ಭಾರತದ ಐಫೆಲ್ ಟವರ್ ಖ್ಯಾತಿಯ ಸಿಗ್ನೇಚರ್ ಸೇತುವೆಯ ಸ್ಪೆಷಾಲಿಟಿ ಏನು ಗೊತ್ತಾ?

ಸುಮಾರು 14 ವರ್ಷಗಳ ಸುದೀರ್ಘ ಕಾಮಗಾರಿಯ ಬಳಿಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಿಗ್ನೇಚರ್ ಸೇತುವೆಯ ಮೊನ್ನೆಯಷ್ಟೇ ಲೋಕಾರ್ಪಣೆಗೊಂಡಿದ್ದು, ದೆಹಲಿಯ ಪ್ರಮುಖ ಹೆಗ್ಗುರುತುಗಳ ಪಟ್ಟಿಯಲ್ಲಿ ಈ ಸೇತುವೆ ಇದೀಗ ಹೊಸದಾಗಿ ಸೇರ್ಪಡೆಯಾಗಿದೆ.

ಭಾರತದ ಐಫೆಲ್ ಟವರ್ ಖ್ಯಾತಿಯ ಸಿಗ್ನೇಚರ್ ಸೇತುವೆಯ ಸ್ಪೆಷಾಲಿಟಿ ಏನು ಗೊತ್ತಾ?

ದೆಹಲಿಯ ವಾಯುವ್ಯ ಭಾಗಕ್ಕೆ ನೆಲೆಗೊಂಡಿರುವ ವಜಿರಾಬಾದ್​ನಲ್ಲಿ ಯಮುನಾ ನದಿಗೆ ನಿರ್ವಿುಸಿರಾಗಿರುವ ಸಿಗ್ನೇಚರ್ ಸೇತುವೆಯು ಹಲವು ಪರ-ವಿರೋಧಗಳ ನಡುವೆ ಅಂತಿಮವಾಗಿ ಸೇವೆಗೆ ತೆರೆದುಕೊಂಡಿದ್ದು, ಹತ್ತು ಹಲವು ವಿಶೇಷತೆಗಳನ್ನು ಹೊಂದಿರುವ ಈ ಸೇತುವೆಯು ವಿಶ್ವದರ್ಜೆಯ ಸೌಲಭ್ಯಗಳನ್ನು ಪಡೆದುಕೊಂಡಿದೆ ಅಂದ್ರೆ ನೀವು ನಂಬಲೇಬೇಕು.

ಭಾರತದ ಐಫೆಲ್ ಟವರ್ ಖ್ಯಾತಿಯ ಸಿಗ್ನೇಚರ್ ಸೇತುವೆಯ ಸ್ಪೆಷಾಲಿಟಿ ಏನು ಗೊತ್ತಾ?

ಮೊದಮೊದಲು ದೆಹಲಿ ಸರ್ಕಾರವು ಈ ಸೇತುವೆಯನ್ನು ಉತ್ತರ ಮತ್ತು ಈಶಾನ್ಯ ದೆಹಲಿ ನಡುವಿನ ಪ್ರಯಾಣದ ಅವಧಿಯನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದ್ದೆ ಆದರೂ, ತದನಂತರ ಈ ಸೇತುವೆಯನ್ನು ಪ್ರವಾಸಿ ತಾಣವನ್ನಾಗಿ ಪರಿವರ್ತಿಸುವ ಯೋಜನೆಗೆ ಚಾಲನೆ ನೀಡಿತ್ತು.

ಭಾರತದ ಐಫೆಲ್ ಟವರ್ ಖ್ಯಾತಿಯ ಸಿಗ್ನೇಚರ್ ಸೇತುವೆಯ ಸ್ಪೆಷಾಲಿಟಿ ಏನು ಗೊತ್ತಾ?

ಇದೇ ಕಾರಣಕ್ಕೆ ಆರಂಭದಲ್ಲಿ ಕೇವಲ 350 ಕೋಟಿ ವೆಚ್ಚದೊಂದಿಗೆ ಆರಂಭವಾದ ಸೇತುವೆಯ ಕಾಮಗಾರಿಯು ತದನಂತರ ರಾಜಕೀಯ ಕಿತ್ತಾಟಕ್ಕೆ ಕಾರಣವಾಗಿದ್ದಲ್ಲದೇ ಸರ್ಕಾರಗಳು ಬದಲಾದಂತೆ ಅದರ ಯೋಜನಾ ವೆಚ್ಚಗಳು ಕೂಡಾ ವರ್ಷದ ವರ್ಷಕ್ಕೆ ದುಪ್ಪಟ್ಟಾದವು.

