ಇನ್ಮುಂದೆ ಕಿಕಿ ಡ್ಯಾನ್ಸ್ ಮಾಡಿದ್ರೆ ಜೈಲಿನಲ್ಲಿ ಖಾಕಿ ಡ್ಯಾನ್ಸ್ ಗ್ಯಾರಂಟಿ..!

By Praveen Sannamani

ವಿಶ್ವದಾದ್ಯಂತ ಟ್ರೆಂಡಿಂಗ್ ನಲ್ಲಿರುವ ಕಿಕಿ ಚಾಲೆಂಜ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕ್ರೇಜಿ ಆಗಿರುವ ಕಿಕಿ ಚಾಲೆಂಜ್ ಮಾಡಲು ಹೋಗಿ ಸಾಕಷ್ಟು ಅನಾಹುತಗಳು ಸಂಭವಿಸಿದ್ದು, ಇದೇ ಕಾರಣಕ್ಕೆ ಕಿಕಿ ಚಾಲೆಂಜ್ ಅನ್ನು ಎಲ್ಲಾ ಕಡೆಗೂ ಬ್ಯಾನ್ ಕೂಡಾ ಮಾಡಲಾಗುತ್ತಿದೆ. ನಮ್ಮ ರಾಜ್ಯದಲ್ಲೂ ಇದರ ಹಾವಳಿ ಹೆಚ್ಚುತ್ತಿದ್ದು, ಇದು ಕಿಕಿ ಡ್ಯಾನ್ಸ್ ಮಾಡುವವರ ವಿರುದ್ಧ ಪೊಲೀಸರು ಹೊಸ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ.

ಇನ್ಮುಂದೆ ಕಿಕಿ ಡ್ಯಾನ್ಸ್ ಮಾಡಿದ್ರೆ ಜೈಲಿನಲ್ಲಿ ಖಾಕಿ ಡ್ಯಾನ್ಸ್ ಗ್ಯಾರಂಟಿ..!

ಅಪಾಯಕಾರಿ ಚಾಲೆಂಜ್‌ಗಳಲ್ಲಿ ಒಂದಾಗಿರುವ ಕಿಕಿ ಡ್ಯಾನ್ಸ್‌ ಮಾಡುವವರ ವಿರುದ್ಧ ಇದೀಗ ಪೊಲೀಸರು ಕೆಂಗಣ್ಣು ಬೀರಿದ್ದು, ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರೂ ಕೂಡಾ ಯುವಕರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಎಚ್ಚರಿಸಿರುವುದಲ್ಲದೇ ಕಿಕಿ ಡ್ಯಾನ್ಸ್ ಮಾಡುವರರ ವಿರುದ್ಧ ಕೇಸ್ ದಾಖಲಿಸುವುದಾಗಿ ಖಡಕ್ ಸಂದೇಶ ನೀಡಿದ್ದಾರೆ.

ಇದಲ್ಲದೇ 'ಕಿಕಿ ಡ್ಯಾನ್ಸ್‌ ರೋಡಲ್ಲಿ... ಖಾಕಿ ಸಾಂಗ್ಸ್‌ ಜೈಲಲ್ಲಿ...' ಎಂದು ಟ್ವೀಟ್‌ ಮಾಡಿರುವ ಬೆಂಗಳೂರು ನಗರ ಪೊಲೀಸರು, ಯಾರೆಲ್ಲಾ ಕಿಕಿ ಡ್ಯಾನ್ಸ್‌ ಮಾಡುತ್ತಾರೋ ಅವರು ಕಂಬಿಗಳ ಹಿಂದೆ ಡ್ಯಾನ್ಸ್‌ ಮಾಡುವುದು ಗ್ಯಾರಂಟಿ ಅಂಥಾ ಖಡಕ್ ವಾರ್ನ್ ಮಾಡಿದ್ದಾರೆ.

ಇನ್ಮುಂದೆ ಕಿಕಿ ಡ್ಯಾನ್ಸ್ ಮಾಡಿದ್ರೆ ಜೈಲಿನಲ್ಲಿ ಖಾಕಿ ಡ್ಯಾನ್ಸ್ ಗ್ಯಾರಂಟಿ..!

