ಐಷಾರಾಮಿ ಬಿಎಂಡಬ್ಲ್ಯು 6-ಸೀರಿಸ್ ಕಾರು ಖರೀದಿಸಿದ ಕ್ರಿಕೆಟಿಗ ಅಜಿಂಕ್ಯ ರಹಾನೆ

ವಾಹನಗಳ ಬಗ್ಗೆ ಕ್ರೇಜ್ ಅನ್ನೋದು ಯಾರಿಗೆ ಇರಲ್ಲ ಹೇಳಿ, ಅದರಲ್ಲಿಯು ಸಿನಿಮಾ ಸೆಲಬ್ರಿಟಿಗಳಿಗೆ ಮತ್ತು ಕ್ರಿಕೆಟಿಗರಿಗೆ ಈ ಕ್ರೇಜ್ ಸ್ವಲ್ಪ ಹೆಚ್ಚು ಇರುತ್ತೆ. ತಾವು ಹೆಚ್ಚಾಗಿ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ. ಇದರಿಂದ ಮಾರುಕಟ್ಟೆಗೆ ಲಗ್ಗೆ ಇಡುವ ಐಷಾರಾಮಿ ಕಾರುಗಳನ್ನು ಖರೀದಿಸುವುದು ಸೆಲಬ್ರಿಟಿಗಳಿಗೆ ಒಂದು ಟ್ರೆಂಡ್ ಆಗಿದೆ.

ಐಷಾರಾಮಿ ಬಿಎಂಡಬ್ಲ್ಯು 6-ಸೀರಿಸ್ ಕಾರು ಖರೀದಿಸಿದ ಕ್ರಿಕೆಟಿಗ ಅಜಿಂಕ್ಯ ರಹಾನೆ

ಇತ್ತೀಚೆಗೆ ಭಾರತೀಯ ಕ್ರಿಕೆಟಿಗ ಅಜಿಂಕ್ಯ ರಹಾನೆ ಇದೀಗ ಹೊಸ ಬಿಎಂಡಬ್ಲ್ಯು 6 ಸೀರಿಸ್ ಕಾರನ್ನು ಖರೀದಿಸಿದ್ದಾರೆ. ಅವರು ಬಿಎಂಡಬ್ಲ್ಯು 6 ಸೀರಿಸ್ ಕಾರಿನ 630ಐ ಎಂ ಸ್ಪೋರ್ಟ್ ರೂಪಾಂತರವನ್ನು ಆರಿಸಿಕೊಂಡಿದ್ದಾರೆ. ಈ ಮಾದರಿಯು ಬಿಳಿ ಬಣ್ಣವನ್ನು ಹೊಂದಿದೆ. ಇದರ ಬೆಲೆ ಎಕ್ಸ್ ಶೋರೂಂ ಪ್ರಕಾರ ರೂ.69.90 ಲಕ್ಷವಾಗಿದೆ. ಬಿಎಂಡಬ್ಲ್ಯು 6 ಸೀರಿಸ್ ಫೇಸ್‌ಲಿಫ್ಟೆಡ್ ಆವೃತ್ತಿಯನ್ನು ಕಳೆದ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಯಿತು.

ಐಷಾರಾಮಿ ಬಿಎಂಡಬ್ಲ್ಯು 6-ಸೀರಿಸ್ ಕಾರು ಖರೀದಿಸಿದ ಕ್ರಿಕೆಟಿಗ ಅಜಿಂಕ್ಯ ರಹಾನೆ

ಹೊಸ ಬಿಎಂಡಬ್ಲ್ಯು 6-ಸೀರಿಸ್ ಫೇಸ್‌ಲಿಫ್ಟ್ ಕಾರು ನವೀಕರಿಸಿದ ಸ್ಟೈಲಿಂಗ್ ಮತ್ತು ನೂತನ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಈ ಐಷಾರಾಮಿ ಬಿಎಂಡಬ್ಲ್ಯು 6-ಸೀರಿಸ್ ಫೇಸ್‌ಲಿಫ್ಟ್ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ದೊಡ್ಡ ಕಿಡ್ನಿ ಗ್ರಿಲ್ ಜೊತೆಗೆ ಸ್ಲೀಕರ್ ಲೇಸರ್ ಎಲ್ಇಡಿ ಹೆಡ್ ಲ್ಯಾಂಪ್, ಎಲ್-ಆಕಾರದ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಮತ್ತು ಪರಿಷ್ಕೃತ ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಪಡೆಯುತ್ತದೆ.

