Just In
- 6 min ago
ಅತ್ಯಾಧುನಿಕ ಫೀಚರ್ಸ್ಗಳೊಂದಿಗೆ ಹೀರೋ ಪ್ಯಾಶನ್ ಎಕ್ಸ್ಟೆಕ್ ಬೈಕ್ ಬಿಡುಗಡೆ
- 33 min ago
ಪ್ರಯಾಣಿಕ ಕಾರು ಮಾದರಿಗಳಿಗಾಗಿ 5 ಸ್ಟಾರ್ ರೇಟಿಂಗ್ ಹೊಂದಿರುವ ಟೈರ್ ಬಿಡುಗಡೆ ಮಾಡಿದ ಮೈಕೆಲಿನ್
- 2 hrs ago
ಬರೋಬ್ಬರಿ 40 ವೆರಿಯೆಂಟ್ಗಳನ್ನು ಹೊಂದಿರಲಿದೆ ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್
- 2 hrs ago
ನಟ ಕಾರ್ತಿಕ್ ಆರ್ಯನ್ಗೆ ರೂ.3.72 ಕೋಟಿ ಮೌಲ್ಯದ ಕಾರ್ ಗಿಫ್ಟ್ ನೀಡಿದ ನಿರ್ಮಾಪಕ ಭೂಷಣ್ ಕುಮಾರ್
Don't Miss!
- Sports
ENG vs NZ 2ನೇ ಟೆಸ್ಟ್: ನೆಲಕಚ್ಚಿದ್ದ ಇಂಗ್ಲೆಂಡ್ಗೆ ಬೈರ್ಸ್ಟೋ, ಓವರ್ಟನ್ ಆಸರೆ; 3ನೇ ದಿನದ ಲೈವ್ ಸ್ಕೋರ್
- Lifestyle
ಅಪಘಾತದಿಂದ ಕ್ಷಣಾರ್ಧದಲ್ಲಿ ಮಗುವಿನ ರಕ್ಷಿಸಿ, ತಾಯಿಯ ಮೊಬೈಲ್ ಪುಡಿ ಮಾಡಿದ ಸೈನಿಕ: ಸೈನಿಕನ ಕಾರ್ಯಕ್ಕೆ ನೆಟ್ಟಿಗರು ಫುಲ್ ಫಿದಾ
- News
ಉಪಯೋಗಿಸಿದ ಕಾರು ಮಾರಾಟ ನಿಲ್ಲಿಸಿದ ಓಲಾ!
- Movies
ಕನ್ನಡದ 'ಯುವರಾಜ್'ಗಾಗಿ ಬಂದಳು ಮಿಸ್ವರ್ಲ್ಡ್ ಮಾನುಷಿ ಚಿಲ್ಲರ್!
- Finance
ಪಿಎಂ ಕಿಸಾನ್ 12ನೇ ಕಂತು: ಶೀಘ್ರ ಈ ಕಾರ್ಯ ಮಾಡಿ
- Technology
ಚಂದಾದಾರರ ಕುಸಿತವನ್ನು ತಡೆಗಟ್ಟಲು ನೆಟ್ಫ್ಲಿಕ್ಸ್ನಿಂದ ಹೊಸ ಪ್ಲಾನ್!
- Education
Vijayapura District Court Recruitment 2022 : 28 ಜವಾನ, ಆದೇಶ ಜಾರಿಕಾರ ಮತ್ತು ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ರೈಲಿನ ಹಾರ್ನ್ ಬಗ್ಗೆ ನಿಮಗೆಷ್ಟು ಗೊತ್ತು?: ಈ 11 ಬಗೆಯ ಹಾರ್ನ್ ಟ್ಯೂನ್ಗಳಿಗಿವೆ ವಿವಿಧ ಸಂಕೇತಗಳು!
ರೈಲಿನ ಹಾರ್ನ್ ಭೂಮಿಯ ಮೇಲೆ ಮಾನವ ನಿರ್ಮಿಸಿರುವ ಅತ್ಯಂತ ಶಬ್ಧವನ್ನು ಹೊರಹಾಕುವ ಸಾಧನಗಳಲ್ಲಿ ಒಂದಾಗಿದೆ. ಇದರ ಶಬ್ದ ಎಷ್ಟು ಜೋರಾಗಿರುತ್ತದೆ ಎಂದರೆ ಹಲವು ಕಿಲೋಮೀಟರ್ ದೂರದವರೆಗೆ ಕೇಳುತ್ತದೆ. ವಾಸ್ತವವಾಗಿ, ರೈಲಿನ ಹಾರ್ನ್ ಅನ್ನು ಬೇಕೆಂತಲೇ ತೀಕ್ಷ್ಣವಾಗಿ ಇರಿಸಲಾಗುತ್ತದೆ.

