ಭೂತಾನ್ ಪೊಲೀಸರ ಕೈಗೆ ಭಾರತೀಯ ಬೈಕರ್ ಸಿಕ್ಕಿ ಬಿದ್ದಿದ್ದೇಕೆ?

ಭೂತಾನ್ ಭಾರತದ ನೆರೆಹೊರೆಯ ದೇಶಗಳಲ್ಲಿ ಒಂದಾಗಿದೆ. ವರ್ಷದಿಂದ ವರ್ಷಕ್ಕೆ ಭೂತಾನ್‍‍ಗೆ ಭೇಟಿ ನೀಡುವ ಭಾರತೀಯರ ಸಂಖ್ಯೆಯು ಹೆಚ್ಚಾಗುತ್ತಿದೆ. ಭೂತಾನ್‍‍ನ ಆರ್ಥಿಕ ವ್ಯವಸ್ಥೆಯು ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿದೆ.

ಪ್ರವಾಸಕ್ಕೆ ಹೋಗಿ ಪೊಲೀಸರ ಅತಿಥಿಯಾದ ಭಾರತೀಯ..!

ಭೂತಾನ್‍‍ಗೆ ಭೇಟಿ ನೀಡುವ ಭಾರತೀಯರು ತಮ್ಮ ವಾಹನಗಳಲ್ಲಿಯೇ ಆ ದೇಶಕ್ಕೆ ಭೇಟಿ ನೀಡಲು ಬಯಸುತ್ತಾರೆ. ಇದೇ ರೀತಿಯಾಗಿ ತನ್ನ ಬೈಕಿನಲ್ಲಿ ಭೂತಾನ್‍‍ಗೆ ಭೇಟಿ ನೀಡಿದ ಭಾರತೀಯನನ್ನು ಭೂತಾನ್ ಪೊಲೀಸರು ಬಂಧಿಸಿದ್ದಾರೆ. ಭೂತಾನ್‍‍ನಲ್ಲಿ ಅಶಿಸ್ತಿನಿಂದ ವರ್ತಿಸಿದ ಕಾರಣಕ್ಕೆ ಆತನನ್ನು ಬಂಧಿಸಲಾಗಿದೆ.

ಪ್ರವಾಸಕ್ಕೆ ಹೋಗಿ ಪೊಲೀಸರ ಅತಿಥಿಯಾದ ಭಾರತೀಯ..!

ಭೂತಾನ್‍‍ನಲ್ಲಿದ್ದ ಚೊರ್ಟನ್ ಅನ್ನು ಏರಿದ್ದ ಕಾರಣಕ್ಕೆ ಆತನನ್ನು ಬಂಧಿಸಲಾಗಿದೆ. ಭೂತಾನ್‍‍ನಲ್ಲಿ ಚೊರ್ಟನ್‍‍ಗಳೆಂದರೆ, ಸ್ಮಾರಕಗಳು. ಈ ಘಟನೆಯು ಅಲ್ಲಿನ ತೊಚುಲಾ ಪಾಸ್‍‍ನಲ್ಲಿ ನಡೆದಿದೆ. ಅದು ನಿಷೇಧಿತ ಪ್ರದೇಶವಾಗಿದೆ. ಅಲ್ಲಿಗೆ ತೆರಳುವ ಮುನ್ನ ಭೂತಾನ್ ಸರ್ಕಾರದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

ಪ್ರವಾಸಕ್ಕೆ ಹೋಗಿ ಪೊಲೀಸರ ಅತಿಥಿಯಾದ ಭಾರತೀಯ..!

