ಬೆಂಗಳೂರಿನಲ್ಲೂ ಹಾದು ಹೋಗಿರುವ ಏಷ್ಯನ್ ಹೈವೇ ಬಗೆಗಿನ ಆಸಕ್ತಿಕರ ಸಂಗತಿಗಳಿವು

ಯಾವುದೇ ದೇಶದ ವ್ಯಾಪಾರ ಹಾಗೂ ಪ್ರವಾಸೋದ್ಯಮ ಅಭಿವೃದ್ದಿಯಾಗಬೇಕಾದರೆ ಸುಸಜ್ಜಿತ ರಸ್ತೆಯಂತಹ ಮೂಲಸೌಕರ್ಯಗಳ ಅಗತ್ಯವಿದೆ. ಈ ಕಾರಣಕ್ಕೆ ಸಾರಿಗೆಯಂತಹ ಮೂಲಸೌಕರ್ಯಗಳ ಅಭಿವೃದ್ಧಿಗೆ ವಿಶ್ವದ ಎಲ್ಲಾ ದೇಶಗಳು ಪ್ರಾಮುಖ್ಯತೆ ನೀಡುತ್ತವೆ. ಏಷ್ಯಾದಲ್ಲಿ ವಿವಿಧ ದೇಶಗಳನ್ನು ಸಂಪರ್ಕಿಸಲು ಏಷ್ಯನ್ ಹೈವೇಯನ್ನು ಅಭಿವೃದ್ಧಿಪಡಿಸಲಾಗಿದೆ. ಭಾರತದಲ್ಲಿ ಹಾದು ಹೋಗುವ ಏಷ್ಯನ್ ಹೈವೇಗಳ ಬಗೆಗಿನ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಬೆಂಗಳೂರಿನಲ್ಲೂ ಹಾದು ಹೋಗಿರುವ ಏಷ್ಯನ್ ಹೈವೇ ಬಗೆಗಿನ ಆಸಕ್ತಿಕರ ಸಂಗತಿಗಳಿವು

ಯುಎನ್ ವಿಷನ್ ಯೋಜನೆ

ಎರಡನೆಯ ಮಹಾಯುದ್ಧದ ನಂತರ ವಿಶ್ವಸಂಸ್ಥೆಯು, ಜಾಗತಿಕ ವ್ಯಾಪಾರ ಹಾಗೂ ಪ್ರವಾಸೋದ್ಯಮ ಬೆಳವಣಿಗೆಯ ದೃಷ್ಟಿಯಿಂದ ರಸ್ತೆ ಸಾರಿಗೆ ಮೂಲಸೌಕರ್ಯಗಳನ್ನು ಅಭಿವೃದ್ದಿಪಡಿಸುವತ್ತ ಗಮನ ಹರಿಸಿತು. ಈ ಕಾರಣಕ್ಕೆ ವಿಶ್ವಸಂಸ್ಥೆಯು 1959ರಲ್ಲಿ ಏಷ್ಯನ್ ಹೈವೇ ಯೋಜನೆಯನ್ನು ಆರಂಭಿಸಿತು. 1960 -1970ರ ದಶಕಗಳಲ್ಲಿ ಏಷ್ಯನ್ ಹೈವೇಯ ಮೊದಲ ಹಂತದ ನಿರ್ಮಾಣವು ಯಶಸ್ವಿಯಾಯಿತು. ಆದರೆ ನಂತರ ಹಣಕಾಸಿನ ನೆರವು ನಿಂತುಹೋಯಿತು.

