ಇಂಧನ ಖರೀದಿಸಲು ನೆರವಾಗಲಿದೆ ಇಂಡಿಯನ್ ಆಯಿಲ್‌ನ ಈ ಗಿಫ್ಟ್ ವೋಚರ್

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ನಿರಂತರವಾಗಿ ಏರಿಕೆಯಾಗುತ್ತಿವೆ. ಅವುಗಳ ಬೆಲೆಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ. ಇಂಧನ ಬೆಲೆ ಏರಿಕೆಯನ್ನು ಖಂಡಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ದೇಶದ ಕೆಲವು ಭಾಗಗಳಲ್ಲಿ ಮದುವೆ ಮುಂತಾದ ಶುಭ ಸಮಾರಂಭಗಳಲ್ಲಿ ಪೆಟ್ರೋಲ್, ಡೀಸೆಲ್ ಅನ್ನು ಉಡುಗೊರೆಯಾಗಿ ನೀಡಲಾಗುತ್ತಿದೆ.

ಇಂಧನ ಖರೀದಿಸಲು ನೆರವಾಗಲಿದೆ ಇಂಡಿಯನ್ ಆಯಿಲ್‌ನ ಈ ಗಿಫ್ಟ್ ವೋಚರ್

ಇನ್ನು ಮುಂದೆ ಜನರು ಪೆಟ್ರೋಲ್, ಡೀಸೆಲ್ ಉಡುಗೊರೆ ನೀಡುವ ಬದಲು ತಮ್ಮ ಪ್ರೀತಿಪಾತ್ರರಿಗೆ ಗಿಫ್ಟ್ ವೋಚರ್ ಇಂಧನ ಕೂಪನ್ ಗಳನ್ನು ನೀಡಬಹುದು. ದೇಶದ ಖ್ಯಾತ ತೈಲ ಕಂಪನಿಗಳಲ್ಲಿ ಒಂದಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಈ ರೀತಿಯ ಕಾರ್ಯಕ್ಕೆ ಮುಂದಾಗಿದೆ. ಪೆಟ್ರೋಲ್, ಡೀಸೆಲ್ ಉಡುಗೊರೆ ನೀಡಲು ಬಯಸುವವರಿಗೆ ನೆರವಾಗಲು ಕಂಪನಿಯು ಗಿಫ್ಟ್ ವೋಚರ್ ಯೋಜನೆಯನ್ನು ಆರಂಭಿಸಿದೆ.

ಇಂಧನ ಖರೀದಿಸಲು ನೆರವಾಗಲಿದೆ ಇಂಡಿಯನ್ ಆಯಿಲ್‌ನ ಈ ಗಿಫ್ಟ್ ವೋಚರ್

ಈ ಯೋಜನೆಯ ಮೂಲಕ ಈಗ ಇಂಧನ ವೋಚರ್‌ಗಳನ್ನು ಜನರಿಗೆ ನೀಡಬಹುದು. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕೆಲವು ದಿನಗಳ ಹಿಂದಷ್ಟೇ ಈ ಗಿಫ್ಟ್ ವೋಚರ್ ಯೋಜನೆಯನ್ನು ದೇಶದಲ್ಲಿ ಆರಂಭಿಸಿತು. ಕಂಪನಿಯು One4U ಹೆಸರಿನಲ್ಲಿ ಈ ಯೋಜನೆಯನ್ನು ಆರಂಭಿಸಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಆರಂಭಿಸಿರುವ ಈ ಯೋಜನೆಯು ಜನರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ.

ಇಂಧನ ಖರೀದಿಸಲು ನೆರವಾಗಲಿದೆ ಇಂಡಿಯನ್ ಆಯಿಲ್‌ನ ಈ ಗಿಫ್ಟ್ ವೋಚರ್

ಜನರು ಇಂಡಿಯನ್ ಆಯಿಲ್‌ನ ಅಧಿಕೃತ ವೆಬ್‌ಸೈಟ್ ಅಥವಾ ಒನ್ 4ಯು ಈಸಿ ಫ್ಯೂಯಲ್ ಸೈಟ್ ಮೂಲಕ ಅಗತ್ಯವಿರುವ ಗಿಫ್ಟ್ ವೋಚರ್ ಖರೀದಿಸಬಹುದು. ರೂ. 500 ರಿಂದ ರೂ. 10,000 ಗಳವರೆಗೆ ಗಿಫ್ಟ್ ವೋಚರ್ ಪಡೆಯಬಹುದು. ಭಾರತದ ಯಾವುದೇ ಮೂಲೆಯಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಗಳಲ್ಲಿ ಇಂಧನ ತುಂಬಿಸಲು ಈ ವೋಚರ್‌ಗಳನ್ನು ಬಳಸಬಹುದು.

