ರಿಕ್ಷಾದಲ್ಲೇ ವೀಲಿಂಗ್; ಗಿನ್ನೆಸ್ ಪುಟ ಸೇರಿದ ಚೆನ್ನೈನ 'ಆಟೋ ರಾಜ'

By Nagaraja

ನಾವಿಂದು ಚೆನ್ನೈ ನಗರದ 'ಆಟೋ ರಾಜ'ನನ್ನು ಪರಿಚಯಿಸಲಿದ್ದು, ರಿಕ್ಷಾದಲ್ಲೇ ವೀಲಿಂಗ್ ಮಾಡುವ ಮೂಲಕ ಗಿನ್ನೆಸ್ ಪುಟ ಸೇರಿದ್ದಾರೆ. ಅವರು ಬೇರೆ ಯಾರು ಚೆನ್ನೈ ಮೂಲದವರಾಗಿರುವ ಜಗದೀಶ್ ಎಂ.

Also Read: ವಿಶ್ವದ ಅತಿ ದೊಡ್ಡ ಸೈಕಲ್ ನಿಮ್ಮ ಗಮನ ಸೆಳೆಯಿತೇ?

ಚಿಕ್ಕವನಿಂದಲೇ ವೀಲಿಂಗ್ ಕನಸು ಕಟ್ಟಿಕೊಂಡಿರುವ 27ರ ಹರೆಯದ ಜಗದೀಶ್ ಎಂಬವರಲ್ಲಿ ಏನಾದರೊಂದು ಸಾಧನೆ ಮಾಡಬೇಕೆಂಬ ಹಂಬಲಿವಿತ್ತು. ಈ ನಿಟ್ಟಿನಲ್ಲಿ ಕಠಿಣ ಪರಿಶ್ರಮವನ್ನು ಮುಂದುವರಿಸಿದ್ದರು.

ರಿಕ್ಷಾದಲ್ಲೇ ವೀಲಿಂಗ್; ಗಿನ್ನೆಸ್ ಪುಟ ಸೇರಿದ ಚೆನ್ನೈನ 'ಆಟೋ ರಾಜ'

ಚಿಕ್ಕವನಿಂದಲೇ ಬೈಕ್ ನಲ್ಲಿ ವೀಲಿಂಗ್ ಕರಗತ ಮಾಡಿಕೊಂಡಿರುವ ಜಗದೀಶ್, ಇದೇ ಕೌಶಲ್ಯವನ್ನು ತಮ್ಮ ವೃತ್ತಿಯಲ್ಲೂ ಮುಂದುವರಿಸಿದ್ದರು.

ರಿಕ್ಷಾದಲ್ಲೇ ವೀಲಿಂಗ್; ಗಿನ್ನೆಸ್ ಪುಟ ಸೇರಿದ ಚೆನ್ನೈನ 'ಆಟೋ ರಾಜ'

ಜನಸಾಮಾನ್ಯರ ಬಂಡಿ ಎನಿಸಿಕೊಂಡಿರುವ ಆಟೋ ರಿಕ್ಷಾದಲ್ಲಿ ಸಾರ್ವಜನಿಕರನ್ನು ರಾತ್ರಿ ಹಗಲೆನ್ನದೇ ಸುರಕ್ಷಿತವಾಗಿ ಗುರಿ ತಲುಪಿಸುವುದು ತನ್ನ ಗುರಿಯಾಗಿದೆ ಎಂದವರು ತಿಳಿಸುತ್ತಾರೆ.

