50 ಕಿ.ಮೀ ದೂರವನ್ನು ಕಡಿಮೆಗೊಳಿಸಲಿದೆ ಈ ಸುರಂಗ ಮಾರ್ಗ

ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ, ಕಾಶ್ಮೀರಕ್ಕೆ ಭಾರತದ ಇತರ ನಗರಗಳ ಜೊತೆಗೆ ಸಂಪರ್ಕ ನೀಡುವ ಏಕೈಕ ರಸ್ತೆಯಾಗಿದೆ. ಈ ಹೆದ್ದಾರಿಯನ್ನು ಎಲ್ಲಾ ರೀತಿಯ ಹವಾಮಾನದಲ್ಲೂ ಬಾಳಿಕೆ ಬರುವ ರೀತಿಯಲ್ಲಿ ನಿರ್ಮಿಸಲಾಗಿದೆ. ಸದ್ಯಕ್ಕೆ ಈ ಹೆದ್ದಾರಿಯನ್ನು ಅಗಲಗೊಳಿಸುವ ಕಾರ್ಯಗಳು ನಡೆಯುತ್ತಿವೆ.

50 ಕಿ.ಮೀ ದೂರವನ್ನು ಕಡಿಮೆಗೊಳಿಸಲಿದೆ ಈ ಸುರಂಗ ಮಾರ್ಗ

ಈ ಹೆದ್ದಾರಿಯನ್ನು ನಾಲ್ಕು ಪಥಗಳ ಹೆದ್ದಾರಿಯನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಹೆದ್ದಾರಿಯಲ್ಲಿರುವ ಬನಿಹಾಲ್- ಖಾಜಿಗಂಡ್ ನಡುವೆ 8.5 ಕಿ.ಮೀ ಉದ್ದದ ಸುರಂಗವನ್ನು ನಿರ್ಮಿಸಲಾಗುತ್ತಿದೆ. ಈ ಸುರಂಗ ಮಾರ್ಗದ ನಿರ್ಮಾಣದಿಂದ ಜಮ್ಮು-ಕಾಶ್ಮೀರ ನಡುವಿನ ಅಂತರವು 50 ಕಿ.ಮೀಗಳಷ್ಟು ಕಡಿಮೆಯಾಗಲಿದೆ.

50 ಕಿ.ಮೀ ದೂರವನ್ನು ಕಡಿಮೆಗೊಳಿಸಲಿದೆ ಈ ಸುರಂಗ ಮಾರ್ಗ

ಅಂತರವು ಕಡಿಮೆಯಾದ ನಂತರ ತಲುಪುವ ಸಮಯವು ಸಹ ಕಡಿಮೆಯಾಗಲಿದೆ ಎಂದು ಹೇಳಲಾಗಿದೆ. ಈ ರಾಷ್ಟ್ರೀಯ ಹೆದ್ದಾರಿಯನ್ನು ಅಗಲಗೊಳಿಸುವ ಕಾರ್ಯವು 2011ರಿಂದ ನಡೆಯುತ್ತಿದೆ. ಕಾಮಗಾರಿ ಆರಂಭವಾದಾಗ ಈ ಮೊದಲು 5 ವರ್ಷಗಳ ಗಡುವನ್ನು ವಿಧಿಸಲಾಗಿತ್ತು.

MOSTREAD: ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್

50 ಕಿ.ಮೀ ದೂರವನ್ನು ಕಡಿಮೆಗೊಳಿಸಲಿದೆ ಈ ಸುರಂಗ ಮಾರ್ಗ

ಇನ್ನು ಕೆಲವೇ ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಬನಿಹಾಲ್-ಖಾಜಿಗಂಡ್ ನಡುವೆ ಅನೇಕ ಅಂಕುಡೊಂಕಾದ ಮಾರ್ಗಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣಕ್ಕೆ ಈ ರಸ್ತೆಯಲ್ಲಿ ಸಾಗಲು ಹೆಚ್ಚಿನ ಸಮಯ ಬೇಕಾಗುತ್ತದೆ. ಇದರಿಂದ ವಾಹನ ಸವಾರರು ಹೈರಾಣಾಗುತ್ತಿದ್ದರು.

