ಹೆತ್ತವರಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಅನಿವಾಸಿ ಭಾರತೀಯ..!

ಭಾರತದಲ್ಲಿ ದುಬಾರಿ ಬೆಲೆಯ ಐಷಾರಾಮಿ ಕಾರುಗಳ ಬಳಕೆಯು ಯಾವುದೇ ಶ್ರೀಮಂತ ರಾಷ್ಟ್ರಗಳಿಗೂ ಕಡಿಮೆಯಿಲ್ಲದಂತಹ ರೀತಿಯಲ್ಲಿ ಹೆಚ್ಚಾಗುತ್ತಿದೆ. ಅದರಲ್ಲೂ ಕಳೆದ ಕೆಲವು ವರ್ಷಗಳಿಂದ ಈ ಪ್ರಮಾಣವು ಹಿಂದೆಂದಿಗಿಂತಲೂ ಹೆಚ್ಚಾಗಿದೆ.

ಹೆತ್ತವರಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಅನಿವಾಸಿ ಭಾರತೀಯ..!

ಆದರೆ ಈ ಐಷಾರಾಮಿ ಕಾರುಗಳು ಅಷ್ಟು ಸುಲಭವಾಗಿ ಭಾರತದ ರಸ್ತೆಗಳಲ್ಲಿ ಕಾಣುವುದಿಲ್ಲ. ಸಾಮಾನ್ಯವಾಗಿ ರಾತ್ರಿ ವೇಳೆಯಲ್ಲಿ ಅಥವಾ ವಾರಾಂತ್ಯಗಳಲ್ಲಿ ಈ ಕಾರುಗಳನ್ನು ಕಾಣಬಹುದು. ಈ ಕಾರುಗಳನ್ನು ನೋಡಿದವರು ಯಾರೇ ಆಗಿರಲಿ ಒಮ್ಮೆಯಾದರೂ ಈ ಕಾರಿನಲ್ಲಿ ಓಡಾಡಬೇಕೆಂಬ ಯೋಚನೆ ಮನಸ್ಸಿನಲ್ಲಿ ಬರುವುದು ಸಹಜ. ಆದರೆ ಆ ಕಾರುಗಳ ಬೆಲೆಯಿಂದಾಗಿ ಮನಸ್ಸು ಹಿಂದೇಟು ಹಾಕುತ್ತದೆ.

ಹೆತ್ತವರಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಅನಿವಾಸಿ ಭಾರತೀಯ..!

ಈಗ ಪರಿಸ್ಥಿತಿ ಬದಲಾಗಿದ್ದು, ಕಾರು ಕಂಪನಿಗಳು ದುಬಾರಿ ಐಷಾರಾಮಿ ಕಾರುಗಳನ್ನು ಬಾಡಿಗೆಗೆ ನೀಡಲು ಪ್ರಾರಂಭಿಸಿವೆ. ಕಿ.ಮೀಗಳ ಆಧಾರದಲ್ಲಿ ಅಥವಾ ದಿನದ ಆಧಾರದ ಮೇಲೆ ಅವುಗಳನ್ನು ಬಾಡಿಗೆಗೆ ನೀಡಲಾಗುತ್ತದೆ. ನಾವು ಕನಸು ಕಾಣುವ ಕಾರುಗಳನ್ನು ಬಾಡಿಗೆಗೆ ಪಡೆದು ಚಾಲನೆ ಮಾಡುವ ವಾತಾವರಣ ಸೃಷ್ಟಿಯಾಗಿದೆ.

ಹೆತ್ತವರಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಅನಿವಾಸಿ ಭಾರತೀಯ..!

ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಅನೇಕ ದೇಶಗಳಲ್ಲೂ ಈ ಸನ್ನಿವೇಶ ಸೃಷ್ಟಿಯಾಗಿದೆ. ವಿಶ್ವದ ಅನೇಕ ದೇಶಗಳಲ್ಲಿ ದುಬಾರಿ ಐಷಾರಾಮಿ ಕಾರುಗಳನ್ನು ಬಾಡಿಗೆಗೆ ಪಡೆಯುವುದು ತೀರಾ ಸುಲಭವಾಗಿದೆ.

ಹೆತ್ತವರಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಅನಿವಾಸಿ ಭಾರತೀಯ..!

