Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಟ್ರೈನ್ 18 ಯಶಸ್ವಿ ನಂತರ ಕೇಂದ್ರ ಸರ್ಕಾರದಿಂದ ಮತ್ತೊಂದು ಹೊಸ ಪ್ಲ್ಯಾನ್
ರೈಲ್ವೆ ಸೇವೆಗಳಲ್ಲಿ ಭಾರೀ ಬದಲಾವಣೆ ತರುತ್ತಿರುವ ಕೇಂದ್ರ ಸರ್ಕಾರವು ಸದ್ಯ ಬುಲೆಟ್ ಟ್ರೈನ್ ಸೇರಿದಂತೆ ಹಲವು ಅತ್ಯಾಧುನಿಕ ಸಾರಿಗೆ ಸೌಲಭ್ಯಗಳನ್ನು ಆರಂಭಿಸುವ ಗುರಿಹೊಂದಿದೆ. ಇದರಲ್ಲಿ ಸದ್ಯಕ್ಕೆ ಹಳಿಗಿಳಿಯಲು ಸಜ್ಜಾಗಿರುವ ಟ್ರೈನ್ 18 ಭಾರೀ ಸಂಚಲನಕ್ಕೆ ಕಾರಣವಾಗಿದ್ದು, ಹೀಗಿರುವಾಗಲೇ ಕೇಂದ್ರ ಸರ್ಕಾರದಿಂದ ಮತ್ತೊಂದು ಬೃಹತ್ ಯೋಜನೆಯನ್ನು ಸಿದ್ದಪಡಿಸಿದೆ.

ದೇಶದ ಆಧುನಿಕ ಎಂಜಿನ್ ರಹಿತ ರೈಲು ಎಂಬ ಖ್ಯಾತಿ ಹೊಂದಿರುವ ಟ್ರೈನ್-18 ತನ್ನ ಸ್ಪೀಡ್ ಗೆ ಸಂಬಂಧಿಸಿದಂತೆ ಕಳೆದ ವಾರವಷ್ಟೇ ಪರೀಕ್ಷಾರ್ಥ ಸಂಚಾರದ ವೇಳೆ ಹೊಸ ದಾಖಲೆ ನಿರ್ಮಿಸಿತ್ತು. ಗಂಟೆಗೆ ಬರೋಬ್ಬರಿ 180 ಕಿ.ಮೀ ವೇಗದಲ್ಲಿ ಚಲಿಸುವ ಮೂಲಕ ಆಧುನಿಕ ತಂತ್ರಜ್ಞಾನದ ಹೊಸ ಆವಿಷ್ಕಾರಕ್ಕೆ ಮತ್ತೊಂದು ಮುನ್ನುಡಿ ಬರೆದಿತ್ತು.

ಆದ್ರೆ ಕೇಂದ್ರ ಸರ್ಕಾರವು ಈ ಬಾರಿ ಗಂಟೆಗೆ 250 ಕಿ.ಮಿ ವೇಗದಲ್ಲಿ ಚಲಿಸಬಲ್ಲ ಸ್ವದೇಶಿ ನಿರ್ಮಿತ ಮತ್ತೊಂದು ವೇಗದ ರೈಲು ಮಾದರಿಯನ್ನು ಪರಿಚಯಿಸುವ ಕುರಿತಂತೆ ಚಿಂತನೆ ನಡೆಸಿದ್ದು, ಸದ್ಯದಲ್ಲೇ ಹೊಸ ರೈಲು ಕೂಡಾ ಹಳಿಗಿಳಿಯುವುದು ಖಚಿತವಾಗಿದೆ.

ಗಂಟೆಗೆ 250 ಕಿ.ಮಿ ವೇಗದಲ್ಲಿ ಚಲಿಸಬಲ್ಲ ರೈಲು ಮಾದರಿಯನ್ನು ಅಭಿವೃದ್ಧಿಗೊಳಿಸುವ ಕುರಿತಂತೆ ಟೆಂಡರ್ ಕರೆಯುವ ಸಂಬಂಧ ಈಗಾಗಲೇ ಕೇಂದ್ರ ರೈಲ್ವೆ ಮಂಡಳಿಯು ಸಭೆ ಕೂಡಾ ನಡೆಸಿದ್ದು, ಮುಂದಿನ ವರ್ಷದ ಹಣಕಾಸು ವರ್ಷದಲ್ಲಿ ಹೊಸ ಯೋಜನೆಗೆ ಗ್ರಿನ್ ಸಿಗ್ನಲ್ ಸಿಗುವುದು ಪಕ್ಕಾ ಆಗಿದೆ.