ಇಂಧನ ಖರೀದಿಸಲು ನೆರವಾಗಲಿದೆ ಇಂಡಿಯನ್ ಆಯಿಲ್‌ನ ಈ ಗಿಫ್ಟ್ ವೋಚರ್

ಇಂಡಿಯನ್ ಆಯಿಲ್ ಕಾರ್ಪೊರೇಷನ್, One4U ಗಿಫ್ಟ್ ವೋಚರ್ ಯೋಜನೆಯಲ್ಲಿ ರೂ. 500 ಗಳಿಗಿಂತ ಹೆಚ್ಚಿನ ಖರೀದಿಗೆ 0.75% ನಷ್ಟು ರಿಯಾಯಿತಿ ನೀಡುತ್ತದೆ. ಈ ಕೊಡುಗೆ ಸೀಮಿತ ಅವಧಿಗೆ ಲಭ್ಯವಿರಲಿದೆ. One4U ಈಸಿ ಫ್ಯೂಲ್ ಸೈಟ್ ಮೂಲಕ ಇ-ಮೇಲ್ ಹಾಗೂ ಎಸ್‌ಎಂಎಸ್ ಮೂಲಕ ಗಿಫ್ಟ್ ವೋಚರ್‌ಗಳನ್ನು ಕಳುಹಿಸಬಹುದು. ವೋಚರ್ ಸ್ವೀಕರಿಸುವವರ ಮಾಹಿತಿಯನ್ನು ವೆಬ್ ಸೈಟ್‌ನಲ್ಲಿ ನಮೂದಿಸಬೇಕು.

ಇಂಧನ ಖರೀದಿಸಲು ನೆರವಾಗಲಿದೆ ಇಂಡಿಯನ್ ಆಯಿಲ್‌ನ ಈ ಗಿಫ್ಟ್ ವೋಚರ್

ಇದರಲ್ಲಿ ಹೆಸರು, ಇ-ಮೇಲ್ ಐಡಿ, ಫೋನ್ ನಂಬರ್ ಹಾಗೂ ಸ್ವೀಕರಿಸುವವರ ಮಾಹಿತಿಯನ್ನು ನೀಡಬೇಕಾಗುತ್ತದೆ. ಗಿಫ್ಟ್ ವೋಚರ್ ಮಾಹಿತಿಯನ್ನು ಸ್ವೀಕರಿಸುವವರಿಗೆ ಕಳುಹಿಸಲಾಗುವುದು ಎಂದು ಸೈಟ್‌ನಲ್ಲಿ ಮಾಹಿತಿ ನೀಡಲಾಗಿದೆ. ಗಿಫ್ಟ್ ವೋಚರ್ ದುರುಪಯೋಗ ಆಗದಂತೆ ನೋಡಿಕೊಳ್ಳಲು ಕಂಪನಿಯು ವಿವಿಧ ಷರತ್ತುಗಳನ್ನು ವಿಧಿಸಿದೆ. ಕಂಪನಿಯು ಒಟಿಪಿ ಮೂಲಕ ವಹಿವಾಟುಗಳನ್ನು ದೃಢೀಕರಿಸುತ್ತದೆ. ಇದರಿಂದ ಗಿಫ್ಟ್ ವೋಚರ್ ಅನ್ನು ಸಂಬಂಧಪಟ್ಟವರನ್ನು ಬಿಟ್ಟು ಬೇರೆಯವರು ಬಳಸಲು ಸಾಧ್ಯವಾಗುವುದಿಲ್ಲ.