ಐಷಾರಾಮಿ ಕಾರುಗಳನ್ನು ತಿಂಗಳ ಬಾಡಿಗೆಯ ಆಧಾರದ ಮೇಲೆಯೂ ನೀಡಲಾಗುತ್ತದೆ. ಭಾರತದ ಮಧ್ಯಮ ವರ್ಗದ ಕುಟುಂಬವೊಂದು ದುಬಾರಿ ಬೆಲೆಯ ಲಿಮೋಸಿನ್ ಐಷಾರಾಮಿ ಕಾರಿನಲ್ಲಿ ಪ್ರಯಾಣ ಬೆಳೆಸಿದೆ.

ಹೆತ್ತವರಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಅನಿವಾಸಿ ಭಾರತೀಯ..!

ಸಾಮಾನ್ಯ ಎಸ್ ಯುವಿ, ಹ್ಯಾಚ್‌ಬ್ಯಾಕ್, ಎಂಯುವಿ, ಎಂಪಿವಿ ಹಾಗೂ ಸೆಡಾನ್‌ಗಳಲ್ಲಿ ಪ್ರಯಾಣಿಸುವುದಕ್ಕಿಂತ ಹೊಸ ರೀತಿಯ ಅನುಭವವನ್ನು ಲಿಮೋಸಿನ್ ಕಾರು ನೀಡುತ್ತದೆ. ಐಷಾರಾಮಿ ಕಾರುಗಳಲ್ಲಿ ಪ್ರಯಾಣಿಸುವುದೇ ಒಂದು ಅನನ್ಯ ಅನುಭವ. ಅದರಲ್ಲೂ ಲಿಮೋಸಿನ್ ಶೈಲಿಯ ಐಷಾರಾಮಿ ಕಾರಿನಲ್ಲಿ ಪ್ರಯಾಣಿಸುವುದು ವಿಶಿಷ್ಟ ಅನುಭವವನ್ನು ನೀಡುತ್ತದೆ.

ಹೆತ್ತವರಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಅನಿವಾಸಿ ಭಾರತೀಯ..!

ಭಾರತದ ಮಧ್ಯಮ ವರ್ಗದ ಕುಟುಂಬವೊಂದು ಹಮ್ಮರ್ ಕಂಪನಿಯ ಲಿಮೋಸಿನ್ ಕಾರಿನಲ್ಲಿ ಸಂಚರಿಸಿರುವುದನ್ನು ಕಾಣಬಹುದು. ಈ ವಿಡಿಯೋವನ್ನು ಹಿಂದಿ ಹಾಗೂ ಇಂಗ್ಲಿಷ್‌ ಭಾಷೆಯಲ್ಲಿ ರೆಕಾರ್ಡ್ ಮಾಡಲಾಗಿದೆ. ಅಂದ ಹಾಗೆ ಈ ವೀಡಿಯೊವನ್ನು ರೆಕಾರ್ಡ್ ಮಾಡಿರುವುದು ಭಾರತದಲ್ಲಲ್ಲ.

ಹೆತ್ತವರಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಅನಿವಾಸಿ ಭಾರತೀಯ..!

ನ್ಯೂಜಿಲೆಂಡ್‌ನ ಆಕ್ಲೆಂಡ್‌ನಲ್ಲಿ ಈ ವೀಡಿಯೊವನ್ನು ಚಿತ್ರೀಕರಿಸಲಾಗಿದೆ. ಈ ವೀಡಿಯೊವನ್ನು ಕಿಶ್ನನೆಲ್ ಎಂಬುವವರು ಯೂಟ್ಯೂಬ್ ಚಾನೆಲ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ತನ್ನ ಹೆತ್ತವರಿಗೆ ಸರ್ ಪ್ರ್ರೈಸ್ ನೀಡಲು ಹಾಗೂ ಐಷಾರಾಮಿ ಕಾರಿನ ಅನುಭವವನ್ನು ಆನಂದಿಸಲು ತಾನು ಈ ದುಬಾರಿ ಕಾರನ್ನು ಬಾಡಿಗೆಗೆ ಪಡೆದೆ ಎಂದು ಅವರು ಹೇಳಿದ್ದಾರೆ.

