ಸೇವೆಗೆ ಸಿದ್ದವಾದ ದೇಶದ ಮೊದಲ ಐಷಾರಾಮಿ ಹಡಗು 'ಅಂಗ್ರಿಯಾ' ವಿಶೇಷತೆ ಏನು?

ದೇಶದಲ್ಲಿ ಮೊದಲ ಬಾರಿಗೆ ಎರಡು ಪ್ರಮುಖ ನಗರಗಳ ನಡುವೆ ಐಷಾರಾಮಿ ಹಡಗು ಪ್ರಯಾಣಕ್ಕೆ ಚಾಲನೆ ಸಿಗುತ್ತಿದ್ದು, ಅಂಗ್ರಿಯಾ ಹೆಸರಿನ ಐಷಾರಾಮಿ ಹಡುಗು ಇದೇ ತಿಂಗಳು 20ರಿಂದ ಮೊದಲ ಪ್ರಯಾಣ ಬೆಳೆಸಲು ಸಜ್ಜಾಗುತ್ತದೆ. ಹಾಗಾದ್ರೆ ಅಂಗ್ರಿಯಾ ವಿಶೇಷತೆ ಏನು ಅನ್ನುವುದನ್ನ ಈ ಲೇಖನದಲ್ಲಿ ನಾವು ತಿಳಿಸಿ ಕೊಡಲಿದ್ದೇವೆ.

ಸೇವೆಗೆ ಸಿದ್ದವಾದ ದೇಶದ ಮೊದಲ ಐಷಾರಾಮಿ ಹಡಗು 'ಅಂಗ್ರಿಯಾ' ವಿಶೇಷತೆ ಏನು?

ಮುಂಬೈ ಟು ಗೋವಾ ನಡುವೆ ಸಂಚರಿಸಲು ಸಜ್ಜಾಗಿರುವ ಅಂಗ್ರಿಯಾ ಹಡುಗು ಫೈವ್ ಸ್ಟಾರ್ ಸೌಲಭ್ಯಗಳನ್ನು ಹೊತ್ತ ಐಷಾರಾಮಿ ಮಾದರಿಯಾಗಿದ್ದು, ಬರೋಬ್ಬರಿ 400 ಜನ ಪ್ರಯಾಣಿಕರನ್ನು ಹೊತ್ತುಸಾಗಬಲ್ಲ ಈ ಹಡುಗಿನಲ್ಲಿ ಇಂತಹ ಸೌಲಭ್ಯಗಳು ಇಲ್ಲ ಎನ್ನುವಂತಿಲ್ಲ.

ಸೇವೆಗೆ ಸಿದ್ದವಾದ ದೇಶದ ಮೊದಲ ಐಷಾರಾಮಿ ಹಡಗು 'ಅಂಗ್ರಿಯಾ' ವಿಶೇಷತೆ ಏನು?

ಸಕಲ ಸೌಲಭ್ಯಗಳನ್ನು ಹೊಂದಿರುವ ಈ ಐಷಾರಾಮಿ ಹಡಗಿನಲ್ಲಿ ವಿವಿಧ ನಮೂನೆಯ ಭಕ್ಷ್ಯ ಭೋಜನ ಸವಿಯಬಲ್ಲ 2 ರೆಸ್ಟೋರೆಂಟ್‌ಗಳು ಮತ್ತು 6 ಬಾರ್‌ಗಳಿದ್ದು, ಬರೋಬ್ಬರಿ 131 ಮೀಟರ್ ಉದ್ದ ಹೊಂದಿರುವ ಈ ಹಡಗಿನಲ್ಲಿ 7 ಡೆಕ್ ನಿರ್ಮಿಸಲಾಗಿದೆ.

ಸೇವೆಗೆ ಸಿದ್ದವಾದ ದೇಶದ ಮೊದಲ ಐಷಾರಾಮಿ ಹಡಗು 'ಅಂಗ್ರಿಯಾ' ವಿಶೇಷತೆ ಏನು?

ಹಡಗಿನಲ್ಲಿ ಚೈನೀಸ್, ಕಾಂಟಿನೆಂಟಲ್, ನಾರ್ಥ್ ಇಂಡಿಯನ್ ಮತ್ತು ಸಿ ಫುಡ್‌ಗಳು ದೊರೆಯಲ್ಲಿದ್ದು, ವಾರಾಂತ್ಯಗಳಲ್ಲಿ ಕೆಲವು ವಿಶೇಷ ಕಾರ್ಯಕ್ರಮಗಳು ಸಹ ಇಲ್ಲಿ ನಡೆಯಲಿವೆ. ಹೀಗಾಗಿ ಅಂಗ್ರಿಯಾ ಜರ್ನಿ ಒಂದು ಮರೆಯಲಾಗದ ನೆನಪು ಎನ್ನಬಹುದು.

ಸೇವೆಗೆ ಸಿದ್ದವಾದ ದೇಶದ ಮೊದಲ ಐಷಾರಾಮಿ ಹಡಗು 'ಅಂಗ್ರಿಯಾ' ವಿಶೇಷತೆ ಏನು?