ಇಂಧನ ಖರೀದಿಸಲು ನೆರವಾಗಲಿದೆ ಇಂಡಿಯನ್ ಆಯಿಲ್‌ನ ಈ ಗಿಫ್ಟ್ ವೋಚರ್

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಂಪನಿಯು ಸಾಂಪ್ರದಾಯಿಕ ಪೆಟ್ರೋಲ್, ಡೀಸೆಲ್ ಹೊರತುಪಡಿಸಿ ಸಿಎನ್‌ಜಿಯಂತಹ ಮಾಲಿನ್ಯರಹಿತ ಇಂಧನಗಳನ್ನು ಸಹ ಮಾರಾಟ ಮಾಡುತ್ತದೆ. ಈಗ ವಿಶ್ವದೆಲ್ಲೆಡೆ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಅದರಂತೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಹ ಯೋಜನೆಗಳನ್ನು ಆರಂಭಿಸುತ್ತಿದೆ.

ಇಂಧನ ಖರೀದಿಸಲು ನೆರವಾಗಲಿದೆ ಇಂಡಿಯನ್ ಆಯಿಲ್‌ನ ಈ ಗಿಫ್ಟ್ ವೋಚರ್

ಭಾರತದಾದ್ಯಂತ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್‌ಗಳನ್ನು ತೆರೆಯಲು ಇಂಡಿಯನ್ ಆಯಿಲ್ ಕಾರ್ಪೊರೇಷನ್ ನಿರ್ಧರಿಸಿದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಮೂಲ ಸೌಕರ್ಯವನ್ನು ಸುಧಾರಿಸಲು 2024 ರ ವೇಳೆಗೆ ದೇಶದಾದ್ಯಂತ 10,000 ಚಾರ್ಜಿಂಗ್ ಸ್ಟೇಷನ್‌ಗಳನ್ನು ತೆರೆಯುವುದಾಗಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ. ಈ ಸುದ್ದಿ ಎಲೆಕ್ಟ್ರಿಕ್ ವಾಹನ ಸವಾರರಿಗೆ ಸಂತಸ ಮೂಡಿಸಿದೆ.

ಇಂಧನ ಖರೀದಿಸಲು ನೆರವಾಗಲಿದೆ ಇಂಡಿಯನ್ ಆಯಿಲ್‌ನ ಈ ಗಿಫ್ಟ್ ವೋಚರ್

ಈ ಬಗ್ಗೆ ಮಾಟನಾಡಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಅಧ್ಯಕ್ಷರಾದ ಶ್ರೀಕಾಂತ್ ಮಾಧವ್ ವೈದ್ಯ, ಮೊದಲ ಹಂತದಲ್ಲಿ ಮುಂದಿನ 12 ತಿಂಗಳಲ್ಲಿ 2,000 ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಮುಂದಿನ 2 ವರ್ಷಗಳಲ್ಲಿ 8 ಸಾವಿರ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲಾಗುವುದು. ನಂತರ ಮುಂದಿನ ಮೂರು ವರ್ಷಗಳಲ್ಲಿ 10,000 ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಹೇಳಿದ್ದಾರೆ.

ಇಂಧನ ಖರೀದಿಸಲು ನೆರವಾಗಲಿದೆ ಇಂಡಿಯನ್ ಆಯಿಲ್‌ನ ಈ ಗಿಫ್ಟ್ ವೋಚರ್

ಇದಕ್ಕೂ ಮುನ್ನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಅಧ್ಯಕ್ಷ ಶ್ರೀಕಾಂತ್ ಮಾಧವ್ ವೈದ್ಯ, ನಾವು ಕೇವಲ ಪೆಟ್ರೋಲಿಯಂ ಉತ್ಪನ್ನಗಳನ್ನು ಮಾರಾಟ ಮಾಡುವ ಕಂಪನಿಯಾಗಲು ಬಯಸುವುದಿಲ್ಲ. ಬದಲಿಗೆ, ನಾವು ಭಾರತದ ಇಂಧನ ಕಂಪನಿಯಾಗಲು ಬಯಸುತ್ತೇವೆ. ಈಗ ಜಗತ್ತು ಬದಲಾಗುತ್ತಿದೆ ಎಂದು ಹೇಳಿದ್ದರು.

