ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಕಾರು ಹಾಗೂ ಬೈಕುಗಳ ಬೆಲೆಯನ್ನು ಅವುಗಳು ಯಾವ ಕಂಪನಿಗೆ ಸೇರಿವೆ, ಯಾವ ಮಾದರಿ, ಸರ್ವಿಸ್ ರೆಕಾರ್ಡ್, ಯಾವುದಾದರೂ ಅಪಘಾತವಾಗಿದೆಯೇ ಹಾಗೂ ಎಷ್ಟು ದೂರ ಚಲಿಸಿದೆ ಎಂಬುದರ ಮೇಲೆ ನಿರ್ಧರಿಸಲಾಗುವುದು.

ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಆದರೆ ದೇಶಿಯ ಮಾರುಕಟ್ಟೆಯಲ್ಲಿರುವ ಕೆಲವು ಸ್ಕೂಟರ್ ಹಾಗೂ ಮೋಟಾರ್‍‍ಸೈಕಲ್‍‍ಗಳ ಬೆಲೆಯು ಅವುಗಳು ಹಳೆಯದಾದಷ್ಟು ಬೆಲೆ ಹೆಚ್ಚುತ್ತಾ ಹೋಗುತ್ತದೆ. ಈ ರೀತಿ ಹಳೆಯ ಮಾದರಿಯ ವಾಹನಗಳಾದರೂ ಹೆಚ್ಚು ಬೆಲೆಯನ್ನು ಹೊಂದಿರುವ ಸ್ಕೂಟರ್ ಹಾಗೂ ಬೈಕುಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.

ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ರಾಯಲ್ ಎನ್‍‍ಫೀಲ್ಡ್ ಕಾಸ್ಟ್ ಐರನ್ 350/500

ರಾಯಲ್ ಎನ್‍‍ಫೀಲ್ಡ್ ಕಂಪನಿಯ ಬೈಕುಗಳು ಹಲವಾರು ದಶಕಗಳಿಂದ ಭಾರತದಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಕಂಪನಿಯ ಇತ್ತೀಚಿನ ಬೈಕ್‌ಗಳು, ಇತರ ಆಧುನಿಕ ಬೈಕ್‌ಗಳಂತಿದ್ದರೂ ಹೆಚ್ಚಿನ ಆರ್‌ಇ ಬೈಕ್‌ಗಳು ಹಳೆಯ ವಿನ್ಯಾಸ ಹಾಗೂ ತಂತ್ರಜ್ಞಾನವನ್ನೇ ಬಳಸುತ್ತಿವೆ. ಇದರಿಂದಾಗಿ ಈ ಬೈಕುಗಳು ಜನಪ್ರಿಯವಾಗಿವೆ. 1994ರಲ್ಲಿ ಐಷರ್ ಗ್ರೂಪ್ ಈ ಕಂಪನಿಯನ್ನು ಖರೀದಿಸಿದ ನಂತರ, ಬೈಕುಗಳ ಉತ್ಪಾದನೆಗೆ ಉತ್ತೇಜನ ದೊರೆತು, ಕಂಪನಿಯ ಇಮೇಜ್ ಸಹ ಸುಧಾರಿಸಿತು.

ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಆದ ಚಾಪನ್ನು ಒತ್ತಿದ್ದ ಬುಲೆಟ್ 350/500 ಕಾಸ್ಟ್ ಐರನ್ ಬೈಕ್ ಅನ್ನು ಜನರು ಈಗಲೂ ನೆನಪಿಸಿಕೊಳ್ಳುತ್ತಾರೆ. ಹಳೆಯ ಕಾಸ್ಟ್ ಐರನ್ ಬ್ಲಾಕ್ ಎಂಜಿನ್‌ಗಳು ವಿಭಿನ್ನವಾಗಿದ್ದವು. ಈಗ ಈ ಹಳೆಯ ಬೈಕುಗಳ ಬೆಲೆಯು ಸುಮಾರು ರೂ.90,000ದಿಂದ 1 ಲಕ್ಷಗಳವರೆಗೆ ಇದೆ. ಉತ್ತಮ ನಿರ್ವಹಣೆಯನ್ನು ಹೊಂದಿರುವ ಬೈಕುಗಳು ಇನ್ನೂ ಹೆಚ್ಚಿನ ಬೆಲೆಯನ್ನು ಹೊಂದಿವೆ. ಇವುಗಳನ್ನು ಹೊಂದಿರುವವರು ಮಾರಾಟ ಮಾಡಲು ಬಯಸುವುದಿಲ್ಲ.

ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಯಮಹಾ ಆರ್‍‍ಡಿ 350

ಯಮಹಾ ಆರ್‌ಡಿ 350 ಬಿಡುಗಡೆಯಾದ ಕಾಲದಲ್ಲಿ ಅತ್ಯಂತ ಜನಪ್ರಿಯ ಬೈಕ್‌ಗಳಲ್ಲಿ ಒಂದಾಗಿತ್ತು. ಈಗ ಈ ಬೈಕ್ ಅನ್ನು ಐಕಾನ್ ಎಂದು ಪರಿಗಣಿಸಲಾಗುತ್ತದೆ. ಆರ್‍‍ಡಿ 350 ಬೈಕ್ ಅನ್ನು ಖರೀದಿಸ ಬಯಸುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎಂಎಸ್ ಧೋನಿ ಹಾಗೂ ಜಾನ್ ಅಬ್ರಹಾಂರವರಂತಹ ಹಲವಾರು ಸೆಲೆಬ್ರಿಟಿಗಳು ಆರ್‍‍ಡಿ 350 ಬೈಕ್ ಅನ್ನು ಹೊಂದಿದ್ದಾರೆ. ಈ ಬೈಕಿನಲ್ಲಿರುವ ಎರಡು ಸ್ಟ್ರೋಕ್ ಎಂಜಿನ್ 31 ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸುತ್ತಿತ್ತು.

ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಭಾರತದಲ್ಲಿ ಈ ಬೈಕ್ ಅನ್ನು ಬಿಡುಗಡೆಗೊಳಿಸುವ ಮೊದಲು, ಯಮಹಾ ಕಂಪನಿಯು ಈ ಬೈಕಿನಲ್ಲಿದ್ದ ಡಿಸ್ಕ್ ಬ್ರೇಕ್‌ಗಳಂತಹ ಹಲವಾರು ಉಪಕರಣಗಳನ್ನು ತೆಗೆದು ಹಾಕಿತು. ಬೆಲೆಗಳು ಹೆಚ್ಚಾಗುವುದಿಲ್ಲ ಎಂಬುದು ಇದರ ಹಿಂದಿದ್ದ ಕಾರಣವಾಗಿತ್ತು. ಈಗ ಈ ಬೈಕ್ ಅನ್ನು ಖರೀದಿಸಬೇಕಾದರೆ, ರೂ.1.50 ಲಕ್ಷಗಳವರೆಗೆ ನೀಡಬೇಕಾಗುತ್ತದೆ. ಉತ್ತಮ ಸ್ಥಿತಿಯಲ್ಲಿದ್ದರೆ ಇನ್ನೂ ಹೆಚ್ಚಿನ ಬೆಲೆಯನ್ನು ತೆರಬೇಕಾಗುತ್ತದೆ. ಬಿಡುಗಡೆಯಾದ ಸಮಯದಲ್ಲಿ ಆರ್‍‍ಡಿ350 ಬೈಕ್ ಹೆಚ್ಚಿನ ಬೆಲೆಯನ್ನು ಹೊಂದಿದ್ದ ಕಾರಣಕ್ಕೆ ಹೆಚ್ಚು ಮಾರಾಟವಾಗಿರಲಿಲ್ಲ.

ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಯಜ್ಡಿ

ಜಾವಾ ಕಂಪನಿಯು 1960ರಲ್ಲಿ ಭಾರತದಲ್ಲಿ ಬೈಕುಗಳನ್ನು ಬಿಡುಗಡೆಗೊಳಿಸಿತು. ಕಂಪನಿಯ ಬೈಕುಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದ್ದವು. ಯಜ್ಡಿ ಬೈಕ್‌ಗಳು ಕ್ರೂಸ್ ಆಧಾರಿತವಾಗಿದ್ದು, ರ್‍ಯಾಲಿ ಪ್ರಿಯರ ನೆಚ್ಚಿನ ಬೈಕ್ ಆಗಿದ್ದವು. ಈ ಕಾರಣಕ್ಕಾಗಿ ಯಜ್ಡಿ ಬೈಕುಗಳು ರಾಷ್ಟ್ರೀಯ ಮೋಟಾರ್‌ಸೈಕಲ್ ರ್‍ಯಾಲಿಗಳಲ್ಲಿ ಹೆಚ್ಚಾಗಿ ಭಾಗವಹಿಸುತ್ತಿದ್ದವು.

MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

1996ರಲ್ಲಿ ಐಡಿಯಲ್ ಜಾವಾ ಸಮೂಹವು, ಕಾರ್ಮಿಕರ ಮುಷ್ಕರ ಹಾಗೂ ಹೊಸ ಮಾಲಿನ್ಯ ನಿಯಮಗಳ ಹಿನ್ನೆಲೆಯಲ್ಲಿ ತನ್ನ ಕಾರ್ಖಾನೆಯನ್ನು ಮುಚ್ಚಬೇಕಾಯಿತು. ಈಗ ಕ್ಲಾಸಿಕ್ / ಜಾವಾ ಬೈಕುಗಳನ್ನು ಖರೀದಿಸಬೇಕೆಂದರೆ ಸುಮಾರು ರೂ.50,000 ತೆರಬೇಕಾಗುತ್ತದೆ. ಯಜ್ಡಿಯ ರೋಡ್ ಕಿಂಗ್ ಇನ್ನೂ ಹೆಚ್ಚಿನ ಬೆಲೆಯನ್ನು ಹೊಂದಿದೆ. ಕಳೆದ ವರ್ಷ ಜಾವಾ ಮತ್ತೊಮ್ಮೆ ಭಾರತಕ್ಕೆ ಕಾಲಿಟ್ಟಿದೆ. ಈಗ ಯಜ್ಡಿ ಸಹ ಭಾರತಕ್ಕೆ ವಾಪಸ್ ಆಗುವ ಸಾಧ್ಯತೆಗಳಿವೆ.

MOST READ: ಕಾರ್ ಡೆಲಿವರಿ ಸಮಯದಲ್ಲಿ ಡ್ಯಾನ್ಸ್ ಮಾಡಿದ ಶೋರೂಂ ಸಿಬ್ಬಂದಿ

ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಲ್ಯಾಂಬ್ರೆಟ್ಟಾ ಹಾಗೂ ವಿಜಯ್ ಸೂಪರ್

ಭಾರತ ಸರ್ಕಾರವು 1972ರಲ್ಲಿ ಇನ್ನೊಸೆಂಟಿ ಕಂಪನಿಯನ್ನು ಖರೀದಿಸಿ, ಇಟಲಿ ಮೂಲದ ಕಂಪನಿಯ ಕಾರ್ಯಾಚರಣೆಯನ್ನು ಲಕ್ನೋಗೆ ವರ್ಗಾಯಿಸಿತು. ನಂತರ ಸ್ಕೂಟರ್ ಇಂಡಿಯಾ ಲಿಮಿಟೆಡ್ (ಎಸ್‌ಐಎಲ್) ಎಂಬ ಹೆಸರಿನಲ್ಲಿ ಹೊಸ ಉತ್ಪಾದನಾ ಘಟಕವನ್ನು ಆರಂಭಿಸಲಾಯಿತು. ಈ ಘಟಕದಲ್ಲಿ ಲ್ಯಾಂಬ್ರೆಟ್ಟಾ ಹಾಗೂ ವಿಜಯ್‍‍ನಂತಹ ಜನಪ್ರಿಯ ಮಾದರಿಗಳನ್ನು ತಯಾರಿಸಲಾಯಿತು.

MOST READ: ಭಾರತದ ವಿವಿಧ ರಾಜ್ಯಗಳ ಪೊಲೀಸರ ಬಳಿಯಿರುವ ಬೈಕುಗಳಿವು

ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಈ ಸ್ಕೂಟರ್‍‍ಗಳಲ್ಲಿದ್ದ ಟೈಮ್‍‍ಲೆಸ್ ಕೂಲ್ ಡಿಸೈನ್ ಹಾಗೂ ನಾಸ್ಟಾಲ್ಜಿಯಾದಿಂದಾಗಿ ಈ ಐಕಾನಿಕ್ ಸ್ಕೂಟರ್‌ಗಳು, ಈಗಲೂ ಸ್ಕೂಟರ್ ಪ್ರಿಯರ ನೆಚ್ಚಿನ ಸ್ಕೂಟರ್‍‍ಗಳಾಗಿವೆ. ಪೂರ್ಣ ಪ್ರಮಾಣದಲ್ಲಿ ರಿಸ್ಟೋರ್ ಮಾಡಲಾದ ಲ್ಯಾಂಬ್ರೆಟ್ಟಾ ಸ್ಕೂಟರ್‍‍ಗಳ ಬೆಲೆ ರೂ.50,000ಗಳಿಂದ ರೂ.80,000ಗಳಾಗುತ್ತದೆ. ರಿಸ್ಟೋರ್ ಮಾಡಿಲ್ಲದ ಸ್ಕೂಟರ್‍‍ಗಳ ಬೆಲೆಯು ರೂ.10,000ಗಳಾಗಲಿದೆ. ಆದರೆ ಅವುಗಳನ್ನು ಸರಿಯಾಗಿ ರಿಸ್ಟೋರ್ ಮಾಡಲು ಸಾಕಷ್ಟು ಸಮಯ ಹಾಗೂ ಹಣ ಖರ್ಚಾಗುತ್ತದೆ.

ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಯಮಹಾ ಆರ್ ಎಕ್ಸ್ ಝಡ್ / ಸುಜುಕಿ ಶೋಗನ್

90ರ ದಶಕದಲ್ಲಿ ಹಗುರವಾದ, ಎರಡು ಸ್ಟ್ರೋಕ್ ಎಂಜಿನ್ ಹೊಂದಿದ್ದ ಬೈಕ್‌ಗಳು ಹೆಚ್ಚು ಸದ್ದು ಮಾಡುತ್ತಿದ್ದವು. ಆ ಬೈಕ್‌ಗಳನ್ನು ಹೊಂದಿದ್ದದವರು ಆ ಬೈಕುಗಳಲ್ಲಿದ್ದ ಮೋಜಿನ ಅಂಶಗಳಿಗಾಗಿ ಇಂದಿಗೂ ಈ ಬೈಕುಗಳನ್ನು ನೆನಪಿಸಿಕೊಳ್ಳುತ್ತಾರೆ. ಆ ಸಮಯದಲ್ಲಿ, ಆರ್‍ಎಕ್ಸ್ ಝಡ್ ಹಾಗೂ ಸುಜುಕಿ ಶೋಗನ್ ಬೈಕುಗಳ ನಡುವೆ ತೀವ್ರ ಸ್ಪರ್ಧೆ ಏರ್ಪಟಿತ್ತು.

ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಈ ಎರಡೂ ಬೈಕುಗಳು ಭಾರೀ ಜನಪ್ರಿಯತೆಯನ್ನು ಹೊಂದಿದ್ದವು. ಹೆಚ್ಚಿನ ವೇಗವನ್ನು ಹೊಂದಿದ್ದ, ಈ ಎರಡೂ ಬೈಕುಗಳು ಕೈಗೆಟುಕುವ ಬೆಲೆಯನ್ನು ಹೊಂದಿದ್ದವು. ಆರ್‍ಎಕ್ಸ್ ಝಡ್ ಬೈಕ್ ಅನ್ನು ಮತ್ತೊಂದು ಐಕಾನಿಕ್ ಬೈಕ್ ಆದ ಯಮಹಾ ಆರ್‍ಎಕ್ಸ್ 100ನ ಬದಲಿಗೆ ಬಿಡುಗಡೆಗೊಳಿಸಲಾಗಿತ್ತು.

ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

5 ಸ್ಪೀಡಿನ ಗೇರ್‌ಬಾಕ್ಸ್ ಹೊಂದಿರುವ ಆರ್‌ಎಕ್ಸ್ ಝಡ್ ಈಗಲೂ ಹೆಚ್ಚು ಬೇಡಿಕೆ ಹೊಂದಿರುವ ಬೈಕ್ ಆಗಿದೆ. ಒಳ್ಳೆಯ ಸ್ಥಿತಿಯಲ್ಲಿರುವ ಬೈಕುಗಳು ಕಡಿಮೆಯೆಂದರೂ ರೂ.50,000 ಬೆಲೆ ಹೊಂದಿವೆ. ಸುಜುಕಿ ಶೋಗನ್‌ ಬಗ್ಗೆ ಹೇಳುವುದಾದರೆ, ಈ ಬೈಕ್ ತನ್ನ ಲುಕ್ ಹಾಗೂ ಪರ್ಫಾಮೆನ್ಸ್ ನಿಂದಾಗಿ ಬೈಕ್ ಪ್ರಿಯರನ್ನು ತನ್ನತ್ತ ಸೆಳೆದಿತ್ತು. ಶೋಗನ್ ಬೈಕ್ ಯಮಹಾ ಬೈಕ್‌ಗಳಿಗಿಂತ ಕಡಿಮೆ ಶಕ್ತಿಯನ್ನು ಹೊಂದಿದ್ದರೂ, ತನ್ನದೇ ಆದ ಸ್ಥಾನವನ್ನು ಹೊಂದಿತ್ತು. ಈಗ ಶೋಗನ್ ಬೈಕ್ ಹೊಂದಿರುವವರು, ಬಿಡಿಭಾಗಗಳು ಸಿಗದೇ ಪರದಾಡುತ್ತಿದ್ದಾರೆ.

Image Courtesy: 1, 2

Most Read Articles

Kannada
English summary
Indian motorcycles that get costlier as they get older - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X