ಮಾಲಿನ್ಯ ತಡೆಗೆ ಹೊಸ ಉಪಕರಣ ಅಭಿವೃದ್ಧಿಪಡಿಸಿದ ಐಐಟಿ ಎಂಜಿನಿಯರ್

ವಾಹನಗಳು ಹೆಚ್ಚಿದಂತೆಲ್ಲಾ ವಾಯು ಮಾಲಿನ್ಯ ಪ್ರಮಾಣವು ಸಹ ಹೆಚ್ಚಾಗುತ್ತಿದೆ. ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಳುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ವಾಯು ಮಾಲಿನ್ಯವು ಹೆಚ್ಚಾಗುತ್ತಿದೆಯೆ ಹೊರತು ಕಡಿಮೆಯಾಗುತ್ತಿಲ್ಲ.

ಮಾಲಿನ್ಯ ತಡೆಗೆ ಹೊಸ ಉಪಕರಣ ಅಭಿವೃದ್ಧಿಪಡಿಸಿದ ಐಐಟಿ ಎಂಜಿನಿಯರ್

ಸರ್ಕಾರವು ಮಾಲಿನ್ಯ ನಿಯಂತ್ರಣಕ್ಕಾಗಿ ವಾಹನಗಳ ಎಂಜಿನ್‍‍ಗಳನ್ನು ಬಿ‍ಎಸ್ 4ನಿಂದ ಬಿ‍ಎಸ್ 6ಗೆ ಬದಲಾಯಿಸುತ್ತಿದೆ. ಇದರ ಜೊತೆಗೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನವನ್ನು ನೀಡುತ್ತಿದ್ದು, ಡೀಸೆಲ್ - ಪೆಟ್ರೋಲ್ ವಾಹನಗಳ ರಿಜಿಸ್ಟ್ರೇಷನ್ ಮೇಲೆ ಭಾರೀ ಪ್ರಮಾಣದ ಶುಲ್ಕವನ್ನು ವಿಧಿಸುವ ಯೋಜನೆಯನ್ನು ಹೊಂದಿದೆ.

ಮಾಲಿನ್ಯ ತಡೆಗೆ ಹೊಸ ಉಪಕರಣ ಅಭಿವೃದ್ಧಿಪಡಿಸಿದ ಐಐಟಿ ಎಂಜಿನಿಯರ್

ಹೊಸದಾಗಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವವರಿಗೆ ರಿಜಿಸ್ಟ್ರೇಷನ್ ಶುಲ್ಕದಿಂದ ವಿನಾಯಿತಿ ಸೇರಿದಂತೆ ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತಿದೆ. ದೆಹಲಿಯಲ್ಲಿನ ವಾಯು ಮಾಲಿನ್ಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಅಲ್ಲಿನ ರಾಜ್ಯ ಸರ್ಕಾರವು ಮೂರನೇ ಬಾರಿಗೆ ಸಮ ಬೆಸ ನಿಯಮವನ್ನು ಜಾರಿಗೆ ತರುತ್ತಿದೆ.

ಮಾಲಿನ್ಯ ತಡೆಗೆ ಹೊಸ ಉಪಕರಣ ಅಭಿವೃದ್ಧಿಪಡಿಸಿದ ಐಐಟಿ ಎಂಜಿನಿಯರ್

ವಾಹನಗಳಿಂದ ಉಂಟಾಗುವ ವಾಯು ಮಾಲಿನ್ಯವನ್ನು ನಿಯಂತ್ರಿಸುವ ಉದ್ದೇಶದಿಂದ ಖರಗಪುರ್ ಐಐಟಿಯ ಪದವಿಧರರೊಬ್ಬರು ಉಪಕರಣವೊಂದನ್ನು ಕಂಡು ಹಿಡಿದಿದ್ದಾರೆ. ಈ ಉಪಕರಣವನ್ನು ವಾಹನಗಳಿಗೆ ಅಳವಡಿಸಿದರೆ ವಾಯು ಮಾಲಿನ್ಯವು ಕಡಿಮೆಯಾಗಲಿದೆ ಎಂದು ಹೇಳಲಾಗಿದೆ.