ಹೆತ್ತವರಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಅನಿವಾಸಿ ಭಾರತೀಯ..!

ಹಮ್ಮರ್ ವಾಹನಗಳು ಪ್ರಸಿದ್ಧ ಐಷಾರಾಮಿ ಕಾರುಗಳಲ್ಲಿ ಒಂದಾಗಿವೆ. ಈ ಕಾರುಗಳ ಕ್ಯಾಬಿನ್ ನಲ್ಲಿ ಸ್ಟಾರ್ ಹೋಟೆಲ್‌ಗಳಲ್ಲಿರುವಂತಹ ಸೌಲಭ್ಯಗಳನ್ನು ನೀಡಲಾಗುತ್ತದೆ. ಈ ಕಾರಣಕ್ಕೆ ಹಮ್ಮರ್ ಕಾರು ಅನೇಕ ಉದ್ಯಮಿಗಳ ನೆಚ್ಚಿನ ಆಯ್ಕೆಯ ಕಾರುಗಳಲ್ಲಿ ಒಂದಾಗಿದೆ.

ಹೆತ್ತವರಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಅನಿವಾಸಿ ಭಾರತೀಯ..!

ಕೆಲವು ವರ್ಷಗಳ ಹಿಂದೆ ಹಮ್ಮರ್ ಕಂಪನಿಯ ಕಾರುಗಳ ಉತ್ಪಾದನೆಯನ್ನು ನಿಲ್ಲಿಸಲಾಗಿದೆ. ಆದರೆ ಹಮ್ಮರ್ ಕಂಪನಿಯು ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸುತ್ತಿದೆ. ಉದ್ದವಾಗಿ ಕಾಣುವ ಹಮ್ಮರ್ ಲಿಮೋಸಿನ್ ಕಾರುಗಳನ್ನು ನೋಡುವುದು ಹಾಗೂ ಅದರಲ್ಲಿ ಸಂಚರಿಸುವುದು ವಿಭಿನ್ನ ಅನುಭವವನ್ನು ನೀಡುತ್ತದೆ. ಇಂತಹ ಕಾರಿನಲ್ಲಿ ಭಾರತದ ಕುಟುಂಬವೊಂದು ಪ್ರಯಾಣಿಸಿರುವುದು ನಿಜಕ್ಕೂ ಹೆಮ್ಮೆಯ ವಿಷಯ.

ಈ ಕಾರುಗಳಲ್ಲಿ ಚಲಿಸುವಾಗ ಅಲ್ಲಿದ್ದ ವಿದೇಶಿಯರು ಆಶ್ಚರ್ಯದಿಂದ ನೋಡುತ್ತಿರುವುದನ್ನು ಕಾಣಬಹುದು. ಇನ್ನೂ ಕೆಲವರು ಹಮ್ಮರ್ ಲಿಮೋಸಿನ್ ಮುಂದೆ ನಿಂತು ಸೆಲ್ಫಿ ತೆಗೆದುಕೊಂಡಿದ್ದಾರೆ. ಕಾರನ್ನು ಬಾಡಿಗೆಗೆ ಪಡೆದ ಯುವಕ ಅದನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡುತ್ತಿದ್ದಾನೆ.

ಹೆತ್ತವರಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಅನಿವಾಸಿ ಭಾರತೀಯ..!

ಇಂತಹ ಕಾರುಗಳನ್ನು ಭಾರತದಲ್ಲಿಯೂ ಬಾಡಿಗೆಗೆ ನೀಡಲಾಗುತ್ತದೆ. ಕ್ರಿಸ್ಲರ್ 300 ಸಿ ಲಿಮೋಸಿನ್ ಕಾರುಗಳನ್ನು ಭಾರತದಲ್ಲಿ ಬಾಡಿಗೆ ಕಾರ್ ಆಗಿ ಬಳಸಲಾಗುತ್ತಿದೆ. ಇದರ ಜೊತೆಗೆ ಹಲವಾರು ಸಾಮಾನ್ಯ ಕಾರುಗಳನ್ನು ಸಹ ಬಾಡಿಗೆ ಕಾರುಗಳಾಗಿ ಬಳಸಲಾಗುತ್ತಿದೆ.

Most Read Articles

Kannada
English summary
Indian youngster taking his parents out with Hummer Limousine. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X