ರಿಕ್ಷಾದಲ್ಲೇ ವೀಲಿಂಗ್; ಗಿನ್ನೆಸ್ ಪುಟ ಸೇರಿದ ಚೆನ್ನೈನ 'ಆಟೋ ರಾಜ'

ಸಾಮಾನ್ಯವಾಗಿ ಆಟೋ ಚಾಲಕರನ್ನು ಹಾಗೂ ಅವರು ಮಾಡುವ ವೃತ್ತಿಯನ್ನು ಕೀಳು ಮಟ್ಟದಲ್ಲಿ ಕಾಣಲಾಗುತ್ತದೆ. ಹಾಗಿರಬೇಕೆಂದರೆ ತಮ್ಮ ವೃತ್ತಿಯನ್ನು ಇಷ್ಟು ದೊಡ್ಡಮಟ್ಟದಲ್ಲಿ ಪ್ರೀತಿಸುವ ಬೇರೊಬ್ಬ ವ್ಯಕ್ತಿಗೆ ನಿಮಗೆ ಸಿಗಲಾರದು.

ರಿಕ್ಷಾದಲ್ಲೇ ವೀಲಿಂಗ್; ಗಿನ್ನೆಸ್ ಪುಟ ಸೇರಿದ ಚೆನ್ನೈನ 'ಆಟೋ ರಾಜ'

ಹಗಲಿರುಳು ದುಡಿಯುವ ಜಗದೀಶ್ ತಡ ರಾತ್ರಿಯ ಬಳಿಕ ಆಟೋದಲ್ಲಿ ವೀಲಿಂಗ್ ಅಭ್ಯಾಸಿಸುತ್ತಿದ್ದರು. ಮೂರು ಚಕ್ರಗಳ ಈ ಬಂಡಿಯಲ್ಲಿ ಒಂದು ಚಕ್ರವನ್ನು ಮೇಲೆತ್ತಿ ವೀಲಿಂಗ್ ಮಾಡುವುದೆಂದರೆ ದೊಡ್ಡ ಸಾಹಸವೇ ಸರಿ.

ರಿಕ್ಷಾದಲ್ಲೇ ವೀಲಿಂಗ್; ಗಿನ್ನೆಸ್ ಪುಟ ಸೇರಿದ ಚೆನ್ನೈನ 'ಆಟೋ ರಾಜ'

ಆಟೋ ರಿಕ್ಷಾದಲ್ಲಿ ವೀಲಿಂಗ್ ಮಾಡುವಾಗ ಸ್ಟೀರಿಂಗ್ ನಿಯಂತ್ರಣ ಅತಿ ಅಗತ್ಯ ಎಂದವರು ಅಭಿಪ್ರಾಯಪಡುತ್ತಾರೆ. ಯಾಕೆಂದರೆ ಸ್ವಲ್ಪನೂ ಸಮತೋಲನ ತಪ್ಪಿದರೆ ಅವಘಡ ತಪ್ಪಿದ್ದಲ್ಲ ಎಂದವರು ವಿವರಿಸುತ್ತಾರೆ.

ರಿಕ್ಷಾದಲ್ಲೇ ವೀಲಿಂಗ್; ಗಿನ್ನೆಸ್ ಪುಟ ಸೇರಿದ ಚೆನ್ನೈನ 'ಆಟೋ ರಾಜ'

ಹೀಗೆ ಎಲ್ಲ ಅರ್ಥದಲ್ಲೂ ತಮ್ಮ ಬಾಲ್ಯ ಕಾಲ ಕನಸನ್ನು ನನಸಾಗಿಸಿರುವ ಜಗದೀಶ್ ಮೊದಲ ಬಾರಿಗೆ "ಅಬ್ ಇಂಡಿಯಾ ತೋಡೆಗಾ" ಕಾರ್ಯಕ್ರಮದ ಮೂಲಕ ಗಿನ್ನೆಸ್ ಪುಟ ಸೇರಿದ್ದರು.