ಇಂಧನ ಖರೀದಿಸಲು ನೆರವಾಗಲಿದೆ ಇಂಡಿಯನ್ ಆಯಿಲ್‌ನ ಈ ಗಿಫ್ಟ್ ವೋಚರ್

ಸಾಂಪ್ರದಾಯಿಕ ಇಂಧನಗಳನ್ನು ಮಾರಾಟ ಮಾಡುವುದರ ಜೊತೆಗೆ, ನಮ್ಮ ಪೆಟ್ರೋಲ್ ಬಂಕ್‌ಗಳಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ಹಾಗೂ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ತೆರೆಯಲು ನಾವು ಬಯಸುತ್ತೇವೆ ಎಂದು ಅವರು ಹೇಳಿದ್ದರು. ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿರುವುದರಿಂದ ಜನರು ಎಲೆಕ್ಟ್ರಿಕ್ ವಾಹನಗಳ ಖರೀದಿಯತ್ತ ಗಮನ ಹರಿಸುತ್ತಿದ್ದಾರೆ.

ಇಂಧನ ಖರೀದಿಸಲು ನೆರವಾಗಲಿದೆ ಇಂಡಿಯನ್ ಆಯಿಲ್‌ನ ಈ ಗಿಫ್ಟ್ ವೋಚರ್

ಆದರೆ ಭಾರತದಲ್ಲಿ ಈಗ ಇವಿ ಚಾರ್ಜಿಂಗ್ ಕೇಂದ್ರಗಳ ಸಂಖ್ಯೆ ಕಡಿಮೆ ಸಂಖ್ಯೆಯಲ್ಲಿದೆ. ಈ ಸನ್ನಿವೇಶದಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ತೆರೆಯಲಿರುವ ಚಾರ್ಜಿಂಗ್ ಕೇಂದ್ರಗಳಿಂದ ಎಲೆಕ್ಟ್ರಿಕ್ ವಾಹನಗಳ ಖರೀದಿದಾರರಿಗೆ ಅನುಕೂಲವಾಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವುದರಿಂದ ವಾಹನ ಸವಾರರು ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುವ ಸಾಧ್ಯತೆಗಳಿವೆ.

ಇಂಧನ ಖರೀದಿಸಲು ನೆರವಾಗಲಿದೆ ಇಂಡಿಯನ್ ಆಯಿಲ್‌ನ ಈ ಗಿಫ್ಟ್ ವೋಚರ್

ಈಗ ಚಾರ್ಜಿಂಗ್ ಕೇಂದ್ರಗಳು ಕಡಿಮೆ ಸಂಖ್ಯೆಯಲ್ಲಿರುವುದರಿಂದ ಜನರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಹಿಂಜರಿಯುತ್ತಿದ್ದಾರೆ. ಚಾರ್ಜಿಂಗ್ ಕೇಂದ್ರಗಳ ಸಂಖ್ಯೆಹೆಚ್ಚಾದಂತೆ, ಜನರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಮುಂದೆ ಬರುತ್ತಾರೆ. ಆದರೆ ಭಾರತದಲ್ಲಿ ಇನ್ನೂ ಅಂತಹ ಪರಿಸ್ಥಿತಿ ಉದ್ಭವಿಸಿಲ್ಲ. ಭಾರತ ಮಾತ್ರವಲ್ಲದೆ ವಿಶ್ವದ ವಿವಿಧ ದೇಶಗಳು ಈಗ ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಗುತ್ತಿವೆ.

ಇಂಧನ ಖರೀದಿಸಲು ನೆರವಾಗಲಿದೆ ಇಂಡಿಯನ್ ಆಯಿಲ್‌ನ ಈ ಗಿಫ್ಟ್ ವೋಚರ್

ವಿಶ್ವದಾದ್ಯಂತ ವಾಯು ಮಾಲಿನ್ಯ ಸಮಸ್ಯೆಯನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ. ವಾಯು ಮಾಲಿನ್ಯ ಸಮಸ್ಯೆಗೆ ಪೆಟ್ರೋಲ್, ಡೀಸೆಲ್ ವಾಹನಗಳು ಪ್ರಮುಖ ಕಾರಣವೆಂದು ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಪಂಚದ ವಿವಿಧ ದೇಶಗಳು ಈಗಾಗಲೇ ಪೆಟ್ರೋಲ್, ಡೀಸೆಲ್ ವಾಹನಗಳ ಬಳಕೆಯನ್ನು ಕಡಿಮೆ ಮಾಡಿ ಎಲೆಕ್ಟ್ರಿಕ್ ವಾಹನ ಬಳಕೆಗೆ ಆದ್ಯತೆ ನೀಡುತ್ತಿವೆ.

Most Read Articles

Kannada
English summary
Indian oil corporation introduces one4u fuel voucher details
Story first published: Friday, December 3, 2021, 12:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X