ಆಟೋ ಪೈಲಟ್ ಮೋಡ್'ನಲ್ಲಿ ಸ್ಟಂಟ್ ಮಾಡಿ ಬಂಧನಕ್ಕೊಳಗಾದ ಭಾರತೀಯ ಮೂಲದ ಯುವಕ

ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬನನ್ನು ಟೆಸ್ಲಾ ಕಾರಿನಲ್ಲಿ ಆಟೋ ಪೈಲಟ್ ಮೋಡ್ ಮೂಲಕ ಸ್ಟಂಟ್ ಮಾಡಿದ ಕಾರಣಕ್ಕೆ ಬಂಧಿಸಲಾಗಿದೆ. ಬಂಧಿತನನ್ನು ಸ್ಯಾನ್ ಫ್ರಾನ್ಸಿಸ್ಕೋ ಪೊಲೀಸರು ಜೈಲಿಗಟ್ಟಿದ್ದಾರೆ.

ಆಟೋ ಪೈಲಟ್ ಮೋಡ್'ನಲ್ಲಿ ಸ್ಟಂಟ್ ಮಾಡಿ ಬಂಧನಕ್ಕೊಳಗಾದ ಭಾರತೀಯ ಮೂಲದ ಯುವಕ

ಬಂಧಿತ ವ್ಯಕ್ತಿಯನ್ನು ಪರಮ್ ಶರ್ಮಾ ಎಂದು ಗುರುತಿಸಲಾಗಿದೆ. ಆತ ಈ ಹಿಂದೆಯೂ ಇದೇ ರೀತಿ ಹಲವು ಬಾರಿ ಸ್ಟಂಟ್'ಗಳನ್ನು ಮಾಡಿದ್ದ ಎಂದು ತಿಳಿದು ಬಂದಿದೆ. ಆತ ಆಟೊಪೈಲಟ್‌ ಮೋಡ್'ನಲ್ಲಿ ತನ್ನ ಟೆಸ್ಲಾ ಕಾರನ್ನು ಚಾಲನೆ ಮಾಡುತ್ತಿರುವ ಹಲವಾರು ವೀಡಿಯೊಗಳನ್ನು ಹೊಂದಿದ್ದಾನೆ.

ಆಟೋ ಪೈಲಟ್ ಮೋಡ್'ನಲ್ಲಿ ಸ್ಟಂಟ್ ಮಾಡಿ ಬಂಧನಕ್ಕೊಳಗಾದ ಭಾರತೀಯ ಮೂಲದ ಯುವಕ

25 ವರ್ಷದ ಈ ಇಂಡೋ-ಅಮೆರಿಕನ್ ವ್ಯಕ್ತಿಯು ತನ್ನ ಅದ್ದೂರಿ ಜೀವನಶೈಲಿಯನ್ನು ತೋರಿಸುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡುವ ಮೂಲಕ ಜನಪ್ರಿಯನಾಗಿದ್ದಾನೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಆಟೋ ಪೈಲಟ್ ಮೋಡ್'ನಲ್ಲಿ ಸ್ಟಂಟ್ ಮಾಡಿ ಬಂಧನಕ್ಕೊಳಗಾದ ಭಾರತೀಯ ಮೂಲದ ಯುವಕ

ಮೂಲಗಳ ಪ್ರಕಾರ ಕಳೆದ ವಾರ ಈತ ತನ್ನ ಟೆಸ್ಲಾ ಮಾಡೆಲ್ 3 ಕಾರನ್ನು ಆಟೊಪೈಲಟ್‌ನಲ್ಲಿ ಹಾಕಿ ಹಿಂದಿನ ಸೀಟಿನಲ್ಲಿ ಕುಳಿತಿದ್ದ. ಇದರ ಬಗ್ಗೆ ಮಾಹಿತಿ ಪಡೆದ ಕ್ಯಾಲಿಫೋರ್ನಿಯಾ ಹೆದ್ದಾರಿ ಪೊಲೀಸರು ಆತನನ್ನು ಬಂಧಿಸಿ ಫೇಸ್‌ಬುಕ್ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಆಟೋ ಪೈಲಟ್ ಮೋಡ್'ನಲ್ಲಿ ಸ್ಟಂಟ್ ಮಾಡಿ ಬಂಧನಕ್ಕೊಳಗಾದ ಭಾರತೀಯ ಮೂಲದ ಯುವಕ

ಟೆಸ್ಲಾ ಕಾರಿನ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿ ಬೇ ಏರಿಯಾ ರಸ್ತೆಯತ್ತ ಸಾಗುತ್ತಿರುವುದನ್ನು ಗಮನಿಸಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಯಾವುದೇ ಅನಾಹುತ ಸಂಭವಿಸುವ ಮೊದಲೇ ಪರಮ್ ಶರ್ಮಾನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಆಟೋ ಪೈಲಟ್ ಮೋಡ್'ನಲ್ಲಿ ಸ್ಟಂಟ್ ಮಾಡಿ ಬಂಧನಕ್ಕೊಳಗಾದ ಭಾರತೀಯ ಮೂಲದ ಯುವಕ

ಮಾಧ್ಯಮ ವರದಿಗಳ ಪ್ರಕಾರ, ಸಾಂತಾ ರೀಟಾದಲ್ಲಿಯೂ ಪರಮ್ ಶರ್ಮಾನ ವಿರುದ್ಧ ನಿರ್ಲಕ್ಷ್ಯದಿಂದ ಚಾಲನೆ ಮಾಡಿದ ಕಾರಣಕ್ಕೆ ಹಾಗೂ ಪೊಲೀಸ್ ಅಧಿಕಾರಿಗೆ ಅವಿಧೇಯತೆ ತೋರಿದ ಕಾರಣಕ್ಕೆ ಎರಡು ಪ್ರಕರಣಗಳನ್ನು ದಾಖಲಿಸಲಾಗಿತ್ತು.

