ಲಾಕ್ ಡೌನ್ ನಿಂದ ಕಡಿಮೆಯಾಯ್ತು ನಗರಗಳ ಮಾಲಿನ್ಯ ಪ್ರಮಾಣ

ಕರೋನಾ ವೈರಸ್ ಇಡೀ ಪ್ರಪಂಚಕ್ಕೆ ಹಬ್ಬಿದ್ದು, ಮಾನವಕುಲಕ್ಕೆ ಬೆದರಿಕೆಯನ್ನು ಒಡ್ಡುತ್ತಿದೆ. ಕರೋನಾ ವೈರಸ್ ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಈ ಲಾಕ್ ಡೌನ್ ನಿಂದಾಗಿ ಜನ ಜೀವನ ಅಸ್ತ ವ್ಯಸ್ತವಾಗಿದ್ದರೂ ಹಲವಾರು ಪ್ರಯೋಜನಗಳಾಗಿವೆ.

ಲಾಕ್ ಡೌನ್ ನಿಂದ ಕಡಿಮೆಯಾಯ್ತು ನಗರಗಳ ಮಾಲಿನ್ಯ ಪ್ರಮಾಣ

ಕರೋನಾ ವೈರಸ್ ಗೆ ಜನರು ಬಲಿಯಾಗದಂತೆ ತಡೆಯುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿವೆ. ಇದರಲ್ಲಿ 21 ದಿನಗಳ ಲಾಕ್ ಡೌನ್ ಸಹ ಸೇರಿದೆ. ಈ ಲಾಕ್ ಡೌನ್ ನಿಂದಾಗಿ ಜನ ಜೀವನ ಕುಂಠಿತಗೊಂಡಿದೆ. ಆದರೆ ಈ ಲಾಕ್ ಡೌನ್ ನಿಂದಾಗಿ ಅನೇಕ ಪ್ರಯೋಜನಗಳಾಗಿವೆ.

ಲಾಕ್ ಡೌನ್ ನಿಂದ ಕಡಿಮೆಯಾಯ್ತು ನಗರಗಳ ಮಾಲಿನ್ಯ ಪ್ರಮಾಣ

ಲಾಕ್ ಡೌನ್ ನಿಂದಾಗಿ ಕೈಗಾರಿಕೆಗಳು ಹಾಗೂ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದರಿಂದಾಗಿ ವಾಯುಮಾಲಿನ್ಯ ಪ್ರಮಾಣವು ವಿಪರೀತವಾಗಿ ಕಡಿಮೆಯಾಗಿದೆ.

ಲಾಕ್ ಡೌನ್ ನಿಂದ ಕಡಿಮೆಯಾಯ್ತು ನಗರಗಳ ಮಾಲಿನ್ಯ ಪ್ರಮಾಣ

ಕಾರ್ಖಾನೆ, ವಿಮಾನ, ವಾಹನಗಳ ಹೊಗೆಯಿಂದಾಗಿ ತತ್ತರಿಸಿದ್ದ ನಗರ ಪ್ರದೇಶಗಳ ಜನರು ಇದರಿಂದಾಗಿ ನಿಟ್ಟುಸಿರು ಬಿಟ್ಟಿದ್ದಾರೆ. ಸಂಬಂಧಪಟ್ಟ ಇಲಾಖೆ ಬಿಡುಗಡೆಗೊಳಿಸಿರುವ ಅಂಕಿ ಅಂಶಗಳ ಪ್ರಕಾರ ಮೆಟ್ರೋಪಾಲಿಟನ್ ಸಿಟಿಗಳಲ್ಲಿನ ವಾಯುಮಾಲಿನ್ಯ ಪ್ರಮಾಣವು 50%ನಷ್ಟು ಕುಸಿದಿದೆ ಎಂದು ಹೇಳಲಾಗಿದೆ.

