Just In
- 12 hrs ago ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- 13 hrs ago Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- 14 hrs ago Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- 15 hrs ago ಮಿಂಚಿನ ವೇಗಕ್ಕೆ ಸರಿಸಾಟಿಯಾಗಿ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ: 323KM ರೇಂಜ್
Don't Miss!
- News ರಾಜ್ಯದ ವಿವಿಧೆಡೆ ಮಳೆರಾಯನ ಆರ್ಭಟ; ಕರ್ನಾಟಕದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟು ? ಇಲ್ಲಿದೆ ಸಂಪೂರ್ಣ ವಿವರ
- Sports 'ಟಿ20 ವಿಶ್ವಕಪ್ಗೆ ಈತನನ್ನು ಆಯ್ಕೆ ಮಾಡಿ'; ಅಜಿತ್ ಅಗರ್ಕರ್ಗೆ ಬಂತು ದೊಡ್ಡ ಮನವಿ!
- Finance ಡಾ. ರಾಜ್ಕುಮಾರ್ ಜನ್ಮದಿನದಂದು ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಾರತದ ಐಫೆಲ್ ಟವರ್ ಖ್ಯಾತಿಯ ಸಿಗ್ನೇಚರ್ ಸೇತುವೆಯ ಸ್ಪೆಷಾಲಿಟಿ ಏನು ಗೊತ್ತಾ?
ಸುಮಾರು 14 ವರ್ಷಗಳ ಸುದೀರ್ಘ ಕಾಮಗಾರಿಯ ಬಳಿಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಿಗ್ನೇಚರ್ ಸೇತುವೆಯ ಮೊನ್ನೆಯಷ್ಟೇ ಲೋಕಾರ್ಪಣೆಗೊಂಡಿದ್ದು, ದೆಹಲಿಯ ಪ್ರಮುಖ ಹೆಗ್ಗುರುತುಗಳ ಪಟ್ಟಿಯಲ್ಲಿ ಈ ಸೇತುವೆ ಇದೀಗ ಹೊಸದಾಗಿ ಸೇರ್ಪಡೆಯಾಗಿದೆ.
ದೆಹಲಿಯ ವಾಯುವ್ಯ ಭಾಗಕ್ಕೆ ನೆಲೆಗೊಂಡಿರುವ ವಜಿರಾಬಾದ್ನಲ್ಲಿ ಯಮುನಾ ನದಿಗೆ ನಿರ್ವಿುಸಿರಾಗಿರುವ ಸಿಗ್ನೇಚರ್ ಸೇತುವೆಯು ಹಲವು ಪರ-ವಿರೋಧಗಳ ನಡುವೆ ಅಂತಿಮವಾಗಿ ಸೇವೆಗೆ ತೆರೆದುಕೊಂಡಿದ್ದು, ಹತ್ತು ಹಲವು ವಿಶೇಷತೆಗಳನ್ನು ಹೊಂದಿರುವ ಈ ಸೇತುವೆಯು ವಿಶ್ವದರ್ಜೆಯ ಸೌಲಭ್ಯಗಳನ್ನು ಪಡೆದುಕೊಂಡಿದೆ ಅಂದ್ರೆ ನೀವು ನಂಬಲೇಬೇಕು.
ಮೊದಮೊದಲು ದೆಹಲಿ ಸರ್ಕಾರವು ಈ ಸೇತುವೆಯನ್ನು ಉತ್ತರ ಮತ್ತು ಈಶಾನ್ಯ ದೆಹಲಿ ನಡುವಿನ ಪ್ರಯಾಣದ ಅವಧಿಯನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದ್ದೆ ಆದರೂ, ತದನಂತರ ಈ ಸೇತುವೆಯನ್ನು ಪ್ರವಾಸಿ ತಾಣವನ್ನಾಗಿ ಪರಿವರ್ತಿಸುವ ಯೋಜನೆಗೆ ಚಾಲನೆ ನೀಡಿತ್ತು.
ಇದೇ ಕಾರಣಕ್ಕೆ ಆರಂಭದಲ್ಲಿ ಕೇವಲ 350 ಕೋಟಿ ವೆಚ್ಚದೊಂದಿಗೆ ಆರಂಭವಾದ ಸೇತುವೆಯ ಕಾಮಗಾರಿಯು ತದನಂತರ ರಾಜಕೀಯ ಕಿತ್ತಾಟಕ್ಕೆ ಕಾರಣವಾಗಿದ್ದಲ್ಲದೇ ಸರ್ಕಾರಗಳು ಬದಲಾದಂತೆ ಅದರ ಯೋಜನಾ ವೆಚ್ಚಗಳು ಕೂಡಾ ವರ್ಷದ ವರ್ಷಕ್ಕೆ ದುಪ್ಪಟ್ಟಾದವು.
ಹೀಗಾಗಿ 14 ವರ್ಷಗಳ ಅವಧಿಯಲ್ಲಿ ಸೇತುವೆ ನಿರ್ಮಾಣಕ್ಕಾಗಿ ಹೂಡಿಕೆ ಮಾಡಲಾದ ವೆಚ್ಚವು ಅಂತಿಮವಾಗಿ 1597 ಕೋಟಿ ತಲುಪಿದ್ದು, ಸದ್ಯ ಸಿಗ್ನೇಚರ್ ಸೇತುವೆಯ ಕಾಮಗಾರಿಯು ಮೊದಲ ಹಂತ ಮಾತ್ರವೇ ಪೂರ್ಣಗೊಂಡಿದೆ.