ಬೌದ್ಧ ದೇವಾಲಯಗಳನ್ನು ಸೊರ್ಡನ್‍‍ಗಳೆಂದು ಕರೆಯಲಾಗುತ್ತದೆ. ಭೂತಾನ್ ಹಾಗೂ ಟಿಬೆಟ್‍‍ನಂತಹ ದೇಶಗಳಲ್ಲಿ ಹೆಚ್ಚಿನ ಪ್ರಮಾಣದ ಸೊರ್ಡನ್‍‍ಗಳಿವೆ. ನಮ್ಮ ದೇಶದ ಲಡಾಖ್ ಹಾಗೂ ಹಿಮಾಚಲ ಪ್ರದೇಶಗಳಲ್ಲೂ ಸಹ ಹೆಚ್ಚಿನ ಸಂಖ್ಯೆಯ ಸೊರ್ಡನ್‍‍ಗಳಿವೆ. ಈ ಸೊರ್ಡನ್‍‍ಗಳನ್ನು ಸ್ತುಪಗಳೆಂದು ಸಹ ಕರೆಯಲಾಗುತ್ತದೆ.

ಪ್ರವಾಸಕ್ಕೆ ಹೋಗಿ ಪೊಲೀಸರ ಅತಿಥಿಯಾದ ಭಾರತೀಯ..!

ಬಂಧಿತನಾಗಿರುವ ಭಾರತೀಯನನ್ನು ಅಭಿಜಿತ್ ರತನ್ ಹಜಾರೆ ಎಂದು ಗುರುತಿಸಲಾಗಿದೆ. ಈತ ಅಲ್ಲಿದ್ದ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ಚೊರ್ಮೆಟನ್ನು ಏರಿದ್ದ ಕಾರಣಕ್ಕೆ ಬಂಧಿಸಲಾಗಿದೆ. ಈತನು ಮಹಾರಾಷ್ಟ್ರಕ್ಕೆ ಸೇರಿದವನು. ಈತನನ್ನು ಸೇರಿದಂತೆ ಒಟ್ಟು 15 ಜನರ ತಂಡವು ಭೂತಾನ್‍‍ಗೆ ತಮ್ಮ ಬೈಕುಗಳಲ್ಲಿ ಪ್ರವಾಸಕ್ಕೆಂದು ತೆರಳಿದ್ದಾರೆ.

ಪ್ರವಾಸಕ್ಕೆ ಹೋಗಿ ಪೊಲೀಸರ ಅತಿಥಿಯಾದ ಭಾರತೀಯ..!

ಈ ತಂಡಕ್ಕೆ ಭೂತಾನ್ ಮೂಲದ ವ್ಯಕ್ತಿಯೊಬ್ಬ ಗೈಡ್ ಆಗಿದ್ದಾನೆ. ಸೊರ್ಡಾನ್ ಮೇಲೆ ನಿಂತಿರುವ ಫೋಟೊವನ್ನು ಅಭಿಜಿತ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಈ ಫೋಟೊ ವೈರಲ್ ಆದ ನಂತರ ಜನರು ಈತನ ಕೃತ್ಯವನ್ನು ಖಂಡಿಸಿ, ಅಭಿಜಿತ್‍‍ನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಪ್ರವಾಸಕ್ಕೆ ಹೋಗಿ ಪೊಲೀಸರ ಅತಿಥಿಯಾದ ಭಾರತೀಯ..!

ಇದಾದ ನಂತರ ಭೂತಾನ್ ಪೊಲೀಸರು ಈತನ ಬಂಧನಕ್ಕೆ ಶೋಧ ನಡೆಸಿದ್ದಾರೆ. ಕೊನೆಗೂ ಈತನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಜೊತೆಗೆ ಈತನ ಬಳಿಯಿದ್ದ ಪಾಸ್‍‍ಪೋರ್ಟ್ ಹಾಗೂ ಇತರ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಪ್ರವಾಸಕ್ಕೆ ಹೋಗಿ ಪೊಲೀಸರ ಅತಿಥಿಯಾದ ಭಾರತೀಯ..!

