'ವಂದೇ ಮೆಟ್ರೋ' ಬರುತ್ತೆ: ಪ್ರಧಾನಿ ಮೋದಿ ಸರ್ಕಾರದಿಂದ ಘೋಷಣೆ.. ಇಲ್ಲಿದೆ ವಿಶೇಷ ಮಾಹಿತಿ

ಭಾರತೀಯ ರೈಲ್ವೆ ಇಲಾಖೆಯ ಮಹತ್ವಾಕಾಂಕ್ಷೆಯ ಸೆಮಿ ಹೈ - ಸ್ವೀಡ್ ರೈಲು 'ವಂದೇ ಭಾರತ್'ಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೀಗ ಸ್ಥಳೀಯ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ರೈಲು ಯೋಜನೆಯನ್ನು ಘೋಷಣೆ ಮಾಡಿದೆ. ಅದರ ಭಾಗವಾಗಿ ಶೀಘ್ರದಲ್ಲೇ 'ವಂದೇ ಮೆಟ್ರೋ' ಕಾರ್ಯಾಚರಣೆ ನಡೆಸಲಿದೆ.

ವಂದೇ ಮೆಟ್ರೋ ರೈಲನ್ನು ದೊಡ್ಡ ನಗರಗಳು ಹಾಗೂ ಉಪನಗರಗಳ ಪ್ರಯಾಣಿಕರ ಅನುಕೂಲಕ್ಕಾಗಿ ದೇಶಾದ್ಯಂತ ಆರಂಭಿಸಲು ಕೇಂದ್ರ ಸರ್ಕಾರ ಯೋಜಿಸಿದ್ದು, 2024ರಿಂದ ಈ ರೈಲು ಕಾರ್ಯಾಚರಣೆಯನ್ನು ಶುರು ಮಾಡುವ ನಿರೀಕ್ಷೆಯಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು, ಬಜೆಟ್ ಬಳಿಕ ಸುದ್ದಿಗೋಷ್ಠಿಯಲ್ಲಿ 'ವಂದೇ ಮೆಟ್ರೋ' ಬಗ್ಗೆ ಘೋಷಣೆ ಮಾಡಿದ್ದಾರೆ. ಆದರೆ, ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಕುರಿತಂತೆ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ.

ವಂದೇ ಮೆಟ್ರೋ ಬರುತ್ತೆ: ಪ್ರಧಾನಿ ಮೋದಿ ಸರ್ಕಾರದಿಂದ ಘೋಷಣೆ.. ಇಲ್ಲಿದೆ ವಿಶೇಷ ಮಾಹಿತಿ

ಈ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, 'ರೈಲ್ವೆ ಇಲಾಖೆಯು ವಂದೇ ಮೆಟ್ರೋವನ್ನು ಅಭಿವೃದ್ಧಿಪಡಿಸುತ್ತಿದೆ. ಬೃಹತ್ ನಗರಗಳಿಗೆ ಸುತ್ತಲಿನ ಪಟ್ಟಣಗಳ ಜನರ ಕೆಲಸಕ್ಕೆ ಬರಲು ಹಾಗೂ ತಮ್ಮ ಮನೆಗಳಿಗೆ ಹಿಂದಿರುಗಲು ಇದರಿಂದ ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ. ಉದಾಹರಣೆಗೆ ತುಮಕೂರು - ಬೆಂಗಳೂರು, ಮೈಸೂರು - ಬೆಂಗಳೂರು ಹಾಗೂ ಕೋಲಾರ - ಬೆಂಗಳೂರು ನಡುವೆ ಈ ರೈಲು ಸಂಚರಿಸಿದರೆ, ಕೆಲವೇ ನಿಮಿಷಗಳಲ್ಲಿ ಪ್ರಯಾಣಿಕರು ತಮ್ಮ ಊರುಗಳನ್ನು ತಲುಪಬಹುದು.

ಈ ವರ್ಷ, ವಂದೇ ಮೆಟ್ರೋ ರೈಲಿನ ವಿನ್ಯಾಸ ಹಾಗೂ ಉತ್ಪಾದನೆಯನ್ನು ಮಾಡಿ ಮುಗಿಸಲಾಗುತ್ತದೆ. ಮುಂದಿನ ಹಣಕಾಸು ವರ್ಷದಲ್ಲಿ ಈ ರೈಲಿನ ಉತ್ಪಾದನೆಯು ಮತ್ತಷ್ಟು ವೇಗವನ್ನು ಪಡೆಯಲಿದೆ. ಅಲ್ಲದೆ, ಇವು ಗರಿಷ್ಠ ವೇಗದಲ್ಲಿ ಚಲಿಸಲಿದ್ದು, ಎಂಟು ಕೋಚ್ ಗಳನ್ನು ಒಳಗೊಂಡಿರಲಿವೆ. ಸದ್ಯ ದೆಹಲಿ, ಬೆಂಗಳೂರು ಹಾಗೂ ಹೈದರಾಬಾದ್ ನಗರಗಳಲ್ಲಿ ಓಡಾಟ ನಡೆಸುವ ಮೆಟ್ರೋ ರೈಲಿನಂತೆ ಕಾರ್ಯಾಚರಣೆ ನಡೆಸಲಿದೆ ಎಂದು ವರದಿಯಾಗಿದೆ. ಇವುಗಳ ಕಾರ್ಯಕ್ಷಮತೆ ತಿಳಿಯಬೇಕಾದರೆ, ಹಳಿಗೆ ಬರಬೇಕಾಗಿದೆ.