ಮೇಲೆ ಹೇಳಿದ ಹಾಗೆ ಅಂಗ್ರಿಯಾ ಹಡಗು ದೇಶದ ಮೊದಲ ಐಷಾರಾಮಿ ಕ್ರೂಸ್ ಮಾದರಿಯಾಗಿದ್ದು, ವಿಶೇಷ ಸುಧಾರಿತ ವಿನ್ಯಾಸಗಳನ್ನು ಹೊಂದಿರುವ ಈ ವಿನೂತನ ಹಡಗನ್ನು ಜಪಾನ್ ತಂತ್ರಜ್ಞಾನದೊಂದಿಗೆ ನಿರ್ಮಾಣ ಮಾಡಲಾಗಿದೆಯೆಂತೆ.

ಸೇವೆಗೆ ಸಿದ್ದವಾದ ದೇಶದ ಮೊದಲ ಐಷಾರಾಮಿ ಹಡಗು 'ಅಂಗ್ರಿಯಾ' ವಿಶೇಷತೆ ಏನು?

ಸುಮಾರು ಎಂಟು ಹಂತದ ಸರ್ವಿಸ್ ಕೆಟಗೆರಿ ಹೊಂದಿರುವ ಈ ಹಡುಗಿನಲ್ಲಿ ಪ್ರಯಾಣಿಕ ಆದ್ಯತೆ ಮೇರೆಗೆ ವಿವಿಧ ಸೇವೆಗಳು ಲಭ್ಯವಿರಲಿದ್ದು, ಇದೇ ಕಾರಣಕ್ಕಾಗಿ ಅಂಗ್ರಿಯಾ ಪ್ರಯಾಣವು ವಿಮಾನ ಪ್ರಯಾಣಕ್ಕಿಂತಲೂ ದುಬಾರಿ ಟಿಕೆಟ್ ಹೊಂದಿದೆ.

ಸೇವೆಗೆ ಸಿದ್ದವಾದ ದೇಶದ ಮೊದಲ ಐಷಾರಾಮಿ ಹಡಗು 'ಅಂಗ್ರಿಯಾ' ವಿಶೇಷತೆ ಏನು?

ಟಿಕೆಟ್ ದರಗಳು

ಅಂಗ್ರಿಯಾ ಪ್ರಯಾಣದ ದರಗಳನ್ನು ಈಗಾಗಲೇ ನಿಗದಿಗೊಳಿಸಲಾಗಿದ್ದು, ಪ್ರತಿ ಪ್ರಯಾಣಿಕರಿಗೆ ವಿವಿಧ ಸೇವೆಗಳ ಆಧಾರ ಮೇಲೆ ಆರಂಭಿಕವಾಗಿ ರೂ.4,300 ರಿಂದ ರೂ. 12,000 ತನಕ ಟಿಕೆಟ್‌ಗಳನ್ನು ಖರೀದಿಸಬಹುದಾಗಿದೆ.

ಸೇವೆಗೆ ಸಿದ್ದವಾದ ದೇಶದ ಮೊದಲ ಐಷಾರಾಮಿ ಹಡಗು 'ಅಂಗ್ರಿಯಾ' ವಿಶೇಷತೆ ಏನು?

ಟಿಕೆಟ್ ದರದಲ್ಲೇ ಪ್ರಯಾಣಿಕರಿಗೆ ಒಂದು ಉಟ, ಒಂದು ಬ್ರೇಕ್ ಫಾಸ್ಟ್, ಒಂದು ಟೀ ಬ್ರೇಕ್ ಸಹ ಸಿಗಲಿದ್ದು, ಇನ್ನುಳಿದಂತೆ ಹೆಚ್ಚುವರಿಯಾಗಿ ಖರೀದಿಸುವ ಆಹಾರ, ಮಧ್ಯ, ಸ್ಪಾ ಸೇವೆಗಳ ಮೇಲೆ ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕಾಗುತ್ತೆ.

ಸೇವೆಗೆ ಸಿದ್ದವಾದ ದೇಶದ ಮೊದಲ ಐಷಾರಾಮಿ ಹಡಗು 'ಅಂಗ್ರಿಯಾ' ವಿಶೇಷತೆ ಏನು?

ಇದರ ಜೊತೆಗೆ ಹಡುಗಿನ ಒಳಭಾಗದಲ್ಲೇ ಸಣ್ಣಪುಟ್ಟ ಕರಕುಶಲ ವಸ್ತುಗಳ ಮಾರಾಟ ಮಳಿಗೆ ಕೂಡಾ ಲಭ್ಯಲಿರಲಿದ್ದು, ಪ್ರಯಾಣದ ಅವಧಿಯಲ್ಲಿ ಗ್ರಾಹಕರ ಮನರಂಜನೆಗಾಗಿ ಡೆಕ್‌ಗಳಲ್ಲಿ ಬ್ಯಾಂಡ್ ಸೇರಿದಂತೆ ಹಲವು ಬಗೆಯ ಸಂಗೀತ ಕಾರ್ಯಗಳು ಸಹ ನಡೆಯುತ್ತಿರುತ್ತವೆ.

