ಮಾರಾಟಕ್ಕಿದೆ ವಿರಾಟ್ ಕೊಹ್ಲಿಯ ನೆಚ್ಚಿನ ಕಾರು

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿರವರಿಗೆ ಸೇರಿದ ದುಬಾರಿ ಕಾರ್ ಅನ್ನು ಮಾರಾಟ ಮಾಡಲಾಗುತ್ತಿದೆ. ವಿರಾಟ್ ಕೊಹ್ಲಿರವರು ಕ್ರಿಕೆಟ್ ಜೊತೆಗೆ ಕಾರುಗಳ ಬಗ್ಗೆಯೂ ಕ್ರೇಜ್ ಹೊಂದಿದ್ದಾರೆ. ಅವರು ಹಲವಾರು ದುಬಾರಿ ಕಾರುಗಳನ್ನು ಹೊಂದಿದ್ದಾರೆ.

ಮಾರಾಟಕ್ಕಿದೆ ವಿರಾಟ್ ಕೊಹ್ಲಿಯ ನೆಚ್ಚಿನ ಕಾರು

ವಿರಾಟ್ ಕೊಹ್ಲಿ ಪ್ರತಿ ವರ್ಷ ಹೊಸ ಕಾರುಗಳನ್ನು ಖರೀದಿಸುತ್ತಲೇ ಇರುತ್ತಾರೆ. ಈ ಕಾರಣಕ್ಕೆ ತಮ್ಮಲ್ಲಿರುವ ಹಳೆಯ ಕಾರುಗಳನ್ನು ಮಾರಾಟ ಮಾಡುತ್ತಾರೆ. ಈಗ ಅವರ ಬಳಿಯಿದ್ದ ಲ್ಯಾಂಬೊರ್ಗಿನಿ ಗಲ್ಲಾರ್ಡೊ ಸ್ಪೈಡರ್ ಕಾರನ್ನು ಮಾರಾಟ ಮಾಡಲಾಗುತ್ತಿದೆ. ಈ ಕಾರನ್ನು ವಿರಾಟ್ ಕೊಹ್ಲಿರವರು 2015ರಲ್ಲಿ ಖರೀದಿಸಿದ್ದರು ಎಂದು ಹೇಳಲಾಗಿದೆ.

ಮಾರಾಟಕ್ಕಿದೆ ವಿರಾಟ್ ಕೊಹ್ಲಿಯ ನೆಚ್ಚಿನ ಕಾರು

ಕೆಲ ಕಾಲ ಬಳಸಿದ ನಂತರ ಈ ಕಾರನ್ನು ಮಾರಾಟ ಮಾಡಿದ್ದರು. ವಿರಾಟ್ ಕೊಹ್ಲಿರವರಿಂದ ಕಾರು ಖರೀದಿಸಿದ್ದವರು ಸಹ ಈ ಕಾರನ್ನು ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ನಿರ್ಧರಿಸಿದ್ದಾರೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಮಾರಾಟಕ್ಕಿದೆ ವಿರಾಟ್ ಕೊಹ್ಲಿಯ ನೆಚ್ಚಿನ ಕಾರು

ಅದರಂತೆ ಈ ಕಾರನ್ನು ಪಶ್ಚಿಮ ಬಂಗಾಳದ ಕೋಲ್ಕತಾ ಮೂಲದ ಸರ್ಟಿಫೈಡ್ ಕಾರ್ಸ್ ಮಾರಾಟ ಮಾಡುತ್ತಿದೆ. ಬೆಲೆ ಬಗ್ಗೆ ಪ್ರತಿಕ್ರಿಯೆ ನೀಡಲು ಕಂಪನಿಯು ನಿರಾಕರಿಸಿದೆ. ಹೊಸ ಲ್ಯಾಂಬೊರ್ಗಿನಿ ಗಲ್ಲಾರ್ಡೊ ಸ್ಪೈಡರ್ ಕಾರಿನ ಬೆಲೆ ಭಾರತದಲ್ಲಿ ರೂ.2 ಕೋಟಿಗಳಾಗುತ್ತದೆ.

