ಭಾರತದಲ್ಲಿ ಸದ್ದು ಮಾಡಿದ್ದ ಮೊದಲ 100 ಸಿಸಿ ಬೈಕಿನ ಬಗ್ಗೆ ನಿಮಗೆಷ್ಟು ಗೊತ್ತು?

By Manoj B.k

ಈಗ ಬೈಕುಗಳನ್ನು ಹೊಂದುವುದು ದೊಡ್ಡ ಸಂಗತಿಯೇನಲ್ಲ. ಬಹುತೇಕ ಎಲ್ಲರ ಬಳಿಯೂ ಬೈಕುಗಳಿವೆ. ಕೆಲವರ ಬಳಿ ಒಂದಕ್ಕಿಂತ ಹೆಚ್ಚಿನ ಬೈಕುಗಳಿವೆ. ಆದರೆ 1980ರ ದಶಕದಲ್ಲಿ ಸೈಕಲ್‍‍ಗಳು ಮಾತ್ರ ಮನೆ ಮಾತಾಗಿದ್ದವು. ಆಗ ಬೈಕುಗಳನ್ನು ಕೊಳ್ಳುವುದು ಮಧ್ಯಮ ವರ್ಗದವರ ಪಾಲಿಗೆ ಕೇವಲ ಕನಸಿನ ಮಾತಾಗಿತ್ತು. ಭಾರತದ ಆಟೋ ಮೊಬೈಲ್ ಉದ್ಯಮವು ಸಹ ಈಗಿನಷ್ಟು ಆಗ ಬೆಳೆದಿರಲಿಲ್ಲ.

ಭಾರತದಲ್ಲಿ ಸದ್ದು ಮಾಡಿದ್ದ ಮೊದಲ 100 ಸಿಸಿ ಬೈಕಿನ ಬಗ್ಗೆ ನಿಮಗೆಷ್ಟು ಗೊತ್ತು?

ಆ ಸಮಯದಲ್ಲಿ ಸುಂದರಂ ಕ್ಲೇಟನ್ ಕಂಪನಿ, ಈಗಿನ ಟಿವಿ‍ಎಸ್ ಕಂಪನಿ, ಭಾರತದಲ್ಲಿ ಬೈಕುಗಳನ್ನು ಅಭಿವೃದ್ಧಿಪಡಿಸಿ ಬಿಡುಗಡೆಗೊಳಿಸಲು ತೀರ್ಮಾನಿಸಿತು. ಜಪಾನಿನ ಸುಜುಕಿ ಕಂಪನಿಯ ಸಹಭಾಗಿತ್ವದಲ್ಲಿ ಭಾರತದ ಮೊದಲ 100 ಸಿಸಿ ಬೈಕ್ ಅನ್ನು ಅಭಿವೃದ್ಧಿಪಡಿಸಲಾಯಿತು. ಈ ಬೈಕಿಗೆ ಇಂಡ್-ಸುಜುಕಿ ಎ‍ಎಕ್ಸ್ 100 ಎಂಬ ಹೆಸರನ್ನಿಡಲಾಯಿತು. ಈ ಬೈಕ್ ಅನ್ನು 2 ಸ್ಟ್ರೋಕ್ ಎಂಜಿನ್‍‍ನೊಂದಿಗೆ ಮಾರಾಟ ಮಾಡಲಾಯಿತು. 1970 ಹಾಗೂ 1980ರ ದಶಕದಲ್ಲಿದ್ದ ಯುವಜನತೆಗೆ 2 ಸ್ಟ್ರೋಕ್ ಬೈಕ್ ಎಂಜಿನ್‍‍ಗಳನ್ನು ಕೊಳ್ಳುವುದು ಬಹು ದೊಡ್ಡ ಕನಸಾಗಿತ್ತು.

ಭಾರತದಲ್ಲಿ ಸದ್ದು ಮಾಡಿದ್ದ ಮೊದಲ 100 ಸಿಸಿ ಬೈಕಿನ ಬಗ್ಗೆ ನಿಮಗೆಷ್ಟು ಗೊತ್ತು?

