ಮತ್ತೊಂದು ರಾಡಾರ್ ಉಡಾಯಿಸಲಿರುವ ಇಸ್ರೋ

ಭಾರತದ ಇಸ್ರೋ ಸಂಸ್ಥೆಯು ತನ್ನ ಇತ್ತೀಚಿನ ರಾಡಾರ್ ಇಮೇಜಿಂಗ್ ಸ್ಯಾಟಲೈಟ್‍‍ಅನ್ನು (ರಿಸ್ಯಾಟ್ - 2 ಬಿ‍ಆರ್1) ಇದೇ ತಿಂಗಳ 22ರಂದು ಆಂಧ್ರ ಪ್ರದೇಶದಲ್ಲಿರುವ ಶ್ರೀಹರಿಕೋಟಾದಿಂದ ಉಡಾಯಿಸಲಿದೆ. ರಿಸ್ಯಾಟ್ - 2 ಬಿ‍ಆರ್1, ಮೊದಲಿದ್ದ ರಿ-ಸ್ಯಾಟ್ ಉಪಗ್ರಹಗಳಿಗಿಂತ ಅಡ್ವಾನ್ಸ್ ಆಗಿದ್ದು, ಮೇ 22ರಂದು ಉಡಾವಣೆಗೊಳ್ಳಲಿದೆ.

ಮತ್ತೊಂದು ರಾಡಾರ್ ಉಡಾಯಿಸಲಿರುವ ಇಸ್ರೋ

ಹೊರಗಿನಿಂದ ಹಳೆ ಉಪಗ್ರಹದಂತೆ ಕಂಡರೂ, ಮುಂಚೆ ಉಡಾಯಿಸಲಾದ ಉಪಗ್ರಹಕ್ಕಿಂತ ಭಿನ್ನವಾದ ಕಾನ್ಫಿಗರೇಶನ್ ಹೊಂದಿದೆ. ಹೊಸ ಉಪಗ್ರಹದಲ್ಲಿ ಸುಧಾರಿತವಾದ ಕಣ್ಗಾವಲು ಮತ್ತು ಇಮೇಜಿಂಗ್ ಸಾಮರ್ಥ್ಯವನ್ನು ಅಳವಡಿಸಲಾಗಿದೆ. ರಿ-ಸ್ಯಾಟ್ ನ ಎಕ್ಸ್-ಬ್ಯಾಂಡ್ ಸಿಂಥೇಟಿಕ್ ಅಪಾರ್ಚರ್ ರಾಡಾರ್ (ಎಸ್‍‍ಎ‍‍ಆರ್) ಹಗಲು ರಾತ್ರಿ ಮಾತ್ರವಲ್ಲದೇ ಎಲ್ಲಾ ಹವಾಮಾನಗಳನ್ನು ಮಾನಿಟರ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಮತ್ತೊಂದು ರಾಡಾರ್ ಉಡಾಯಿಸಲಿರುವ ಇಸ್ರೋ

ಈ ರಾಡಾರ್ ಮೋಡ ಮುಸುಕಿದ ವಾತಾವರಣವಿದ್ದರೂ ಸಹ 1 ಮೀಟರ್ ದೂರದವರೆಗೂ ಜೂಮ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. (2 ವಸ್ತುಗಳ ಮಧ್ಯದಲ್ಲಿದ್ದರೂ ಸಹ 1 ಮೀಟರ್ ದೂರದಿಂದ ನೋಡುತ್ತದೆ)

ಮತ್ತೊಂದು ರಾಡಾರ್ ಉಡಾಯಿಸಲಿರುವ ಇಸ್ರೋ

ಈ ರಿಸ್ಯಾಟ್ ಉಪಗ್ರಹವು ಭೂಮಿಯ ಮೇಲಿರುವ ಕಟ್ಟಡಗಳ ಹಾಗೂ ವಸ್ತುಗಳ ಚಿತ್ರವನ್ನು ದಿನಕ್ಕೆ 2 ರಿಂದ 3 ಬಾರಿ ತೆಗೆಯುತ್ತದೆ. ಇದರಿಂದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ (ಪಿ‍‍ಒ‍‍ಕೆ) ಜಿಹಾದಿ ಉಗ್ರರ ಕ್ಯಾಂಪ್‍‍‍ಗಳ ಮೇಲೆ ಮತ್ತು ಗಡಿಭಾಗದಲ್ಲಿ ಒಳನುಸುಳುವವರ ಮೇಲೆ ಕಣ್ಣಿಡಲು ಸಾಧ್ಯವಾಗಲಿದೆ.