ಬೆಂಗಳೂರಿನಲ್ಲೂ ಹಾದು ಹೋಗಿರುವ ಏಷ್ಯನ್ ಹೈವೇ ಬಗೆಗಿನ ಆಸಕ್ತಿಕರ ಸಂಗತಿಗಳಿವು

ಏಷ್ಯಾದ ಹೈವೇ ಮೂಲಸೌಕರ್ಯ

1992ರಲ್ಲಿ ಏಷ್ಯನ್ ಟ್ರಾನ್ಸ್ ಪೋರ್ಟ್ ಆರ್ಗನೈಜೈಷನ್ ನ 48ನೇ ಅಧಿವೇಶನದಲ್ಲಿ ಈ ರಸ್ತೆ ಯೋಜನೆ ಮತ್ತೆ ಚಾಲನೆ ಪಡೆಯಿತು. ಇದರ ಆಧಾರದ ಮೇಲೆ 2003ರಲ್ಲಿ ಈ ಯೋಜನೆಯನ್ನು ಔಪಚಾರಿಕವಾಗಿ ಆರಂಭಿಸಲಾಯಿತು. ಏಷ್ಯಾದ 32 ರಾಷ್ಟ್ರಗಳು ಜಂಟಿಯಾಗಿ ಏಷ್ಯನ್ ಹೈವೇ ಮೂಲಸೌಕರ್ಯ ಯೋಜನೆಯನ್ನು ಅಭಿವೃದ್ಧಿಪಡಿಸಿದವು. ಇದರಲ್ಲಿ ಏಷ್ಯಾದ ದೇಶಗಳನ್ನು ಸಂಪರ್ಕಿಸುವ 55 ಮಾರ್ಗಗಳನ್ನು ಗುರುತಿಸಲಾಗಿದೆ. ಇವುಗಳಿಗೆ ಏಷ್ಯನ್ ಹೈವೇ ಸರಣಿ ಸಂಖ್ಯೆಗಳನ್ನು ನೀಡಲಾಗಿದ್ದು, ಅಭಿವೃದ್ಧಿ ಹಾಗೂ ವಿಸ್ತರಣೆ ಕಾರ್ಯಗಳು ನಡೆಯುತ್ತಿವೆ. ಇತ್ತೀಚಿನ ದಿನಗಳಲ್ಲಿ ಈ ಯೋಜನೆಗೆ ಅನೇಕ ಹೊಸ ಮಾರ್ಗಗಳನ್ನು ಸೇರ್ಪಡೆಗೊಳಿಸಲಾಗಿದೆ.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಬೆಂಗಳೂರಿನಲ್ಲೂ ಹಾದು ಹೋಗಿರುವ ಏಷ್ಯನ್ ಹೈವೇ ಬಗೆಗಿನ ಆಸಕ್ತಿಕರ ಸಂಗತಿಗಳಿವು

ಭಾರತದಲ್ಲಿರುವ ಏಷ್ಯನ್ ಹೈವೇಗಳು

ಇದರಲ್ಲಿ ಭಾರತದಲ್ಲಿರುವ ಕೆಲವು ರಾಷ್ಟ್ರೀಯ ಹೈವೇಗಳನ್ನು ಆಯ್ಕೆಮಾಡಿ ಅವುಗಳನ್ನು ಏಷ್ಯನ್ ಹೈವೇಗಳೆಂದು ಕರೆಯಲಾಗುತ್ತದೆ. ಈ ಹೈವೇಗಳನ್ನು ಬೇರೆ ದೇಶಗಳ ಹೈವೇಗಳೊಂದಿಗೆ ಸಂಪರ್ಕಿಸಲಾಗುತ್ತದೆ. ಇದರಲ್ಲಿ ಭಾರತದಲ್ಲಿರುವ ಏಷ್ಯನ್ ಹೈವೇಗಳ ಬಗೆಗಿನ ಮಾಹಿತಿಯನ್ನು ಕಾಣಬಹುದು.

ಬೆಂಗಳೂರಿನಲ್ಲೂ ಹಾದು ಹೋಗಿರುವ ಏಷ್ಯನ್ ಹೈವೇ ಬಗೆಗಿನ ಆಸಕ್ತಿಕರ ಸಂಗತಿಗಳಿವು

ಏಷ್ಯನ್ ಹೈವೇ 42

ಈ ಹೈವೇ ಚೀನಾದ ಗನ್ಸು ಪ್ರಾಂತ್ಯದ ಲ್ಯಾಂಜೊನಿಂದ ಆರಂಭವಾಗಿ, ಭಾರತದ ಜಾರ್ಖಂಡ್‌ನ ಬಾರ್ಹಿಯಲ್ಲಿ ಅಂತ್ಯವಾಗುತ್ತದೆ. ಈ ಹೈವೇ ಎವರೆಸ್ಟ್ ಪರ್ವತಕ್ಕೆ ಹತ್ತಿರದಲ್ಲಿದೆ. ಈ ಹೈವೇ ಟಿಬೆಟ್‌ನ ಲಾಸಾ ಹಾಗೂ ನೇಪಾಳದ ರಾಜಧಾನಿ ಕಠ್ಮಂಡುಗಳನ್ನು ಸಂಪರ್ಕಿಸುತ್ತದೆ. ಈ ಹೈವೇಯ ಉದ್ದ 3,754 ಕಿ.ಮೀಗಳಾಗಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಬೆಂಗಳೂರಿನಲ್ಲೂ ಹಾದು ಹೋಗಿರುವ ಏಷ್ಯನ್ ಹೈವೇ ಬಗೆಗಿನ ಆಸಕ್ತಿಕರ ಸಂಗತಿಗಳಿವು

