ಪರೀಕ್ಷೆಗೂ ಮುನ್ನ 300 ಕಿ.ಮೀ ಸಂಚರಿಸಿದ ವಿದ್ಯಾರ್ಥಿನಿ, 87% ಗಳಿಸಿ 25,000 ರೂಪಾಯಿ ಬಹುಮಾನ ಗೆದ್ದ ರೋಚಕ ಕಥೆ

ಭಾರತದಲ್ಲಿ ಕರೋನಾ ವೈರಸ್ ಹರಡುವುದನ್ನು ನಿಯಂತ್ರಿಸಲು ವಿಧಿಸಲಾಗಿದ್ದ ಲಾಕ್‌ಡೌನ್ ಈಗ ಸಡಿಲಗೊಂಡಿದೆ. ಬಸ್, ಆಟೋ ಹಾಗೂ ಟ್ಯಾಕ್ಸಿ ಸೇರಿದಂತೆ ಎಲ್ಲಾ ರೀತಿಯ ವಾಹನಗಳು ಬಹುತೇಕ ಎಲ್ಲ ಪ್ರದೇಶಗಳಲ್ಲಿ ಸಂಚರಿಸುತ್ತಿವೆ. ಜನರು ತಮ್ಮ ಸ್ವಂತ ವಾಹನಗಳನ್ನು ಬಳಸುವುದರ ಮೇಲೆ ಯಾವುದೇ ನಿರ್ಬಂಧವಿಲ್ಲ.

ಪರೀಕ್ಷೆಗೂ ಮುನ್ನ 300 ಕಿ.ಮೀ ಸಂಚರಿಸಿದ ವಿದ್ಯಾರ್ಥಿನಿ, 87% ಗಳಿಸಿ 25,000 ರೂಪಾಯಿ ಬಹುಮಾನ ಗೆದ್ದ ರೋಚಕ ಕಥೆ

ಆದರೆ ಲಾಕ್‌ಡೌನ್ ಜಾರಿಯಲ್ಲಿದ್ದ ಸಂದರ್ಭದಲ್ಲಿ ಪರಿಸ್ಥಿತಿ ಭಿನ್ನವಾಗಿತ್ತು. ಬಸ್, ಆಟೋ, ಟ್ಯಾಕ್ಸಿ ಸೇರಿದಂತೆ ಎಲ್ಲಾ ರೀತಿಯ ವಾಹನಗಳ ಸಂಚಾರದ ಮೇಲೆ ನಿರ್ಬಂಧ ವಿಧಿಸಲಾಗಿತ್ತು. ಖಾಸಗಿ ಕಾರು ಹಾಗೂ ದ್ವಿಚಕ್ರ ವಾಹನಗಳ ಸಂಚಾರವನ್ನು ಸಹ ನಿರ್ಬಂಧಿಸಲಾಗಿತ್ತು. ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ ರಸ್ತೆಗಿಳಿದಿದ್ದ ವಾಹನಗಳನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದರು.

ಪರೀಕ್ಷೆಗೂ ಮುನ್ನ 300 ಕಿ.ಮೀ ಸಂಚರಿಸಿದ ವಿದ್ಯಾರ್ಥಿನಿ, 87% ಗಳಿಸಿ 25,000 ರೂಪಾಯಿ ಬಹುಮಾನ ಗೆದ್ದ ರೋಚಕ ಕಥೆ