ಸೇವೆಗೆ ಸಿದ್ದವಾದ ದೇಶದ ಮೊದಲ ಐಷಾರಾಮಿ ಹಡಗು 'ಅಂಗ್ರಿಯಾ' ವಿಶೇಷತೆ ಏನು?

ಪ್ರಯಾಣದ ಅವಧಿ

ಮುಂಬೈನ ಇಂದಿರಾ ಬಂದರಿನ ಪರ್ಪಲ್ ಗೇಟ್‌ನಿಂದ ಪ್ರಯಾಣ ಬೆಳೆಸುವ ಅಂಗ್ರಿಯಾ ಹಡಗು ಸುಮಾರು 611 ಕಿ.ಮಿ ದೂರವನ್ನು 13 ಗಂಟೆಗಳ ಕಾಲ ಕ್ರಮಿಸಿ ಗೋವಾ ತಲುಪಲಿದ್ದು, ಈ ಅವಧಿಯಲ್ಲಿ ಪ್ರಯಾಣಿಕರಿಗೆ ವಿವಿಧ ಸೇವೆಗಳನ್ನು ಒದಗಿಸಲಾಗುತ್ತೆ.

MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಸೇವೆಗೆ ಸಿದ್ದವಾದ ದೇಶದ ಮೊದಲ ಐಷಾರಾಮಿ ಹಡಗು 'ಅಂಗ್ರಿಯಾ' ವಿಶೇಷತೆ ಏನು?

ಸಿಬ್ಬಂದಿ ವರ್ಗ

26 ಮಂದಿ ಮರಿಯನ್ ವಿಭಾಗದ ಸಿಬ್ಬಂದಿ ಇಲ್ಲಿ ಕಾರ್ಯನಿರ್ವಹಿಸಲಿದ್ದು, ಪ್ರಯಾಣಿಕರ ಅಥಿತ್ಯವನ್ನು ವಹಿಸಲು ಪ್ರತ್ಯೇಕವಾಗಿ ವಿಭಾಗಗಳಲ್ಲಿ 60 ಸಿಬ್ಬಂದಿ 27x7 ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡಲಿದ್ದಾರೆ.

ಸೇವೆಗೆ ಸಿದ್ದವಾದ ದೇಶದ ಮೊದಲ ಐಷಾರಾಮಿ ಹಡಗು 'ಅಂಗ್ರಿಯಾ' ವಿಶೇಷತೆ ಏನು?

ಅಂಗ್ರಿಯಾ ಹೆಸರಿನಲ್ಲಿ ಏನಿದೆ?

ಮರಾಠಾ ನೌಕಾಪಡೆಯ ಪ್ರಥಮ ಅಡ್ಮಿರಲ್ ಕಣ್ಣೋಜಿ ಅಂಗ್ರೆ ಅವರ ಸ್ಮರಣಾರ್ಥ ಈ ಹಡಗಿಗೆ ಅಂಗ್ರಿಯಾ ಎಂದು ನಾಮಕರಣ ಮಾಡಲಾಗಿದ್ದು, ಅಂಗ್ರಿಯಾದಲ್ಲಿನ ಪ್ರಯಾಣಿಕ ಸೇವೆಗಳನ್ನು ಒದಗಿಸಲು ಪ್ರತ್ಯೇಕ ವೆಬ್‌‌ಸೈಟ್ ಕೂಡಾ ಲಭ್ಯವಿದೆ.

MOST READ: ವಾಹನ ಚಾಲನೆ ವೇಳೆ ಈ ತಪ್ಪುಗಳನ್ನು ಮಾಡಿದ್ರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದಾಗುತ್ತೆ..!

ಸೇವೆಗೆ ಸಿದ್ದವಾದ ದೇಶದ ಮೊದಲ ಐಷಾರಾಮಿ ಹಡಗು 'ಅಂಗ್ರಿಯಾ' ವಿಶೇಷತೆ ಏನು?

ಒಟ್ಟಿನಲ್ಲಿ ಹಲವು ವಿಶೇಷತೆಗಳೊಂದಿಗೆ ಪ್ರಯಾಣಿಕ ಸೇವೆಗೆ ಲಭ್ಯವಾಗುತ್ತಿರುವ ಅಂಗ್ರಿಯಾ ಹಡಗು ದೇಶದ ಮೊದಲ ಐಷಾರಾಮಿ ಹಡಗು ಎನ್ನುವ ಜನಪ್ರಿಯತೆಗೂ ಕಾರಣವಾಗಿದ್ದು, ಸಾಧ್ಯವಾದ್ರೆ ನೀವು ಕೂಡಾ ಒಂದು ಬಾರಿ ಟ್ರೈ ಮಾಡಿ.

Most Read Articles

Kannada
Read more on auto news off beat
English summary
India's first cruise service to start from October 20, Mumbai to Goa tickets start from Rs 4,300.
Story first published: Friday, October 19, 2018, 17:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X