Just In
Don't Miss!
- News
ರಾಜ್ಯ ಬಜೆಟ್ ಬಗ್ಗೆ ಸಿಎಂ ಯಡಿಯೂರಪ್ಪ ಹೇಳಿದ್ದೇನು?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ಜೊತೆ ಇಶ್ ಸೋಧಿ ಒಪ್ಪಂದ
- Lifestyle
ಅರಿಶಿನದ ಈ ಆರೋಗ್ಯ ಪ್ರಯೋಜನಗಳನ್ನು ಕೇಳಿದರೆ, ನೀವೂ ಶಾಕ್ ಆಗ್ತೀರಾ!
- Finance
30,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ ಕ್ಯಾಪ್ಜೆಮಿನಿ
- Movies
ರಾಬರ್ಟ್ ಸಂಭ್ರಮ: ವಿನಯದಿಂದ ತೆಲುಗು ಅಭಿಮಾನಿಗಳ ಮನಸು ಕದ್ದ ದರ್ಶನ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಮೆರಿಕಾ ಅಧ್ಯಕ್ಷರು ಪ್ರಯಾಣಿಸುವ ವಿಮಾನದ ಬಗೆಗಿನ ರೋಚಕ ಸಂಗತಿಗಳಿವು
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶಗಳಲ್ಲಿ ಒಂದಾದ ಅಮೆರಿಕಾದ ನೂತನ ಅಧ್ಯಕ್ಷರಾಗಿ ಜೋ ಬಿಡನ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಮೆರಿಕಾದ ಅಧ್ಯಕ್ಷರು ವಾಸವಿರುವ ಸ್ಥಳ ಮಾತ್ರವಲ್ಲದೇ ಅವರು ಬಳಸುವ ಅಧಿಕೃತ ಕಾರು, ವಿಮಾನ ಹಾಗೂ ಹೆಲಿಕಾಪ್ಟರ್'ಗಳಲ್ಲೂ ಹೆಚ್ಚಿನ ಭದ್ರತಾ ಸೌಲಭ್ಯಗಳನ್ನು ನೀಡಲಾಗುತ್ತದೆ.

ಅಮೆರಿಕಾ ಅಧ್ಯಕ್ಷರ ರಕ್ಷಣೆಗಾಗಿ ನೂರಾರು ಕೋಟಿ ಡಾಲರ್ ಖರ್ಚು ಮಾಡಲಾಗುತ್ತದೆ. ಅಮೆರಿಕಾ ಅಧ್ಯಕ್ಷರು ಬಳಸುವ ದಿ ಬೀಸ್ಟ್ ಕಾರು ಹಾಗೂ ಏರ್ ಫೋರ್ಸ್ ಒನ್ ವಿಮಾನಗಳಲ್ಲಿ ವಿಶ್ವದ ಯಾವುದೇ ರಾಜಕೀಯ ನಾಯಕರು ಹೊಂದಿಲ್ಲದಂತಹ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಭದ್ರತಾ ಫೀಚರ್'ಗಳನ್ನು ನೀಡಲಾಗುತ್ತದೆ. ಅಮೆರಿಕಾ ಅಧ್ಯಕ್ಷರು ಅಮೆರಿಕಾ ಹಾಗೂ ಹೊರ ದೇಶಗಳಿಗೆ ತೆರಳಲು ಏರ್ ಫೋರ್ಸ್ ಒನ್ ವಿಮಾನವನ್ನು ಬಳಸುತ್ತಾರೆ.