ಕಿಕಿ ಚಾಲೆಂಜ್ ಅನ್ನು ಇನ್‌ ಮೈ ಫೀಲಿಂಗ್ಸ್ ಚಾಲೆಂಜ್‌ ಎಂದೂ ಕರೆಯಲಾಗುತ್ತಲ್ಲದೇ, ಈ ಅಪಾಯಕಾರಿ ಚಾಲೆಂಜ್‌‌ನಿಂದ ಈಗಾಗಲೇ ಹಲವಾರು ಅನಾಹುತಗಳು ಸಂಭವಿಸಿದೆ ಎಂದ್ರೆ ನೀವು ನಂಬಲೇಬೇಕು. ನೋಡಲು ಒಂದು ಥರಾ ಕ್ರೇಜ್ ಆಗಿರುವ ಈ ಚಾಲೆಂಜ್‌ನಲ್ಲಿ ಸ್ವಲ್ಪವೇ ಎಚ್ಚರ ತಪ್ಪಿದ್ರು ಅಲ್ಲಿ ಯಮರಾಜ ಕರೆಕ್ಟ್ ಆಗಿ ಹಾಜರಿ ಹಾಕ್ತಾನೆ.

ಇನ್ಮುಂದೆ ಕಿಕಿ ಡ್ಯಾನ್ಸ್ ಮಾಡಿದ್ರೆ ಜೈಲಿನಲ್ಲಿ ಖಾಕಿ ಡ್ಯಾನ್ಸ್ ಗ್ಯಾರಂಟಿ..!

ಕೇವಲ ವಿದೇಶಿಗಳಲ್ಲಿ ಮಾತ್ರವಲ್ಲದೇ ಭಾರತದಲ್ಲೂ ಕಿಕಿ ಚಾಲೆಂಜ್ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಪ್ರಾಣಕ್ಕೆ ಸಂಚಕಾರ ತರುವ ಈ ಕಿಕಿ ಚಾಲೆಂಜ್ ಸ್ವೀಕರಿಸಿ ಅನಾಹುತ ಸೃಷ್ಠಿಸಬೇಡಿ ಅಂತಾ ಮುಂಬಯಿ ಪೊಲೀಸರು ಕೂಡಾ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಇನ್ಮುಂದೆ ಕಿಕಿ ಡ್ಯಾನ್ಸ್ ಮಾಡಿದ್ರೆ ಜೈಲಿನಲ್ಲಿ ಖಾಕಿ ಡ್ಯಾನ್ಸ್ ಗ್ಯಾರಂಟಿ..!

ಕಿಕಿ ಚಾಲೆಂಜ್‌ ಅಂದ್ರೆ ಏನು?

ಚಲಿಸುವ ಕಾರಿನಿಂದಲೇ ಜಿಗಿದು ಹಾಲಿವುಡ್‌ ಗಾಯಕ ಡ್ರೇಕ್‌ನ ಇನ್‌'ಮೈ ಫೀಲಿಂಗ್ಸ್' ಹಾಡಿಗೆ ಕಾರಿನ ವೇಗಕ್ಕೆ ಸರಿ ಹೊಂದುವಂತೆ ನೃತ್ಯ ಮಾಡಿಬೇಕು. ನಂತರ ಹಾಡು ಮುಗಿಯುತ್ತಿದ್ದಂತೆ ಮತ್ತೆ ಕಾರಿನೊಳಗೆ ಜಿಗಿಯುವ ಅಪಾಯಕಾರಿ ಚಾಲೆಂಜ್‌ ಇದಾಗಿದೆ.

ಬಾಲಿವುಡ್‍ನ ಕೆಲವು ಸೆಲೆಬ್ರಿಟಿಯರು ಈಗಾಗಲೇ ಈ ಚಾಲೆಂಜ್ ಅನ್ನು ಸ್ವೀಕರಿಸಿ ತಮ್ಮ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಇತ್ತೀಚಿಗೆ ನಟಿ ಆದಾ ಶರ್ಮಾ ಈ ಚಾಲೆಂಜ್ ಸ್ವೀಕರಿಸಿ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದರಿಂದ ಯುವಕ ಯುವತಿಯರಲ್ಲಿ ಹೆಚ್ಚಾಗಿ ಕಿಕಿ ಚಾಲೆಂಜ್ ಹುಚ್ಚು ಶುರುವಾಗಿತ್ತು.