ಭಾರತದ ಐಫೆಲ್ ಟವರ್ ಖ್ಯಾತಿಯ ಸಿಗ್ನೇಚರ್ ಸೇತುವೆಯ ಸ್ಪೆಷಾಲಿಟಿ ಏನು ಗೊತ್ತಾ?

ಹೀಗಾಗಿ 14 ವರ್ಷಗಳ ಅವಧಿಯಲ್ಲಿ ಸೇತುವೆ ನಿರ್ಮಾಣಕ್ಕಾಗಿ ಹೂಡಿಕೆ ಮಾಡಲಾದ ವೆಚ್ಚವು ಅಂತಿಮವಾಗಿ 1597 ಕೋಟಿ ತಲುಪಿದ್ದು, ಸದ್ಯ ಸಿಗ್ನೇಚರ್ ಸೇತುವೆಯ ಕಾಮಗಾರಿಯು ಮೊದಲ ಹಂತ ಮಾತ್ರವೇ ಪೂರ್ಣಗೊಂಡಿದೆ.

ಭಾರತದ ಐಫೆಲ್ ಟವರ್ ಖ್ಯಾತಿಯ ಸಿಗ್ನೇಚರ್ ಸೇತುವೆಯ ಸ್ಪೆಷಾಲಿಟಿ ಏನು ಗೊತ್ತಾ?

ಮುಂಬರುವ 2 ವರ್ಷಗಳ ಅವಧಿಯಲ್ಲಿ ಎರಡನೇ ಹಂತದ ಕಾಮಗಾರಿಗಳು ಸಹ ಪೂರ್ಣಗೊಳ್ಳುವ ನೀರಿಕ್ಷೆಗಳಿದ್ದು, ಇಂಜಿನಿಯರಿಂಗ್ ಅದ್ಭುತ ಎನಿಸಿಕೊಂಡಿರುವ ಈ ಸೇತುವೆಯು ಕೇವಲ ಸಂಚಾರಕ್ಕೆ ಮಾತ್ರವಲ್ಲದೆ ಪ್ರವಾಸಿಗರ ಹಾಟ್ ಸ್ಪಾಟ್ ಕೂಡಾ ಆಗಿದೆ.

ಭಾರತದ ಐಫೆಲ್ ಟವರ್ ಖ್ಯಾತಿಯ ಸಿಗ್ನೇಚರ್ ಸೇತುವೆಯ ಸ್ಪೆಷಾಲಿಟಿ ಏನು ಗೊತ್ತಾ?

ಬರೋಬ್ಬರಿ 154 ಮೀಟರ್ ಎತ್ತರ ಇರುವ ಸಿಗ್ನೇಚರ್ ಸೇತುವೆಯು 575 ಮೀಟರ್ ಉದ್ದ ಮತ್ತು 35.2 ಮೀಟರ್ ಅಗಲ ಹೊಂದಿದ್ದು, ಸೇತುವೆಯ ರಕ್ಷಣೆಗಾಗಿ ಹಾಕಲಾಗಿರುವ 127 ಕೇಬಲ್ ವೈರ್‌ಗಳ ಸೌಲಭ್ಯವು ಈ ಸೇತುವೆಯ ಪ್ರಮುಖ ಆಕರ್ಷಣೆಯಾಗಿದೆ.

ಭಾರತದ ಐಫೆಲ್ ಟವರ್ ಖ್ಯಾತಿಯ ಸಿಗ್ನೇಚರ್ ಸೇತುವೆಯ ಸ್ಪೆಷಾಲಿಟಿ ಏನು ಗೊತ್ತಾ?

ಸೇತುವೆಯು ನಿರ್ಮಾಣಕ್ಕಾಗಿ ಒಟ್ಟು 17,300 ಟನ್ ಕಬ್ಬಿಣ ಬಳಕೆ ಮಾಡಲಾಗಿದ್ದು, ಇದರಲ್ಲಿ ಸೇತುವೆಯ ತಳಭಾಗದ ನಿರ್ಮಾಣಕ್ಕಾಗಿಯೇ ಬರೋಬ್ಬರಿ 460 ಟನ್ ಕಬ್ಬಿಣವನ್ನು ಬಳಕೆ ಮಾಡಿದ್ದಾರಂತೆ. ಹೀಗಾಗಿಯೇ ಇದನ್ನು ಭಾರತದಲ್ಲಿ ಮೊದಲ ಅಸಿಮ್ಮೆಟ್ ಕೇಬಲ್ ಸೇತುವೆ ಎಂದು ಕರೆಯಲಾಗಿದೆ.