ಐಷಾರಾಮಿ ಬಿಎಂಡಬ್ಲ್ಯು 6-ಸೀರಿಸ್ ಕಾರು ಖರೀದಿಸಿದ ಕ್ರಿಕೆಟಿಗ ಅಜಿಂಕ್ಯ ರಹಾನೆ

ಈ ಕಾರಿನ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳನ್ನು ಸಹ ಮರುವಿನ್ಯಾಸಗೊಳಿಸಲಾಗಿದ್ದು, ನೋಚ್‌ಬ್ಯಾಕ್ ಹಿಂಭಾಗವನ್ನು ಮುಂದಕ್ಕೆ ಸಾಗಿಸಲಾಗಿದೆ. 6-ಸೀರಿಸ್ ಮಾದರಿಯು 5-ಸೀರಿಸ್ ಗಿಂತ ಹೆಚ್ಚು ಸ್ಪೋರ್ಟಿಯಾಗಿದೆ.

ಐಷಾರಾಮಿ ಬಿಎಂಡಬ್ಲ್ಯು 6-ಸೀರಿಸ್ ಕಾರು ಖರೀದಿಸಿದ ಕ್ರಿಕೆಟಿಗ ಅಜಿಂಕ್ಯ ರಹಾನೆ

ಇನ್ನು ಗಮನಾರ್ಹವಾದ ವಿನ್ಯಾಸದ ನವೀಕರಣಗಳ ಹೊರತಾಗಿಯೂ, ಜರ್ಮನ್ ಐಷಾರಾಮಿ ಕಾರು ತಯಾರಕರು ಕ್ಯಾಬಿನ್ ಅನ್ನು ಕೂಡ ನವೀಕರಿಸಿದೆ. ಈ ಹೊಸ ಕಾರಿನಲ್ಲಿ 12.3-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹಿಂಬದಿಯ ಸೀಟಿನಲ್ಲಿ ಎರಡು 10.25-ಇಂಚಿನ ಎಂಟರ್ ಟೆನ್ ಮೆಂಟ್ ಸ್ಕ್ರೀನ್ ಗಳನ್ನು ನೀಡಿದೆ.

ಐಷಾರಾಮಿ ಬಿಎಂಡಬ್ಲ್ಯು 6-ಸೀರಿಸ್ ಕಾರು ಖರೀದಿಸಿದ ಕ್ರಿಕೆಟಿಗ ಅಜಿಂಕ್ಯ ರಹಾನೆ

ಇದು ಬಿಎಂಡಬ್ಲ್ಯು ಲೈವ್ ಕಾಕ್‌ಪಿಟ್ ಪ್ಲಸ್/ಪ್ರೊಫೆಷನಲ್ ಮತ್ತು ಬಿಎಂಡಬ್ಲ್ಯು ವರ್ಚುವಲ್ ಅಸಿಸ್ಟೆನ್ಸ್, ಆಪಲ್ ಕಾರ್ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ಒಟಿಆರ್ ನವೀಕರಣಗಳ ಕನೆಕ್ಟಿವಿಟಿಯನ್ನು ಒಳಗೊಂಡಿದೆ.

