ಪೊಲೀಸರ ಸೇವೆಗೆ ಬಹುಪರಾಕ್ ಹೇಳಿದ ಭಾರತೀಯ ಸೇನೆ

ನಿಜವಾದ ವೀರರನ್ನು ಕಷ್ಟದ ಸಂದರ್ಭಗಳಲ್ಲಿ ಗುರುತಿಸಲಾಗುತ್ತದೆ. ನಮ್ಮ ರಾಷ್ಟ್ರವನ್ನು ಕಾಪಾಡುವ ಸೈನಿಕರು ನಿಜವಾದ ವೀರರು. ಹಗಲು, ರಾತ್ರಿ, ಬಿಸಿಲು ಮಳೆ ಎನ್ನದೇ ದೇಶ ಸೇವೆಯಲ್ಲಿ ತೊಡಗಿರುವ ಯೋಧರೇ ನಿಜವಾದ ಹೀರೊಗಳು.

ಪೊಲೀಸರ ಸೇವೆಗೆ ಬಹುಪರಾಕ್ ಹೇಳಿದ ಭಾರತೀಯ ಸೇನೆ

ಕೋವಿಡ್ -19 ವೈರಸ್‌ ಸೃಷ್ಟಿಸಿರುವ ಬಿಕ್ಕಟ್ಟಿನಿಂದ ವೈದ್ಯರೂ ಸಹ ವೀರರು ಎಂಬುದು ಮನದಟ್ಟಾಗಿದೆ. ವೈದ್ಯರು ಮಾತ್ರವಲ್ಲದೇ ದಾದಿಯರು, ಲ್ಯಾಬ್ ತಂತ್ರಜ್ಞರು, ವೈದ್ಯಕೀಯ ಕ್ಷೇತ್ರದಲ್ಲಿರುವ ಎಲ್ಲರೂ ಇಂದು ಜನರ ಮನಸ್ಸಿನಲ್ಲಿ ಹೀರೊಗಳಾಗಿದ್ದಾರೆ. ಇವರನ್ನು ಕರೋನಾ ವಾರಿಯರ್‌ಗಳೆಂದು ಪರಿಗಣಿಸಲಾಗುತ್ತಿದೆ.

ಪೊಲೀಸರ ಸೇವೆಗೆ ಬಹುಪರಾಕ್ ಹೇಳಿದ ಭಾರತೀಯ ಸೇನೆ

ಕೇಂದ್ರ ಸರ್ಕಾರವು ಕರೋನಾ ವಾರಿಯರ್‌ಗಳನ್ನು ಮಿಲಿಟರಿ ಹೆಲಿಕಾಪ್ಟರ್‌ಗಳ ಮೂಲಕ ಹೂಮಳೆ ಸುರಿಸಿ ಶ್ಲಾಘಿಸಿತು. ಚಪ್ಪಾಳೆ ತಟ್ಟಿ, ದೀಪವನ್ನು ಬೆಳಗಿಸುವ ಮೂಲಕ ಅವರನ್ನು ಪ್ರೋತ್ಸಾಹಿಸಿತು. ಆದರೆ ಪೊಲೀಸ್ ಇಲಾಖೆಯನ್ನು ಬಹುತೇಕ ಮಂದಿ ಮರೆತಂತಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಪೊಲೀಸರ ಸೇವೆಗೆ ಬಹುಪರಾಕ್ ಹೇಳಿದ ಭಾರತೀಯ ಸೇನೆ

ಇಂದಿನ ಪರಿಸ್ಥಿತಿಯಲ್ಲಿ, ಪೊಲೀಸ್ ಇಲಾಖೆಯ ಸೇವೆಯನ್ನು ಮರೆಯುವಂತಿಲ್ಲ. ಪೊಲೀಸರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ. ಲಾಕ್‌ಡೌನ್ ಅನ್ನು ಸರಿಯಾಗಿ ಅನುಷ್ಠಾನಗೊಳಿಸುವಲ್ಲಿ ಪೊಲೀಸರ ಪಾತ್ರ ನಿಜಕ್ಕೂ ಗಮನಾರ್ಹವಾಗಿದೆ. ಜನರನ್ನು ಮನೆಯಲ್ಲಿರುವಂತೆ ಅವರು ತಮ್ಮ ಕುಟುಂಬವನ್ನು ಮರೆತು ಬೀದಿಗಿಳಿದರು.