ಏಕೆಂದರೆ ನಿಲ್ದಾಣದ ಸಿಬ್ಬಂದಿ ಮತ್ತು ಪ್ರಯಾಣಿಕರಿಗೆ ರೈಲು ಪ್ಲಾಟ್ಫಾರ್ಮ್ ಮೇಲೆ ಬರುತ್ತಿರುವ ಬಗ್ಗೆ ದೂರದಿಂದಲೇ ತಿಳಿಯಬೇಕು ಎಂಬುದು ಇದರ ಉದ್ದೇಶವಾಗಿದೆ. ಈ ಮಾಹಿತಿ ಎಲ್ಲರಿಗೂ ತಿಳಿದಿರುವ ವಿಷಯವೇ ಆದರೆ ಲೊಕೊ ಪೈಲಟ್ಗಳು ವಿವಿಧ ಸಂಕೇತಗಳನ್ನು ನೀಡಲು ಹಾರ್ನ್ ಅನ್ನು ಬಳಸುತ್ತಾರೆ ಎಂಬುದು ಬಹುತೇಕ ಮಂದಿಗೆ ತಿಳಿದೇ ಇಲ್ಲ.

ಲೊಕೊ ಪೈಲಟ್ ರೈಲಿನ ಹಾರ್ನ್ ಅನ್ನು 11 ವಿಧಗಳಲ್ಲಿ ಸಂಕೇತವಾಗಿ ಬಳಸುತ್ತಾನೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಆದರೂ ಇದು ನಿಜ. ರೈಲು ಹಾರ್ನ್ ಮಾಡುವಾಗ ನಾವು ಅಷ್ಟೊಂದು ಗಮನಿಸುವುದಿಲ್ಲ. ಆದರೆ ಲೊಕೊ ಪೈಲೆಟ್ಗಳು ವಿವಿಧ ರೀತಿಯಲ್ಲಿ ಹಾರ್ನ್ ಮೂಲಕ ರೈಲ್ವೇ ಸಿಬ್ಬಂದಿಗೆ ಸಂಕೇತಗಳನ್ನು ನೀಡುತ್ತಾರೆ.

ರೈಲು ಮುಂದೆ ಸಾಗುತ್ತಿದೆ, ಲೇನ್ ಬದಲಾವಣೆ, ನಿಲ್ಲುತ್ತಿದೆ, ಆಗಮಿಸುತ್ತಿದೆ ಹೀಗೆ 11 ವಿಧದ ಸಂಕೇತಗಳಿಗೆ 11 ಬಗೆಯ ಹಾರ್ನ್ಳನ್ನು ಲೊಕೊ ಪೈಲೆಟ್ಗಳು ಮಾಡುತ್ತಾರೆ. ರೈಲಿನ ಈ 11 ಬಗೆಯ ಹಾರ್ನ್ಗಳಿಗೆ ಯಾವ ರೀತಿಯ ಸಂಕೇತಗಳು ಆಧರಿಸಿವೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಒಮ್ಮೆ ಸಣ್ಣ ಶಬ್ದದ ಹಾರ್ನ್
ರೈಲು ಒಂದು ಸಣ್ಣ ಹಾರ್ನ್ ಮಾಡಿದರೆ, ರೈಲು ಸ್ವಚ್ಛಗೊಳಿಸಲು ಅಥವಾ ನಿರ್ವಹಣೆಗಾಗಿ ಅದರ ಸ್ವಚ್ಚತಾ ಅಂಗಳಕ್ಕೆ ಹೋಗುತ್ತಿದೆ ಎಂದು ಅರ್ಥಮಾಡಿಕೊಳ್ಳಿ. ಅಂಗಳಕ್ಕೆ ಕೊಂಡೊಯ್ದ ನಂತರ, ಮತ್ತೊಂದು ಪ್ರಯಾಣಕ್ಕೆ ರೈಲನ್ನು ಸಿದ್ಧಪಡಿಸಲಾಗುತ್ತದೆ.
ಎರಡು ಸಣ್ಣ ಶಬ್ದದ ಹಾರ್ನ್
ಚಾಲಕ ಎರಡು ಬಾರಿ ಶಾರ್ಟ್ ಹಾರ್ನ್ ಮಾಡಿದರೆ ರೈಲು ಪ್ಲಾಟ್ ಫಾರ್ಮ್ ನಿಂದ ಹೊರಡಲು ಸಿದ್ಧವಾಗಿದೆ ಎಂದರ್ಥ. ಈ ವೇಳೆ ಚಾಲಕ ಹಸಿರು ನಿಶಾನೆ ತೋರುವ ಮೂಲಕ ರೈಲನ್ನು ಆರಂಭಿಸುವಂತೆ ಸಿಬ್ಬಂದಿಗೆ ಸೂಚಿಸುತ್ತಾರೆ.