ಮುಂಬರುವ 2 ವರ್ಷಗಳ ಅವಧಿಯಲ್ಲಿ ಎರಡನೇ ಹಂತದ ಕಾಮಗಾರಿಗಳು ಸಹ ಪೂರ್ಣಗೊಳ್ಳುವ ನೀರಿಕ್ಷೆಗಳಿದ್ದು, ಇಂಜಿನಿಯರಿಂಗ್ ಅದ್ಭುತ ಎನಿಸಿಕೊಂಡಿರುವ ಈ ಸೇತುವೆಯು ಕೇವಲ ಸಂಚಾರಕ್ಕೆ ಮಾತ್ರವಲ್ಲದೆ ಪ್ರವಾಸಿಗರ ಹಾಟ್ ಸ್ಪಾಟ್ ಕೂಡಾ ಆಗಿದೆ.
ಬರೋಬ್ಬರಿ 154 ಮೀಟರ್ ಎತ್ತರ ಇರುವ ಸಿಗ್ನೇಚರ್ ಸೇತುವೆಯು 575 ಮೀಟರ್ ಉದ್ದ ಮತ್ತು 35.2 ಮೀಟರ್ ಅಗಲ ಹೊಂದಿದ್ದು, ಸೇತುವೆಯ ರಕ್ಷಣೆಗಾಗಿ ಹಾಕಲಾಗಿರುವ 127 ಕೇಬಲ್ ವೈರ್ಗಳ ಸೌಲಭ್ಯವು ಈ ಸೇತುವೆಯ ಪ್ರಮುಖ ಆಕರ್ಷಣೆಯಾಗಿದೆ.
ಸೇತುವೆಯು ನಿರ್ಮಾಣಕ್ಕಾಗಿ ಒಟ್ಟು 17,300 ಟನ್ ಕಬ್ಬಿಣ ಬಳಕೆ ಮಾಡಲಾಗಿದ್ದು, ಇದರಲ್ಲಿ ಸೇತುವೆಯ ತಳಭಾಗದ ನಿರ್ಮಾಣಕ್ಕಾಗಿಯೇ ಬರೋಬ್ಬರಿ 460 ಟನ್ ಕಬ್ಬಿಣವನ್ನು ಬಳಕೆ ಮಾಡಿದ್ದಾರಂತೆ. ಹೀಗಾಗಿಯೇ ಇದನ್ನು ಭಾರತದಲ್ಲಿ ಮೊದಲ ಅಸಿಮ್ಮೆಟ್ ಕೇಬಲ್ ಸೇತುವೆ ಎಂದು ಕರೆಯಲಾಗಿದೆ.
MOST READ: ಶಾಕಿಂಗ್ ನ್ಯೂಸ್: 10 ವರ್ಷ ಮೇಲ್ಪಟ್ಟ ಡೀಸೆಲ್ ಮತ್ತು 15 ವರ್ಷ ಮೇಲ್ಪಟ್ಟ ಪೆಟ್ರೋಲ್ ಕಾರುಗಳು ಬ್ಯಾನ್
ಇನ್ನು ಸಂಚಾರ ದಟ್ಟಣೆಗೆ ತಗ್ಗಿಸುವುದರ ಜೊತೆಗೆ ದೆಹಲಿ ಜನತೆಯ ಪಿಕ್ನಿಕ್ ಸ್ಪಾಟ್ ಪರಿವರ್ತನೆಯಾಗುವ ಸಿಗ್ನೇಚರ್ ಸೇತುವೆಯು ಕುತುಬ್ ಮಿನಾರ್ಗಿಂತ ಎರಡು ಪಟ್ಟು ಎತ್ತರದ ಗಾಜಿನ ಕೋಣೆ ಹೊಂದಿದ್ದು, ವಿಹಂಗಮ ನೋಟ ವೀಕ್ಷಣೆಗೆ ಗಾಜಿನ ಕೋಣೆ ಸಹಕಾರಿಯಾಗಿದೆ.
ಇದಕ್ಕಾಗಿ ಸೇತುವೆಯ ಮೇಲ್ಭಾಗಕ್ಕೆ ಹೋಗಲು 4 ಎಲಿವೇಟರ್ಗಳನ್ನು ಜೋಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಳ ಮಾಡುವ ಗುರಿಹೊಂದಲಾಗಿದೆ. ಒಟ್ಟಿನಲ್ಲಿ ದೆಹಲಿ ಜನತೆಗೆ ಇದೊಂದು ಪ್ರವಾಸಿ ತಾಣವಾಗಿ ಜನಪ್ರಿಯತೆ ಹೊಂದುವುದರಲ್ಲಿ ಯಾವುದೇ ಅನುಮಾನವಿಲ್ಲ.
MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!
ಇನ್ನೊಂದು ಪ್ರಮುಖ ವಿಚಾರ ಅಂದ್ರೆ, 104 ಸೆನ್ಸಾರ್ ಅಳವಡಿಕೆ ಹೊಂದಿರುವ ಸಿಗ್ನೇಚರ್ ಸೇತುವೆಯ ಮೇಲೆ ದಿನದ 24 ಗಂಟೆಯು ನಿಗಾ ಇರಲಿದ್ದು, ಯಾವುದೇ ರೀತಿಯ ಹಾನಿ ಸಂಭವಿಸಿದರೆ ಕೂಡಲೇ ಕಂಟ್ರೋಲ್ ರೂಂಗೆ ಮಾಹಿತಿ ರವಾನಿಸುವ ವ್ಯವಸ್ಥೆಯನ್ನು ಇಲ್ಲಿ ಅಳವಡಿಸಲಾಗಿದೆ.