ವಿಮಾನಗಳಲ್ಲಿ ಬಳಸಲಾಗುವ ಟೈರ್‌ಗಳ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿಗಳಿವು..

ವಿಮಾನಗಳ ನಿರ್ಮಾಣ ಪ್ರಕ್ರಿಯೆಯಲ್ಲಿ ಪ್ರತಿಯೊಂದು ತಾಂತ್ರಿಕ ಅಂಶಗಳು ಕೂಡಾ ಸಾಕಷ್ಟು ವಿಶೇಷತೆಗಳನ್ನು ಹೊಂದಿದ್ದು, ವಿಮಾನಗಳಲ್ಲಿ ಬಳಸಲಾಗುವ ಟೈರ್‌ಗಳ ವಿಶೇಷತೆಗಳ ಕುರಿತಾಗಿ ಈ ಲೇಖನದಲ್ಲಿ ಚರ್ಚಿಸಲಾಗಿದೆ.

ವಿಮಾನಗಳಲ್ಲಿ ಬಳಸಲಾಗುವ ಟೈರ್‌ಗಳ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿಗಳಿವು..

ವಿಮಾನಗಳು ಹೆಚ್ಚಿನ ಕಾಲ ಆಕಾಶದಲ್ಲಿ ಹಾರಿದರೂ ಕೂಡಾ ಟೇಕ್-ಆಫ್, ಲ್ಯಾಂಡಿಂಗ್ ಮತ್ತು ರನ್‌ವೇಯಲ್ಲಿ ಪ್ರಯಾಣಿಸಲು ಟೈರ್‌ಗಳು ಅತ್ಯಗತ್ಯವಾಗಿದ್ದು, ವಿಮಾನಗಳಲ್ಲಿ ಸಾಂಪ್ರದಾಯಿಕ ಆಟೋಮೊಬೈಲ್‌ಗಳಿಗೆ ವಿಭಾಗದಲ್ಲಿ ಬಳಸಲಾಗುವ ಟೈರ್‌ಗಳ ಬದಲಾಗಿ ವಿಶೇಷ ತಂತ್ರಜ್ಞಾನ ಪ್ರೇರಿತ ಟೈರ್‌ಗಳನ್ನು ಬಳಸಲಾಗುತ್ತದೆ.

ವಿಮಾನಗಳಲ್ಲಿ ಬಳಸಲಾಗುವ ಟೈರ್‌ಗಳ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿಗಳಿವು..

ತೂಕವು ಹೆಚ್ಚಿರುವ ಕಾರಣ ವಿಮಾನಗಳಲ್ಲಿ ಭಾರವಾದ ಟೈರ್‌ಗಳನ್ನು ಬಳಸಲಾಗುತ್ತಿದ್ದು, ಟೈರ್ ಉತ್ಪಾದನಾ ಕಂಪನಿಗಳು ವಿಮಾನದ ಟೈರ್‌ಗಳನ್ನು ವಿವಿಧ ರೀತಿಯ ತಾಪಮಾನಗಳನ್ನು ತಡೆದುಕೊಳ್ಳುವಂತೆ ನಿರ್ಮಾಣ ಮಾಡಿರುತ್ತವೆ.

ವಿಮಾನಗಳಲ್ಲಿ ಬಳಸಲಾಗುವ ಟೈರ್‌ಗಳ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿಗಳಿವು..

ವಿಶೇಷವಾಗಿ ವಿಮಾನ ಬಳಸಲಾಗುವ ಟೈರ್‌ಗಳು 10 ಸಾವಿರ ಮೀಟರ್ ಎತ್ತರದಲ್ಲಿ ಹಾರುವಾಗ ಮೈನಸ್ 60 ಡಿಗ್ರಿ ಸೆಲ್ಸಿಯಸ್ ಅತಿ ಶೀತ ವಾತಾವರಣದಲ್ಲಿ ಮತ್ತು ಅದೇ ಸಮಯದಲ್ಲಿ ಪ್ರಪಂಚದ ಅತಿ ಬಿಸಿ ಪ್ರದೇಶಗಳಲ್ಲೂ ಇವು ಯಾವುದೇ ರೀತಿ ಹಾನಿಗೊಳಗಾದಂತೆ ಅಭಿವೃದ್ದಿಪಡಿಸಲಾಗಿರುತ್ತದೆ. ಇದರ ಜೊತೆಗೆ ಇನ್ನು ಹಲವು ಕಾರಣಗಳಿಂದ ವಿಮಾನಗಳಲ್ಲಿರುವ ಟೈರ್‌ಗಳು ಸಾಮಾನ್ಯ ವಾಹನಗಳ ಟೈರ್‌ಗಳಿಂತಲೂ ಭಿನ್ನವಾಗಿರುತ್ತವೆ.

