಂತದಲ್ಲಿದೆ. ಅದೇ ಸಮಯದಲ್ಲಿ, USA ಕಂಪನಿ ಅರ್ಬನ್ ಏರ್ ಮೊಬಿಲಿಟಿ (UAM) ಸಹ ಹಾರುವ ಕಾರನ್ನು ತಯಾರಿಸಲು ಘೋಷಿಸಿದೆ. ವಿಮಾನ ತಯಾರಕರಾದ ಬೋಯಿಂಗ್ ಮತ್ತು ಏರ್ಬಸ್ ಕೂಡ ಶೀಘ್ರದಲ್ಲೇ ಜಪಾನ್ನಲ್ಲಿ ಹಾರುವ ಕಾರುಗಳನ್ನು ಬಿಡುಗಡೆ ಮಾಡಲಿವೆ.

ಈ ವಿಚಾರದಲ್ಲಿ ಭಾರತವೂ ಹಿಂದೆ ಬಿದ್ದಿಲ್ಲ. ಚೆನ್ನೈ ಮೂಲದ ಭಾರತೀಯ ಸ್ಟಾರ್ಟ್ಅಪ್ ಕಂಪನಿಯು ಹೈಬ್ರಿಡ್ ಫ್ಲೈಯಿಂಗ್ ಕಾರ್ಗಳಲ್ಲಿ ಕೆಲಸ ಮಾಡುತ್ತಿದೆ, ಇದನ್ನು ನಾಗರಿಕ ಸಾರಿಗೆ ಮತ್ತು ತುರ್ತು ಸೇವೆಗಳಿಗೆ ಬಳಸಬಹುದು. ಈ ಹಾರುವ ಕಾರನ್ನು ಚೆನ್ನೈ ಮೂಲದ ಸ್ಟಾರ್ಟಪ್ ಕಂಪನಿ 'ವಿನತಾ ಏರೋಮೊಬಿಲಿಟಿ' ಅಭಿವೃದ್ಧಿಪಡಿಸಿದೆ.

ಕಳೆದ ವರ್ಷ ಲಂಡನ್ನಲ್ಲಿ ನಡೆದ ಹೆಲಿಟೆಕ್ ಪ್ರದರ್ಶನದಲ್ಲಿ ಕಂಪನಿಯು ಈ ಹಾರುವ ಕಾರನ್ನು ಪ್ರದರ್ಶಿಸಿತ್ತು. ಸದ್ಯ ಕಂಪನಿಯು ಈ ಹಾರುವ ಕಾರನ್ನು ಅಂತಿಮಗೊಳಿಸಲು ಸಿದ್ಧತೆ ನಡೆಸಿದೆ. ಈ ಫ್ಲೈಯಿಂಗ್ ಕಾರನ್ನು ಓಡಿಸುವ ಅನುಭವ ಮಾಮೂಲಿ ಕಾರನ್ನು ಓಡಿಸಿದಂತೆಯೇ ಇರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಕೃತಕ ಬುದ್ಧಿಮತ್ತೆಯ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ಸಹಾಯದಿಂದ ಇದನ್ನು ನಿಯಂತ್ರಿಸಲಾಗುವುದು, ಇದರಿಂದ ಕಾರ್ಯನಿರ್ವಹಿಸಲು ತುಂಬಾ ಸುಲಭವಾಗುತ್ತದೆ. ಕಾರು ಹೊರಗಿನಿಂದ ಸೊಗಸಾದ ವಿನ್ಯಾಸ ಮತ್ತು ಒಳಗೆ ಆಧುನಿಕ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಳಿಸಲ್ಪಡುತ್ತದೆ. ಇದು GPS ಟ್ರ್ಯಾಕರ್ನೊಂದಿಗೆ 360 ಡಿಗ್ರಿ ವೀಕ್ಷಣೆಗಾಗಿ ವಿಹಂಗಮ ವಿಂಡೋವನ್ನು ಹೊಂದಿದೆ.

ಈ ಹಾರುವ ಕಾರು ಗಂಟೆಗೆ 120 ಕಿ.ಮೀ ವೇಗದಲ್ಲಿ ಹಾರಬಲ್ಲದು ಎಂದು ಕಂಪನಿ ಹೇಳಿದೆ. ಇಂಧನ ತುಂಬಿದ ನಂತರ, ಅದನ್ನು 60 ನಿಮಿಷಗಳ ಕಾಲ ಹಾರಿಸಬಹುದು. ಇದು 3,000 ಅಡಿ ಎತ್ತರದವರೆಗೂ ಹಾರುವ ಸಾಮರ್ಥ್ಯ ಹೊಂದಿರಲಿದೆ. ಪ್ರಸ್ತುತ, ಈ ಹಾರುವ ಕಾರನ್ನು ಇಬ್ಬರ ಪ್ರಯಾಣಕ್ಕೆ ವಿನ್ಯಾಸಗೊಳಿಸಲಾಗಿದೆ, ಆದರೆ ಹೊಸ ಮಾದರಿಗಳಲ್ಲಿ ಪ್ರಯಾಣಿಕರ ಸಾಮರ್ಥ್ಯವನ್ನು ಹೆಚ್ಚಿಸುವುದಾಗಿ ಕಂಪನಿ ತಿಳಿಸಿದೆ.