ಕರೋನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ಕೈಜೋಡಿಸಿದ ಜಾವಾ ಮೋಟಾರ್‌ಸೈಕಲ್

ಮಹಾಮಾರಿ ಕರೋನಾ ವೈರಸ್ ಮಟ್ಟಹಾಕುವುದಕ್ಕಾಗಿ ಲಾಕ್ ಡೌನ್ ವಿಧಿಸಿರುವ ಕೇಂದ್ರ ಸರ್ಕಾರವು ವೈರಸ್ ಹರಡದಂತೆ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಈ ಹಿನ್ನಲೆಯಲ್ಲಿ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣವಾಗಿ ಸ್ತಬ್ಧಗೊಂಡಿವೆ.

ಕರೋನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ಕೈಜೋಡಿಸಿದ ಜಾವಾ ಮೋಟಾರ್‌ಸೈಕಲ್

ವೈರಸ್ ಹರಡದಂತೆ ವಿಧಿಸಲಾಗಿರುವ ಲಾಕ್ ಡೌನ್‌ನಿಂದಾಗಿ ದುಡಿದು ತಿನ್ನುವಂತಹ ವರ್ಗದ ಕೋಟ್ಯಾಂಟರ ಜನರ ಬದುಕು ದುಸ್ತರವಾಗಿದ್ದು, ದಿನದ ಒಂದು ಹೊತ್ತಿನ ಆಹಾರಕ್ಕೂ ಪರದಾಟುವಂತಹ ಶೋಚನೀಯ ಪರಿಸ್ಥಿತಿ ಎದುರಾಗಿದೆ. ಹೀಗಿರುವಾಗ ಬಡವರ ಹಸಿವು ತಣಿಸಲು ಮುಂದಾಗಿರುವ ಜಾವಾ ಮೋಟಾರ್‌ಸೈಕಲ್ ಕಂಪನಿಯು ಬೈಕ್ ಉತ್ಪಾದನಾ ಘಟಕದಲ್ಲೇ ವೈದ್ಯಕೀಯ ಉಪಕರಣಗಳ ಅಸೆಂಬ್ಲಿ ಜೊತೆಗೆ ಬಡವರ ಹಸಿವು ನೀಗಿಸಲು ದಿನಂಪ್ರತಿ 1 ಸಾವಿರ ಆಹಾರ ಪೊಟ್ಟಣಗಳನ್ನು ಸಿದ್ದಪಡಿಸಿ ಅಗತ್ಯವಿರುವ ಜನತೆಗೆ ವಿತರಣೆ ಮಾಡುತ್ತಿದೆ.

ಕರೋನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ಕೈಜೋಡಿಸಿದ ಜಾವಾ ಮೋಟಾರ್‌ಸೈಕಲ್

ಮಧ್ಯಪ್ರದೇಶದಲ್ಲಿರುವ ಪ್ರೀತಂಪುರ ಬೈಕ್ ಉತ್ಪಾದನಾ ಘಟಕದಲ್ಲಿ ವೈದ್ಯಕೀಯ ಉಪಕರಣಗಳ ಅಸೆಂಬ್ಲಿ ಆರಂಭಿಸಿರುವ ಜಾವಾ ಕಂಪನಿಯು ಮೊದಲ ಹಂತವಾಗಿ ಫೇಸ್ ಶೀಲ್ಡ್ ಸಿದ್ದಪಡಿಸುತ್ತಿದ್ದು, ಮಾತೃ ಸಂಸ್ಥೆಯಾದ ಮಹೀಂದ್ರಾ ಕೂಡಾ ಈಗಾಗಲೇ ವೆಂಟಿಲೆಟರ್‌ಗಳ ಉತ್ಪಾದನೆಯನ್ನು ಶುರು ಮಾಡಿದೆ.

MOST READ: ಕರೋನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ಉಚಿತ ಕ್ಯಾಬ್ ಸೌಲಭ್ಯವನ್ನು ಆರಂಭಿಸಿದ ಮಹೀಂದ್ರಾ

ಕರೋನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ಕೈಜೋಡಿಸಿದ ಜಾವಾ ಮೋಟಾರ್‌ಸೈಕಲ್

ಇದಲ್ಲದೇ ಮಾಹಾಮಾರಿ ಕರೋನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಸ್ಪಂದಿಸಿರುವ ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ಧನಸಹಾಯ ಮತ್ತು ವೈದ್ಯಕೀಯ ಉಪಕರಣಗಳ ಉತ್ಪಾದನೆಗೆ ಚಾಲನೆ ನೀಡಿವೆ.

ಕರೋನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ಕೈಜೋಡಿಸಿದ ಜಾವಾ ಮೋಟಾರ್‌ಸೈಕಲ್

ಕರೋನಾ ವೈರಸ್ ಅಟ್ಟಹಾಸ ಹೆಚ್ಚಾಗುತ್ತಿದ್ದಂತೆ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬಹುತೇಕ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಂಡಿವೆ. ಈ ಹಿನ್ನಲೆಯಲ್ಲಿ ಸರ್ಕಾರದ ಆರ್ಥಿಕ ಪರಿಸ್ಥಿತಿ ಶೋಚನೀಯ ಸ್ಥಿತಿ ತಲುಪಿದ್ದು, ಕರೋನಾ ವಿರುದ್ಧ ಹೋರಾಟಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಣಿಗೆ ಸಂಗ್ರಹ ಅಭಿಯಾನವನ್ನು ಕೈಗೊಂಡಿವೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕೆ ಭಾರೀ ಪ್ರಮಾಣದ ದೇಣಿಗೆ ನೀಡಿದ ಟಿವಿಎಸ್ ಮೋಟಾರ್

ಕರೋನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ಕೈಜೋಡಿಸಿದ ಜಾವಾ ಮೋಟಾರ್‌ಸೈಕಲ್

ದೇಣಿಗೆ ಸಂಗ್ರಹ ಅಭಿಯಾನಕ್ಕೆ ಈಗಾಗಲೇ ಭಾರೀ ಪ್ರಮಾಣದ ನೆರವು ಹರಿದು ಬಂದಿದ್ದು, ಉದ್ಯಮಿಗಳು, ಚಿತ್ರ ನಟರು, ಸರ್ಕಾರಿ ಅಧಿಕಾರಿಗಳು ಮತ್ತು ಜನಸಾಮಾನ್ಯರು ಸಹ ತಮ್ಮ ಕೈಲಾದಷ್ಟು ದೇಣಿಗೆ ನೀಡಿ ಕರೋನಾ ವಿರುದ್ಧದ ಸರ್ಕಾರದ ಹೋರಾಟಕ್ಕೆ ಶಕ್ತಿ ತುಂಬುತ್ತಿದ್ದಾರೆ.

ಕರೋನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ಕೈಜೋಡಿಸಿದ ಜಾವಾ ಮೋಟಾರ್‌ಸೈಕಲ್

ಅದರಲ್ಲೂ ಆಟೋ ಉತ್ಪಾದನಾ ಕಂಪನಿಗಳು ಕರೋನಾ ವಿರುದ್ದ ಹೋರಾಟಕ್ಕಾಗಿ ಸಂಕಷ್ಟದ ಸಮಯದಲ್ಲೂ ಸರ್ಕಾರದ ಜೊತೆ ನಿಂತಿರುವುದಲ್ಲದೆ ವೈದ್ಯಕೀಯ ಉಪಕರಣಗಳ ತಯಾರಿಕೆಯ ಜೊತೆಗೆ ಧನಸಹಾಯವನ್ನು ಕೂಡಾ ಮಾಡುತ್ತಿವೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕಾಗಿ ರೂ.100 ಕೋಟಿ ದೇಣಿಗೆ ನೀಡಿದ ಬಜಾಜ್ ಗ್ರೂಪ್

ಕರೋನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ಕೈಜೋಡಿಸಿದ ಜಾವಾ ಮೋಟಾರ್‌ಸೈಕಲ್

ಕರೋನಾ ವಿರುದ್ಧ ಹೋರಾಟಕ್ಕಾಗಿ ಅಗತ್ಯ ವೈದ್ಯಕೀಯ ಉಪಕರಣಗಳ ಕೊರತೆ ಎದುರಾಗಿದ್ದು, ಸದ್ಯ ಆಟೋ ಉತ್ಪಾದನಾ ಪ್ರಕ್ರಿಯೆ ಸ್ಥಗಿತಗೊಂಡಿರುವುದರಿಂದ ಪ್ರಮುಖ ವಾಹನ ಕಂಪನಿಗಳು ವೈದ್ಯಕೀಯ ಉಪಕರಣಗಳ ತಯಾರಿಕೆ ಮತ್ತು ಅಸೆಂಬ್ಲಿಗಾಗಿ ಕೈಜೋಡಿಸಿವೆ.

ಕರೋನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ಕೈಜೋಡಿಸಿದ ಜಾವಾ ಮೋಟಾರ್‌ಸೈಕಲ್

ಮಹೀಂದ್ರಾ ಮಾತ್ರವಲ್ಲದೇ ಮಾರುತಿ ಸುಜುಕಿಯು ಸಹ ಪ್ರತಿ ತಿಂಗಳು 10 ಸಾವಿರ ವೆಂಟಲೆಟರ್ ಸಿದ್ದಪಡಿಸುವ ಯೋಜನೆ ಚಾಲನೆ ನೀಡಿದ್ದು, ವೈದ್ಯಕೀಯ ಉಪಕರಣಗಳ ಜೊತೆ ಜೊತೆಗೆ ಬಡವರ ಹಸಿವು ನೀಗಿಸಲು ಸಾಕಷ್ಟು ಶ್ರಮವಹಿಸುವ ಮೂಲಕ ಜನರ ಮೆಚ್ಚುಗೆಗೆ ಕಾರಣವಾಗಿವೆ.

Most Read Articles

Kannada
English summary
Jawa Motorcycles Factory Begins Assembling Face Shields. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X