ವಿಮಾನಗಳಲ್ಲಿ ಬಳಸಲಾಗುವ ಟೈರ್‌ಗಳ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿಗಳಿವು..

ಥ್ರೆಡ್ ಪ್ಯಾಟರ್ನ್‌ನೊಂದಿಗೆ ಅಭಿವೃದ್ದಿ

ವಿಮಾನದ ಟೈರ್‌ಗಳ ಚಕ್ರದ ಹೊರಮೈಯಲ್ಲಿರುವ ಮಾದರಿಯು ಸಾಂಪ್ರದಾಯಿಕ ಆಟೋಮೊಬೈಲ್‌ಗಳಲ್ಲಿ ಬಳಸುವ ಟೈರ್‌ಗಳ ಚಕ್ರದ ಹೊರಮೈ ಮಾದರಿಗಿಂತಲೂ ತುಸು ಭಿನ್ನವಾಗಿರುತ್ತವೆ.

ವಿಮಾನಗಳಲ್ಲಿ ಬಳಸಲಾಗುವ ಟೈರ್‌ಗಳ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿಗಳಿವು..

ವೇಗದ ರಭಸವನ್ನು ತಡೆಯು ಗುಣ ಹೊಂದಿರುವ ವಿಮಾನದ ಟೈರ್‌ಗಳು ಹೆಚ್ಚಿನ ಗಾಳಿಯ ಅವಧಿಯಲ್ಲಿ ಸ್ಥಿರತೆಯನ್ನು ಹೆಚ್ಚಿಸಲು ಸಹಕಾರಿಯಾಗಲಿದ್ದು, ಥ್ರೆಡ್ ಮಾದರಿಯು ವಿನ್ಯಾಸವು ಟೈರ್ ಮತ್ತು ಟ್ರ್ಯಾಕ್ ನಡುವೆ ಉತ್ತಮವಾಗ ಬಿಗಿಹಿಡಿತ ರಚಿಸಲು ಸಹಾಯ ಮಾಡುತ್ತವೆ.

ವಿಮಾನಗಳಲ್ಲಿ ಬಳಸಲಾಗುವ ಟೈರ್‌ಗಳ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿಗಳಿವು..

ಹೀಗಾಗಿ ಬಲವಾದ ಗಾಳಿಯ ಸಮಯದಲ್ಲೂ ವಿಮಾನದ ಚಲನೆಯು ಹಿಡಿತ ತಂದುಕೊಳ್ಳಲು ಬಲವಾದ ಥ್ರೆಡ್ ಮಾದರಿಯು ಸಹಕಾರಿಯಾಗಲಿದ್ದು, ಇವು ಹೈಡ್ರೋಪ್ಲೇನಿಂಗ್ ಅಪಾಯವನ್ನು ಕಡಿಮೆ ಮಾಡುತ್ತವೆ.

ವಿಮಾನಗಳಲ್ಲಿ ಬಳಸಲಾಗುವ ಟೈರ್‌ಗಳ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿಗಳಿವು..

ರಸ್ತೆಗಳಲ್ಲಿ ವಾಹನಗಳು ಅಥವಾ ರನ್‌ವೇಗಳಲ್ಲಿ ವಿಮಾನ ಅಥವಾ ಇತರೆ ಚಕ್ರಗಳ ವಾಹನದ ಟೈರ್‌ಗಳಿಂದ ಅಕ್ವಾಪ್ಲೇನಿಂಗ್ ಅಥವಾ ಹೈಡ್ರೊಪ್ಲೇನಿಂಗ್ ಸಂಭವಿಸುತ್ತದೆ. ಚಕ್ರಗಳು ಮತ್ತು ರಸ್ತೆ ಮೇಲ್ಮೈಗಳ ನಡುವೆ ನೀರಿನ ಪದರವು ನಿರ್ಮಿಸಿದಾಗ ಅದರ ಎಳೆತವು ಅಪಘಾತಗಳಿಗೆ ಕಾರಣವಾಗುತ್ತದೆ.

ವಿಮಾನಗಳಲ್ಲಿ ಬಳಸಲಾಗುವ ಟೈರ್‌ಗಳ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿಗಳಿವು..