ಟ್ರೈನ್ 18 ಗಿಂತಲೂ ಸುಧಾರಿತ ಮಾದರಿಯ ತಾಂತ್ರಿಕ ಅಂಶಗಳನ್ನು ಹೊಂದಲಿರುವ ಹೊಸ ರೈಲು ಸ್ಟೈನ್‌ಲೆಸ್ ಸ್ಟಿಲ್ ಬದಲಾಗಿ ಅಲ್ಯುಮಿನಿಯಂನಿಂದ ಸಿದ್ದಪಡಿಸಲಾದ ಎಂಜಿನ್ ಮತ್ತು ಕೋಚ್‌ಗಳನ್ನು ಪಡೆದುಕೊಳ್ಳಲಿದೆ ಎನ್ನಲಾಗಿದೆ.

ಸ್ಟಿಲ್ ಬದಲಾಗಿ ಅಲ್ಯುಮಿನಿಯಂ ಬಳಕೆ ಮಾಡುವುದರಿಂದ ರೈಲುಗಳ ತೂಕದಲ್ಲಿ ಕಡಿಮೆಯಾಗುವುದಲ್ಲದೇ ವೇಗ ಹೆಚ್ಚಲಿದೆ. ಜೊತೆಗೆ ಹಳಿಗಳ ಮೇಲಿನ ಒತ್ತಡವನ್ನು ಸಹ ಕಡಿಮೆಮಾಡುವುದಲ್ಲದೇ ರೈಲುಗಳ ಬಾಡಿ ಕಿಟ್ ದೀರ್ಘಕಾಲ ಬಾಳಿಕೆ ಬರುವುದು ಇದರ ಪ್ರಮುಖ ಗುಣಲಕ್ಷಣ.

ಹೀಗಾಗಿ ಹೊಸ ರೈಲು ನಿರ್ಮಾಣದ ವೆಚ್ಚವು ಟ್ರೈನ್ 18 ಗಿಂತಲೂ ದುಬಾರಿಯಾಗಿರುವುದಲ್ಲದೇ ವೇಗದಲ್ಲಿ ಗಮನಸೆಳೆಯಲಿವೆ. ಮತ್ತೊಂದು ಪ್ರಮುಖ ವಿಚಾರ ಅಂದ್ರೆ ಈ ಹೊಸ ರೈಲು ಅತಿ ಕಡಿಮೆ ಅಂತರದಲ್ಲಿ ಗರಿಷ್ಠ ವೇಗ ಪಡೆದುಕೊಳ್ಳುವುದಲ್ಲದೇ ಅದೇ ಪ್ರಮಾಣದ ರೈಲು ನಿಲುಗಡೆಯಾಗುತ್ತೆ ಎನ್ನಬಹುದು.

ಒಟ್ಟಿನಲ್ಲಿ ಟ್ರೈನ್ 18 ಹಳಿಗಿಳಿಸುವ ಮುನ್ನವೇ ಮತ್ತೊಂದು ವೇಗದ ರೈಲು ಅಭಿವೃದ್ದಿ ಯೋಜನೆಗೆ ಮುಂದಾಗುತ್ತಿರುವ ಕೇಂದ್ರ ಸರ್ಕಾರವು ರೈಲ್ವೆ ಸೇವೆಗಳ ಗುಣಮಟ್ಟದಲ್ಲಿ ಹೊಸ ಕ್ರಾಂತಿಗೆ ಕಾರಣವಾಗಿದ್ದು, ಬುಲೆಟ್ ಟ್ರೈನ್‌ಗಳಿಂತಲೂ ದೇಶಿಯ ನಿರ್ಮಿತ ವೇಗದ ರೈಲುಗಳೇ ಹೆಚ್ಚು ಗಮನಸೆಳೆಯುತ್ತಿವೆ.
Source: Financial Express