ಮೂರು ಬಾರಿ ಸಣ್ಣದಾಗಿ ಹಾರ್ನ್
ನೀವು ರೈಲಿನಲ್ಲಿ ಪ್ರಯಾಣಿಸುವ ಅಭ್ಯಾಸವನ್ನು ಹೊಂದಿದ್ದರೂ, ಮೂರು ಬಾರಿ ಸಣ್ಣದಾಗಿ ಹಾರ್ನ್ ಮಾಡುವುದನ್ನು ಕೇಳಿರುವುದಿಲ್ಲ. ಏಕೆಂದರೆ ಇಂತಹ ಹಾರ್ನ್ಗಳನ್ನು ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಸಲಾಗುತ್ತದೆ. ಕಡಿಮೆ ಅಂತರದಲ್ಲಿ ಮೂರು ಬಾರಿ ಹಾರ್ನ್ ಬಾರಿಸಿದರೆ ಚಾಲಕ ರೈಲಿನ ನಿಯಂತ್ರಣ ಕಳೆದುಕೊಂಡಿದ್ದಾನೆ ಮತ್ತು ಗಾರ್ಡ್ ರೈಲಿನ ವ್ಯಾಕ್ಯೂಮ್ ಬ್ರೇಕ್ ಹಾಕಬೇಕು ಎಂದರ್ಥ.

ನಾಲ್ಕು ಬಾರ್ ಸಣ್ಣದಾಗಿ ಹಾರ್ನ್
ಪ್ರಯಾಣದ ವೇಳೆ ರೈಲಿನಲ್ಲಿ ತಾಂತ್ರಿಕ ದೋಷ ಉಂಟಾದರೆ ಚಾಲಕ ನಾಲ್ಕು ಬಾರಿ ಸಣ್ಣದಾಗಿ ಹಾರ್ನ್ ಮಾಡುತ್ತಾನೆ. ಇದರ್ಥ ರೈಲು ಮುಂದೆ ಹೋಗಲು ಸಿದ್ಧವಾಗಿಲ್ಲ ಮತ್ತು ದುರಸ್ತಿ ಮಾಡಬೇಕಾಗಿದೆ ಎಂದು ಸಿಬ್ಬಂದಿಗೆ ಸಿಗ್ನಲ್ ನೀಡುತ್ತಾನೆ.
ನಿರಂತರ ದೊಡ್ಡ ಹಾರ್ನ್
ರೈಲು ಉದ್ದವಾದ ಹಾರ್ನ್ ಮಾಡಿಕೊಂಡು ಬರುತ್ತಿದ್ದರೆ, ರೈಲು ನಿಲ್ದಾಣದಲ್ಲಿ ನಿಲ್ಲುವುದಿಲ್ಲ ಎಂದು ಅರ್ಥಮಾಡಿಕೊಳ್ಳಿ. ಈ ಮೂಲಕ ಪ್ಲಾಟ್ಫಾರ್ಮ್ನಲ್ಲಿ ರೈಲಿಗಾಗಿ ಕಾಯುತ್ತಿರುವ ಪ್ರಯಾಣಿಕರಿಗೆ ಚಾಲಕ ಹಾರ್ನ್ ಬಾರಿಸುವ ಮೂಲಕ ಎಚ್ಚರಿಕೆ ನೀಡುತ್ತಾನೆ.