ಏಷ್ಯನ್ ಹೈವೇ 43

ಈ ಹೈವೇ ಉತ್ತರ ಪ್ರದೇಶದ ಆಗ್ರಾದಿಂದ ಆರಂಭವಾಗಿ ಶ್ರೀಲಂಕಾದ ಮದರಾದಲ್ಲಿ ಅಂತ್ಯಗೊಳ್ಳುತ್ತದೆ. ಈ ಹೈವೇ ಮಥುರಾದಿಂದ ಗ್ವಾಲಿಯರ್, ನಾಗ್ಪುರ, ಹೈದರಾಬಾದ್, ಬೆಂಗಳೂರು, ಮಧುರೈ, ರಾಮೇಶ್ವರಂವರೆಗೆ ರಸ್ತೆ ಮೂಲಕ ಹಾಗೂ ರಾಮೇಶ್ವರದಿಂದ ಶ್ರೀಲಂಕಾದ ತಲೈಮನ್ನಾರ್‌ಗೆ ದೋಣಿ ಮೂಲಕ ಸಾಗುತ್ತದೆ. ನಂತರ ತಲೈಮನ್ನರ್, ಅನುರಾಧಪುರ, ತಂಬುಲ, ಕುರುನಗಲ, ಕ್ಯಾಂಡಿ, ಕೊಲಂಬೊ, ಕೇಲ್ ಮೂಲಕ ಚೆನ್ನೈನಲ್ಲಿ ಅಂತ್ಯಗೊಳ್ಳುತ್ತದೆ. ಈ ಹೈವೇಯ ಉದ್ದ 3,042 ಕಿ.ಮೀಗಳಾಗಿದೆ.

ಬೆಂಗಳೂರಿನಲ್ಲೂ ಹಾದು ಹೋಗಿರುವ ಏಷ್ಯನ್ ಹೈವೇ ಬಗೆಗಿನ ಆಸಕ್ತಿಕರ ಸಂಗತಿಗಳಿವು

ಏಷ್ಯನ್ ಹೈವೇ 45

ಏಷ್ಯನ್ ಹೈವೇ 45 ಕೋಲ್ಕತ್ತಾದಿಂದ ಚೆನ್ನೈಗೆ ಸಂಪರ್ಕ ಸಾಧಿಸುತ್ತದೆ. ಈ ಹೈವೇಯ ಉದ್ದ 2,116 ಕಿ.ಮೀಗಳಾಗಿದೆ. ಈ ಹೈವೇ ಒಡಿಶಾ ಆಂಧ್ರಪ್ರದೇಶದ ಮೂಲಕ ಚೆನ್ನೈಗೆ ಸಂಪರ್ಕ ಸಾಧಿಸುತ್ತದೆ. ಈ ಏಷ್ಯನ್ ಹೈವೇಯಲ್ಲಿ ಪೂರ್ವ ಕರಾವಳಿ ರಸ್ತೆಯೂ ಇದೆ ಎಂಬುದು ಗಮನಾರ್ಹ. ಈ ಹೈವೇ ಬೆಂಗಳೂರಿನಲ್ಲಿಯೂ ಹಾದು ಹೋಗುತ್ತದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಬೆಂಗಳೂರಿನಲ್ಲೂ ಹಾದು ಹೋಗಿರುವ ಏಷ್ಯನ್ ಹೈವೇ ಬಗೆಗಿನ ಆಸಕ್ತಿಕರ ಸಂಗತಿಗಳಿವು

ಏಷ್ಯನ್ ಹೈವೇ 46

ಏಷ್ಯನ್ ಹೈವೇ 46 ಅನ್ನು ಗ್ರೇಟ್ ಈಸ್ಟರ್ನ್ ಹೈವೇ ಎಂದು ಕರೆಯಲಾಗುತ್ತದೆ. 1967 ಕಿ.ಮೀ ಉದ್ದದ ಈ ಹೈವೇ ಗುಜರಾತ್‌ನ ಬಂದರು ನಗರವಾದ ಹಜೀರಾ ಹಾಗೂ ಪಶ್ಚಿಮ ಬಂಗಾಳದ ಹೌರಾ ನಡುವೆ ಸಂಪರ್ಕ ಸಾಧಿಸುತ್ತದೆ. ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ, ಛತ್ತೀಸ್‌ಗಢ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಈ ಏಷ್ಯನ್ ಹೈವೇ ಹಾದು ಹೋಗುತ್ತದೆ.

