ಮೂರು ವರ್ಷಗಳ ವಿರಾಮದ ಮತ್ತೆ ಬರುತ್ತಿದೆ ಗೋಲ್ಡನ್ ಚಾರಿಯಟ್ ಐಷಾರಾಮಿ ರೈಲು

ಗೋಲ್ಡನ್ ಚಾರಿಯಟ್ ಐಷಾರಾಮಿ ಪ್ರವಾಸ ರೈಲು ಸೇವೆಯನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಪರವಾಗಿ 2008ರಲ್ಲಿ ಆರಂಭಿಸಲಾಯಿತು. ರೈಲಿನಲ್ಲಿ ಐಷಾರಾಮಿ ಪ್ರವಾಸಗಳನ್ನು ಕೈಗೊಳ್ಳಲು ಬಯಸುವವರಿಂದ ಈ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಮೂರು ವರ್ಷಗಳ ವಿರಾಮದ ಮತ್ತೆ ಬರುತ್ತಿದೆ ಗೋಲ್ಡನ್ ಚಾರಿಯಟ್ ಐಷಾರಾಮಿ ರೈಲು

ಆದರೆ ನಂತರದ ದಿನಗಳಲ್ಲಿ ಈ ರೈಲಿನಲ್ಲಿ ಸಂಚರಿಸುವವರ ಸಂಖ್ಯೆ ಕ್ಷೀಣಿಸಿದ ಕಾರಣ ಈ ಐಷಾರಾಮಿ ಪ್ರವಾಸಿ ರೈಲು ನಷ್ಟವನ್ನು ಅನುಭವಿಸಲು ಆರಂಭಿಸಿತು. ಈ ಕಾರಣಕ್ಕೆ 2017ರಲ್ಲಿ ಗೋಲ್ಡನ್ ಚಾರಿಯಟ್ ಐಷಾರಾಮಿ ಪ್ರವಾಸಿ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಯಿತು. ಆದರೆ ಗೋಲ್ಡನ್ ಚಾರಿಯಟ್ ಐಷಾರಾಮಿ ರೈಲು ಸೇವೆ ಮತ್ತೆ ಆರಂಭವಾಗಬಹುದು ಎಂದು ಐಷಾರಾಮಿ ಪ್ರವಾಸೋದ್ಯಮ ಪ್ರಿಯರು ಕುತೂಹಲದಿಂದ ಕಾಯುತ್ತಿದ್ದಾರೆ.

ಮೂರು ವರ್ಷಗಳ ವಿರಾಮದ ಮತ್ತೆ ಬರುತ್ತಿದೆ ಗೋಲ್ಡನ್ ಚಾರಿಯಟ್ ಐಷಾರಾಮಿ ರೈಲು

ಅವರ ನಿರೀಕ್ಷೆ ಆದಷ್ಟು ಬೇಗ ಈಡೇರಲಿದೆ. 3 ವರ್ಷಗಳ ವಿರಾಮದ ಬಳಿಕ ಗೋಲ್ಡನ್ ಚಾರಿಯಟ್ ಟೂರ್ ರೈಲು ಸೇವೆಯು 2021ರ ಜನವರಿ ತಿಂಗಳಿನಲ್ಲಿ ಪುನರಾರಂಭಗೊಳ್ಳಲಿದೆ. ಗೋಲ್ಡನ್ ಚಾರಿಯಟ್ ಐಷಾರಾಮಿ ರೈಲನ್ನು ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಹಾಗೂ ಟೂರಿಸಂ ಕಾರ್ಪೊರೇಷನ್ ಗೆ (ಐಆರ್‌ಸಿಟಿಸಿ) ಹಸ್ತಾಂತರಿಸಲಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಮೂರು ವರ್ಷಗಳ ವಿರಾಮದ ಮತ್ತೆ ಬರುತ್ತಿದೆ ಗೋಲ್ಡನ್ ಚಾರಿಯಟ್ ಐಷಾರಾಮಿ ರೈಲು

ಈಗಾಗಲೇ ವಿವಿಧ ಐಷಾರಾಮಿ ಸೌಕರ್ಯಗಳನ್ನು ಹೊಂದಿರುವ ಗೋಲ್ಡನ್ ಚಾರಿಯಟ್ ರೈಲನ್ನು ಐಆರ್‌ಸಿಟಿಸಿ ಮತ್ತಷ್ಟು ಅಪ್ ಡೇಟ್ ಮಾಡಿದೆ. ಗೋಲ್ಡನ್ ಚಾರಿಯಟ್ ಐಷಾರಾಮಿ ರೈಲಿನಲ್ಲಿರುವ ಲಿವಿಂಗ್ ರೂಂ ಹಾಗೂ ಬಾತ್ ರೂಂಗಳನ್ನು ಅಪ್ ಡೇಟ್ ಮಾಡಲಾಗಿದೆ.

ಮೂರು ವರ್ಷಗಳ ವಿರಾಮದ ಮತ್ತೆ ಬರುತ್ತಿದೆ ಗೋಲ್ಡನ್ ಚಾರಿಯಟ್ ಐಷಾರಾಮಿ ರೈಲು

ಲಿವಿಂಗ್ ರೂಂ ಅನ್ನು ವಿವಿಧ ಅಲಂಕಾರಿಕ ವಸ್ತುಗಳಿಂದ ಅಪ್ ಡೇಟ್ ಮಾಡಲಾಗಿದೆ. ಸ್ಮಾರ್ಟ್ ಟಿವಿ ಸೌಲಭ್ಯವನ್ನೂ ನೀಡಲಾಗಿದೆ. ಗೋಲ್ಡನ್ ಚಾರಿಯಟ್ ಐಷಾರಾಮಿ ರೈಲಿನಲ್ಲಿ ಸ್ಪಾ ಸೌಲಭ್ಯವೂ ಇರಲಿದೆ. ಈ ಸೌಲಭ್ಯ ಪಡೆಯ ಬಯಸುವ ಪ್ರಯಾಣಿಕರು ಮಸಾಜ್ ಸೇವೆಯನ್ನು ಪಡೆಯಬಹುದು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಮೂರು ವರ್ಷಗಳ ವಿರಾಮದ ಮತ್ತೆ ಬರುತ್ತಿದೆ ಗೋಲ್ಡನ್ ಚಾರಿಯಟ್ ಐಷಾರಾಮಿ ರೈಲು