ವಂದೇ ಮೆಟ್ರೋ ಬರುತ್ತೆ: ಪ್ರಧಾನಿ ಮೋದಿ ಸರ್ಕಾರದಿಂದ ಘೋಷಣೆ.. ಇಲ್ಲಿದೆ ವಿಶೇಷ ಮಾಹಿತಿ

ಈ ವಂದೇ ಮೆಟ್ರೋ ರೈಲುಗಳು ಕಾರ್ಯಚರಣೆಯನ್ನು ಪ್ರಾರಂಭಿಸಿದ ಮೇಲೆ ವಿಶೇಷವಾಗಿ ವ್ಯಾಪಾರಿಗಳು, ವಿದ್ಯಾರ್ಥಿಗಳು ಮತ್ತು ದೊಡ್ಡ ನಗರಗಳಿಗೆ ಕೆಲಸಕ್ಕೆ ಹೋಗುವವರಿಗೆ ತುಂಬಾ ಅನುಕೂಲವಾಗಲಿದೆ ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ಹೇಳಿದ್ದಾರೆ. ಸದ್ಯ ಸಾಮಾನ್ಯ ಹಳಿಯ ಮೇಲೆಯೇ ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ. ಕೆಲವರು ಹೇಳುವ ಪ್ರಕಾರ, ಇದರಿಂದ ಸಾಮಾನ್ಯ ರೈಲುಗಳಲ್ಲಿ ಪ್ರಯಾಣಿಸುವವರಿಗೆ ತೊಂದರೆಯಾಗುತ್ತಿದೆ. ಇವನ್ನೆಲ್ಲ ಮನದಲ್ಲಿಟ್ಟುಕೊಂಡಿರುವ ಭಾರತೀಯ ರೈಲ್ವೆ, ವಂದೇ ಭಾರತ್ ರೈಲಿಗೆ ಪ್ರತೇಕ ಹಳಿ ನಿರ್ಮಾಣ ಮಾಡಲು ಯೋಜಿಸಿದ್ದು, ಆ ಹಳಿ ಮೇಲೆಯೇ ವಂದೇ ಮೆಟ್ರೋ ಸಂಚರಿಸಬಹುದು.

ಭಾರತದಲ್ಲಿ ವಿನ್ಯಾಸ ಮಾಡಲಾಗಿರುವ ವಂದೇ ಭಾರತ್ ಸೆಮಿ ಹೈ - ಸ್ಪೀಡ್ ರೈಲು ಒಟ್ಟು 16 ಬೋಗಿಗಳನ್ನು ಒಳಗೊಂಡಿದ್ದು, ಆರಾಮದಾಯಕ ಪ್ರಯಾಣವನ್ನು ಒದಗಿಸುತ್ತದೆ. ಇದು ಕೇವಲ 140 ಸೆಕೆಂಡುಗಳಲ್ಲಿ 160 kmph ಗರಿಷ್ಠ ವೇಗವನ್ನು ಪಡೆಯಲಿದೆ. ರೈಲ್ವೆ ಇಲಾಖೆಯು ಸದ್ಯ ಸ್ಲೀಪರ್ ಕೋಚ್ ವಂದೇ ಭಾರತ್ ರೈಲು ತಯಾರಿಸುವ ಕಾರ್ಯದಲ್ಲಿ ನಿರತವಾಗಿದೆ. ಮುಂಬರಲಿರುವ ವಂದೇ ಮೆಟ್ರೋ ಕೂಡ ಗರಿಷ್ಠ ವೇಗದ ರೈಲು ಆಗಿದ್ದು, ಬೇಗನೇ ನಿರ್ದಿಷ್ಟ ಗುರಿಗಳನ್ನು ತಲುಪಲಿದೆ.

ಬುಧವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಬಜೆಟ್ ನಲ್ಲಿ ಭಾರತೀಯ ರೈಲ್ವೆಗೆ ರೂ.2.4 ಲಕ್ಷ ಕೋಟಿ ಅನುದಾನವನ್ನು ಹಂಚಿಕೆ ಮಾಡಿದ್ದಾರೆ. ಈ ನೆರವಿನಿಂದ ರೈಲ್ವೆ ಇಲಾಖೆಯು ಬೆಳೆಯುತ್ತಿಯುವ ನಗರೀಕರಣಕ್ಕೆ ಹೊಂದಿಕೊಳ್ಳುವಂತೆ ಪ್ರಯಾಣಿಕರ ಅನುಕೂಲಕ್ಕಾಗಿ 'ವಂದೇ ಮೆಟ್ರೋ' ರೈಲುಗಳ ಓಡಾಟ ನಡೆಸಲು ಮುಂದಾಗಿದೆ. ಆದರೆ, ಪ್ರತಿದಿನದ ಓಡಾಟಕ್ಕಾಗಿ ಇದರ ಟಿಕೆಟ್ ಹಾಗೂ ಮಾಸಿಕ ಪಾಸ್ ದರಗಳು ಈಗಿರುವ ಬೆಲೆಗಿಂತ ಕೊಂಚ ಹೆಚ್ಚಿರಬಹುದು. ಇವು ಸಂಚಾರ ಆರಂಭಿಸಿದ ಮೇಲೆ ಎರಡನೇ ಹಂತದ ನಗರಗಳು ವೇಗವಾಗಿ ಬೆಳೆಯಲಿವೆ ಎಂದು ಹೇಳಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
Read more on ರೈಲು train
English summary
Indian railway to soon launch vande metro services details kannada
Story first published: Friday, February 3, 2023, 8:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X