ಕತ್ತೆಗಳೊಂದಿಗೆ ವಿಭಿನ್ನ ಪ್ರತಿಭಟನೆ ನಡೆಸಿದ ಬೈಕ್ ಮಾಲೀಕ

ಭಾರತೀಯರು ಕ್ರಿಯಾಶೀಲತೆಗೆ ಹೆಸರುವಾಸಿಯಾಗಿದ್ದಾರೆ. ಪ್ರತಿಭಟನೆ ನಡೆಸಲು ಸಹ ಹೊಸ ಹೊಸ ವಿಧಾನಗಳನ್ನು ಕಂಡುಕೊಳ್ಳುತ್ತಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಗ್ರಾಹಕರೊಬ್ಬರು ತಮ್ಮ ಎಸ್‌ಯುವಿಯನ್ನು ಕತ್ತೆಯಿಂದ ಎಳೆಸುವ ಮೂಲಕ ಪ್ರತಿಭಟನೆ ನಡೆಸಿದ್ದರು.

ಕತ್ತೆಗಳೊಂದಿಗೆ ವಿಭಿನ್ನ ಪ್ರತಿಭಟನೆ ನಡೆಸಿದ ಬೈಕ್ ಮಾಲೀಕ

ಈಗ ಇದೇ ರೀತಿಯ ಮತ್ತೊಂದು ಘಟನೆ ನಡೆದಿದೆ. ಜಾವಾ ಬೈಕ್ ಮಾಲೀಕರೊಬ್ಬರು ಕತ್ತೆಯೊಂದಿಗೆ ಡೀಲರ್ ಶಿಪ್ ಬಳಿ ತೆರಳಿ ಪ್ರತಿಭಟನೆ ನಡೆಸಿದ್ದಾರೆ. ಜಾವಾ ಬೈಕಿನ ಮಾಲೀಕರು ಜಾವಾ ಕಂಪನಿಯನ್ನು ಹಾಗೂ ಬೈಕ್ ಅನ್ನು ಡಾಂಕಿ (ಕತ್ತೆ) ಎಂದು ಬಣ್ಣಿಸಿ, ಇದೊಂದು ನಿಷ್ಪ್ರಯೋಜಕ ಕಂಪನಿ ಎಂದು ಹೇಳಿದ್ದಾರೆ.

ಕತ್ತೆಗಳೊಂದಿಗೆ ವಿಭಿನ್ನ ಪ್ರತಿಭಟನೆ ನಡೆಸಿದ ಬೈಕ್ ಮಾಲೀಕ

ಉದಯಪುರದ ನಿವಾಸಿ ಅಭಯ್ ರಾಜ್ ಸಿಂಗ್ ರವರು ಖರೀದಿಸಿದ ಜಾವಾ 42 ಬೈಕ್ ತೊಂದರೆಗೀಡಾಗಿದೆ. ಹಲವಾರು ಬಾರಿ ಈ ಬಗ್ಗೆ ದೂರು ನೀಡಿದ್ದರೂ ಕಂಪನಿಯಾಗಲೀ ಅಥವಾ ಡೀಲರ್ ಆಗಲಿ ಅವರ ಸಮಸ್ಯೆಯನ್ನು ಪರಿಹರಿಸಿಲ್ಲ. ಈ ಕಾರಣಕ್ಕೆ ಡೀಲರ್ ಮುಂದೆ ಕತ್ತೆಗಳ ಮೂಲಕ ಪ್ರತಿಭಟನೆ ನಡೆಸಿದ್ದಾರೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಕತ್ತೆಗಳೊಂದಿಗೆ ವಿಭಿನ್ನ ಪ್ರತಿಭಟನೆ ನಡೆಸಿದ ಬೈಕ್ ಮಾಲೀಕ

ಅವರು 8 ತಿಂಗಳ ಹಿಂದೆ ಜಾವಾ 42 ಬೈಕ್ ಖರೀದಿಸಿದ್ದರು. ಖರೀದಿಸಿದ ನಂತರ ಹಲವಾರು ಬಾರಿ ತೊಂದರೆ ಅನುಭವಿಸಿದ್ದಾರೆ. 100 ಕಿ.ಮೀಗಿಂತ ಹೆಚ್ಚು ಪ್ರಯಾಣಿಸಿದಾಗಲೆಲ್ಲಾ ಬೈಕ್‌ನ ಎಂಜಿನ್ ಕೆಟ್ಟು ನಿಲ್ಲುತ್ತಿತ್ತು. ಪ್ರತಿ ಬಾರಿ ಈ ತೊಂದರೆ ಎದುರಾಗಿದೆ ಎಂದು ಅವರು ಹೇಳಿದ್ದಾರೆ.