ಬೆಂಗಳೂರಿನಲ್ಲೂ ಹಾದು ಹೋಗಿರುವ ಏಷ್ಯನ್ ಹೈವೇ ಬಗೆಗಿನ ಆಸಕ್ತಿಕರ ಸಂಗತಿಗಳಿವು

ಏಷ್ಯನ್ ಹೈವೇ 47

ಈ ಹೈವೇ ಮಧ್ಯಪ್ರದೇಶದ ಗ್ವಾಲಿಯರ್ ಹಾಗೂ ಬೆಂಗಳೂರಿನ ನಡುವೆ ಸಂಪರ್ಕ ಸಾಧಿಸುತ್ತದೆ. 2,057 ಕಿ.ಮೀ ಉದ್ದದ ಈ ಹೈವೇ ಥಾಣೆ, ಮುಂಬೈ ಹಾಗೂ ಬೆಳಗಾವಿ ನಗರಗಳ ನಡುವೆ ಹಾದು ಹೋಗುತ್ತದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಬೆಂಗಳೂರಿನಲ್ಲೂ ಹಾದು ಹೋಗಿರುವ ಏಷ್ಯನ್ ಹೈವೇ ಬಗೆಗಿನ ಆಸಕ್ತಿಕರ ಸಂಗತಿಗಳಿವು

ಏಷ್ಯನ್ ಹೈವೇ 48

ಈ ಹೈವೇ ಭೂತಾನ್‌ನ ಪಾಯಿಂಟ್ ಶೋಲಿಂಗ್‌ನಿಂದ ಪಶ್ಚಿಮ ಬಂಗಾಳದ ಶಂಕರಬಂಧದವರೆಗೆ ಹಾದು ಹೋಗುತ್ತದೆ. 90 ಕಿ.ಮೀ ಉದ್ದದ ಈ ಹೈವೇ ಭಾರತ ಹಾಗೂ ಭೂತಾನ್ ನಡುವೆ ಸಂಪರ್ಕ ಸಾಧಿಸುತ್ತದೆ. ಈ ಹೈವೇಯ ಕೆಲವು ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ.

ಬೆಂಗಳೂರಿನಲ್ಲೂ ಹಾದು ಹೋಗಿರುವ ಏಷ್ಯನ್ ಹೈವೇ ಬಗೆಗಿನ ಆಸಕ್ತಿಕರ ಸಂಗತಿಗಳಿವು

ಭಾರತದಲ್ಲಿ ಹೆಚ್ಚು

ದಕ್ಷಿಣ ಏಷ್ಯಾದ ಭಾರತ, ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ಪಾಕಿಸ್ತಾನಗಳಲ್ಲಿ ಏಷ್ಯಾದ ಹೈವೇಗಳು ಹಾದು ಹೋಗಿವೆ. ಭಾರತವು ಅತಿ ಹೆಚ್ಚಿನ ಉದ್ದದ ಏಷ್ಯನ್ ಹೈವೇಗಳನ್ನು ಹೊಂದಿದೆ. ಭಾರತದಲ್ಲಿ 27,987 ಕಿ.ಮೀ ಉದ್ದದ ಏಷ್ಯನ್ ಹೈವೇಗಳನ್ನು ಹೊಂದಿದೆ. ಈ ಹೈವೇಗಳಲ್ಲಿ ಭಾರತದ ರಾಷ್ಟ್ರೀಯ ಹೆದ್ದಾರಿಗಳು ಸೇರಿರುವುದು ಗಮನಾರ್ಹ. ಚೀನಾದಲ್ಲಿ 25,579 ಕಿ.ಮೀ ಉದ್ದದ ಏಷ್ಯನ್ ಹೈವೇಗಳಿವೆ.

Most Read Articles

Kannada
English summary
Interesting facts about Asian highways in India. Read in Kannada.
Story first published: Friday, August 14, 2020, 11:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X