ರಿಕ್ಷಾದಲ್ಲೇ ವೀಲಿಂಗ್; ಗಿನ್ನೆಸ್ ಪುಟ ಸೇರಿದ ಚೆನ್ನೈನ 'ಆಟೋ ರಾಜ'

ಗಿನ್ನೆಸ್ ದಾಖಲೆ ಸ್ಥಾಪನೆಗಾಗಿ ಜಗದೀಶ್ ಅವರು ಕನಿಷ್ಠ ಒಂದು ಕೀ.ಮೀ. ದೂರದ ವರೆಗೂ ವೀಲಿಂಗ್ ನಡೆಸಬೇಕಾಗಿತ್ತು. ಅಂದರೆ ಇವೆಲ್ಲ ಲೆಕ್ಕಕ್ಕಿಲ್ಲ ಎಂಬ ರೀತಿಯಲ್ಲಿ ಭರ್ತಿ 2.2 ಕೀ.ಮೀ. ದೂರವನ್ನು ಕ್ರಮಿಸಿದ್ದಾರೆ.

ರಿಕ್ಷಾದಲ್ಲೇ ವೀಲಿಂಗ್; ಗಿನ್ನೆಸ್ ಪುಟ ಸೇರಿದ ಚೆನ್ನೈನ 'ಆಟೋ ರಾಜ'

ಈಗ 2016 ಗಿನ್ನೆಸ್ ದಾಖಲೆ ಪುಟದಲ್ಲಿ ತಮ್ಮ ಹೆಸರನ್ನು ಭದ್ರವಾಗಿಸಿರುವ ಜಗದೀಶ್ ಇಡೀ ದೇಶಕ್ಕೆ ಹೆಮ್ಮೆಯಾಗಿದ್ದಾರೆ.

ರಿಕ್ಷಾದಲ್ಲೇ ವೀಲಿಂಗ್; ಗಿನ್ನೆಸ್ ಪುಟ ಸೇರಿದ ಚೆನ್ನೈನ 'ಆಟೋ ರಾಜ'

ಸಾರ್ವಜನಿಕರಿಗೆ ಸದಾ ನೆರವು ಮಾಡುವ ಹಂಬಲ ಹೊಂದಿರುವ ಅವರು, ವೀಲಿಂಗ್ ವೇಳೆ ಗಂಟೆಗೆ 80 ಕೀ.ಮೀ. ವೇಗವನ್ನು ಕಾಪಾಡಿಕೊಳ್ಳುತ್ತಿರುವುದು ನೋಡುಗರಲ್ಲಿ ಮತ್ತಷ್ಟು ರೋಮಾಂಚನ ಮೂಡಿಸುತ್ತದೆ.

ರಿಕ್ಷಾದಲ್ಲೇ ವೀಲಿಂಗ್; ಗಿನ್ನೆಸ್ ಪುಟ ಸೇರಿದ ಚೆನ್ನೈನ 'ಆಟೋ ರಾಜ'

"ತಾನವತ್ತೂ ಇಂತಹದೊಂದು ಮಹತ್ತರ ಸಾಧನೆ ಮಾಡುವುದಾಗಿ ನಂಬಿಕೊಂಡಿರಲಿಲ್ಲ. ಆದರೆ ಅಂತಹದೂಂದು ಹಂಬಲ ಸದಾ ನನ್ನಲ್ಲಿತ್ತು. ಈಗ ಇದು ಸಾಧ್ಯವಾಗಿರುವುದರಲ್ಲಿ ಅತೀವ ಸಂತಸಗೊಂಡಿದ್ದು, ಇದೇ ಬೇಕಾದಷ್ಟಾಗಿದೆ" ಎಂದು ಜಗದೀಶ್ ತಮ್ಮ ಮಾತುಗಳಲ್ಲೇ ವಿವರಿಸುತ್ತಾರೆ.

ಆಟೋ ರಾಜನ ಗಿನ್ನೆಸ್ ದಾಖಲೆ ರೋಚಕ ವಿಡಿಯೋ ವೀಕ್ಷಿಸಿ

Most Read Articles

Kannada
English summary
Jagathish M achieves Guinness World Record side-wheelie on an auto rickshaw
Story first published: Saturday, November 7, 2015, 12:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X