MOST READ: ಶಾಕಿಂಗ್ ನ್ಯೂಸ್: 10 ವರ್ಷ ಮೇಲ್ಪಟ್ಟ ಡೀಸೆಲ್ ಮತ್ತು 15 ವರ್ಷ ಮೇಲ್ಪಟ್ಟ ಪೆಟ್ರೋಲ್ ಕಾರುಗಳು ಬ್ಯಾನ್

ಭಾರತದ ಐಫೆಲ್ ಟವರ್ ಖ್ಯಾತಿಯ ಸಿಗ್ನೇಚರ್ ಸೇತುವೆಯ ಸ್ಪೆಷಾಲಿಟಿ ಏನು ಗೊತ್ತಾ?

ಇನ್ನು ಸಂಚಾರ ದಟ್ಟಣೆಗೆ ತಗ್ಗಿಸುವುದರ ಜೊತೆಗೆ ದೆಹಲಿ ಜನತೆಯ ಪಿಕ್‌ನಿಕ್ ಸ್ಪಾಟ್‌ ಪರಿವರ್ತನೆಯಾಗುವ ಸಿಗ್ನೇಚರ್ ಸೇತುವೆಯು ಕುತುಬ್ ಮಿನಾರ್​ಗಿಂತ ಎರಡು ಪಟ್ಟು ಎತ್ತರದ ಗಾಜಿನ ಕೋಣೆ ಹೊಂದಿದ್ದು, ವಿಹಂಗಮ ನೋಟ ವೀಕ್ಷಣೆಗೆ ಗಾಜಿನ ಕೋಣೆ ಸಹಕಾರಿಯಾಗಿದೆ.

ಭಾರತದ ಐಫೆಲ್ ಟವರ್ ಖ್ಯಾತಿಯ ಸಿಗ್ನೇಚರ್ ಸೇತುವೆಯ ಸ್ಪೆಷಾಲಿಟಿ ಏನು ಗೊತ್ತಾ?

ಇದಕ್ಕಾಗಿ ಸೇತುವೆಯ ಮೇಲ್ಭಾಗಕ್ಕೆ ಹೋಗಲು 4 ಎಲಿವೇಟರ್‌ಗಳನ್ನು ಜೋಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಳ ಮಾಡುವ ಗುರಿಹೊಂದಲಾಗಿದೆ. ಒಟ್ಟಿನಲ್ಲಿ ದೆಹಲಿ ಜನತೆಗೆ ಇದೊಂದು ಪ್ರವಾಸಿ ತಾಣವಾಗಿ ಜನಪ್ರಿಯತೆ ಹೊಂದುವುದರಲ್ಲಿ ಯಾವುದೇ ಅನುಮಾನವಿಲ್ಲ.

MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಭಾರತದ ಐಫೆಲ್ ಟವರ್ ಖ್ಯಾತಿಯ ಸಿಗ್ನೇಚರ್ ಸೇತುವೆಯ ಸ್ಪೆಷಾಲಿಟಿ ಏನು ಗೊತ್ತಾ?

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, 104 ಸೆನ್ಸಾರ್ ಅಳವಡಿಕೆ ಹೊಂದಿರುವ ಸಿಗ್ನೇಚರ್ ಸೇತುವೆಯ ಮೇಲೆ ದಿನದ 24 ಗಂಟೆಯು ನಿಗಾ ಇರಲಿದ್ದು, ಯಾವುದೇ ರೀತಿಯ ಹಾನಿ ಸಂಭವಿಸಿದರೆ ಕೂಡಲೇ ಕಂಟ್ರೋಲ್ ರೂಂಗೆ ಮಾಹಿತಿ ರವಾನಿಸುವ ವ್ಯವಸ್ಥೆಯನ್ನು ಇಲ್ಲಿ ಅಳವಡಿಸಲಾಗಿದೆ.

Most Read Articles

Kannada
Read more on off beat
English summary
Signature Bridge In Delhi Finally Open: Here's A Cool Drone Video Of The Delhi Signature Bridge.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X