ಪೊಲೀಸರ ಸೇವೆಗೆ ಬಹುಪರಾಕ್ ಹೇಳಿದ ಭಾರತೀಯ ಸೇನೆ

ಭಾರತದಲ್ಲಿ ಮಾರ್ಚ್ 24ರಂದು ಲಾಕ್‌ಡೌನ್ ಜಾರಿಗೆ ಬಂದಿತು. ಆದರೆ ಕರೋನಾ ವೈರಸ್ ಬಗ್ಗೆ ಯಾವುದೇ ಭಯ, ಅರಿವಿಲ್ಲದೆ ಜನರು ಬೀದಿಗಿಳಿದರು. ಬೀದಿಗಿಳಿದ ಜನರು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದರು. ಪೊಲೀಸರ ಈ ಕ್ರಮವನ್ನು ಟೀಕಿಸಲಾದರೂ ಈ ರೀತಿಯ ಕ್ರಮಗಳ ಅಗತ್ಯವಿತ್ತು ಎಂಬುದನ್ನು ಅಲ್ಲಗಳೆಯುವಂತಿಲ್ಲ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಪೊಲೀಸರ ಸೇವೆಗೆ ಬಹುಪರಾಕ್ ಹೇಳಿದ ಭಾರತೀಯ ಸೇನೆ

ಇದರ ಜೊತೆಗೆ ಪೊಲೀಸರು ಲಾಕ್‌ಡೌನ್ ಅವಧಿಯಲ್ಲಿ ಬೀದಿಗಿಳಿದ ಲಕ್ಷಾಂತರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಭಾರತೀಯ ಸೇನೆಯು ನಿಸ್ವಾರ್ಥ ಸೇವೆ ಸಲ್ಲಿಸಿದ ಪೊಲೀಸ್ ಇಲಾಖೆಯನ್ನು ಪ್ರಶಂಶಿಸಿದೆ.

ಪೊಲೀಸರ ಸೇವೆಗೆ ಬಹುಪರಾಕ್ ಹೇಳಿದ ಭಾರತೀಯ ಸೇನೆ

ಇತ್ತೀಚಿಗೆ ರಾಜಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸರಿದ್ದ ಜಾಗಕ್ಕೆ ಮಿಲಿಟರಿ ವಾಹನಗಳು ಬಂದಿದ್ದವು. ಟಾಟಾ ಸಫಾರಿ ಸ್ಟ್ರೋಮ್ ಎಸ್‌ಯುವಿಯನ್ನು ಈಗ ಭಾರತೀಯ ಸೇನೆಯ ಅಧಿಕೃತ ವಾಹನವಾಗಿ ಬಳಸಲಾಗುತ್ತಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಪೊಲೀಸರ ಸೇವೆಗೆ ಬಹುಪರಾಕ್ ಹೇಳಿದ ಭಾರತೀಯ ಸೇನೆ

ಟಾಟಾ ಸಫಾರಿ ಸ್ಟ್ರೋಮ್‌ನಲ್ಲಿ ಕುಳಿತಿದ್ದ ಸೇನಾಧಿಕಾರಿ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರನ್ನು ತಮ್ಮ ಬಳಿ ಕರೆದಿದ್ದಾರೆ. ಅವರಲ್ಲಿ ಒಬ್ಬರು ಪೊಲೀಸ್, ಮತ್ತೊಬ್ಬರು ಹೋಂಗಾರ್ಡ್ ಎಂದು ತಿಳಿದುಬಂದಿದೆ. ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಮತ್ತು ಅವರ ಕೆಲಸದ ಬಗ್ಗೆ ಸೈನ್ಯವು ಹೆಮ್ಮೆಪಡುತ್ತದೆ ಎಂದು ಆ ಅಧಿಕಾರಿ ಹೇಳಿದರು.

ಲಾಕ್‌ಡೌನ್ ಅವಧಿಯಲ್ಲಿ ಪೊಲೀಸರು ಕಾರ್ಯನಿರ್ವಹಿಸಿದ ರೀತಿಗೆ ಇಡೀ ದೇಶವೇ ಹೆಮ್ಮೆ ಪಡುತ್ತದೆ ಎಂದು ಹೇಳಿದ ಆ ಅಧಿಕಾರಿ ಅಲ್ಲಿದ್ದ ಎಲ್ಲಾ ಪೊಲೀಸರಿಗೆ ಸ್ವೀಟ್ ಬಾಕ್ಸ್ ನೀಡಿದ್ದಾರೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಪೊಲೀಸರ ಸೇವೆಗೆ ಬಹುಪರಾಕ್ ಹೇಳಿದ ಭಾರತೀಯ ಸೇನೆ

ವಿಶೇಷವೆಂದರೆ, ಭಾರತೀಯ ಸೇನೆಯ ಸೈನಿಕರೇ ಪೊಲೀಸರಿಗೆಂದು ಈ ಸಿಹಿತಿಂಡಿಗಳನ್ನು ಸಿದ್ಧಪಡಿಸಿದ್ದರು. ಪೊಲೀಸ್ ಇಲಾಖೆಗೆ ಧನ್ಯವಾದ ಹೇಳಲು ಅಲ್ಲಿರುವ ಎಲ್ಲಾ ಪೊಲೀಸ್ ಚೆಕ್ ಪೋಸ್ಟ್‌ಗಳಿಗೆ ಭೇಟಿ ನೀಡುವುದಾಗಿ ಆ ಅಧಿಕಾರಿ ಹೇಳಿದರು.

Most Read Articles

Kannada
English summary
Indian army brigadier gives sweets to on duty cops fighting covid 19. Read in Kannada.
Story first published: Saturday, May 23, 2020, 11:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X