ಆದರೆ ವಿಮಾನದ ಟೈರ್‌ಗಳ ಬಲವಾದ ಥ್ರೆಡ್ ಮಾದರಿಯು ವಿಮಾನವು ಹೈಡ್ರೋಪ್ಲೇನಿಂಗ್ ಅಪಾಯಕ್ಕೆ ಒಡ್ಡಿಕೊಳ್ಳುವ ಸಾಧ್ಯತೆಯನ್ನು ಕಡಿಮೆ ಮಾಡಲಿದ್ದು, ಇದು ಪ್ರಯಾಣಿಕರು ಸೇರಿದಂತೆ ಪ್ರತಿಯೊಬ್ಬರ ಸುರಕ್ಷತೆಯನ್ನು ಖಾತ್ರಿಗೊಳಿಸುತ್ತದೆ.

ವಿಮಾನಗಳಲ್ಲಿ ಬಳಸಲಾಗುವ ಟೈರ್‌ಗಳ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿಗಳಿವು..

ಟೈರ್‌ಗಳಲ್ಲಿದೆ ಸಾರಜನಕ

ಸಾಮಾನ್ಯ ವಾಹನಗಳಲ್ಲಿ ಟೈರ್‌ಗಳಿಗೆ ಸಾಮಾನ್ಯ ಗಾಳಿಯನ್ನು ತುಂಬಿಸಿಲಾಗುತ್ತದೆ. ಆದರೆ ವಿಮಾನದ ಟೈರ್‌ಗಳಲ್ಲಿ ಕಡ್ಡಾಯವಾಗಿ ಸಾರಜನಕ ಅನಿಲವನ್ನು ತುಂಬಿಸಲಾಗುತ್ತಿದೆ. (ಇದೀಗ ಸಾಂಪ್ರದಾಯಿಕ ವಾಹನಗಳ ಟೈರ್‌ಗಳಲ್ಲೂ ಕೂಡಾ ಸಾರಜನಕ ಅನಿಲವನ್ನು ತುಂಬಿಸುವುದು ಸಾಮಾನ್ಯವಾಗುತ್ತಿದೆ)

ವಿಮಾನಗಳಲ್ಲಿ ಬಳಸಲಾಗುವ ಟೈರ್‌ಗಳ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿಗಳಿವು..

ಈ ಹಿಂದೆ ವಿಮಾನಗಳಲ್ಲಿ ಆಮ್ಲಜನಕ ತುಂಬಿದ ಟೈರ್‌ಗಳನ್ನೇ ಬಳಸುತ್ತಿದ್ದವು. ಆದರೆ ಆಮ್ಲಜನಕ ತುಂಬಿದ ಟೈರ್ ಬಳಕೆಯು ಟೈರ್ ಸ್ಫೋಟಕ್ಕೆ ಕಾರಣವಾಗುತ್ತಿದ್ದು ತನಿಖೆಗಳಲ್ಲಿ ಸಾಬೀತಾಗಿದ್ದವು. ಇದರಿಂದಾಗಿ ವಿಮಾನದ ಟೈರ್‌ಗಳನ್ನು ಇದೀಗ ಆಮ್ಲಜನಕದ ಬದಲಾಗಿ ಸಾರಜನಕವನ್ನೇ ಸುರಕ್ಷಿತ ಆಯ್ಕೆಯಾಗಿ ನೋಡಲಾಗುತ್ತದೆ.

ವಿಮಾನಗಳಲ್ಲಿ ಬಳಸಲಾಗುವ ಟೈರ್‌ಗಳ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿಗಳಿವು..

ಏಕೆಂದರೆ ಸಾರಜನಕವನ್ನು ಸಾಮಾನ್ಯವಾಗಿ 'ಜಡ' ಅನಿಲವೆಂದು ಪರಿಗಣಿಸಲಾಗುತ್ತದೆ. ಅಂದರೆ ಜಡವಾಗಿರುವ ಅನಿಲ ಎನ್ನಬಹುದಾಗಿದ್ದು, ಇದು ಇತರೆ ಯಾವುದೇ ರಾಸಾಯನಿಕಗಳೊಂದಿಗೆ ಪ್ರತಿಕ್ರಿಯಿಸುವುದಿಲ್ಲ. ಆದ್ದರಿಂದ ಸಾರಜನಕವು ದಹಿಸುವ ಯಾವುದೇ ಗುಣಗಳನ್ನು ಹೊಂದಿಲ್ಲ. ಇದೇ ಇದಕ್ಕಾಗಿಯೇ ವಿಮಾನದ ಟೈರ್‌ಗಳಲ್ಲಿ ಸಾರಜನಕವನ್ನು ತುಂಬುವುದು ಸುರಕ್ಷಿತವೆಂದು ಪರಿಗಣಿಸಲಾಗಿದೆ.