ಇನ್ಮುಂದೆ ಕಿಕಿ ಡ್ಯಾನ್ಸ್ ಮಾಡಿದ್ರೆ ಜೈಲಿನಲ್ಲಿ ಖಾಕಿ ಡ್ಯಾನ್ಸ್ ಗ್ಯಾರಂಟಿ..!

ಇದಲ್ಲದೇ ಐಟಿ ಸಿಟಿ ಬೆಂಗಳೂರಿಗೆ ಕಿಕಿ ಚಾಲೆಂಜ್ ಜ್ವರ ಹಬ್ಬಿದ್ದು, ಬಿಗ್ ಬಾಸ್ 5 ಸಿಸನ್ ಸ್ಪರ್ಧಿ ನಿವೇದಿತಾ ಗೌಡ ಕೂಡಾ ಕಿಕಿ ಚಾಲೆಂಜ್ ಸ್ವೀಕರಿಸಿ ಕಿಕಿ ಡ್ಯಾನ್ಸ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ವಿರುದ್ಧ ಈಗಾಗಲೇ ದೂರು ದಾಖಲಾಗಿದ್ದು, ದೂರು ದಾಖಲಾಗುತ್ತಿದ್ದಂತೆ ಕಿಕಿ ಡ್ಯಾನ್ಸ್ ವಿಡಿಯೋ ಡಿಲೀಟ್ ಮಾಡಿರುವ ನಿವೇದಿತಾ ಗೌಡಾ ಮಾಧ್ಯಮಗಳ ಮೂಲಕ ಕ್ಷಮೆ ಕೋರಿದ್ದಾರೆ.

ಇನ್ಮುಂದೆ ಕಿಕಿ ಡ್ಯಾನ್ಸ್ ಮಾಡಿದ್ರೆ ಜೈಲಿನಲ್ಲಿ ಖಾಕಿ ಡ್ಯಾನ್ಸ್ ಗ್ಯಾರಂಟಿ..!

ಇಷ್ಟೆಲ್ಲಾ ಬೆಳವಣಿಗಳ ಮಧ್ಯೆಯೇ ನಟಿ ಪರಿಣಿತಾ ಕೂಡಾ ಕಿಕಿ ಡ್ಯಾನ್ಸ್ ಅಪ್‌ಲೋಡ್ ಮಾಡಿದ್ದು, ಇದು ಕೂಡಾ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಕಿಕಿ ವಿರುದ್ಧ ಖಡಕ್ ವಾರ್ನ್ ಮಾಡಿರುವ ಪೊಲೀಸರು ಅಪಾಯಕಾರಿ ಕಿಕಿ ಗಿಳಿಗೆ ಬಲಿಯಾಗಬೇಡಿ ಎಂಬ ಸಂದೇಶ ನೀಡುತ್ತಿದ್ದಾರೆ.

ಒಟ್ಟಿನಲ್ಲಿ ಕಿಕಿ ಚಾಲೆಂಜ್ ಸ್ವೀಕರಿಸಿದ ಹಲವು ಮಂದಿ ಬೇರೆವರಿಗೆ ಚಾಲೆಂಜ್ ಹಾಕುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಈ ಚಾಲೆಂಜ್ ಸ್ವೀಕರಿಸಿದವರಲ್ಲಿ ಸಾಮಾನ್ಯವಾಗಿ ಪೂರ್ಣಗೊಳಿಸಿದವರ ಸಂಖ್ಯೆ ತೀರಾ ಕಡಿಮೆ, ಎದ್ದು ಬಿದ್ದು ಬೇರೆಯವರಿಗೆ ತೊಂದರೆ ನೀಡಿದವರ ಪ್ರಮಾಣವೇ ಅಧಿಕ ಎನ್ನಲಾಗಿದೆ. ಅದರಲ್ಲೂ ಭಾರತದಂತಹ ಪ್ರದೇಶದಲ್ಲಿ ಈ ಚಾಲೆಂಜ್ ಫೂರ್ಣ ಮಾಡಲು ಹೊದರೆ ತೊಂದರೆ ತಪ್ಪಿದಲ್ಲ.