ಸದ್ಯ ಶತಾಬ್ದಿ ಎಕ್ಸ್ಪ್ರೆಸ್ ರೈಲು ಪ್ರತಿ ಗಂಟೆಗೆ 130 ಕಿ.ಮಿ ವೇಗದೊಂದಿಗೆ ಭಾರತದಲ್ಲಿರುವ ಚಲಿಸುತ್ತಿರುವ ಅತಿ ವೇಗದ ರೈಲು ಎನ್ನುವ ಖ್ಯಾತಿ ಹೊಂದಿದ್ದು, ಇದೀಗ ಟ್ರೈನ್ 18 ರೈಲು ಗಂಟೆಗೆ ಸರಾಸರಿ 180 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯದೊಂದಿಗೆ ಶತಾಬ್ದಿ ರೈಲನ್ನು ಹಿಂದಿಕ್ಕಿದೆ.

ಈ ಮೂಲಕ ದೇಶದಲ್ಲಿ ವೇಗದ ರೈಲು ಎನ್ನುವ ಖ್ಯಾತಿಗೆ ಪಾತ್ರವಾದ ಟ್ರೈನ್ 18 ಮಾದರಿಯು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಇದೇ ತಿಂಗಳು 21-22ಕ್ಕೆ ಹೊಸ ರೈಲು ಸೇವೆಗೆ ಅಧಿಕೃತ ಚಾಲನೆ ದೊರೆಯಲಿದೆ.
MOST READ: ವಾಹನ ಸವಾರರೇ ಎಚ್ಚರ- ಪೆಟ್ರೋಲ್ ಬಂಕ್‌ಗಳಲ್ಲಿ ಹೇಗೆ ನಡೆಯುತ್ತೆ ನೋಡಿ ಹಗಲು ದರೋಡೆ..!

ಇದರಲ್ಲದೇ ಹೊಸ ರೈಲಿನ ಪರೀಕ್ಷಾರ್ಥ ಕಾರ್ಯಗಳು ನಡೆದ ನಂತರ ಟ್ರೈನ್ 18 ಯಾವ ಮಾರ್ಗದಲ್ಲಿ ಮೊದಲಿಗೆ ಸಂಚಾರ ಆರಂಭ ಮಾಡಬೇಕು ಎಂಬ ಕುತೂಹಲಕ್ಕೆ ಕೇಂದ್ರ ರೈಲ್ವೆ ಮಂಡಳಿಯು ತೆರೆ ಎಳೆದಿದ್ದು, ಅತಿ ವೇಗದ ರೈಲ್ವೆನಲ್ಲಿ ಪ್ರಯಾಣಿಸಲು ಲಕ್ಷಾಂತರ ಪ್ರಯಾಣಿಕರು ಈಗಾಗಲೇ ಕಾಯ್ದುಕುಳಿತಿದ್ದಾರೆ.

ವಾರಾಣಸಿ ಟು ದೆಹಲಿ
ಪ್ರಧಾನಿ ನರೇಂದ್ರ ಮೋದಿಯವರ ಪ್ರತಿನಿಧಿಸುವ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ರಾಷ್ಟ್ರದ ರಾಜಧಾನಿ ದೆಹಲಿ ನಡುವೆ ಟ್ರೈನ್ 18 ಮೊದಲು ಬಾರಿಗೆ ಸಂಚಾರ ಆರಂಭಿಸಲಿದ್ದು, ಬರೋಬ್ಬರಿ 820 ಕಿ.ಮಿ ದೂರದ ಈ ಮಾರ್ಗವನ್ನು ಟ್ರೈನ್ 18 ಕೆಲವೇ ಗಂಟೆಗಳಲ್ಲಿ ಕ್ರಮಿಸಲಿದೆ.