ಒಂದು ಲಾಂಗ್ ಮತ್ತು ಒಂದು ಶಾರ್ಟ್ ಹಾರ್ನ್
ಎಂಜಿನ್ ಅನ್ನು ಪ್ರಾರಂಭಿಸುವ ಮೊದಲು ಬ್ರೇಕ್ ಪೈಪ್ ಸಿಸ್ಟಮ್ ಅನ್ನು ಹೊಂದಿಸಲು ಗಾರ್ಡ್ ಅನ್ನು ಎಚ್ಚರಿಸಲು ಚಾಲಕನಿಂದ ಈ ಹಾರ್ನ್ ಅನ್ನು ಬಳಸಲಾಗುತ್ತದೆ.
ಎರಡು ಲಾಂಗ್ ಮತ್ತು ಎರಡು ಶಾರ್ಟ್ ಹಾರ್ನ್
ಚಾಲಕ ಎರಡು ಉದ್ದ ಮತ್ತು ಎರಡು ಸಣ್ಣ ಹಾರ್ನ್ಗಳನ್ನು ಮಾಡಿದರೆ, ಎಂಜಿನ್ ಅನ್ನು ನಿಯಂತ್ರಿಸಲು ಚಾಲಕ ಸಿಗ್ನಲ್ ನೀಡುತ್ತಿದ್ದಾನೆ ಎಂದರ್ಥ.

ಎರಡು ವಿರಾಮಗಳೊಂದಿಗೆ ಎರಡು ಹಾರ್ನ್
ರೈಲ್ವೇ ಕ್ರಾಸಿಂಗ್ ಮೂಲಕ ರೈಲು ಹಾದು ಹೋಗುತ್ತಿರುವಾಗ, ಪ್ರಯಾಣಿಕರಿಗೆ ಎಚ್ಚರಿಕೆ ನೀಡಲು ಈ ಸಿಗ್ನಲ್ ಅನ್ನು ಬಳಸಲಾಗುತ್ತದೆ. ಇದನ್ನು ಬಹುತೇಕ ಜನರು ಕ್ರಾಸಿಂಗ್ ವೇಳೆ ಕೇಳಿರುತ್ತೀರಾ.
ಎರಡು ಲಾಂಗ್ ಮತ್ತು ಒಂದು ಶಾರ್ಟ್ ಹಾರ್ನ್
ಚಾಲಕ ರೈಲಿನ ಹಳಿ ಬದಲಿಸಲು ತಯಾರಿ ನಡೆಸಿದಾಗಲೆಲ್ಲ ಈ ರೀತಿಯಲ್ಲಿ ಹಾರ್ನ್ ಮಾಡಬೇಕಾಗುತ್ತದೆ. ಇದು ಸಿಬ್ಬಂದಿ ಹಳಿಯ ಬಳಿ ದುರಸ್ತಿ ನಡೆಸುತ್ತಿದ್ದರೆ ಎಚ್ಚುತ್ತುಕೊಳ್ಳಲು ಉಪಯುಕ್ತವಾಗುತ್ತದೆ.

ಎರಡು ಶಾರ್ಟ್ ಮತ್ತು ಒಂದು ಲಾಂಗ್ ಹಾರ್ನ್
ಈ ಹಾರ್ನ್ ಎರಡು ವಿಷಯಗಳನ್ನು ಅರ್ಥೈಸಬಲ್ಲದು. ಚಾಲಕ ಈ ರೀತಿ ಹಾರ್ನ್ ಬಾರಿಸಿದರೆ ಪ್ರಯಾಣಿಕರೊಬ್ಬರು ಚೈನ್ ಎಳೆದಿದ್ದಾರೆ ಅಥವಾ ಸಿಬ್ಬಂದಿ ವ್ಯಾಕ್ಯೂಮ್ ಬ್ರೇಕ್ ಹಾಕಿದ್ದಾರೆ ಎಂದು ತಿಳಿದುಕೊಳ್ಳಬೇಕು.

ಆರು ಬಾರಿ ಶಾರ್ಟ್ ಹಾರ್ನ್
ಇದು ಒಂದು ರೀತಿಯ ಡಿಸ್ಟ್ರೆಸ್ ಸಿಗ್ನಲ್ ಎಂದೇ ಹೇಳಬಹುದು, ರೈಲು ಕೆಲವು ತೊಂದರೆಗಳಲ್ಲಿ ಸಿಲುಕಿಕೊಂಡಿದೆ ಎಂದರ್ಥ. ಈ ಹಾರ್ನ್ ಮೂಲಕ ರೈಲು ಸಹಾಯಕ್ಕಾಗಿ ಸಿಬ್ಬಂದಿಗೆ ಮನವಿ ಮಾಡುತ್ತಿದೆ ತಿಳಿದುಕೊಳ್ಳಬೇಕು.