ಐಷಾರಾಮಿ ಬಿಎಂಡಬ್ಲ್ಯು 6-ಸೀರಿಸ್ ಕಾರು ಖರೀದಿಸಿದ ಕ್ರಿಕೆಟಿಗ ಅಜಿಂಕ್ಯ ರಹಾನೆ

ಈ ಬಿಎಂಡಬ್ಲ್ಯು 6-ಸೀರಿಸ್ ಫೇಸ್‌ಲಿಫ್ಟ್ ಕಾರಿನಲ್ಲಿ ಮೂರು ಎಂಜಿನ್ ಆಯ್ಕೆಗಳ ನೀಡಲಾಗಿದೆ. ಇದರಲ್ಲಿ ಎರಡು ಡೀಸೆಲ್ ಮತ್ತು ಒಂದು ಪೆಟ್ರೋಲ್ ಎಂಜಿನ್ ಆಯ್ಕೆಗಳಾಗಿವೆ. ಇದರಲ್ಲಿ 2.0-ಲೀಟರ್ ನಾಲ್ಕು ಸಿಲಿಂಡರ್ ಟರ್ಬೋಚಾರ್ಜ್ಡ್ ಎಂಜಿನ್ ಆರ್‌ಪಿಎಂನಲ್ಲಿ ಗರಿಷ್ಠ 257 ಬಿಹೆಚ್‌ಪಿ ಪವರ್ ಹಾಗೂ 1550 ಆರ್‌ಪಿಎಂ ಮತ್ತು 4400 ಆರ್‌ಪಿಎಂ ನಡುವೆ 400 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಐಷಾರಾಮಿ ಬಿಎಂಡಬ್ಲ್ಯು 6-ಸೀರಿಸ್ ಕಾರು ಖರೀದಿಸಿದ ಕ್ರಿಕೆಟಿಗ ಅಜಿಂಕ್ಯ ರಹಾನೆ

620ಡಿ 2.0-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ಎಂಜಿನ್ 188 ಬಿಹೆಚ್‌ಪಿ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 630ಡಿ ಎಂ ಸ್ಪೋರ್ಟ್ ವೆರಿಯೆಂಟ್ 3.0-ಲೀಟರ್ ಡೀಸೆಲ್ ಟ್ವಿನ್-ಟರ್ಬೋಚಾರ್ಜ್ಡ್ ಎಂಜಿನ್ 188 ಬಿಹೆಚ್‌ಪಿ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಐಷಾರಾಮಿ ಬಿಎಂಡಬ್ಲ್ಯು 6-ಸೀರಿಸ್ ಕಾರು ಖರೀದಿಸಿದ ಕ್ರಿಕೆಟಿಗ ಅಜಿಂಕ್ಯ ರಹಾನೆ

ಎಂಜಿನ್ ಗಳೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಬಿಎಂಡಬ್ಲ್ಯು 6-ಸೀರಿಸ್ ಜಿಟಿ ಫೇಸ್‌ಲಿಫ್ಟ್ ಕಾರು ಕೇವಲ 6.5 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಬಿಎಂಡಬ್ಲ್ಯು 6-ಸೀರಿಸ್ ಕಾರು 250 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಐಷಾರಾಮಿ ಬಿಎಂಡಬ್ಲ್ಯು 6-ಸೀರಿಸ್ ಕಾರು ಖರೀದಿಸಿದ ಕ್ರಿಕೆಟಿಗ ಅಜಿಂಕ್ಯ ರಹಾನೆ

ಇನ್ನು ಬಿಎಂಡಬ್ಲ್ಯು ತನ್ನ ಏಳನೇ ತಲೆಮಾರಿನ ಬಿಎಂಡಬ್ಲ್ಯು 7-ಸೀರಿಸ್ ಸೆಡಾನ್ ಅನ್ನು ಒಳಗೆ ಮತ್ತು ಹೊರಗೆ ಹಲವಾರು ಬದಲಾವಣೆಗಳೊಂದಿಗೆ ಇತ್ತೀಚೆಗೆ ಅನಾವರಣಗೊಳಿಸಲಾಗಿತ್ತು. ಈ ಹೊಸ ಬಿಎಂಡಬ್ಲ್ಯು 7-ಸೀರಿಸ್ ಕಾರು i7 xDrive60 ಎಂದು ಕರೆಯಲ್ಪಡುವ ಪೋರ್ಟ್ಫೋಲಿಯೊದಲ್ಲಿ ಮೊದಲ ಬಾರಿಗೆ ಎಲೆಕ್ಟ್ರಿಕ್ ಮಾದರಿಯನ್ನು ಪಡೆದುಕೊಂಡಿದೆ. ಹೊಸ ಕಾರು ಬೃಹತ್ 31-ಇಂಚಿನ ಹಿಂಭಾಗದ ಮನರಂಜನಾ ಡಿಸ್ ಪ್ಲೇ ಮತ್ತು ಪ್ರಭಾವಶಾಲಿ ತಂತ್ರಜ್ಞಾನಗಳ ಲೋಡ್ ಅನ್ನು ಹೊಂದಿದೆ ಆದರೆ ಇಲ್ಲಿ ನಾವು ಶೂನ್ಯ-ಹೊರಸೂಸುವಿಕೆಯ ರೂಪಾಂತರವನ್ನು ನೋಡೋಣ.