ಕತ್ತೆಗಳೊಂದಿಗೆ ವಿಭಿನ್ನ ಪ್ರತಿಭಟನೆ ನಡೆಸಿದ ಬೈಕ್ ಮಾಲೀಕ

ಈ ಬಗ್ಗೆ ಡೀಲರ್ ಹಾಗೂ ಕಂಪನಿಯವರಿಗೆ ದೂರು ನೀಡಿದ್ದಾರೆ. ಡೀಲರ್ ಗೆ ದೂರು ನೀಡಿದಾಗ ಅಲ್ಲಿದ್ದ ಸಿಬ್ಬಂದಿ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಜೊತೆಗೆ ಕಂಪನಿಯು ಸಹ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಕತ್ತೆಗಳೊಂದಿಗೆ ವಿಭಿನ್ನ ಪ್ರತಿಭಟನೆ ನಡೆಸಿದ ಬೈಕ್ ಮಾಲೀಕ

ತಾವೊಬ್ಬ ವಿದ್ಯಾರ್ಥಿಯಾಗಿದ್ದು, ಈ ಬೈಕಿಗೆ 2 ಲಕ್ಷ ನೀಡಿ ಖರೀದಿಸಿ ಪ್ರತಿ ತಿಂಗಳು ಇಎಂಐ ಪಾವತಿಸುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಕಂಪನಿಯು ಹಣ ಪಡೆದು ಬೈಕ್ ಮಾರಾಟ ಮಾಡಿ ಗ್ರಾಹಕರನ್ನು ಮರೆತುಬಿಡುತ್ತದೆ. ಮಾರಾಟದ ನಂತರದ ಸೇವೆಯ ಬಗ್ಗೆ ಕಂಪನಿ ತಲೆಕೆಡಿಸಿಕೊಳ್ಳುವುದಿಲ್ಲವೆಂದು ಅವರು ಹೇಳಿದ್ದಾರೆ.

ಕತ್ತೆಗಳೊಂದಿಗೆ ವಿಭಿನ್ನ ಪ್ರತಿಭಟನೆ ನಡೆಸಿದ ಬೈಕ್ ಮಾಲೀಕ

ಅಭಯ್ ರಾಜ್ ಸಿಂಗ್ ರವರು ತಾವು ಈ ಬೈಕಿನ ಬಗ್ಗೆ ಕ್ರೇಜ್ ಹೊಂದಿದ್ದ ಕಾರಣಕ್ಕೆ ಈ ಬೈಕ್ ಖರೀದಿಸಿದ್ದಾಗಿ ಹೇಳಿದ್ದಾರೆ. ಈಗ ಇದು ತಮ್ಮ ಜೀವನದ ದೊಡ್ಡ ತಪ್ಪು ಎಂದು ಹೇಳುತ್ತಿದ್ದಾರೆ. ಈ ಬೈಕ್ ಅನ್ನು ಯಾರೂ ಖರೀದಿಸಬೇಡಿ ಎಂದು ಇತರರಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಕತ್ತೆಗಳೊಂದಿಗೆ ವಿಭಿನ್ನ ಪ್ರತಿಭಟನೆ ನಡೆಸಿದ ಬೈಕ್ ಮಾಲೀಕ

ಈ ಬೈಕಿನ ಬದಲು ಮತ್ತೊಂದು ಬೈಕ್ ಖರೀದಿಸುವಂತೆ ಸಲಹೆ ನೀಡುತ್ತಿದ್ದಾರೆ.ಅಭಯ್ ರಾಜ್ ಸಿಂಗ್ ಈ ಬಗ್ಗೆ ತಮ್ಮ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದು, ಈ ಪೋಸ್ಟ್ ನಲ್ಲಿ ಜಾವಾ ಕಂಪನಿಗೆ ಬರೆದ ಇ-ಮೇಲ್‌ನ ಸ್ಕ್ರೀನ್‌ಶಾಟ್ ಕೂಡ ಲಗತ್ತಿಸಿದ್ದಾರೆ. ಜಾವಾ ಕಂಪನಿಯು ತಮ್ಮ ಸಮಸ್ಯೆಯನ್ನು ಬಗೆಹರಿಸಬಹುದೆಂಬ ನಂಬಿಕೆಯಿಂದ ತಾವು ಮಾಡಿದ್ದ ಟ್ವೀಟ್ ಗಳನ್ನು ಡಿಲಿಟ್ ಮಾಡಿದ್ದಾರೆ.

ಮೂಲ: ರಶ್ ಲೇನ್

Most Read Articles

Kannada
English summary
Jawa 42 bike owner protests with donkeys infront of the dealership. Read in Kannada.
Story first published: Monday, August 3, 2020, 19:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X