ಬಿಡುಗಡೆ

ಇಂಡೋ-ಸುಜುಕಿ ಎಎಕ್ಸ್ 100 ಬೈಕ್ ಅನ್ನು ಭಾರತದಲ್ಲಿ 1984ರಲ್ಲಿ ಬಿಡುಗಡೆಗೊಳಿಸಲಾಯಿತು. ಮೊದಲ ಬಾರಿಗೆ, ಬಹುತೇಕ ಬಿಡಿಭಾಗಗಳನ್ನು ಜಪಾನ್‌ನಿಂದ ಆಮದು ಮಾಡಿಕೊಂಡು, ಭಾರತದಲ್ಲಿ ಜೋಡಿಸಲಾಯಿತು. ಹೀಗಾಗಿ, ಈ ಬೈಕು ಖರೀದಿಸಿದವರು ಈ ಬೈಕ್ ಅನ್ನು ವಿದೇಶಿ ಬೈಕ್ ಎಂದೇ ಖುಷಿ ಪಟ್ಟರು.

ಭಾರತದಲ್ಲಿ ಸದ್ದು ಮಾಡಿದ್ದ ಮೊದಲ 100 ಸಿಸಿ ಬೈಕಿನ ಬಗ್ಗೆ ನಿಮಗೆಷ್ಟು ಗೊತ್ತು?

ನಿಧಿಯಂತೆ ರಕ್ಷಣೆ

ಈ ಬೈಕ್ ಅನ್ನು ಖರೀದಿಸಿದ ಜನರು ಈ ಬೈಕ್ ಅನ್ನು ನಿಧಿಯಂತೆ ಕಾಪಾಡಿಕೊಂಡರು. ಕೆಲವರಂತೂ ತಮ್ಮ ಭಾನುವಾರದ ರಜಾದಿನಗಳನ್ನು ಈ ಬೈಕ್ ಅನ್ನು ಸ್ವಚ್ಛಗೊಳಿಸುತ್ತ ಕಳೆದರು. ಇದು ಆ ಕಾಲದ ಯುವಕರ ಮೊದಲ ಗೇರ್ ಬೈಕ್ ಆಗಿದ್ದು, ಸದಾ ಕಾಲ ನೆನಪಿನಲ್ಲಿ ಉಳಿಯುತ್ತದೆ.

ಭಾರತದಲ್ಲಿ ಸದ್ದು ಮಾಡಿದ್ದ ಮೊದಲ 100 ಸಿಸಿ ಬೈಕಿನ ಬಗ್ಗೆ ನಿಮಗೆಷ್ಟು ಗೊತ್ತು?

ಆಕರ್ಷಕ ನೋಟ

2 ಸ್ಟ್ರೋಕ್ ಎಂಜಿನ್‌ನ ಸೈಲೆಂಟ್ ಸೌಂಡ್, ಆರಾಮದಾಯಕವಾದ ಸೀಟು, ಡ್ಯಾಜ್ಲಿಂಗ್ ಡಿಸೈನ್ ಹಾಗೂ ಕೈಗೆಟುಕುವ ಬೆಲೆಯಿಂದಾಗಿ ಈ ಬೈಕ್ ಯುವಜನರ ನೆಚ್ಚಿನ ಬೈಕ್ ಆಗಿತ್ತು.

ಭಾರತದಲ್ಲಿ ಸದ್ದು ಮಾಡಿದ್ದ ಮೊದಲ 100 ಸಿಸಿ ಬೈಕಿನ ಬಗ್ಗೆ ನಿಮಗೆಷ್ಟು ಗೊತ್ತು?

ಎಂಜಿನ್

ಈ ಬೈಕಿನಲ್ಲಿ ಸಿಂಗಲ್ ಸಿಲಿಂಡರ್ 98 ಸಿಸಿ ಏರ್‌ಕ್ರ್ಯೂ ಎಂಜಿನ್ ಅಳವಡಿಸಲಾಗಿತ್ತು. ಈ ಎಂಜಿನ್ 7 ಬಿ‍‍ಹೆಚ್‍‍ಪಿ ಪವರ್ ಹಾಗೂ 9.6 ಎನ್ಎಂ ಟಾರ್ಕ್ ಉತ್ಪಾದಿಸುತ್ತಿತ್ತು. ಈ ಎಂಜಿನ್‍‍ಗೆ 4 ಸ್ಪೀಡಿನ ಗೇರ್‌ಬಾಕ್ಸ್ ಅಳವಡಿಸಲಾಗಿತ್ತು. ಈ ಬೈಕ್ ಪ್ರತಿ ಗಂಟೆಗೆ 106.9 ಕಿ.ಮೀ ವೇಗವಾಗಿ ಚಲಿಸುವ ಸಾಮರ್ಥ್ಯವನ್ನು ಹೊಂದಿತ್ತು.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಭಾರತದಲ್ಲಿ ಸದ್ದು ಮಾಡಿದ್ದ ಮೊದಲ 100 ಸಿಸಿ ಬೈಕಿನ ಬಗ್ಗೆ ನಿಮಗೆಷ್ಟು ಗೊತ್ತು?