ಬೈಕ್ ತಪಾಸಣೆ ವೇಳೆ ಟ್ರಾಫಿಕ್ ಪೊಲೀಸರು ಮಾಡಿದ್ದೇನು ಗೊತ್ತಾ?

ಬೈಕ್ ತಪಾಸಣೆ ವೇಳೆ ಟ್ರಾಫಿಕ್ ಪೊಲೀಸರು ಮಾಡಿದ್ದೇನು ಗೊತ್ತಾ?

ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಟ್ರಾಫಿಕ್ ಪೊಲೀಸರು ದೇಶಾದ್ಯಂತ ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತಿರುವುದು ಬಹುತೇಕರಿಗೆ ಗೊತ್ತಿರುವ ವಿಚಾರ. ಆದ್ರೆ ಕಳೆದ ಒಂದು ವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಟುತ್ತಿರುವ ವಿಡಿಯೋ ಒಂದು ಚರ್ಚೆಗೆ ಕಾರಣವಾಗಿದ್ದು, ತಪಾಸಣೆ ವೇಳೆ ಸೂಪರ್ ಬೈಕ್ ಸವಾರನ ದಾಖಲೆಗಳನ್ನು ಪರಿಶೀಲನೆ ಮಾಡದ ಟ್ರಾಫಿಕ್ ಪೊಲೀಸರು ಕೇವಲ ಬೈಕಿನ ವಿಶೇಷತೆಗಳ ಬಗೆಗೆ ಕೇಳಿ ಹಾಗೆಯೇ ಕಳುಹಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಬೈಕ್ ತಪಾಸಣೆ ವೇಳೆ ಟ್ರಾಫಿಕ್ ಪೊಲೀಸರು ಮಾಡಿದ್ದೇನು ಗೊತ್ತಾ?

ಹೌದು, ಮೊನ್ನೆಯಷ್ಟೇ ಸೂಪರ್ ಬೈಕ್ ಸವಾರನೊಬ್ಬ ತನ್ನ ದುಬಾರಿ ಬೆಲೆಯ ಬೆನೆಲ್ಲಿ 302 ಬೈಕಿನಲ್ಲಿ ರೈಡ್ ಮಾಡುವಾಗ ದೆಹಲಿ ಟು ಶ್ರೀನಗರ ಹೆದ್ದಾರಿಯಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಆದ್ರೆ ತಪಾಸಣೆ ವೇಳೆ ದಾಖಲೆ ಪತ್ರಗಳನ್ನ ಪರಿಶೀಲನೆ ಮಾಡಬೇಕಿದ್ದ ಪೊಲೀಸರು ಮಾಡಿದ್ದೇ ಬೇರೆ.

ಬೈಕ್ ತಪಾಸಣೆ ವೇಳೆ ಟ್ರಾಫಿಕ್ ಪೊಲೀಸರು ಮಾಡಿದ್ದೇನು ಗೊತ್ತಾ?

ಬೈಕಿನ ದಾಖಲೆ ಪತ್ರಗಳನ್ನ ಪರಿಶೀಲನೆ ಮಾಡಬೇಕಿದ್ದ ಪೊಲೀಸರು, ಪವರ್ ಫುಲ್ ಎಂಜಿನ್ ಸಾಮರ್ಥ್ಯದ ಬೆನೆಲ್ಲಿ ಬೈಕಿನ ಖದರ್ ಫಿದಾ ಆಗಿದ್ದಾರೆ. ಹೀಗಾಗಿಯೇ ದಾಖಲೆ ಪತ್ರಗಳನ್ನ ಪರಿಶೀಲನೆ ಮಾಡಬೇಕಿದ್ದ ಪೊಲೀಸರು ಬೈಕಿನ ವಿನ್ಯಾಸ ಮತ್ತು ಬೈಕಿನ ಬೆಲೆ ಎಷ್ಟು? ಎನ್ನುವ ಬಗ್ಗೆ ಬೈಕ್ ಸವಾರನ ಬಳಿಯೇ ಮಾಹಿತಿ ಪಡೆದಿದ್ದಾರೆ.

ಬೈಕ್ ತಪಾಸಣೆ ವೇಳೆ ಟ್ರಾಫಿಕ್ ಪೊಲೀಸರು ಮಾಡಿದ್ದೇನು ಗೊತ್ತಾ?