ಇದರಿಂದಾಗಿ ತುರ್ತು ಅಗತ್ಯಗಳಿಗೆ ಹೊರ ಹೋಗಬೇಕಿದ್ದ ಜನರಿಗೂ ಕಷ್ಟವಾಯಿತು. ಹೊರ ರಾಜ್ಯದ ಕಾರ್ಮಿಕರು, ಆಸ್ಪತ್ರೆಗಳಿಗೆ ಹೋಗಬೇಕಾದವರಿಗೆ ಹೆಚ್ಚು ತೊಂದರೆಯಾಯಿತು. ಅವರಲ್ಲಿ ಬಹುತೇಕ ಜನರು ಸೈಕಲ್ ಹಾಗೂ ದ್ವಿಚಕ್ರ ವಾಹನಗಳ ಮೂಲಕ ನೂರಾರು ಕಿ.ಮೀ ಸಂಚರಿಸಿದರು.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಪರೀಕ್ಷೆಗೂ ಮುನ್ನ 300 ಕಿ.ಮೀ ಸಂಚರಿಸಿದ ವಿದ್ಯಾರ್ಥಿನಿ, 87% ಗಳಿಸಿ 25,000 ರೂಪಾಯಿ ಬಹುಮಾನ ಗೆದ್ದ ರೋಚಕ ಕಥೆ

ಇಂತಹ ಜನರಲ್ಲಿ ಶುಭಾಂಗಿ ಪಾಟೀಲ್ ಸಹ ಒಬ್ಬರು. ಲಾಕ್‌ಡೌನ್ ಅವಧಿಯಲ್ಲಿ ಅವರು ಅನಾರೋಗ್ಯ ಪೀಡಿತರಾಗಿದ್ದ ತಮ್ಮ ತಾಯಿಯನ್ನು ಕರೆದುಕೊಂಡು 300 ಕಿ.ಮೀ ದೂರದಲ್ಲಿರುವ ತಮ್ಮ ಅಜ್ಜಿ ಮನೆಗೆ ಹೋಗಿದ್ದರು.

ಪರೀಕ್ಷೆಗೂ ಮುನ್ನ 300 ಕಿ.ಮೀ ಸಂಚರಿಸಿದ ವಿದ್ಯಾರ್ಥಿನಿ, 87% ಗಳಿಸಿ 25,000 ರೂಪಾಯಿ ಬಹುಮಾನ ಗೆದ್ದ ರೋಚಕ ಕಥೆ

ಅಲ್ಲಿಂದ ಮರಳಿದ ನಂತರ 12ನೇ ತರಗತಿ ಪರೀಕ್ಷೆಯನ್ನು ಬರೆದರು. ಇಷ್ಟೆಲ್ಲಾ ಸಂಕಷ್ಟದ ಮಧ್ಯೆ ಬರೆದ 12ನೇ ತರಗತಿಯ ಪರೀಕ್ಷೆಯಲ್ಲಿ ಅವರು 87% ಅಂಕಗಳನ್ನು ಗಳಿಸಿದ್ದಾರೆ. ಈ ಸಾಧನೆಗಾಗಿ ಮುಖ್ಯಮಂತ್ರಿ ಲ್ಯಾಪ್ ಟಾಪ್ ಯೋಜನೆಯಡಿಯಲ್ಲಿ ರೂ.25,000 ನಗದು ಬಹುಮಾನವನ್ನು ಪಡೆದಿದ್ದಾರೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಪರೀಕ್ಷೆಗೂ ಮುನ್ನ 300 ಕಿ.ಮೀ ಸಂಚರಿಸಿದ ವಿದ್ಯಾರ್ಥಿನಿ, 87% ಗಳಿಸಿ 25,000 ರೂಪಾಯಿ ಬಹುಮಾನ ಗೆದ್ದ ರೋಚಕ ಕಥೆ

ಆದರೆ ಮಗಳ ಈ ಸಾಧನೆಯನ್ನು ನೋಡಲು ಅವರ ತಾಯಿ ಜೀವಂತವಾಗಿಲ್ಲವೆನ್ನುವುದೇ ದುಃಖದ ಸಂಗತಿ. ಶುಭಾಂಗಿ ಪಾಟೀಲ್ ಮಧ್ಯಪ್ರದೇಶದ ಇಂದೋರ್ ಮೂಲದವರು. ಅವರ ತಂದೆ ಕೃಷಿಕರಾಗಿದ್ದರು.