ಆಟೋ ಪೈಲಟ್ ಮೋಡ್'ನಲ್ಲಿ ಸ್ಟಂಟ್ ಮಾಡಿ ಬಂಧನಕ್ಕೊಳಗಾದ ಭಾರತೀಯ ಮೂಲದ ಯುವಕ

ಕ್ಯಾಲಿಫೋರ್ನಿಯಾ ಹೆದ್ದಾರಿ ಪೊಲೀಸರು ಪರಮ್ ಶರ್ಮಾನನ್ನು ಆ ಎರಡು ಪ್ರಕರಣಗಳ ಸಂಬಂಧ ಬಂಧಿಸಿದ್ದರು. ಆ ಪ್ರಕರಣಗಳಲ್ಲಿ ಪರಮ್ ಶರ್ಮಾನನ್ನು ಬಂಧಿಸಿ ನಂತರ ಬಿಡುಗಡೆಗೊಳಿಸಲಾಗಿತ್ತು.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಆಟೋ ಪೈಲಟ್ ಮೋಡ್'ನಲ್ಲಿ ಸ್ಟಂಟ್ ಮಾಡಿ ಬಂಧನಕ್ಕೊಳಗಾದ ಭಾರತೀಯ ಮೂಲದ ಯುವಕ

ಬಂಧನದ ನಂತರವೂ ಪರಮ್ ಶರ್ಮಾ ತನ್ನ ಹಳೆ ಚಾಳಿಯನ್ನು ಮುಂದುವರೆಸಿದ್ದಾನೆ. ಶರ್ಮಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೆದ್ದಾರಿ ಪೊಲೀಸರನ್ನು ಟ್ರೋಲ್ ಮಾಡುವ ಹಾಗೂ ಡ್ರೈವರ್ ಲೆಸ್ ಕಾರಿನಲ್ಲಿ ಚಲಿಸುತ್ತಿರುವ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದ.

ಆಟೋ ಪೈಲಟ್ ಮೋಡ್'ನಲ್ಲಿ ಸ್ಟಂಟ್ ಮಾಡಿ ಬಂಧನಕ್ಕೊಳಗಾದ ಭಾರತೀಯ ಮೂಲದ ಯುವಕ

ಮತ್ತೊಂದು ವೀಡಿಯೊದಲ್ಲಿ ಆತ ಟೆಸ್ಲಾ ಕಾರಿನ ಹಿಂಬದಿಯ ಸೀಟಿನಲ್ಲಿ ಕುಳಿತು ತನ್ನ ಪಾಯಿಂಟ್-ಆಫ್-ವೀವ್ ವೀಡಿಯೊವನ್ನು ಪೋಸ್ಟ್ ಮಾಡಿದ್ದ. ಈ ಸಮಯದಲ್ಲಿ ಟೆಸ್ಲಾ ಕಾರು ಮುಕ್ತ ಮಾರ್ಗದಲ್ಲಿ ಚಲಿಸುತ್ತಿತ್ತು.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಆಟೋ ಪೈಲಟ್ ಮೋಡ್'ನಲ್ಲಿ ಸ್ಟಂಟ್ ಮಾಡಿ ಬಂಧನಕ್ಕೊಳಗಾದ ಭಾರತೀಯ ಮೂಲದ ಯುವಕ

ಡ್ರೈವರ್ ಲೆಸ್ ಇಲ್ಲದ ಕಾರು ಹಿಲ್‌ಬರೋದಲ್ಲಿನ ಅಂತರರಾಜ್ಯ ಹೆದ್ದಾರಿ 280ರತ್ತ ಹೋಗುತ್ತಿರುವುದರ ಬಗ್ಗೆ ಕಾರಿನಲ್ಲಿದ್ದ ಇನ್ಫೋಟೇನ್‌ಮೆಂಟ್ ಸಿಸ್ಟಂ ಮಾಹಿತಿ ನೀಡಿತ್ತು. ಪರಮ್ ಶರ್ಮಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ರೀತಿಯ ಹಲವಾರು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾನೆ.

ಆಟೋ ಪೈಲಟ್ ಮೋಡ್'ನಲ್ಲಿ ಸ್ಟಂಟ್ ಮಾಡಿ ಬಂಧನಕ್ಕೊಳಗಾದ ಭಾರತೀಯ ಮೂಲದ ಯುವಕ

ಆತ ತನ್ನ ಡ್ರೈವರ್ ಲೆಸ್ ಟೆಸ್ಲಾ ಕಾರಿನಲ್ಲಿ ಸಾಗುತ್ತಿದ್ದ ಚಿತ್ರವನ್ನು ಹೆದ್ದಾರಿ ಪೊಲೀಸರು ಸ್ಕ್ರೀನ್ ಶಾಟ್ ತೆಗೆದಿದ್ದರು. ಟೆಸ್ಲಾ ಆಟೊಪೈಲಟ್ ಮೋಡ್ ಅನ್ನುಈ ಹಿಂದೆಯೂ ಹಲವು ಬಾರಿ ದುರುಪಯೋಗಪಡಿಸಿ ಕೊಳ್ಳಲಾಗಿದೆ.

ಮೂಲ: ಕಾರ್ ಟಾಕ್

Most Read Articles

Kannada
English summary
Indian origin youth arrested for doing stunt in autopilot mode. Read in Kannada.
Story first published: Friday, May 14, 2021, 16:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X