ವಾರಣಾಸಿಯು ಕೇವಲ ಪ್ರಧಾನಿಯವರು ಪ್ರತಿನಿಧಿಸುವ ಕ್ಷೇತ್ರ ಎಂಬುವುದನ್ನು ಹೊರತುಪಡಿಸಿ ಪವಿತ್ರ ಪುಣ್ಯಕ್ಷೇತ್ರವಾಗಿರುವುದರಿಂದ ದಿನಂಪ್ರತಿ ಇಲ್ಲಿಗೆ ಸಾವಿರಾರು ಜನ ತೀರ್ಥಯಾತ್ರೆಗೆ ಆಗಮಿಸುತ್ತಾರೆ. ಹೀಗಿರುವಾಗ ಟ್ರೈನ್ 18 ಈ ಭಾಗದಲ್ಲಿ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲಕರವಾಗಲಿದೆ.
MOST READ: ಬಿಡುಗಡೆಗೂ ಮುನ್ನವೇ ಹಾರುವ ಕಾರಿನ ಬೆಲೆ ಪಟ್ಟಿ ಬಿಡುಗಡೆ ಮಾಡಿದ ಪಿಎಲ್-ವಿ ಲಿಬರ್ಟಿ

ವಾರಣಾಸಿಗೆ ಪ್ರಯಾಣ ಬೆಳೆಸುವ ಬರುವ ಬಹುತೇಕ ಪ್ರವಾಸಿಗರು ಮೊದಲ ದೆಹಲಿಗೆ ಆಗಮಿಸಿ ತದನಂತರವಷ್ಟೇ ಅಲ್ಲಿಂದ ವಾರಣಾಸಿಗೆ ಪ್ರಯಾಣ ಬೆಳೆಸುತ್ತಾರೆ. ಈ ವೇಳೆ ಕೈಗೆಟುವ ಬೆಲೆಯ ಪ್ರಯಾಣ ಅಂದ್ರೆ ಅದು ರೈಲು. ಆದ್ರೆ 820 ಕಿ.ಮಿ ದೂರದ ಈ ಪ್ರಯಾಣವು ಸಾಮಾನ್ಯ ರೈಲುಗಳಲ್ಲಿ ಕನಿಷ್ಠ ಅಂದ್ರು 14 ರಿಂದ 16 ಗಂಟೆಗಳ ಪ್ರಯಾಣವಿರುತ್ತೆ.

ಇದೇ ಕಾರಣಕ್ಕೆ ಟ್ರೈನ್ 18 ಈ ಮಾರ್ಗದಲ್ಲಿ ಪ್ರಯಾಣಿಸಿದ್ದಲ್ಲಿ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲಕತೆಗಳಿದ್ದು, ಬಹುಮುಖ್ಯವಾಗಿ ಪ್ರಯಾಣದ ಅವಧಿ ಸಾಕಷ್ಟು ತಗ್ಗಲಿದೆ. ಜೊತೆಗೆ ಹೊಸ ಯೋಜನೆಯಿಂದಾಗಿ ಪ್ರವಾಸೋದ್ಯಮ ಅಭಿವೃದ್ಧಿಗೂ ಸಹಕಾರಿಯಾಗಲಿದೆ.

ಆಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ಹೊಸ ಟ್ರೈನ್ 18 ರೈಲು ಎಂಜಿನ್ ರಹಿತವಾಗಿದ್ದು, ಬುಲೆಟ್ ರೈಲು ಮಾದರಿಯಲ್ಲೇ ಇದನ್ನು ಸಿದ್ಧಪಡಿಸಲಾಗಿದೆ. ಹೀಗಾಗಿ ಟ್ರೈನ್ 18ನಲ್ಲಿ ಪ್ರತ್ಯೇಕ ಎಂಜಿನ್ ಬದಲಾಗಿ ಮೆಟ್ರೋ ರೈಲು ಮಾದರಿಯಲ್ಲಿ ಬೋಗಿಯ ಕೆಳಗಡೆಯೇ ಎಂಜಿನ್ ಜೋಡಣೆ ಮಾಡಲಾಗಿರುತ್ತೆ.