ಮತ್ತೊಂದು ರಾಡಾರ್ ಉಡಾಯಿಸಲಿರುವ ಇಸ್ರೋ

ಈ ಹೊಸ ರಾಡಾರ್‍‍ನಿಂದಾಗಿ ಭಾರತೀಯ ಸೇನೆಯ ಕಣ್ಗಾವಲು ಸಾಮರ್ಥ್ಯ ಹೆಚ್ಚಲಿದ್ದು, ಗಡಿಯಲ್ಲಿ ಯಾವುದೇ ರೀತಿಯ ಆತಂಕವು ಎದುರಾದಲ್ಲಿ ಅದನ್ನು ಪತ್ತೆಹಚ್ಚಲು ಸಹಕಾರಿಯಾಗಲಿದೆ. ಸಮುದ್ರದಲ್ಲಿ ಯಾವುದೇ ಹಡಗುಗಳ ಪತ್ತೆಗೆ, ಹಿಂದೂ ಮಹಾಸಾಗರದಲ್ಲಿರುವ ಚೀನಾದ ನೌಕಾನೆಲೆ ಮೇಲೆ ಕಣ್ಣಿಡಲು, ಅರಬ್ಬೀ ಸಮುದ್ರದಲ್ಲಿರುವ ಪಾಕಿಸ್ತಾನದ ಯುದ್ದನೌಕೆಗಳ ಮೇಲೆ ಕಣ್ಣಿಡಲು ಸಹಾಯವಾಗಲಿದೆ.

ಮತ್ತೊಂದು ರಾಡಾರ್ ಉಡಾಯಿಸಲಿರುವ ಇಸ್ರೋ

ಮೊದಲಿದ್ದ ರಿಸ್ಯಾಟ್ ಉಪಗ್ರಹಗಳು ನೀಡಿದ್ದ ಚಿತ್ರಗಳ ಸಹಾಯದಿಂದ 2016ರಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಲು ಮತ್ತು ಪಾಕಿಸ್ತಾನದ ಬಾಲಾಕೋಟ್‍‍‍ನಲ್ಲಿರುವ ಜೈಷ್ ಉಗ್ರರ ಮೇಲೆ ವಾಯು ದಾಳಿ ಮಾಡಲು ಅನುಕೂಲವಾಗಿತ್ತು. ರಿಸ್ಯಾಟ್‍‍‍ನಿಂದಾಗಿ ಇಸ್ರೋದ ಡಿಸಾಸ್ಟರ್ ಮ್ಯಾನೇಜ್‍‍‍ಮೆಂಟ್ ಅಪ್ಲಿಕೇಶನ್‍‍ಗಳ ಸಾಮರ್ಥ್ಯ ಹೆಚ್ಚಾಗಿತ್ತು.

MOST READ: ಕಾರು ಮೇಲಿನ ಪ್ರೀತಿಗೆ ಗರ್ಲ್‍‍‍ಫ್ರೆಂಡ್‍ ಮೇಲೆ ಗುಂಡು ಹಾರಿಸಿದ ಭೂಪ...!