ಲಾಕ್ ಡೌನ್ ನಿಂದ ಕಡಿಮೆಯಾಯ್ತು ನಗರಗಳ ಮಾಲಿನ್ಯ ಪ್ರಮಾಣ

ಕಳೆದ ವರ್ಷ ದೆಹಲಿಯಲ್ಲಿ ವಾಯುಮಾಲಿನ್ಯವು ವಿಪರೀತ ಹದಗೆಟ್ಟಿತ್ತು. ಈ ಕಾರಣಕ್ಕೆ ದೇಹಲಿಯಲ್ಲಿನ ವಾಹನ ಸಂಚಾರಕ್ಕೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ದೆಹಲಿಯಲ್ಲಿನ ವಾಯುಮಾಲಿನ್ಯವನ್ನು ಕಡಿಮೆಗೊಳಿಸಲು ಸರ್ಕಾರಗಳು ತೆಗೆದುಕೊಂಡ ಕ್ರಮಗಳಿಂದ ಯಾವುದೇ ಪ್ರಯೋಜನಗಳಾಗಿಲ್ಲ.

ಲಾಕ್ ಡೌನ್ ನಿಂದ ಕಡಿಮೆಯಾಯ್ತು ನಗರಗಳ ಮಾಲಿನ್ಯ ಪ್ರಮಾಣ

ದೆಹಲಿ ಮಾತ್ರವಲ್ಲದೇ, ಚೆನ್ನೈ, ಬೆಂಗಳೂರು ಹಾಗೂ ಮುಂಬೈ ನಗರಗಳು ಸಹ ವಾಯುಮಾಲಿನ್ಯದಿಂದಾಗಿ ತತ್ತರಿಸಿವೆ. ಕರೋನಾ ವೈರಸ್ ನಿಂದ ಉಂಟಾಗಿರುವ ಪರಿಸ್ಥಿತಿಯನ್ನು ನಿಭಾಯಿಸಲು ಲಾಕ್ ಡೌನ್ ವಿಧಿಸಲಾಗಿರುವುದರಿಂದ ಕೈಗಾರಿಕೆಗಳು ಹಾಗೂ ವಾಹನ ಸಂಚಾರ ಸ್ಥಗಿತಗೊಂಡಿರುವುದರಿಂದ ಎಲ್ಲಾ ನಗರಗಳಲ್ಲಿನ ವಾಯುಮಾಲಿನ್ಯ ಪ್ರಮಾಣವು ಯಾರೂ ನಿರೀಕ್ಷಿಸದ ಮಟ್ಟಕ್ಕೆ ಕಡಿಮೆಯಾಗಿದೆ.

ಲಾಕ್ ಡೌನ್ ನಿಂದ ಕಡಿಮೆಯಾಯ್ತು ನಗರಗಳ ಮಾಲಿನ್ಯ ಪ್ರಮಾಣ

ಸಾಮಾನ್ಯವಾಗಿ ಮೆಟ್ರೋಪಾಲಿಟನ್ ನಗರಗಳಲ್ಲಿ ವಾಯುಮಾಲಿನ್ಯ ಸೂಚ್ಯಂಕವು 100ರಿಂದ 200ರವರೆಗೆ ಇರುತ್ತದೆ. ಆದರೆ ಸದ್ಯದ ಸೂಚ್ಯಂಕವು 50ರಿಂದ 100ಕ್ಕೆ ಇಳಿದಿದೆ.ಜನರ ಜೀವನವು ಸಂಪೂರ್ಣವಾಗಿ ಸ್ತಗಿತಗೊಂಡಿದ್ದರೂ ವಾಯು ಮಾಲಿನ್ಯವು ಕಡಿಮೆಯಾಗಿರುವುದು ಸ್ವಾಗತಾರ್ಹ ಎಂಬುದು ಪರಿಸರ ಪ್ರಿಯರ ಅಭಿಪ್ರಾಯ.

