Just In
Don't Miss!
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Movies
ಡಬ್ಬಿಂಗ್ ಸಿನಿಮಾಗಳ ಬಗ್ಗೆ ಹಿರಿಯ ನಟ ದೊಡ್ಡಣ್ಣ ಅಸಮಾಧಾನ
- News
ಕೊರೊನಾ ನಿಯಂತ್ರಣದಲ್ಲಿ ವಿಫಲ: ಇಟಲಿ ಪ್ರಧಾನಿ ಗಿಸೆಪ್ಪೆ ಕಾಂಟೆ ರಾಜೀನಾಮೆ
- Sports
ಐಎಸ್ಎಲ್: ಜೆಮ್ಷೆಡ್ಪುರ ವಿರುದ್ಧ ಕ್ಲೀನ್ ಶೀಟ್ ಗುರಿಯಲ್ಲಿ ಕೇರಳ ಬ್ಲಾಸ್ಟರ್ಸ್
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
007 ನಂಬರ್ ಪ್ಲೇಟ್ಗಾಗಿ ಜೇಮ್ಸ್ ಬಾಂಡ್ ಅಭಿಮಾನಿ ಖರ್ಚು ಮಾಡಿದ್ದು ಎಷ್ಟು ಗೊತ್ತಾ?
ಜೇಮ್ಸ್ ಬಾಂಡ್ ಸರಣಿಯ ಸಿನಿಮಾಗಳಿಗೆ ಜಗತ್ತಿನಾದ್ಯಂತ ಎಷ್ಟೆಲ್ಲಾ ಕ್ರೇಜ್ ಇದೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಇನ್ನು ಚಿತ್ರರಂಗದಲ್ಲಿಯು ಕೂಡ ಬಾಂಡ್ ಚಿತ್ರಗಳಿಗೆ ಪ್ರತ್ಯೇಕ ಸ್ಥಾನವಿದೆ. ಇಲ್ಲಿಯವರೆಗೂ ಹಾಲಿವುಡ್ ನಲ್ಲಿ ಬಾಂಡ್ ಹೆಸರಿನಲ್ಲಿ 25 ಸಿನಿಮಾಗಳು ಬಂದಿವೆ.

ಜೇಮ್ಸ್ ಬಾಂಡ್ ಚಿತ್ರಗಳಿಗೆ ವಿಶ್ವಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಅದೇ ರೀತಿ ಭಾರತದಲ್ಲಿ ಒಬ್ಬ ತಾನೂ ಎಷ್ಟು ದೊಡ್ಡ ಅಭಿಮಾನಿ ಎಂದು ಲಕ್ಷ ಲಕ್ಷ ಖರ್ಚು ಮಾಡಿ ಸಾಬೀತು ಮಾಡಿದ್ದಾರೆ. 007 ಸಂಖ್ಯೆಯ ನಂಬರ್ ಪ್ಲೇಟ್ಗಾಗಿ ಬರೊಬ್ಬರಿ ರೂ.34 ಲಕ್ಷ ಖರ್ಚು ಮಾಡಿದ್ದಾರೆ ಎಂದು ವರದಿಯಾಗಿದೆ. ಗುಜರಾತ್ನ ಅಹಮದಾಬಾದ್ ಮೂಲದ ಆಶಿಕ್ ಪಟೇಲ್ ಎಂಬವರು ಇಷ್ಟು ದೊಡ್ಡ ಮೊತ್ತ ಖರ್ಚು ಮಾಡಿ 007 ಸಂಖ್ಯೆಯ ನಂಬರ್ ಪ್ಲೇಟ್ ಅನ್ನು ಪಡೆದುಕೊಂಡಿದ್ದಾರೆ.

ಆಶಿಕ್ ಪಟೇಲ್ ಅವರು ತನ್ನ ಫಾರ್ಚೂನರ್ ಎಸ್ಯುವಿಗಾಗಿ ಬಾಂಡ್ ಸಂಖ್ಯೆಯ ನಂಬರ್ ಪ್ಲೇಟ್ ಅನ್ನು ಪಡೆದುಕೊಂಡಿದ್ದಾನೆ. ಈ ಟೊಯೊಟಾ ಫಾಚೂರ್ನರ್ ಎಸ್ಯುವಿಯ ಬೆಲೆಗೆ ಸಮನಾದ ಮೊತ್ತಕ್ಕೆ ನಂಬರ್ ಪ್ಲೇಟ್ ಖರೀದಿಸಿ ಅಚ್ಚರಿ ಮೂಡಿಸಿದ್ದಾರೆ.
MOST READ: ಕರೋನಾ ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸಲು ಉಬರ್ ಜೊತೆಗೆ ಕೈಜೋಡಿಸಿದ ಪೊಲೀಸ್ ಇಲಾಖೆ

ಆಶಿಕ್ ಪಟೇಲ್ ಅವರ ಟೊಯೊಟಾ ಫಾರ್ಚೂನರ್ ಎಸ್ಯುವಿಗೆ GJ01WA007 ಎಂಬ ನಂಬರ್ ಪ್ಲೇಟ್ ಅನ್ನು ಹರಾಜಿನಲ್ಲಿ ಪಡೆದಿದ್ದಾರೆ. ಇತ್ತೀಚೆಗೆ, 007 ಸಂಖ್ಯೆಗೆ ಆನ್ಲೈನ್ ಹರಾಜು ರೂ.25 ಸಾವಿರಗಳ ಆರಂಭಿಕ ಬೆಲೆಯೊಂದಿಗೆ ಪ್ರಾರಂಭವಾಯಿತು.