ಮತ್ತೊಂದು ರಾಡಾರ್ ಉಡಾಯಿಸಲಿರುವ ಇಸ್ರೋ

2008ರಲ್ಲಿ ಮುಂಬೈನಲ್ಲಿ ನಡೆದ 26/11 ಘಟನೆಯ ನಂತರ, ರಿಸ್ಯಾಟ್ 2 ಉಪಗ್ರಹಕ್ಕೆ ರಿಸ್ಯಾಟ್ 1 ಉಪಗ್ರಹಕ್ಕಿಂತ ಹೆಚ್ಚು ಆದ್ಯತೆ ನೀಡಲಾಯಿತು. ರಿಸ್ಯಾಟ್ 2, ಇಸ್ರೇಲ್‍‍ನಲ್ಲಿ ತಯಾರಾಗಿದ್ದು, ಸುಧಾರಿತ ರಾಡಾರ್ ಸಿಸ್ಟಂ ಹೊಂದಿದೆ. ಈ ರಾಡಾರ್ ಅನ್ನು ಭದ್ರತಾ ಪಡೆಗಳ ಕಣ್ಗಾವಲು ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಏಪ್ರಿಲ್ 20, 2009ರಂದು ಉಡಾವಣೆ ಮಾಡಲಾಯಿತು.

ಮತ್ತೊಂದು ರಾಡಾರ್ ಉಡಾಯಿಸಲಿರುವ ಇಸ್ರೋ

536 ಕಿ.ಮೀ ಎತ್ತರದಿಂದ ಈ ಉಪಗ್ರಹವು 24 ಗಂಟೆಗಳ ಕಾಲವೂ ನಿಗಾವಹಿಸಿ, ಉಗ್ರರ ನುಸುಳುವಿಕೆಯನ್ನು ತಡೆಯಲು ಗಡಿ ಭದ್ರತಾ ಪಡೆಗಳಿಗೆ ಸಹಾಯ ಮಾಡುತ್ತಿದೆ.

ಮತ್ತೊಂದು ರಾಡಾರ್ ಉಡಾಯಿಸಲಿರುವ ಇಸ್ರೋ

ಸಿಂಥೇಟಿಕ್ ಅಪಾರ್ಚರ್ ರಾಡಾರ್‍‍ನಲ್ಲಿರುವ, ರಾಡಾರ್, ಸಾಂಪ್ರಾದಾಯಕ ಸ್ಕ್ಯಾನಿಂಗ್ ರಾಡಾರ್‍‍ಗಳಿಗಿಂತ ಹೆಚ್ಚಿನ ರೆಸಲ್ಯೂಷನ್ ಬಳಸುತ್ತದೆ. ದೊಡ್ಡದಾದ ಸಿಂಥೇಟಿಕ್ ಆಂಟೆನಾ ಅಪಾರ್ಚರ್ ಸಹಾಯದಿಂದ ಗುರಿಯಿಟ್ಟಿರುವ ಪ್ರದೇಶದಲ್ಲಿ ತೆಗೆದ ಚಿತ್ರವನ್ನು ವೇಗವಾಗಿ ಸ್ಪಷ್ಟವಾಗಿ ಕಳುಹಿಸುತ್ತದೆ. ಅಪಾರ್ಚರ್ ದೊಡ್ಡದಾದಷ್ಟು, ಚಿತ್ರದ ರೆಸಲ್ಯೂಷನ್ ಸಹ ದೊಡ್ಡದಾಗಿರುತ್ತದೆ, ಯಾವುದೇ ವಾಯುಮಾನವಿರಲಿ, ಅಪಾರ್ಚರ್ ನಲ್ಲಿರುವ ಫಿಸಿಕಲ್( ದೊಡ್ಡ ಆಂಟೇನಾ) ಮತ್ತು ಸಿಂಥೇಟಿಕ್‍‍ಗಳು (ಚಲಿಸುತ್ತಿರುವ ಆಂಟೇನಾ) ಎಸ್‍ಎ‍ಆರ್, ಹೈ ರೆಸಲ್ಯೂಷನ್ನಿನ ಚಿತ್ರಗಳನ್ನು ಚಿಕ್ಕ ಫಿಸಿಕಲ್ ಆಂಟೇನಾಗಳಿಗಿಂತ ಸ್ಪಷ್ಟವಾಗಿ ತೆಗೆಯಲು ಸಹಕಾರಿಯಾಗಿವೆ.

Most Read Articles

Kannada
English summary
India to get another 'eye in the sky' on May 22 - Read in kannada
Story first published: Wednesday, May 8, 2019, 12:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X