ವೈಟ್ ಹೌಸ್'ನಲ್ಲಿರುವ ಹೆಲಿಕಾಪ್ಟರ್ ನೆಲೆಯಿಂದ ವಿಮಾನ ನಿಲ್ದಾಣಕ್ಕೆ ಹೋಗಲು ಅಮೆರಿಕ ಅಧ್ಯಕ್ಷರು ಮೆರೈನ್ ಒನ್ ಕೋಡ್ ನೇಮ್ ಹೊಂದಿರುವ ಹೆಲಿಕಾಪ್ಟರ್ ಬಳಸುತ್ತಾರೆ. ವಿಹೆಚ್ -3 ಡಿ ಸೀ ಕಿಂಗ್ ಅಥವಾ ವಿಹೆಚ್ 60 ಎನ್ ವೈಟ್ ಹಾಕ್'ಗಳಿಗೆ ಮೆರೈನ್ ಒನ್ ಎಂಬ ಕೋಡ್ ನೇಮ್ ನೀಡಲಾಗಿದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಅವರು ಹೋದಲ್ಲೆಲ್ಲಾ ದಿ ಬೀಸ್ಟ್ ಕಾರು ಅವರ ಜೊತೆಗಿರುತ್ತದೆ. ಅವರು ಸ್ಥಳೀಯವಾಗಿ ಯಾವುದೇ ಪ್ರಾಂತ್ಯಕ್ಕೆ ಹೋಗುತ್ತಿರಲಿ ಅಥವಾ ವಿದೇಶಕ್ಕೆ ಹೋಗಲಿ ಬೀಸ್ಟ್ ಕಾರನ್ನು ಬಳಸುತ್ತಾರೆ. ಈ ಕಾರ್ಯಕ್ಕಾಗಿ ಅವರ 9-ಟನ್ ಬೀಸ್ಟ್ ಕಾರನ್ನು ಸಿ 5 ಗ್ಯಾಲಕ್ಸಿ ಕಾರ್ಗೋ ಎಂಬ ಸರಕು ವಿಮಾನದಲ್ಲಿ ಮೊದಲೇ ಲೋಡ್ ಮಾಡಲಾಗಿರುತ್ತದೆ.

ಅವರು ಹೆಚ್ಚಾಗಿ ಬೋಯಿಂಗ್ 747 ವಿಮಾನದಲ್ಲಿ ಪ್ರಯಾಣಿಸುತ್ತಾರೆ. ಬೋಯಿಂಗ್ 747 ವಿಮಾನವನ್ನು ಅಮೆರಿಕಾ ಅಧ್ಯಕ್ಷರಿಗೆ ಅಗತ್ಯವಿರುವ ವಿವಿಧ ಸೌಲಭ್ಯ ಹಾಗೂ ಭದ್ರತಾ ಟೆಕ್ನಾಲಜಿಗಳೊಂದಿಗೆ ಕಸ್ಟಮೈಸ್ ಮಾಡಲಾಗಿದೆ. ಅವರಿಗಾಗಿ ಒಟ್ಟು ಎರಡು ವಿಮಾನಗಳನ್ನು ಮೀಸಲಿಡಲಾಗಿದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಒಂದು ವಿಮಾನದಲ್ಲಿ ಸಮಸ್ಯೆ ಕಂಡು ಬಂದರೆ ಮತ್ತೊಂದು ವಿಮಾನವನ್ನು ಬಳಸಲಾಗುತ್ತದೆ. ಬೋಯಿಂಗ್ 747 ವಿಮಾನವು ಮಿಲಿಟರಿ ಚಾಲಿತ ವಿಸಿ -25 ವಿಮಾನವನ್ನು ಆಧರಿಸಿದೆ. ವಿಸಿ 25 ಎ, ಬೋಯಿಂಗ್ 747 200 ಬಿ ಅನ್ನು ಆಧರಿಸಿದೆ ಎಂದು ಹೇಳಲಾದರೆ, ವಿಸಿ 25 ಬಿ ಬೋಯಿಂಗ್ 747-8 ವಿಮಾನವನ್ನು ಆಧರಿಸಿದೆ ಎಂದು ಹೇಳಲಾಗಿದೆ.