50 ಕಿ.ಮೀ ದೂರವನ್ನು ಕಡಿಮೆಗೊಳಿಸಲಿದೆ ಈ ಸುರಂಗ ಮಾರ್ಗ

ಈ ಸಮಸ್ಯೆಯನ್ನು ಕೊನೆಗಾಣಿಸಲು ಈ ಮಾರ್ಗದ ಸಾಮರ್ಥ್ಯವನ್ನು ಹೆಚ್ಚಿಸಿ, ಜಮ್ಮು-ಶ್ರೀನಗರಕ್ಕೆ ಸಾಗುವ ಸಮಯವನ್ನು ಕಡಿಮೆಗೊಳಿಸಲು ಈ ಹೆದ್ದಾರಿಯನ್ನು ಅಗಲಗೊಳಿಸಲಾಗುತ್ತಿದೆ. ಕಾಮಗಾರಿಗೆ ಅಡ್ಡವಾಗಿರುವ ಎಲ್ಲಾ ಅಡಚಣೆಗಳನ್ನು ನಿವಾರಿಸುವಂತೆ ಆದೇಶಿಸಲಾಗಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

50 ಕಿ.ಮೀ ದೂರವನ್ನು ಕಡಿಮೆಗೊಳಿಸಲಿದೆ ಈ ಸುರಂಗ ಮಾರ್ಗ

ಹೆದ್ದಾರಿ ಅಗಲೀಕರಣಕ್ಕಾಗಿ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯು ಪೂರ್ಣಗೊಂಡಿದ್ದು, ಅದರ ವರದಿಯನ್ನು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಹೆಚ್‌ಎಐ) ಸಲ್ಲಿಸಲಾಗಿದೆ. 1.5 ವರ್ಷಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂದು ಎನ್‌ಹೆಚ್‌ಎಐ ಹೇಳಿದೆ.

50 ಕಿ.ಮೀ ದೂರವನ್ನು ಕಡಿಮೆಗೊಳಿಸಲಿದೆ ಈ ಸುರಂಗ ಮಾರ್ಗ

ಸದ್ಯಕ್ಕೆ ಬನಿಹಾಲ್-ಖಾಜಿಗಂಡ್ ಸುರಂಗ ಮಾರ್ಗ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಉದ್ಘಾಟಿಸಲಾಗುವುದು. ರಂಬನ್ ಹಾಗೂ ಬನಿಹಾಲ್‌ನ ಗುಡ್ಡಗಾಡು ಪ್ರದೇಶಗಳಲ್ಲಿ 16 ಕಿ.ಮೀ ರಸ್ತೆ ನಿರ್ಮಾಣಕ್ಕಾಗಿ ರೂ.2000 ಕೋಟಿಗಳ ಬಜೆಟ್ ನಿಗದಿಪಡಿಸಲಾಗಿದೆ. ಇನ್ನೂ ಹಲವಾರು ಮುಖ್ಯ ರಸ್ತೆಗಳು ಹಾಗೂ ಸುರಂಗ ಮಾರ್ಗಗಳನ್ನು ನಿರ್ಮಿಸುವ ಯೋಜನೆಗಳಿವೆ.

MOSTREAD: ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

50 ಕಿ.ಮೀ ದೂರವನ್ನು ಕಡಿಮೆಗೊಳಿಸಲಿದೆ ಈ ಸುರಂಗ ಮಾರ್ಗ

ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಹೊಸ ಹೆದ್ದಾರಿ ಹಾಗೂ ಸುರಂಗಗಳ ನಿರ್ವಹಣೆಯನ್ನು ಗುತ್ತಿಗೆದಾರರಿಗೆ ವಹಿಸಲಾಗಿದೆ. ಈ ಪ್ರದೇಶಗಳಲ್ಲಿ ಎದುರಾಗಿರುವ ಎಲ್ಲಾ ಅಡಚನೆಗಳನ್ನು ನಿವಾರಿಸಿ ಕಾಮಗಾರಿಯನ್ನು ವೇಗವಾಗಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ.

Most Read Articles

Kannada
English summary
Jammu Srinagar Tunnel to open soon. Read in Kannada.
Story first published: Monday, July 13, 2020, 13:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X