ಬೈಕಿನ ದಾಖಲೆಗಳನ್ನು ತೊರಿಸಲು ಮುಂದಾದರು ಆ ಬಗ್ಗೆ ಮಾತೇ ಆಡದ ಪೊಲೀಸರು ಬೈಕಿನ ಸ್ಪೆಷಾಲಿಟಿ ಏನು? ಎಲ್ಲಿ ಖರೀದಿ ಮಾಡಿದ್ದು? ಬೈಕಿನ ಮೈಲೇಜ್ ಏನು? ಅಂತೆಲ್ಲಾ ಮಾಹಿತಿ ಪಡೆದು ಹಾಗೆಯೇ ಬಿಟ್ಟು ಕಳುಹಿಸಿದ್ದಾರೆ.

ಬೈಕ್ ತಪಾಸಣೆ ವೇಳೆ ಟ್ರಾಫಿಕ್ ಪೊಲೀಸರು ಮಾಡಿದ್ದೇನು ಗೊತ್ತಾ?

ಹೆದ್ದಾರಿ ಹೋಗುತ್ತಿದ್ದ ಬೈಕ್ ಅನ್ನು ಅಡ್ಡಹಾಕಿದ ಪೊಲೀಸರು ನಿಯಮದ ಪ್ರಕಾರ ಬೈಕಿಗೆ ಸಂಬಂಧಪಟ್ಟ ದಾಖಲೆ ಪತ್ರಗಳನ್ನು ಪರಿಶೀಲನೆ ಮಾಡಬೇಕಿತ್ತು. ಅದು ಬಿಟ್ಟು ಬೈಕ್ ಚೆನ್ನಾಗಿ ಅಂತಾ ಬೈಕ್ ಸವಾರನ ಯಾವುದೇ ದಾಖಲೆ ಪತ್ರಗಳನ್ನು ಪರಿಶೀಲನೆ ಮಾಡದೇ ಬಿಟ್ಟುಕಳುಹಿಸಿದ್ದು ಯಾವ ನ್ಯಾಯ?

ಬೈಕ್ ತಪಾಸಣೆ ವೇಳೆ ಟ್ರಾಫಿಕ್ ಪೊಲೀಸರು ಮಾಡಿದ್ದೇನು ಗೊತ್ತಾ?

ಈ ಬಗ್ಗೆ ಸ್ವತಃ ಬೈಕ್ ಸವಾರನೇ ವಿಡಿಯೋವೊಂದನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಅದೇ ಸಾಮಾನ್ಯ ಬೈಕ್ ಸವಾರನಾಗಿದ್ದರೇ ಇರೋ ಬರೋ ಎಲ್ಲಾ ದಾಖಲೆಗಳನ್ನು ಕೇಳಿ ಕೊನೆಗೆ ಅದು ಇಲ್ಲಾ ಇದು ಇಲ್ಲಾ ಅಂತ ಹೇಳಿ ಕನಿಷ್ಠ 100 ರೂಪಾಯಿ ಆದ್ರು ದಂಡ ಬಿಚ್ಚಿಸುತ್ತಿದ್ದರು.

ಬೈಕ್ ತಪಾಸಣೆ ವೇಳೆ ಟ್ರಾಫಿಕ್ ಪೊಲೀಸರು ಮಾಡಿದ್ದೇನು ಗೊತ್ತಾ?

ಆದ್ರೆ ಸೂಪರ್ ಬೈಕ್ ಚೆನ್ನಾಗಿ ಅಂದ ಮಾತ್ರಕ್ಕೆ ಯಾವುದೇ ದಾಖಲೆಗಳನ್ನು ನೋಡದೇ ಕೇವಲ ಬೈಕ್ ಬಗ್ಗೆ ವರ್ಣನೆ ಮಾಡಿ ಹಾಗೆಯೇ ಬಿಟ್ಟು ಕಳುಹಿಸುವುದಕ್ಕೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದ್ರೆ ಅದೇನೇ ಇರಲಿ ಕಾನೂನು ಎಲ್ಲರಿಗೂ ಒಂದೇ ಇರುವ ಬೈಕ್ ಎಷ್ಟೇ ಐಷಾರಾಮಿ ಇರಲಿ ದಾಖಲೆಗಳನ್ನು ಪರಿಶೀಲನೆ ಮಾಡಬೇಕಿರುವುದು ಪೊಲೀಸರ ಡ್ಯೂಟಿ ಅಲ್ಲವೇ?