ಹೊಸ ರೈಲಿನಲ್ಲಿ ಒಟ್ಟು 16 ಬೋಗಿಗಳಿದ್ದು, ಇವುಗಲ್ಲಿ 52 ಆಸನಗಳ ಹೊಂದಿರುವ ಎರಡು ಎಕ್ಸಿಕ್ಯುಟಿವ್ ಬೋಗಿಗಳನ್ನು ನೀಡಲಾಗಿದೆ. ಉಳಿದವು 78 ಆಸನಗಳ ಸಾಮಾನ್ಯ ಬೋಗಿಗಳಿದ್ದು, ಸಂಪೂರ್ಣ ಹವಾನಿಯಂತ್ರಣ, ಸಿಸಿಟಿವಿ ಸೌಲಭ್ಯ, ಜಿಪಿಎಸ್ ಆಧರಿತ ಮಾಹಿತಿ ಫಲಕ, ಸ್ವಯಂ ಚಾಲಿತ ಬಾಗಿಲು ಸೌಲಭ್ಯ ಪಡೆದಿದೆ.

ಹಾಗೆಯೇ ಪ್ರತಿ ಎರಡು ಬೋಗಿಗಳ ನಡುವೆ ಮೋಟಾರೈಸ್ಡ್ ಎಂಜಿನ್ ಅಳವಡಿಕೆ ಮಾಡಿರುವುದಿಂದ ರೈಲು ಅತಿ ವೇಗವಾಗಿ ಚಲಿಸಲು ಸಾಧ್ಯವಾಗಿದೆ. ಜೊತೆಗೆ ಕ್ಷಣಾರ್ಧದಲ್ಲಿ ನಿಲ್ಲುವ ಸಾಮರ್ಥ್ಯವನ್ನೂ ಕೂಡಾ ಹೊಂದಿದ್ದು, ಆಗಬಹುದಾದ ರೈಲು ದುರಂತಗಳಿಗೆ ಇದರಿಂದ ತಪ್ಪಿಸಬಹುದಾಗಿದೆ.

ಇದು ದೀರ್ಘಾವಧಿ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹೊಸ ರೈಲಿನಲ್ಲಿ ವಿಶೇಷ ಮನೋರಂಜನಾ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ವೈ ಫೈ, ವ್ಯಾಕ್ಯೂಮ್ ಟಾಯ್ಲೆಟ್, ಲಗೇಜ್‌ಗೆ ಪ್ರತ್ಯೇಕ ಜಾಗ ಮೀಸಲು, ಅಂಗವಿಕಲರಿಗಾಗಿ ಪ್ರತ್ಯೇಕ ಶೌಚಾಲಯ ವ್ಯವಸ್ಥೆಯನ್ನು ಇದರಲ್ಲಿ ಅಳವಡಿಸಲಾಗಿದೆ.

ಟ್ರೈನ್ 18 ರೈಲು ಯೋಜನೆಯನ್ನು ಪೂರ್ಣಗೊಳಿಸಲು ಬರೋಬ್ಬರಿ ರೂ. 100 ಕೋಟಿ ಖರ್ಚು ಮಾಡಲಾಗಿದ್ದು, ಅತ್ಯಾಧುನಿಕ ಎಂಜಿನ್ ಮಾದರಿ, ಐಷಾರಾಮಿ ಸೌಲಭ್ಯದಿಂದಾಗಿ ರೈಲು ನಿರ್ಮಾಣದ ಖರ್ಚುಗಳು ತುಸು ದುಬಾರಿಯಾಗಿವೆ ಎನ್ನಬಹುದು.

ಆದ್ರೆ ಹೊಸ ರೈಲು ಪ್ರಸ್ತುತ ರೈಲುಗಳ ಓಡಾಟದ ಅವಧಿಗಿಂತಲೂ ಸಾಕಷ್ಟು ಇಳಿಕೆಯಾಗಲಿದ್ದು, ಇದರಲ್ಲಿ ಮುಖ್ಯವಾಗಿ ರೈಲಿನ ಪ್ರಯಾಣದ ವೆಚ್ಚಗಳು ತಗ್ಗುವ ಮೂಲಕ ಹೊಸ ರೈಲಿನಿಂದ ಸಾಕಷ್ಟು ಲಾಭ ಗಳಿಕೆಯಾಗಲಿದೆ.