ಈ ಎರಡೂ ವಿಮಾನಗಳು 1990ರಲ್ಲಿ ಬಳಕೆಗೆ ಬಂದವು. ಅಮೆರಿಕದ ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್ ಹೊಸ ವಿಮಾನವನ್ನು ನಿರ್ಮಿಸುವ ಯೋಜನೆಯನ್ನು ಪ್ರಕಟಿಸಿದರು. ಈ ವಿಮಾನದ ಒಳಾಂಗಣ ವಿನ್ಯಾಸದ ಬಗ್ಗೆ ಅವರ ಪತ್ನಿ ನ್ಯಾನ್ಸಿ ರೇಗನ್ ಸಲಹೆ ನೀಡಿದ್ದರು ಎಂಬುದು ಗಮನಾರ್ಹ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಈ ವಿಮಾನಗಳು 4,000 ಚದರ ಅಡಿ ಒಳಾಂಗಣ ವಿಸ್ತೀರ್ಣವನ್ನು ಹೊಂದಿವೆ. ಈ ವಿಮಾನಗಳಲ್ಲಿ ಪ್ರಪಂಚದ ಯಾವುದೇ ಮೂಲೆಗೆ ಫೋನ್ ಮೂಲಕ ಸಂವಹನ ನಡೆಸಲು ಅತ್ಯಾಧುನಿಕ ರೇಡಾರ್ ತಂತ್ರಜ್ಞಾನವನ್ನು ನೀಡಲಾಗಿದೆ. ಈ ವಿಮಾನಗಳು ಕ್ಷಿಪಣಿ ವಿರೋಧಿ ಶೀಲ್ಡ್'ಗಳನ್ನು ಸಹ ಹೊಂದಿವೆ.

ಈ ವಿಮಾನವು ಬ್ಲಡ್ ಬ್ಯಾಂಕ್, ಸಣ್ಣ ಆಪರೇಟಿಂಗ್ ಥಿಯೇಟರ್ ಹಾಗೂ ವಿಶ್ರಾಂತಿ ಕೋಣೆಗಳನ್ನು ಹೊಂದಿದೆ. ವೈದ್ಯರು ಹಾಗೂ ಅಧಿಕಾರಿಗಳಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ದೀರ್ಘ ಪ್ರಯಾಣಕ್ಕೆ ಬೇಕಾದ ಎಲ್ಲಾ ಫೀಚರ್'ಗಳನ್ನು ನೀಡಲಾಗಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಜನರಲ್ ಎಲೆಕ್ಟ್ರಿಕ್'ನ 4 ಎಂಜಿನ್ ಹೊಂದಿರುವ ಈ ವಿಮಾನವು 930 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಜೊತೆಗೆ 12,600 ಕಿ.ಮೀ ದೂರ ಸಾಗುವ ಸಾಮರ್ಥ್ಯವನ್ನು ಹೊಂದಿದೆ. ಈ ವಿಮಾನಕ್ಕೆ ಮಾರ್ಗ ಮಧ್ಯದಲ್ಲಿಯೇ ಇಂಧನ ತುಂಬಿಸಬಹುದು. ಅಮೆರಿಕಾದ ಗುಪ್ತಚರ ಇಲಾಖೆಯಿಂದ ತರಬೇತಿ ಪಡೆದ ಇಬ್ಬರು ಪೈಲಟ್‌ಗಳು, ಎಂಜಿನಿಯರ್ ಹಾಗೂ ಮಾರ್ಗದರ್ಶನ ತಜ್ಞರು ಈ ವಿಮಾನದಲ್ಲಿ ಕಾರ್ಯನಿರ್ವಹಿಸುತ್ತಾರೆ.

ಇನ್ನು ಈ ವಿಮಾನದ ಖರ್ಚು ವೆಚ್ಚದ ಬಗ್ಗೆ ಹೇಳುವುದಾದರೆ, ಅಮೆರಿಕನ್ ಏರ್ ಫೋರ್ಸ್ ಒನ್ ವಿಮಾನವನ್ನು ನಿರ್ವಹಿಸಲು ಗಂಟೆಗೆ 2.10 ಮಿಲಿಯನ್ ಡಾಲರ್ಖರ್ಚಾಗುತ್ತದೆ. ಅಮೆರಿಕಾ ಅಧ್ಯಕ್ಷರ ಭದ್ರತೆಗಾಗಿ ಇಷ್ಟೊಂದು ಹಣವನ್ನು ವ್ಯಯಿಸಲಾಗುತ್ತದೆ.