ಬೆನೆಲ್ಲಿ ಬೈಕ್ ಸವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ವಿಡಿಯೋ ಇಲ್ಲಿದೆ ನೋಡಿ..

ಬೈಕ್ ತಪಾಸಣೆ ವೇಳೆ ಟ್ರಾಫಿಕ್ ಪೊಲೀಸರು ಮಾಡಿದ್ದೇನು ಗೊತ್ತಾ?

ಇನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.3.83 ಲಕ್ಷ ಬೆಲೆ ಹೊಂದಿರುವ ಬೆನೆಲ್ಲಿ ಟಿಎನ್‌ಟಿ 300 ಬೈಕ್ ಮಾದರಿಗಳು 300 ಸಿಸಿ ಲಿಕ್ವಿಡ್ ಕೂಲ್ಡ್ ಟ್ವಿನ್ ಸಿಲಿಂಡರ್ ಜೋಡಣೆ ಹೊಂದಿದೆ. ಹೀಗಾಗಿ ಹೊಸ ಬೈಕ್ ಮಾದರಿಯೂ 37-ಬಿಎಚ್‌ಪಿ ಹಾಗೂ 26.5-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಪೂರೈಸಲಾಗಿದೆ.

ಬೈಕ್ ತಪಾಸಣೆ ವೇಳೆ ಟ್ರಾಫಿಕ್ ಪೊಲೀಸರು ಮಾಡಿದ್ದೇನು ಗೊತ್ತಾ?

ಜೊತೆಗೆ ಹೊಸ ಬೈಕ್ ಮಾದರಿಯಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಎಬಿಎಸ್‌ನೊಂದಿಗೆ ಮುಂಬದಿಯ ಚಕ್ರದಲ್ಲಿ ಡ್ಯುಯಲ್ ಡಿಸ್ಕ್ ಬ್ರೇಕ್, ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಹಾಗೂ ಸುಧಾರಿತ ಮಾದರಿಯ ಹ್ಯಾಂಡಲ್ ನೀಡಲಾಗಿದೆ.

ಬೈಕ್ ತಪಾಸಣೆ ವೇಳೆ ಟ್ರಾಫಿಕ್ ಪೊಲೀಸರು ಮಾಡಿದ್ದೇನು ಗೊತ್ತಾ?

196 ಕೆಜಿ ಭಾರ ಹೊಂದಿರುವ ಬೆನೆಲ್ಲಿ ಟಿಎನ್‌ಟಿ ಬೈಕ್‌ಗಳು 16 ಲೀಟರ್ ಸಾಮರ್ಥ್ಯದ ಫ್ಯೂಲ್ ಟ್ಯಾಂಕ್ ಮತ್ತು ಗ್ರೀನ್, ವೈಟ್, ರೆಡ್ ಮತ್ತು ಬ್ಲ್ಯಾಕ್ ಬಣ್ಣದಲ್ಲಿ ಖರೀದಿ ಲಭ್ಯವಿದ್ದು, ಕಮ್ಯೂಟರ್ ಬೈಕ್ ಸವಾರರ ನೆಚ್ಚಿನ ಬೈಕ್ ಇದಾಗಿದೆ ಎನ್ನಬಹುದು. ಆದ್ರೆ ಅದೇನೇ ಇರಲಿ ಪೊಲೀಸರು ಮಾತ್ರ ಸಾಮಾನ್ಯ ಬೈಕ್ ಸವಾರರ ಜೊತೆ ಒಂದು ರೀತಿ ನಡೆದುಕೊಂಡರೇ ಸೂಪರ್ ಬೈಕ್ ಸವಾರರ ಜೊತೆ ಒಂದು ರೀತಿ ನಡೆದುಕೊಳ್ಳುವುದು ಅಷ್ಟು ಥರವಲ್ಲ.

Most Read Articles

Kannada
English summary
Now JAIL for people attempting Kiki challenge outside moving cars.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X