ಐಷಾರಾಮಿ ಬಿಎಂಡಬ್ಲ್ಯು 6-ಸೀರಿಸ್ ಕಾರು ಖರೀದಿಸಿದ ಕ್ರಿಕೆಟಿಗ ಅಜಿಂಕ್ಯ ರಹಾನೆ

ಹೊಸ G70 7-ಸೀರಿಸ್ ಅನ್ನು ಮುಂದಿನ ವರ್ಷದ ವೇಳೆಗೆ ಎರಡು ಎಂ-ಸ್ಪೆಕ್ ಇವಿ ಮತ್ತು PHEV ಆಯ್ಕೆಗಳ ಸೇರ್ಪಡೆಯೊಂದಿಗೆ ವಿಸ್ತರಿಸಲಾಗುವುದು. ಯುನೈಟೆಡ್ ಸ್ಟೇಟ್ಸ್‌ನಲ್ಲಿ, ಗ್ರಾಹಕರು ವಿ8 ಎಂಜಿನ್ ಎಡಬ್ಲ್ಯುಡಿ 760iಐ ಎಕ್ಸ್'ಡ್ರೈವ್ ಸಿಕ್ಸ್ ಪಾಟ್ ಯೂನಿಟ್, WD 740i ಮತ್ತು ಮೊದಲ ಬಾರಿಗೆ i7 xDrive60 ಎಲೆಕ್ಟ್ರಿಕ್ ಆವೃತ್ತಿಯ ಆಯ್ಕೆಯನ್ನು ಹೊಂದಿರುತ್ತಾರೆ. ಇನ್ನು 2023ಕ್ಕೆ, ಜರ್ಮನ್ ಐಷಾರಾಮಿ ಕಾರು ತಯಾರಕರು 7-ಸೀರಿಸ್ ಕೇವಲ ಎರಡು ಎಂ-ಸ್ಪೆಕ್ ಕಾರುಗಳನ್ನು ಸೇರಿಸುತ್ತಾರೆ: M760e xDrive ಮತ್ತು i7 M70 xDrive. ಹಿಂದಿನದು PHEV ಸಿಸ್ಟಂ ಅನ್ನು ಪಡೆಯುತ್ತದೆ. ಇನ್ನು 3.0-ಲೀಟರ್ ಆರು-ಸೈಲ್ ಎಂಜಿನ್ ಅನ್ನು ಹೊಂದಿದೆ.

ಐಷಾರಾಮಿ ಬಿಎಂಡಬ್ಲ್ಯು 6-ಸೀರಿಸ್ ಕಾರು ಖರೀದಿಸಿದ ಕ್ರಿಕೆಟಿಗ ಅಜಿಂಕ್ಯ ರಹಾನೆ

ಇದು 571 ಬಿಹೆಚ್‍ಪಿ ಪವರ್ ಮತ್ತು 800 ಎನ್ಎಂ ಟಾರ್ಕ್‌ನ ಸಂಯೋಜಿತ ಪವರ್ ಉತ್ಪಾದನೆಯನ್ನು ಉತ್ಪಾದಿಸಲು 200 ಬಿಹೆಚ್‍ಪಿ ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಒಟ್ಟಾಗಿ ಕಾರ್ಯನಿರ್ವಹಿಸುತ್ತದೆ. ಹೈಬ್ರಿಡ್ ಮೋಡ್‌ನಲ್ಲಿ 4.3 ಸೆಕೆಂಡುಗಳಲ್ಲಿ ಶೂನ್ಯದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇದು 250 ಕಿ.ಮೀ ಟಾಪ್ ಸ್ಫೀಡ್ ಅನ್ನು ಹೊಂದಿದೆ.

Most Read Articles

Kannada
English summary
Indian cricketer ajinkya rahane buys new bmw 6 series features specs details
Story first published: Friday, May 20, 2022, 17:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X