ಇದರ ಜೊತೆಗೆ ತನಿಖೆಯು ಪೂರ್ಣಗೊಳ್ಳುವವರೆಗೂ ಅಭಿಜಿತ್‍‍ನನ್ನು ಭೂತಾನ್‍‍ನಲ್ಲಿಯೇ ಇರಿಸಿಕೊಳ್ಳುವ ಬಗ್ಗೆ ವರದಿಯಾಗಿದೆ. ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿಯಂತೆ ಈ ತಂಡದ ಜೊತೆಗಿದ್ದ ಗೈಡ್‍‍ಗೆ ಅಭಿಜಿತ್‍‍ನ ಕೃತ್ಯದ ಬಗ್ಗೆ ತಿಳಿದಿಲ್ಲ. ಅಭಿಜಿತ್ ಸ್ತುಪವನ್ನು ಏರುವ ಸಂದರ್ಭದಲ್ಲಿ ಆ ಗೈಡ್ ಬೈಕುಗಳನ್ನು ಪಾರ್ಕಿಂಗ್ ಮಾಡುವುದರಲ್ಲಿ ಬ್ಯುಸಿಯಾಗಿದ್ದ.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಪ್ರವಾಸಕ್ಕೆ ಹೋಗಿ ಪೊಲೀಸರ ಅತಿಥಿಯಾದ ಭಾರತೀಯ..!

ಆದರೆ ಭೂತಾನ್ ಮೂಲದ ಮತ್ತೊಬ್ಬ ವ್ಯಕ್ತಿ ಅಭಿಜಿತ್ ಸ್ತುಪವನ್ನು ಏರಲು ಸಹಾಯ ಮಾಡಿದ್ದಾನೆ. ಆ ವ್ಯಕ್ತಿ ಕಾರ್ಪೆಂಟರ್ ಕೆಲಸ ಮಾಡುವವನಾಗಿದ್ದು, ಹಾಳಾಗಿರುವ ಸ್ತುಪಗಳನ್ನು ದುರಸ್ತಿ ಮಾಡುವ ಕೆಲಸ ಮಾಡುತ್ತಿದ್ದನೆಂದು ತಿಳಿದು ಬಂದಿದೆ. ಭೂತಾನ್ ಪೊಲೀಸರು ನಾಪತ್ತೆಯಾಗಿರುವ ಆ ಕಾರ್ಪೆಂಟರ್‍‍ಗಾಗಿ ಶೋಧ ನಡೆಸಿದ್ದಾರೆ.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಸದ್ಯಕ್ಕೆ ಸ್ತುಪವನ್ನು ಏರಿ ಅಲ್ಲಿನ ಸಂಸ್ಕೃತಿಗೆ ಧಕ್ಕೆ ತಂದ ಬೈಕ್ ಸವಾರನಿಗೆ ಯಾವ ರೀತಿಯ ಶಿಕ್ಷೆ ನೀಡಲಾಗುವುದು ಎಂದು ತಿಳಿದು ಬಂದಿಲ್ಲ. ಯಾರೇ ಆಗಿರಲಿ, ಪ್ರವಾಸಕ್ಕೆಂದು ಹೋದಾಗ ಅಲ್ಲಿರುವ ಸಂಪ್ರದಾಯಕ್ಕೆ ಹಾಗೂ ನಂಬಿಕೆಗಳಿಗೆ ಧಕ್ಕೆ ತರುವುದು ಸರಿಯಲ್ಲ.

ಪ್ರವಾಸಕ್ಕೆ ಹೋಗಿ ಪೊಲೀಸರ ಅತಿಥಿಯಾದ ಭಾರತೀಯ..!

ಆದರೆ ತಾನು ಈ ಕೃತ್ಯವನ್ನು ಮಾಡಿಲ್ಲವೆಂದು ಅಭಿಜಿತ್ ಹೇಳುತ್ತಿದ್ದಾನೆ. ಭೂತಾನ್ ಈಗಾಗಲೇ ಅಲ್ಲಿಗೆ ಪ್ರವಾಸಕ್ಕೆಂದು ತೆರಳುವ ಬೈಕ್ ಸವಾರರಿಗೆ ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ. ಈ ಘಟನೆಯ ನಂತರ ಮತ್ತಷ್ಟು ಕಠಿಣ ಕ್ರಮಗಳನ್ನು ಜಾರಿಗೊಳಿಸುವ ಸಾಧ್ಯತೆಗಳಿವೆ.

Most Read Articles

Kannada
English summary
Indian bike rider arrested by Bhutan police - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X