ಟಿವಿಎಸ್ - ಸುಜುಕಿ

ನಂತರದ ದಿನಗಳಲ್ಲಿ ಸುಂದರಂ ಕ್ಲೇಟನ್, ಟಿವಿಎಸ್ ಕಂಪನಿಯಾಗಿ ಬದಲಾಯಿತು. ಇದಾದ ನಂತರ ಈ ಬೈಕ್ ಅನ್ನು ಟಿವಿಎಸ್-ಸುಜುಕಿ ಎಎಕ್ಸ್ 100 ಆರ್ ಹೆಸರಿನಲ್ಲಿ ಬಿಡುಗಡೆಗೊಳಿಸಲಾಯಿತು. ಮುಂದಿನ ದಿನಗಳಲ್ಲಿ ಈ ಸಹಭಾಗಿತ್ವದಲ್ಲಿ ಟಿವಿಎಸ್ ಸುಪ್ರಾ, ಶೋಗನ್, ಸಮುರಾಯ್ ಹಾಗೂ ಶಾವೋಲಿನ್ ಬೈಕುಗಳನ್ನು ಬಿಡುಗಡೆಗೊಳಿಸಲಾಯಿತು. ಈ ಬೈಕುಗಳು ಜನಪ್ರಿಯ 2 ಸ್ಟ್ರೋಕ್ ಮಾದರಿಗಳಾಗಿ ಹೊರಹೊಮ್ಮಿದವು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಭಾರತದಲ್ಲಿ ಸದ್ದು ಮಾಡಿದ್ದ ಮೊದಲ 100 ಸಿಸಿ ಬೈಕಿನ ಬಗ್ಗೆ ನಿಮಗೆಷ್ಟು ಗೊತ್ತು?

ಹೆಸರು ಬದಲಾವಣೆ

ಟಿವಿಎಸ್-ಸುಜುಕಿ ಎಎಕ್ಸ್ 100 ಆರ್ ಬೈಕ್ ಅನ್ನು ನಂತರದ ದಿನಗಳಲ್ಲಿ ಟಿವಿಎಸ್ ಮ್ಯಾಕ್ಸ್ 100 ಆರ್ ಎಂಬ ಹೆಸರಿನಿಂದ ಮಾರಾಟ ಮಾಡಲಾಯಿತು. ಈ ಎರಡು ಬೈಕುಗಳ ಪೈಕಿ, ಟಿವಿಎಸ್ ಮ್ಯಾಕ್ಸ್ 100 ಆರ್ ಬೈಕ್‌ಗಳ ನೆನಪು ಜನರ ಮನಸ್ಸಿನಲ್ಲಿ ಹಾಗೆಯೇ ಉಳಿದಿದೆ. ಈ ಸಮಯದಲ್ಲಿ ಯಮಹಾ ಆರ್‌ಎಕ್ಸ್ 100 ಹಾಗೂ ಕವಾಸಕಿ ಕೆಬಿ 100 ಬೈಕುಗಳು ದೇಶಿಯ ಮಾರುಕಟ್ಟೆಯಲ್ಲಿ ಕಂಡುಬಂದವು.

MOST READ: ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ - ಶೋರೂಂ ಸಿಬ್ಬಂದಿಗೆ ಸುಸ್ತೋ ಸುಸ್ತು..!

ಭಾರತದಲ್ಲಿ ಸದ್ದು ಮಾಡಿದ್ದ ಮೊದಲ 100 ಸಿಸಿ ಬೈಕಿನ ಬಗ್ಗೆ ನಿಮಗೆಷ್ಟು ಗೊತ್ತು?

ಯುಗಾಂತ್ಯ

ಇಂದಿಗೂ, 2 ಸ್ಟ್ರೋಕ್ ಬೈಕ್‌ಗಳು ಅನೇಕರ ಭಾರತೀಯರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿವೆ. ನಂತರದ ದಿನಗಳಲ್ಲಿ ಬಿಡುಗಡೆಯಾದ 4 ಸ್ಟ್ರೋಕ್ ಬೈಕುಗಳು ನಿಧಾನವಾಗಿ ದೇಶಿಯ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಿದವು.

Image Courtesy: 1,2,3,4,5,6,7,8

Most Read Articles

Kannada
English summary
Interesting facts about Indias first 100cc bike - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X