ಇದರ ಜೊತೆಗೆ ಆಲ್ಕೋಹಾಲ್ ಸೌಲಭ್ಯವನ್ನು ಸಹ ನೀಡಲಾಗುವುದು. ಗೋಲ್ಡನ್ ಚಾರಿಯಟ್ ಐಷಾರಾಮಿ ರೈಲು ಅತ್ಯಾಧುನಿಕ ಉಪಕರಣಗಳನ್ನು ಹೊಂದಿರುವ ಜಿಮ್ ಹಾಗೂ 2 ರೆಸ್ಟೋರೆಂಟ್‌ಗಳನ್ನು ಸಹ ಹೊಂದಿದೆ.

ಮೂರು ವರ್ಷಗಳ ವಿರಾಮದ ಮತ್ತೆ ಬರುತ್ತಿದೆ ಗೋಲ್ಡನ್ ಚಾರಿಯಟ್ ಐಷಾರಾಮಿ ರೈಲು

ಪ್ರಯಾಣಿಕರು ಆ ರೆಸ್ಟೋರೆಂಟ್‌ಗಳಲ್ಲಿ ಊಟ ಮಾಡುತ್ತಾ ದೃಶ್ಯಾವಳಿಗಳನ್ನು ಆನಂದಿಸಬಹುದು. ಗೋಲ್ಡನ್ ಚಾರಿಯಟ್ ಐಷಾರಾಮಿ ರೈಲು ದೀರ್ಘ ಕಾಲದ ವಿರಾಮದ ಬಳಿಕ ತನ್ನಲ್ಲಿರುವ ಐಷಾರಾಮಿ ಸೌಲಭ್ಯಗಳೊಂದಿಗೆ ಜನವರಿಯಿಂದ ವಿವಿಧ ರಾಜ್ಯಗಳ ಜನಪ್ರಿಯ ಪ್ರವಾಸಿ ತಾಣಗಳಿಗೆ ಪ್ರವಾಸವನ್ನು ಆರಂಭಿಸಲಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಮೂರು ವರ್ಷಗಳ ವಿರಾಮದ ಮತ್ತೆ ಬರುತ್ತಿದೆ ಗೋಲ್ಡನ್ ಚಾರಿಯಟ್ ಐಷಾರಾಮಿ ರೈಲು

ಪ್ರೈಡ್ ಆಫ್ ಕರ್ನಾಟಕ ಎಂಬ ಹೆಸರಿನ ರೈಲು 7 ದಿನಗಳ ಪ್ರವಾಸದ ಅವಧಿಯಲ್ಲಿ ಮೈಸೂರಿನಿಂದ ಬಂಡೀಪುರ ರಾಷ್ಟ್ರೀಯ ಉದ್ಯಾನ, ಚಿಕ್ಕಮಗಳೂರು, ಹಂಪಿ, ಗೋವಾಗಳಿಗೆ ತೆರಳಲಿದೆ. ಜ್ಯುವೆಲ್ ಆಫ್ ಸೌತ್ ಎಂಬ ಹೆಸರಿನ ರೈಲು 7 ದಿನಗಳ ಪ್ರವಾಸದ ಅವಧಿಯಲ್ಲಿ ಮೈಸೂರಿನಿಂದ ಹೊರಟು ಹಂಪಿ, ಮಾಮಲ್ಲಾಪುರಂ, ತಂಜಾವೂರು ಹಾಗೂ ಕೊಚ್ಚಿ ಸೇರಿದಂತೆ ವಿವಿಧ ಸ್ಥಳಗಳಿಗೆ ತೆರಳುತ್ತದೆ.

ಮೂರು ವರ್ಷಗಳ ವಿರಾಮದ ಮತ್ತೆ ಬರುತ್ತಿದೆ ಗೋಲ್ಡನ್ ಚಾರಿಯಟ್ ಐಷಾರಾಮಿ ರೈಲು

ಕರ್ನಾಟಕ ಕ್ಲೈಂಪ್ಸ್ ಎಂಬ ಹೆಸರಿನ ರೈಲು 4 ದಿನಗಳ ಪ್ರವಾಸದ ಅವಧಿಯಲ್ಲಿ ಮೈಸೂರಿನಿಂದ ಹೊರಟು ಬಂಡೀಪುರ ರಾಷ್ಟ್ರೀಯ ಉದ್ಯಾನ, ಹಂಪಿ ಸೇರಿದಂತೆ ವಿವಿಧ ಸ್ಥಳಗಳಿಗೆ ತೆರಳುತ್ತದೆ. ಶುಲ್ಕದ ಬಗೆಗಿನ ವಿವರಗಳಿಗಾಗಿ ಪ್ರಯಾಣಿಕರು ಸಂಬಂಧಪಟ್ಟ ಕಚೇರಿಯನ್ನು ಸಂಪರ್ಕಿಸಬಹುದು.

Most Read Articles
 
Kannada
English summary
IRCTC organising Golden Chariot train tours from 2021. Read in Kannada.
Story first published: Sunday, October 18, 2020, 10:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X