ವಿಮಾನಗಳಲ್ಲಿ ಬಳಸಲಾಗುವ ಟೈರ್‌ಗಳ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿಗಳಿವು..

ಟೈರ್ ಬದಲಾವಣೆಯ ಮಾನದಂಡಗಳು

ಸಾಮಾನ್ಯವಾಗಿ ವಿಮಾನಯಾನ ಕಂಪನಿಗಳು 120 ರಿಂದ 400 ಲ್ಯಾಂಡಿಂಗ್ ಮಾಡಿದ ನಂತರ ವಿಮಾನದ ಟೈರ್‌ಗಳನ್ನು ಬದಲಾಯಿಸಲಾಗುತ್ತವೆ. ಆದರೆ ಈ ಸಂಖ್ಯೆಯು ಕೆಲವು ವಿಮಾನ ಮಾದರಿ, ರನ್‌ವೇ ಸೌಲಭ್ಯ, ಹವಾಮಾನ ಮತ್ತು ಪೈಲಟ್‌ನಂತಹ ವಿವಿಧ ಅಂಶಗಳನ್ನು ಅವಲಂಬಿಸಿ ಬದಲಾಯಿಸಲಾಗುತ್ತದೆ.

ವಿಮಾನಗಳಲ್ಲಿ ಬಳಸಲಾಗುವ ಟೈರ್‌ಗಳ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿಗಳಿವು..

ಹೀಗಾಗಿ ವಿವಿಧ ಅಂಶಗಳನ್ನು ಆಧರಿಸಿ ಕನಿಷ್ಠ120 ರಿಂದ ಗರಿಷ್ಠ 400 ಬಾರಿ ಲ್ಯಾಂಡಿಂಗ್ ನಂತರ ಟೈರ್‌ಗಳನ್ನು ಕಡ್ಡಾಯವಾಗಿ ಬದಲಾವಣೆ ಮಾಡಲಾಗುತ್ತದೆ. ಇನ್ನೊಂದು ಪ್ರಮುಖ ವಿಚಾರವೆಂದರೆ ವಿಮಾನಗಳ ಟೈರ್ ಪಂಚರ್ ಆಗಿ ಸಂದರ್ಭಗಳು ತೀರಾ ಕಡಿಮೆ ಎನ್ನಬಹುದು.

ವಿಮಾನಗಳಲ್ಲಿ ಬಳಸಲಾಗುವ ಟೈರ್‌ಗಳ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿಗಳಿವು..

ಪ್ರಮುಖ ಕಂಪನಿಗಳಿಂದ ವಿಮಾನ ಟೈರ್ ಉತ್ಪಾದನೆ

ಮಾರುಕಟ್ಟೆಯಲ್ಲಿ ವಿಮಾನಯಾನ ಕಂಪನಿಗಳ ಬೇಡಿಕೆಯೆಂತೆ ವಿವಿಧ ರೀತಿಯ ಟೈರ್‌ಗಳನ್ನು ಉತ್ಪಾದನೆ ಮಾಡುವ ಹಲವಾರು ಕಂಪನಿಗಳಿವೆ. ಆದರೆ ಗುಡ್‌ಇಯರ್, ಮೈಕೆಲಿನ್, ಡನ್‌ಲಾಪ್ ಮತ್ತು ಬ್ರಿಡ್ಜ್‌ಸ್ಟೋನ್‌ನಂತಹ ಕಂಪನಿಗಳು ವಿಮಾನ ಟೈರ್‌ಗಳ ಉತ್ಪಾದನೆಯಲ್ಲಿ ಪ್ರಾಬಲ್ಯ ಹೊಂದಿವೆ. ಈ ಕಂಪನಿಗಳು ಸಾಂಪ್ರದಾಯಿಕ ಆಟೋಮೊಬೈಲ್‌ಗಳಿಗೆ ಟೈರ್‌ಗಳನ್ನು ಸಹ ತಯಾರಿಸುತ್ತಿದ್ದು, ವಿಮಾನಯಾನದ ಟೈರ್‌ಗಳನ್ನು ಹಲವಾರು ಸುರಕ್ಷಾ ಮಾನದಂತ ಅನುಸಾರವಾಗಿ ಸುಧಾರಿತ ತಂತ್ರಜ್ಞಾನದೊಂದಿಗೆ ತಯಾರಿಸಲಾಗುತ್ತದೆ.

Most Read Articles

Kannada
Read more on ವಿಮಾನ plane
English summary
Interesting things about airplane tires details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X