ಪರೀಕ್ಷೆಗೂ ಮುನ್ನ 300 ಕಿ.ಮೀ ಸಂಚರಿಸಿದ ವಿದ್ಯಾರ್ಥಿನಿ, 87% ಗಳಿಸಿ 25,000 ರೂಪಾಯಿ ಬಹುಮಾನ ಗೆದ್ದ ರೋಚಕ ಕಥೆ

ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಅವರ ತಂದೆ 2009ರಲ್ಲಿ ನಿಧನರಾದರು. ಅದಾದ ನಂತರ ಅಂಗನವಾಡಿ ಕಾರ್ಯಕರ್ತರಾಗಿದ್ದ ಶುಭಾಂಗಿ ಪಾಟೀಲ್ ರವರ ತಾಯಿ ಇಡೀ ಕುಟುಂಬದ ಜವಾಬ್ದಾರಿಯನ್ನು ಹೊತ್ತಿದ್ದರು. ಆದರೆ ಲಾಕ್‌ಡೌನ್ ಅವಧಿಯದಲ್ಲಿ ಅವರ ಆರೋಗ್ಯ ಹದಗೆಟ್ಟಿತು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಪರೀಕ್ಷೆಗೂ ಮುನ್ನ 300 ಕಿ.ಮೀ ಸಂಚರಿಸಿದ ವಿದ್ಯಾರ್ಥಿನಿ, 87% ಗಳಿಸಿ 25,000 ರೂಪಾಯಿ ಬಹುಮಾನ ಗೆದ್ದ ರೋಚಕ ಕಥೆ

ಆ ಸಮಯದಲ್ಲಿ ಶುಭಾಂಗಿ ಪಾಟೀಲ್ ಹಾಗೂ ಅವರ ಸಹೋದರಿಯ ಬಳಿ ಹಣವಿರಲಿಲ್ಲ. ಏನು ಮಾಡಬೇಕೆಂದು ತಿಳಿಯದೇ ಅವರು ತಮ್ಮ ತಾಯಿಯನ್ನು ತಮ್ಮ ಅಜ್ಜಿ ಮನೆಗೆ ಕರೆದುಕೊಂಡು ಹೋಗಲು ನಿರ್ಧರಿಸಿದರು.

ಪರೀಕ್ಷೆಗೂ ಮುನ್ನ 300 ಕಿ.ಮೀ ಸಂಚರಿಸಿದ ವಿದ್ಯಾರ್ಥಿನಿ, 87% ಗಳಿಸಿ 25,000 ರೂಪಾಯಿ ಬಹುಮಾನ ಗೆದ್ದ ರೋಚಕ ಕಥೆ

ಈ ಬಗ್ಗೆ ಮಾತನಾಡಿರುವ ಶುಭಾಂಗಿ ಪಾಟೀಲ್, ನಮ್ಮ ಬಳಿ ಕೇವಲ 500 ರೂಪಾಯಿ ಇತ್ತು. ನನ್ನ ಚಿಕ್ಕಪ್ಪ ನನ್ನ ತಾಯಿಯ ಆಸ್ಪತ್ರೆಯ ವೆಚ್ಚವನ್ನು ಭರಿಸುತ್ತಾರೆಂದು ನನಗೆ ತಿಳಿದಿತ್ತು. ಹಾಗಾಗಿ ನನ್ನ ತಾಯಿಯನ್ನು ಅಜ್ಜಿಯ ಮನೆಗೆ ಕರೆದೊಯ್ಯಲು ನಿರ್ಧರಿಸಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಪರೀಕ್ಷೆಗೂ ಮುನ್ನ 300 ಕಿ.ಮೀ ಸಂಚರಿಸಿದ ವಿದ್ಯಾರ್ಥಿನಿ, 87% ಗಳಿಸಿ 25,000 ರೂಪಾಯಿ ಬಹುಮಾನ ಗೆದ್ದ ರೋಚಕ ಕಥೆ