ಮಾಲಿನ್ಯ ತಡೆಗೆ ಹೊಸ ಉಪಕರಣ ಅಭಿವೃದ್ಧಿಪಡಿಸಿದ ಐಐಟಿ ಎಂಜಿನಿಯರ್

ಈ ಉಪಕರಣಕ್ಕೆ ಪಿ‍ಎಂ 2.5 ಎಂಬ ಹೆಸರಿಡಲಾಗಿದೆ. ಈ ಉಪಕರಣವನ್ನು ದೆಬಾಯನ್ ಸಹಾರವರು ಅಭಿವೃದ್ಧಿಪಡಿಸಿದ್ದಾರೆ. ಅವರು ಸ್ಟಾನ್‍‍ಫರ್ಡ್ ಯೂನಿವರ್ಸಿಟಿಯಲ್ಲಿ ಗ್ಲೋಬಲ್ ಬಯೊಡಿಸೈನ್ ಫೆಲೊ ಆಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ.

ಮಾಲಿನ್ಯ ತಡೆಗೆ ಹೊಸ ಉಪಕರಣ ಅಭಿವೃದ್ಧಿಪಡಿಸಿದ ಐಐಟಿ ಎಂಜಿನಿಯರ್

ಈ ಉಪಕರಣವನ್ನು ವಾಹನಗಳ ಎಕ್ಸಾಸ್ಟ್ ಸಿಸ್ಟಂಗಳಿಗೆ ಅಳವಡಿಸಬೇಕಾಗುತ್ತದೆ. ಪಿ‍ಎಂ 2.5 ಉಪಕರಣವನ್ನು ಒಂದು ಕಾರಿಗೆ ಅಳವಡಿಸಿದರೆ, 10 ಕಾರುಗಳಲ್ಲಿ ಉಂಟಾಗುವಷ್ಟು ಮಾಲಿನ್ಯವನ್ನು ನಿಯಂತ್ರಿಸುತ್ತದೆ.

ಮಾಲಿನ್ಯ ತಡೆಗೆ ಹೊಸ ಉಪಕರಣ ಅಭಿವೃದ್ಧಿಪಡಿಸಿದ ಐಐಟಿ ಎಂಜಿನಿಯರ್

ಈ ಬಗ್ಗೆ ಮಾತನಾಡಿರುವ ಅವರು ಪಿ‍ಎಂ 2.5ನಲ್ಲಿರುವ ಟೆಕ್ನಾಲಜಿಯು ಎಲೆಕ್ಟ್ರಿಕ್ ಎನರ್ಜಿ ಹಾಗೂ ವೇವ್ ಎನರ್ಜಿಯನ್ನು ಬಳಸುತ್ತದೆ. ಇದರಿಂದಾಗಿ ಅವು ಮ್ಯಾಗ್ನೆಟ್‍‍ನಂತೆ ವರ್ತಿಸಿ, ವಾತಾವರಣದಲ್ಲಿರುವ ಇತರ ಮಾಲಿನ್ಯಕಾರಕ ಅಂಶಗಳನ್ನು ಆಕರ್ಷಿಸುತ್ತವೆ. ಅವು ಗಾತ್ರದಲ್ಲಿ ದೊಡ್ಡದಾಗುತ್ತಿದ್ದಂತೆ ಅವುಗಳ ತೂಕವು ಹೆಚ್ಚಾಗಿ ನೆಲದ ಮೇಲೆ ಬೀಳುತ್ತವೆ ಎಂದು ಹೇಳಿದರು.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಮಾಲಿನ್ಯ ತಡೆಗೆ ಹೊಸ ಉಪಕರಣ ಅಭಿವೃದ್ಧಿಪಡಿಸಿದ ಐಐಟಿ ಎಂಜಿನಿಯರ್

