ವಿಭಿನ್ನ ಅನುಭವ ನೀಡುವ ಪೈಲಟ್ ಉದ್ಯೋಗದ ಬಗೆಗಿನ ರೋಚಕ ಸಂಗತಿಗಳಿವು

ಹಿಂದಿನ ದಿನಗಳಲ್ಲಿ ಶಾಲಾ ವಿದ್ಯಾರ್ಥಿಗಳು ಮುಂದೆ ಏನಾಗ ಬಯಸುವಿರಿ ಎಂದು ಶಿಕ್ಷಕರು ಕೇಳುತ್ತಿದ್ದ ಪ್ರಶ್ನೆಗೆ ಪೈಲಟ್ ಆಗುತ್ತೇವೆ ಎಂದು ಉತ್ತರಿಸುತ್ತಿದ್ದರು. ವಿಮಾನ ಹಾಗೂ ಪೈಲಟ್‌ಗಳ ಮೇಲಿನ ಒಲವು ಇದಕ್ಕೆ ಪ್ರಮುಖ ಕಾರಣ.

ವಿಭಿನ್ನ ಅನುಭವ ನೀಡುವ ಪೈಲಟ್ ಉದ್ಯೋಗದ ಬಗೆಗಿನ ರೋಚಕ ಸಂಗತಿಗಳಿವು

ವಾಸ್ತವದಲ್ಲಿ ಪೈಲಟ್ ಉದ್ಯೋಗವು ವಿಶ್ವದ ಅತ್ಯುತ್ತಮ ಉದ್ಯೋಗಗಳಲ್ಲಿ ಒಂದು ಎಂದು ಹೇಳಬಹುದು. ಪೈಲಟ್ ಉದ್ಯೋಗದ ಬಗೆಗಿನ ರೋಚಕ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ವಿಭಿನ್ನ ಅನುಭವ ನೀಡುವ ಪೈಲಟ್ ಉದ್ಯೋಗದ ಬಗೆಗಿನ ರೋಚಕ ಸಂಗತಿಗಳಿವು

ವಿಭಿನ್ನ ಉದ್ಯೋಗದ ಸ್ಥಳಗಳು

ಪೈಲಟ್ ಆದರೆ ಹಿಂದೆಂದೂ ನೋಡಿರದ ಸ್ಥಳಗಳಿಗೆ ಪ್ರಯಾಣಿಸಬಹುದು. ವಿಮಾನಗಳು ಹಾರಾಟ ನಡೆಸುವ ಮುನ್ನ ಬಿಡುವಿನ ವೇಳೆಯಲ್ಲಿ ಪೈಲಟ್‌ಗಳು ವಿವಿಧ ನಗರಗಳ ಸುತ್ತಲೂ ಇರುವ ಪ್ರೇಕ್ಷಣೀಯ ಸ್ಥಳಗಳನ್ನು ನೋಡಬಹುದು. ಜೊತೆಗೆ ವಿಭಿನ್ನ ಸಂಸ್ಕೃತಿಗಳ ಬಗ್ಗೆ ತಿಳಿದುಕೊಳ್ಳಬಹುದು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ವಿಭಿನ್ನ ಅನುಭವ ನೀಡುವ ಪೈಲಟ್ ಉದ್ಯೋಗದ ಬಗೆಗಿನ ರೋಚಕ ಸಂಗತಿಗಳಿವು

ಪೈಲಟ್‌ಗಳು ಕೆಲಸದ ದಿನಗಳಲ್ಲಿ ಒಂದೇ ಸ್ಥಳದಲ್ಲಿರುವುದಿಲ್ಲ. ಪೈಲಟ್‌ಗಳು ಒಂದು ದಿನ ದೆಹಲಿಯಲ್ಲಿದ್ದರೆ, ಮತ್ತೊಂದು ದಿನ ಲಂಡನ್‌ನಲ್ಲಿರುತ್ತಾರೆ. ಹೀಗೆ ವಿಭಿನ್ನ ಸ್ಥಳಗಳಲ್ಲಿರುವ ಕಾರಣ ಅವರು ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳುವ ಸಾಧ್ಯತೆಗಳು ಕಡಿಮೆ.

ವಿಭಿನ್ನ ಅನುಭವ ನೀಡುವ ಪೈಲಟ್ ಉದ್ಯೋಗದ ಬಗೆಗಿನ ರೋಚಕ ಸಂಗತಿಗಳಿವು

ಆಕಾಶದಲ್ಲಿ ಕೆಲಸ

ಬಹುತೇಕ ಜನರು ಭೂಮಿಯ ಮೇಲೆ ಕಾರ್ಯ ನಿರ್ವಹಿಸುತ್ತಾರೆ. ಆದರೆ ಪೈಲಟ್‌ಗಳು ಮಾತ್ರ ಆಕಾಶದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ವಿಶಾಲವಾದ, ಅಂತ್ಯವಿಲ್ಲದ ನೀಲಿ ಆಕಾಶವನ್ನು ಆನಂದಿಸುತ್ತಾ ಆಹ್ಲಾದಕರ ಅನುಭವ ಪಡೆಯುವ ಅವಕಾಶವಿರುವುದು ಪೈಲಟ್‌ಗಳಿಗೆ ಮಾತ್ರ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ವಿಭಿನ್ನ ಅನುಭವ ನೀಡುವ ಪೈಲಟ್ ಉದ್ಯೋಗದ ಬಗೆಗಿನ ರೋಚಕ ಸಂಗತಿಗಳಿವು