ಈ ಹರಾಜಿನ ಅನೇಕ ಜೇಮ್ಸ್ ಬಾಂಡ್ ಅಭಿಮಾನಿಗಳು ಪಾಲ್ಗೊಂಡಿದ್ದರು. ಈ ಹರಾಜಿನಲ್ಲಿ ಅಭಿಮಾನಿಗಳು ರೂ.25 ಲಕ್ಷ ಗಳವರೆಗೆ ಬಿಡ್ ಮಾಡಿದರು. ಈ ವೇಳೆ ಆಶಿಕ್ ಪಟೇಲ್ ರೂ.34 ಲಕ್ಷಕ್ಕೆ ಬಿಡ್ ಕರೆದು ಉಳಿದ ಅಭಿಮಾನಿಗಳು ನಿಬ್ಬೆರಗಾಗಿಸಿದರು.
MOST READ: ಗ್ಲೋಬಲ್ ಎನ್ಸಿಎಪಿಯ ಸುರಕ್ಷತಾ ಟೆಸ್ಟ್ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ನಂತರ ಈ ಹರಾಜು ಪಕ್ರಿಯೆಯನ್ನು ಅಹಮದಾಬಾದ್ ಆರ್ಟಿಒ ಅಧಿಕಾರಿಗಳು ಪೂರ್ಣಗೊಳಿಸಿ. 007 ಸಂಖ್ಯೆಯ ನಂಬರ್ ಪ್ಲೇಟ್ ಅನ್ನು ರೂ.34 ಲಕ್ಷಕ್ಕೆ ಆಶಿಕ್ ಪಟೇಲ್ ಅವರಿಗೆ ನೀಡಿದರು. ಸಿಕ್ರೇಟ್ ಏಜೆಂಟ್ ಜೇಮ್ಸ್ ಬಾಂಡ್-007 ಎಂಬುವುದು ಅಭಿಮಾನಿಗಳ ಫೇವರೆಟ್ ಡೈಲಾಂಗ್ ಆಗಿದೆ.

007 ಸಂಖ್ಯೆಯ ನಂಬರ್ ಪ್ಲೇಟ್ ತನ್ನದಾಗಿಸಿದ ಬಳಿಕ ಆಶಿಕ್ ಪಟೇಲ್ ಮಾತನಾಡಿ, ಇಲ್ಲಿ ಹಣದ ವಿಚಾರವಲ್ಲ, ಆ ನಂಬರ್ ನನ್ನ ಪಾಲಿಗೆ ಲಕ್ಕಿ ನಂಬರ್, ಈ ನಂಬರ್ ನನ್ನ ಕಾರಿಗೆ ಸಿಕ್ಕಿರುವುದು ನನ್ನ ಭಾಗ್ಯವೆಂದು ಸಂತಸವನ್ನು ಹಂಚಿಕೊಂಡಿದ್ದಾರೆ.
MOST READ: ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್ಲಿಫ್ಟ್

ಅವರು ತಮ್ಮ ಟೊಯೊಟಾ ಫಾರ್ಚೂನರ್ ಎಸ್ಯುವಿಗಾಗಿ ಈ ನಂಬರ್ ಪ್ಲೇಟ್ ಅನ್ನು ಖರೀದಿಸಿದ್ದಾರೆ. ಟೊಯೊಟಾ ಕಂಪನಿಯ ಎಸ್ಯುವಿಗಳ ಸರಣಿಯಲ್ಲಿ ಫಾರ್ಚೂನರ್ ಜನಪ್ರಿಯ ಮಾದರಿಯಾಗಿದೆ.

ಇನ್ನು ಟೊಯೊಟಾ ಫಾರ್ಚೂನರ್ ಎಸ್ಯುವಿ ಬಗ್ಗೆ ಹೇಳುವುದಾದರೆ, ಭಾರತೀಯ ಮಾರುಕಟ್ಟೆಯಲ್ಲಿ ಟೊಯೊಟಾ ಕಂಪನಿಯು ಫಾರ್ಚೂನರ್ ಫೇಸ್ಲಿಫ್ಟ್ ಎಸ್ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಟೊಯೊಟಾ ಫಾರ್ಚೂನರ್ ತನ್ನ ಉತ್ತಮ ಸಾಮರ್ಥ್ಯದಿಂದ ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಅಲ್ಲದೇ ಅತ್ಯುತ್ತಮ ಆಫ್-ರೋಡ್ ಸಾಮರ್ಥ್ಯವನ್ನು ಹೊಂದಿದೆ. ಭಾರತೀಯ ಮಾರುಕಟ್ಟೆಯಲ್ಲಿ ಟೊಯೊಟಾ ಫಾರ್ಚೂನರ್ ಫೇಸ್ಲಿಫ್ಟ್ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ ಎಸ್ಯುವಿಯಾಗಿದೆ.