ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ದಯೆ, ಕರುಣೆ, ಮನುಷ್ಯತ್ವ ಕಡಿಮೆಯಾಗುತ್ತಿರುವ ಈ ಸಮಯದಲ್ಲಿ ಜನರು ಇತರರಿಗೆ ನೆರವಾಗುತ್ತಾರೆ ಎಂಬುದು ಮರೀಚಿಕೆಯಾಗಿದೆ. ಆದರೆ ಇತ್ತೀಚೆಗೆ ವ್ಯಕ್ತಿಯೊಬ್ಬರು ತಮ್ಮ ಜೀವದ ಹಂಗು ತೊರೆದು ಮಗುವೊಂದನ್ನು ಪ್ರಾಣಾಪಾಯದಿಂದ ಕಾಪಾಡಿದ್ದಾರೆ.

ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ತಮ್ಮ ಜೀವವನ್ನು ಲೆಕ್ಕಿಸದೇ ವೇಗವಾಗಿ ಬರುತ್ತಿದ್ದ ರೈಲಿನಿಂದ ಮಗುವನ್ನು ರಕ್ಷಿಸಿದ ವ್ಯಕ್ತಿಯನ್ನು ರೈಲ್ವೆ ಪಾಯಿಂಟ್‌ಮ್ಯಾನ್ ಮಯೂರ್ ಶೆಲ್ಕೆ ಎಂದು ಗುರುತಿಸಲಾಗಿದೆ. ಮಯೂರ್ ಶೆಲ್ಕೆ ಆಕಸ್ಮಿಕವಾಗಿ ರೈಲಿನ ಹಳಿ ಮೇಲೆ ಬಿದ್ದ ಮಗುವನ್ನು ರಕ್ಷಿಸಿದ್ದಾರೆ.

ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ಕಳೆದ ಕೆಲವು ದಿನಗಳಿಂದ ಈ ಘಟನೆಯ ವೀಡಿಯೊ ವೈರಲ್ ಆಗಿದೆ. ವೈರಲ್ ಆಗಿರುವ ಈ ವೀಡಿಯೊ ಜಾವಾ ಮೋಟಾರ್‌ಸೈಕಲ್‌ ಕಂಪನಿಯ ನಿರ್ದೇಶಕರಾದ ಅನುಪಮ್ ತಾರೆಜಾ ಅವರ ಗಮನಕ್ಕೂ ಬಂದಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ಮಯೂರ್ ಶೆಲ್ಕೆ ಅವರ ಈ ಕಾರ್ಯವು ಅನುಪಮ್ ತಾರೆಜಾ ಅವರನ್ನು ಆಕರ್ಷಿಸಿದೆ. ಶೆಲ್ಕೆ ಅವರ ನಿಸ್ವಾರ್ಥ ಮನೋಭಾವ ಹಾಗೂ ಧೈರ್ಯವನ್ನು ಶ್ಲಾಘಿಸಿರುವ ಅವರು ಜಾವಾ ಹೀರೋಸ್ ಇನಿಶಿಯೇಟಿವ್‌ನ ಭಾಗವಾಗಿ ಮಯೂರ್ ಶೆಲ್ಕೆರವರಿಗೆ ಹೊಸ ಜಾವಾ ಬೈಕ್ ಅನ್ನು ಉಡುಗೊರೆಯಾಗಿ ನೀಡುವುದಾಗಿ ತಿಳಿಸಿದ್ದಾರೆ.

ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ಮಾಹಿತಿಗಳ ಪ್ರಕಾರ, ಈ ಘಟನೆ ಏಪ್ರಿಲ್ 17ರಂದು ವಾಂಗ್ನಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಈ ನಿಲ್ದಾಣದಲ್ಲಿಯೇ ಮಯೂರ್ ಶೆಲ್ಕೆ ರೈಲ್ವೆ ಪಾಯಿಂಟ್‌ಮ್ಯಾನ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ಈ ಘಟನೆಯ ನಂತರ ಕೇಂದ್ರ ರೈಲ್ವೆ ಅಧಿಕಾರಿಗಳು ಮಯೂರ್ ಶೆಲ್ಕೆ ಅವರ ಧೈರ್ಯವನ್ನು ಶ್ಲಾಘಿಸಿದ್ದಾರೆ. ಜೊತೆಗೆ ಈ ಧೈರ್ಯಶಾಲಿ ರೈಲ್ವೆ ಉದ್ಯೋಗಿಗೆ ರೂ.50,000 ನಗದು ಬಹುಮಾನ ನೀಡಿದ್ದಾರೆ.

ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ಶೆಲ್ಕೆ ಅವರ ಈ ವೀಡಿಯೊ ಟ್ವಿಟರ್'ನಲ್ಲಿ ಹೆಚ್ಚು ಬಾರಿ ವೀಕ್ಷಿಸಲ್ಪಟ್ಟಿದೆ. ಅನುಪಮ್ ತಾರೆಜಾರವರು ಸಹ ಟ್ವೀಟ್ ಮಾಡಿ, ಇಡೀ ಜಾವಾ ಮೋಟಾರ್ಸೈಕಲ್ ಕುಟುಂಬವು ಪಾಯಿಂಟ್ ಮ್ಯಾನ್ ಮಯೂರ್ ಶೆಲ್ಕೆ ಅವರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತದೆ ಎಂದು ಹೇಳಿದ್ದಾರೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ಈಗ ಚಾಲನೆಯಲ್ಲಿರುವ ನಮ್ಮ ಜಾವಾ ಹೀರೋಸ್ ಇನಿಶಿಯೇಟಿವ್ ಭಾರತದ ಎಲ್ಲಾ ಮೂಲೆಗಳಲ್ಲಿರುವ ನಿಜವಾದ ಹೀರೋಗಳನ್ನು ಗುರುತಿಸುತ್ತದೆ. ಜಾವಾ ಸಮುದಾಯದ ಭಾಗವಾಗಿ ನಾವು ಅವರನ್ನು ಬೈಕ್‌ಗಳನ್ನು ನೀಡಿ ಗೌರವಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಅನುಪಮ್ ತಾರೆಜಾರವರ ರೀತಿಯಲ್ಲಿಯೇ ಮಹೀಂದ್ರಾ ಅಂಡ್ ಮಹೀಂದ್ರಾ ಗ್ರೂಪ್ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಸಹ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ಮಯೂರ್ ಶೆಲ್ಕೆ ಅವರು ಯಾವುದೇ ವೇಷಭೂಷಣ ತೊಟ್ಟಿಲ್ಲ. ಆದರೆ ಅವರು ಸಿನಿಮಾಗಳಲ್ಲಿ ಬರುವ ಸೂಪರ್ ಹೀರೊಗಳಿಗಿಂತ ಹೆಚ್ಚು ಧೈರ್ಯ ತೋರಿಸಿದ್ದಾರೆ. ಜಾವಾ ಕುಟುಂಬದ ಪರವಾಗಿ ನಾವು ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ.

Most Read Articles

Kannada
English summary
Jawa motorcycles honors railways hero Mayur Shelke by giving new jawa bike. Read in Kannada.
Story first published: Wednesday, April 21, 2021, 17:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X