ಮಾರಾಟಕ್ಕಿದೆ ವಿರಾಟ್ ಕೊಹ್ಲಿಯ ನೆಚ್ಚಿನ ಕಾರು

ಈಗ ಲ್ಯಾಂಬೊರ್ಗಿನಿ ಗಲ್ಲಾರ್ಡೊ ಸ್ಪೈಡರ್ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಇದರ ಬದಲಿಗೆ ಇಟಲಿ ಮೂಲದ ಲ್ಯಾಂಬೊರ್ಗಿನಿ ಕಂಪನಿಯು ಉರುಸ್ ಎಂಬ ಹೈ ಎಂಡ್ ಕಾರನ್ನು ಮಾರಾಟ ಮಾಡುತ್ತಿದೆ. ಕಂಪನಿಯು ಭಾರತದಲ್ಲಿ ಬಿಡುಗಡೆಗೊಳಿಸಿದ ಸೂಪರ್ ಫಾಸ್ಟ್ ಕಾರುಗಳಲ್ಲಿ ಗಲ್ಲಾರ್ಡೊ ಸಹ ಒಂದು ಎಂಬುದು ಗಮನಿಸಬೇಕಾದ ಸಂಗತಿ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಮಾರಾಟಕ್ಕಿದೆ ವಿರಾಟ್ ಕೊಹ್ಲಿಯ ನೆಚ್ಚಿನ ಕಾರು

ಲ್ಯಾಂಬೊರ್ಗಿನಿ ಗಲ್ಲಾರ್ಡೊ ವಿರಾಟ್ ಕೊಹ್ಲಿರವರ ನೆಚ್ಚಿನ ಕಾರುಗಳಲ್ಲಿ ಒಂದಾಗಿತ್ತು. ಈ ಕಾರಿನಲ್ಲಿ ಆಸ್ಟ್ರೇಲಿಯಾದ ಆಟಗಾರ ಹಾಗೂ ಆರ್‌ಸಿಬಿ ತಂಡದ ಸದಸ್ಯರಾದ ಸೀನ್ ಅಬಾಟ್ ಅವರೊಂದಿಗೆ ಕುಳಿತು ತೆಗೆದ ಫೋಟೋ ಇಂಟರ್ ನೆಟ್ ನಲ್ಲಿ ವೈರಲ್ ಆಗಿದೆ.

ಮಾರಾಟಕ್ಕಿದೆ ವಿರಾಟ್ ಕೊಹ್ಲಿಯ ನೆಚ್ಚಿನ ಕಾರು

ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಬರುತ್ತಿರುವ ಲ್ಯಾಂಬೊರ್ಗಿನಿ ಗಲ್ಲಾರ್ಡೊ ಇನ್ನೂ ಸಹ ಉತ್ತಮ ಸ್ಥಿತಿಯಲ್ಲಿದೆ. ಈ ಕಾರನ್ನು ಪಾಂಡಿಚೆರಿಯಲ್ಲಿ ರಿಜಿಸ್ಟರ್‌ ಮಾಡಿಸಲಾಗಿದೆ. ಈ ಕಾರು ಎಷ್ಟು ಕಿ.ಮೀ ಚಲಿಸಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. 2013ರ ಮಾದರಿಯಾಗಿದ್ದರೂ ಇನ್ನೂ ಹೊಸ ಕಾರಿನಂತೆಯೇ ಕಾಣುತ್ತದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಮಾರಾಟಕ್ಕಿದೆ ವಿರಾಟ್ ಕೊಹ್ಲಿಯ ನೆಚ್ಚಿನ ಕಾರು

ಲ್ಯಾಂಬೊರ್ಗಿನಿ ಗಲ್ಲಾರ್ಡೊ ಕಾರನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್ ಪಿ 560-4 ಎಂಬ ಹೆಸರಿನಲ್ಲಿ ಕರೆಯಲಾಗುತ್ತದೆ. ಈ ಕಾರಿನಲ್ಲಿ 5.2 ಲೀಟರಿನ ನ್ಯಾಚುರಲಿ ಆಸ್ಪೀರೆಟೆಡ್ ವಿ10 ಎಂಜಿನ್ ಅಳವಡಿಸಲಾಗಿದೆ.

ಮಾರಾಟಕ್ಕಿದೆ ವಿರಾಟ್ ಕೊಹ್ಲಿಯ ನೆಚ್ಚಿನ ಕಾರು

ಈ ಎಂಜಿನ್ 552 ಬಿಹೆಚ್ ಪಿ ಪವರ್ ಉತ್ಪಾದಿಸುತ್ತದೆ. ಈ ಎಂಜಿನ್ ಕೇವಲ 4 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ವಿರಾಟ್ ಕೊಹ್ಲಿ ಆಡಿ, ಬೆಂಟ್ಲಿ, ಲ್ಯಾಂಡ್ ರೋವರ್ ರೇಂಜ್ ರೋವರ್ ಸೇರಿದಂತೆ ಹಲವಾರು ಕಾರುಗಳನ್ನು ಹೊಂದಿದ್ದಾರೆ.

Most Read Articles

Kannada
English summary
Indian cricket captain Virat Kohli lamborghini gallardo spyder supercar for sale. Read in Kannada.
Story first published: Thursday, August 6, 2020, 16:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X