ನನ್ನ ತಾಯಿಯನ್ನು ನನ್ನ ಸ್ಕೂಟಿಯ ಹಿಂಭಾಗದಲ್ಲಿ ಕೂರಿಸಿ ಬ್ಲಾಂಕೆಟ್ ನಿಂದ ಕಟ್ಟಿ 300 ಕಿ.ಮೀ ದೂರದಲ್ಲಿದ್ದ ಮಹಾರಾಷ್ಟ್ರದ ಚೋಪ್ಡಾಗೆ ಕರೆದುಕೊಂಡು ಹೋದೆ. ಅಲ್ಲಿಂದ ಹಿಂತಿರುಗಿ ಪರೀಕ್ಷೆ ಬರೆದೆ. ಆದರೆ ನನ್ನ ತಾಯಿ ಜೂನ್ ತಿಂಗಳಿನಲ್ಲಿ ಜೂನ್‌ನಲ್ಲಿ ನಿಧನರಾದರು ಎಂದು ಹೇಳಿದ್ದಾರೆ.

ಪರೀಕ್ಷೆಗೂ ಮುನ್ನ 300 ಕಿ.ಮೀ ಸಂಚರಿಸಿದ ವಿದ್ಯಾರ್ಥಿನಿ, 87% ಗಳಿಸಿ 25,000 ರೂಪಾಯಿ ಬಹುಮಾನ ಗೆದ್ದ ರೋಚಕ ಕಥೆ

ಸಂಕಷ್ಟದಲ್ಲಿಯೂ ಪರೀಕ್ಷೆ ಬರೆದು ಉತ್ತಮ ಅಂಕಗಳನ್ನು ಪಡೆದ ಶುಭಾಂಗಿ ಪಾಟೀಲ್ ರವರ ಸಾಧನೆಯನ್ನು ಹಲವಾರು ಜನ ಶ್ಲಾಘಿಸಿದ್ದಾರೆ. ಮಧ್ಯಪ್ರದೇಶದಲ್ಲಿರುವ ನಿಯಮಗಳ ಪ್ರಕಾರ 12ನೇ ತರಗತಿಯಲ್ಲಿ 85% ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಖರೀದಿಸಲು ರೂ.25,000 ನೀಡಲಾಗುತ್ತದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಪರೀಕ್ಷೆಗೂ ಮುನ್ನ 300 ಕಿ.ಮೀ ಸಂಚರಿಸಿದ ವಿದ್ಯಾರ್ಥಿನಿ, 87% ಗಳಿಸಿ 25,000 ರೂಪಾಯಿ ಬಹುಮಾನ ಗೆದ್ದ ರೋಚಕ ಕಥೆ

87% ಅಂಕಗಳನ್ನು ಪಡೆದಿರುವ ಶುಭಾಂಗಿ ಪಾಟೀಲ್ ಈ ಬಹುಮಾನವನ್ನು ಪಡೆಯಲು ಅರ್ಹರಾಗಿದ್ದಾರೆ. ಆದರೆ ಶುಭಾಂಗಿ ಪಾಟೀಲ್ ಈ ಹಣದಿಂದ ಲ್ಯಾಪ್ ಟಾಪ್ ಖರೀದಿಸುವ ಬದಲು ಕಾಲೇಜು ಶುಲ್ಕಕ್ಕೆ ಬಳಸಿಕೊಳ್ಳಲು ನಿರ್ಧರಿಸಿದ್ದಾರೆ. ಶುಭಾಂಗಿ ಪಾಟೀಲ್ ಅವರಂತಯೇ ಇನ್ನೂ ಅನೇಕ ಬಡ ವಿದ್ಯಾರ್ಥಿಗಳು ಈ ಹಣವನ್ನು ಕಾಲೇಜು ಶುಲ್ಕಕ್ಕೆ ಬಳಸಿಕೊಳ್ಳಲು ನಿರ್ಧರಿಸಿದ್ದಾರೆ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

Most Read Articles

Kannada
English summary
Indore girl rode scooter for 300 kms before writing class 12 exam. Read in Kannada.
Story first published: Sunday, September 27, 2020, 10:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X