ಪಿ‍ಎಂ 2.5 ಅನ್ನು ಹೊಂದಲಿರುವ ಒಂದು ಕಾರು ತನ್ನ ಸುತ್ತಲಿರುವ ಮಾಲಿನ್ಯವನ್ನು ನಿವಾರಿಸುತ್ತದೆ. ತನ್ನ ಸುತ್ತಮುತ್ತಲಿನ 10 ಕಾರುಗಳು ಹೊರಹಾಕುವ ಮಾಲಿನ್ಯವನ್ನು ತಟಸ್ಥಗೊಳಿಸುತ್ತದೆ. ಪಿ‍ಎಂ 2.5 ಉಪಕರಣವು ಚಿಕ್ಕ ಗಾತ್ರವನ್ನು ಹೊಂದಿದ್ದರೂ ಶ್ವಾಸಕೋಶ ಹಾಗೂ ರಕ್ತಪ್ರವಾಹಕ್ಕೆ ಪ್ರವೇಶಿಸುವ ವಾಯುಮಾಲಿನ್ಯವನ್ನು ತಡೆಗಟ್ಟುತ್ತದೆ ಎಂದು ಸಹಾರವರು ಹೇಳಿದರು.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಮಾಲಿನ್ಯ ತಡೆಗೆ ಹೊಸ ಉಪಕರಣ ಅಭಿವೃದ್ಧಿಪಡಿಸಿದ ಐಐಟಿ ಎಂಜಿನಿಯರ್

ಸಹಾರವರು ಈ ಉಪಕರಣವನ್ನು ವಾಣಿಜ್ಯೀಕರಿಸಲು ಯೋಜಿಸಿದ್ದು, ಈಗಾಗಲೇ ಹಲವಾರು ಕಂಪನಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ ವಾಯುಮಾಲಿನ್ಯವು ಜನರಲ್ಲಿರುವ ಜ್ಞಾಪಕ ಶಕ್ತಿಯನ್ನು ಹಾನಿಗೊಳಿಸುತ್ತದೆ. ಮೆದುಳಿಗೆ 10 ವರ್ಷ ಹೆಚ್ಚು ವಯಸ್ಸಾಗುತ್ತದೆ.

MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಮಾಲಿನ್ಯ ತಡೆಗೆ ಹೊಸ ಉಪಕರಣ ಅಭಿವೃದ್ಧಿಪಡಿಸಿದ ಐಐಟಿ ಎಂಜಿನಿಯರ್

ಪ್ರಮುಖ ಸಂಶೋಧಕರೊಬ್ಬರು ಮಾತನಾಡಿ, ಪದಗಳ ಸರಮಾಲೆಯನ್ನು ನೆನಪಿಸಿಕೊಳ್ಳುವಾಗ, ಕಲುಷಿತ ವಾತಾವರಣದಲ್ಲಿರುವ 50 ವರ್ಷ ವಯಸ್ಸಿನವರು 60 ವರ್ಷದವರ ರೀತಿ ವರ್ತಿಸುತ್ತಾರೆ ಎಂದು ಹೇಳೀದ್ದಾರೆ. ದೆಹಲಿಯಲ್ಲಿನ ಗಾಳಿಯ ಗುಣಮಟ್ಟವು ಗಣನೀಯವಾಗಿ ಕುಸಿದಿದೆ.

ಮಾಲಿನ್ಯ ತಡೆಗೆ ಹೊಸ ಉಪಕರಣ ಅಭಿವೃದ್ಧಿಪಡಿಸಿದ ಐಐಟಿ ಎಂಜಿನಿಯರ್

ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಸಿಸ್ಟಂ ಆಫ್ ಏರ್ ಕ್ವಾಲಿಟಿ ಹಾಗೂ ವೆದರ್ ಫೊರ್ ಕಾಸ್ಟಿಂಗ್ ಅಂಡ್ ರಿಸರ್ಚ್ (ಸಫರ್) ಜನರಿಗೆ ಬೆಳಿಗ್ಗೆಯ ವಾಯುವಿಹಾಗ ಹಾಗೂ ಇತರ ಹೊರಾಂಗಣ ಚಟುವಟಿಕೆಗಳನ್ನು ಮಾಡದಂತೆ ಸಲಹೆ ನೀಡಿದೆ. ವಾಯು ಮಾಲಿನ್ಯದಲ್ಲಿನ ಹೆಚ್ಚಳದಿಂದಾಗಿ ಜನರಲ್ಲಿ ಉಸಿರಾಟ ಹಾಗೂ ಕಣ್ಣಿನ ಉರಿಯುವಿಕೆ ಸಮಸ್ಯೆಗಳು ಗಣನೀಯವಾಗಿ ಹೆಚ್ಚಿವೆ.

Source: Indiatimes

Most Read Articles

Kannada
English summary
IIT-Kharagpur Engineer Builds Device That Fits On Car Exhaust And Reduces Air Pollution - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X