MOST READ: ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಲಾಕ್ ಡೌನ್ ನಿಂದ ಕಡಿಮೆಯಾಯ್ತು ನಗರಗಳ ಮಾಲಿನ್ಯ ಪ್ರಮಾಣ

ಸುಮಾರು 2.5 ಸೆಂ.ಮೀಗಳಷ್ಟು ಇರುವ ಗಾಳಿಯಲ್ಲಿ ಕರಗುವ ಕಣಗಳ ಸಾಂದ್ರತೆಯು ಈಗ ಇನ್ನೂ ಕಡಿಮೆಯಾಗಿದೆ. ಹೆಚ್ಚು ವಾಯು ಮಾಲಿನ್ಯವನ್ನು ಉಂಟುಮಾಡುವ ವಿಷಕಾರಿ ಅನಿಲಗಳ ಪ್ರಮಾಣವು 50%ನಷ್ಟು ಕಡಿಮೆಯಾಗಿರುವ ಬಗ್ಗೆ ವರದಿಗಳಾಗಿವೆ.

MOST READ: ವಾಹನ ಸವಾರರ ಕಾಲಿಗೆ ಬೀಳುತ್ತೇನೆಂದ ಸಂಚಾರಿ ಪೊಲೀಸ್, ಕಾರಣವೇನು ಗೊತ್ತಾ?

ಲಾಕ್ ಡೌನ್ ನಿಂದ ಕಡಿಮೆಯಾಯ್ತು ನಗರಗಳ ಮಾಲಿನ್ಯ ಪ್ರಮಾಣ

ಸ್ವಿಟ್ಜರ್ಲೆಂಡ್ ಮೂಲದ ಐಕ್ಯೂ ಏರ್ ಬಿಡುಗಡೆ ಮಾಡಿದ್ದ ಸಮೀಕ್ಷೆ ವರದಿಗಳ ಪ್ರಕಾರ, 2019ರಲ್ಲಿ ಪ್ರಪಂಚದಲ್ಲಿ ಹೆಚ್ಚು ವಾಯುಮಾಲಿನ್ಯವಿರುವ ನಗರಗಳ ಪಟ್ಟಿಯಲ್ಲಿ ದೆಹಲಿಯು 5ನೇ ಸ್ಥಾನವನ್ನು ಪಡೆದಿತ್ತು. ಈಗಿನ ಸನ್ನಿವೇಶದಿಂದಾಗಿ ವಾಯುಮಾಲಿನ್ಯ ಪ್ರಮಾಣವು ಅಪಾಯಕಾರಿ ಸ್ಥಿತಿಯಿಂದ ಸಾಮಾನ್ಯ ಸ್ಥಿತಿಗೆ ಮರಳಿದೆ.

MOST READ: ವಾಹನ ಉತ್ಪಾದನೆ ಸ್ಥಗಿತದಿಂದಾಗಿ ಸಾವಿರಾರು ಕೋಟಿ ನಷ್ಟ

ಲಾಕ್ ಡೌನ್ ನಿಂದ ಕಡಿಮೆಯಾಯ್ತು ನಗರಗಳ ಮಾಲಿನ್ಯ ಪ್ರಮಾಣ

ವಾಯುಮಾಲಿನ್ಯದ ಜೊತೆಗೆ ಚೆನ್ನೈ ಹಾಗೂ ಬೆಂಗಳೂರು ಸೇರಿದಂತೆ ಹಲವು ನಗರಗಳ ಶಬ್ದ ಮಾಲಿನ್ಯ ಪ್ರಮಾಣವು ಕಡಿಮೆಯಾಗಿದೆ. ಈ ಲಾಕ್ ಡೌನ್ ನಿಂದಾಗಿ ದೇಶದ ಬಹುತೇಕ ನಗರಗಳಲ್ಲಿ ಎಲ್ಲಾ ರೀತಿಯ ಮಾಲಿನ್ಯ ಪ್ರಮಾಣವು ಕಡಿಮೆಯಾಗಿದ್ದು, ಪ್ರಾಣಿ, ಪಕ್ಷಿಗಳು ಹೆಚ್ಚು ಸ್ವತಂತ್ರವಾಗಿರುವ ವಾತಾವರಣ ನಿರ್ಮಾಣವಾಗಿದೆ.

Most Read Articles

Kannada
English summary
Indian metro cities air quality improved drastically due to lockdown. Read in Kannada.
Story first published: Monday, March 30, 2020, 12:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X