ಉಚಿತ ವಿಮಾನ ಟಿಕೆಟ್

ಪೈಲಟ್‌ಗಳು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಾಣಿಸುತ್ತಲೇ ಇರುತ್ತಾರೆ. ಆದರೆ ಎಲ್ಲಾ ಸಮಯದಲ್ಲೂ ಏಕಾಂಗಿಯಾಗಿ ಪ್ರಯಾಣಿಸುವುದಕ್ಕಿಂತ ಸ್ನೇಹಿತರು ಹಾಗೂ ಕುಟುಂಬದೊಂದಿಗೆ ಪ್ರಯಾಣಿಸುವುದರ ಆನಂದವೇ ಬೇರೆ.

ವಿಭಿನ್ನ ಅನುಭವ ನೀಡುವ ಪೈಲಟ್ ಉದ್ಯೋಗದ ಬಗೆಗಿನ ರೋಚಕ ಸಂಗತಿಗಳಿವು

ಪೈಲಟ್‌ಗಳ ಸ್ನೇಹಿತರು ಹಾಗೂ ಕುಟುಂಬದವರಿಗೆ ರಿಯಾಯಿತಿ ದರದಲ್ಲಿ ಟಿಕೆಟ್ ದೊರೆಯುತ್ತದೆ. ಕೆಲವೊಮ್ಮೆ ಉಚಿತವಾಗಿ ಟಿಕೆಟ್'ಗಳು ಸಹ ದೊರೆಯುತ್ತವೆ. ಗಮನಿಸಬೇಕಾದ ಸಂಗತಿಯೆಂದರೆ ಕೆಲವು ಹೋಟೆಲ್‌ಗಳು ಪೈಲಟ್‌ಗಳಿಗೆ ರಿಯಾಯಿತಿ ದರದಲ್ಲಿ ಕೊಠಡಿಗಳನ್ನು ನೀಡುತ್ತವೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ವಿಭಿನ್ನ ಅನುಭವ ನೀಡುವ ಪೈಲಟ್ ಉದ್ಯೋಗದ ಬಗೆಗಿನ ರೋಚಕ ಸಂಗತಿಗಳಿವು

ಹೊಸ ಜನರೊಂದಿಗೆ ಭೇಟಿ

ಪೈಲಟ್‌ಗಳು ಪ್ರತಿ ದಿನ ಹೊಸ ಜನರನ್ನು ಭೇಟಿ ಮಾಡಲು ಸಾಧ್ಯವಾಗುತ್ತದೆ. ವಿವಿಧ ದೇಶಗಳ, ವಿವಿಧ ಸಂಸ್ಕೃತಿಗಳ ಜನರೊಂದಿಗೆ ಸಂವಹನ ನಡೆಸಲು ಸಾಧ್ಯವಾಗುತ್ತದೆ. ಫ್ಲೈಟ್ ಅಟೆಂಡೆಂಟ್‌ಗಳಿಂದ, ಪ್ರಯಾಣಿಕರವರೆಗೆ ಹೊಸ ಜನರನ್ನು ಭೇಟಿ ಮಾಡಬಹುದು.

ವಿಭಿನ್ನ ಅನುಭವ ನೀಡುವ ಪೈಲಟ್ ಉದ್ಯೋಗದ ಬಗೆಗಿನ ರೋಚಕ ಸಂಗತಿಗಳಿವು

ಕೆಲಸದ ಭದ್ರತೆ

ಹೆಚ್ಚಿನ ಉದ್ಯೋಗ ಭದ್ರತೆ ಹೊಂದಿರುವ ಕೆಲಸಗಳಲ್ಲಿ ಪೈಲಟ್ ಕೆಲಸವೂ ಒಂದು. ಪೈಲಟ್‌ಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಸದ್ಯಕ್ಕೆ ಕರೋನಾ ವೈರಸ್ ಸಮಸ್ಯೆಯಿಂದ ವಾಯುಯಾನ ಕ್ಷೇತ್ರವು ತತ್ತರಿಸಿರುವುದು ನಿಜವೇ ಆದರೂ ಮುಂಬರುವ ದಿನಗಳಲ್ಲಿ ಚೇತರಿಸಿಕೊಳ್ಳಲಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ವಿಭಿನ್ನ ಅನುಭವ ನೀಡುವ ಪೈಲಟ್ ಉದ್ಯೋಗದ ಬಗೆಗಿನ ರೋಚಕ ಸಂಗತಿಗಳಿವು

ಇತ್ತೀಚಿನ ವರ್ಷಗಳಲ್ಲಿ ವಿಮಾನದಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದರಿಂದಾಗಿ ಪೈಲಟ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತದೆ ಎಂದು ವಿಮಾನಯಾನ ಕ್ಷೇತ್ರದ ತಜ್ಞರು ಹೇಳುತ್ತಾರೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Interesting things about airline pilot job. Read in Kannada.
Story first published: Saturday, January 23, 2021, 9:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X