ಕಡಲ ತೀರದಲ್ಲಿ ಸಿಲುಕಿದ್ದ ಥಾರ್ ಎಸ್‌ಯುವಿಯನ್ನು ಹೊರ ತಂದ ಜೆಸಿಬಿ

ಮಹೀಂದ್ರಾ ಕಂಪನಿಯು ಕಳೆದ ವರ್ಷ ಹೊಸ ಥಾರ್ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ಎಸ್‌ಯುವಿಯು ಹೆಚ್ಚು ಜನಪ್ರಿಯವಾಗಿದೆ.

ಕಡಲ ತೀರದಲ್ಲಿ ಸಿಲುಕಿದ್ದ ಥಾರ್ ಎಸ್‌ಯುವಿಯನ್ನು ಹೊರ ತಂದ ಜೆಸಿಬಿ

ಹೊಸ ಮಹೀಂದ್ರಾ ಥಾರ್ ಎಸ್‌ಯುವಿಗೆ ಸಂಬಂಧಿಸಿದ ಹಲವಾರು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈಗ ಮಹೀಂದ್ರಾ ಥಾರ್ ಎಸ್‌ಯುವಿಗೆ ಸಂಬಂಧಿಸಿದ ಮತ್ತೊಂದು ವೀಡಿಯೊವನ್ನು ಯೂಟ್ಯೂಬ್'ನಲ್ಲಿ ಅಪ್ ಲೋಡ್ ಮಾಡಲಾಗಿದೆ.

ಕಡಲ ತೀರದಲ್ಲಿ ಸಿಲುಕಿದ್ದ ಥಾರ್ ಎಸ್‌ಯುವಿಯನ್ನು ಹೊರ ತಂದ ಜೆಸಿಬಿ

ಈ ವೀಡಿಯೊ ಮಹೀಂದ್ರಾ ಥಾರ್‌ ಅಭಿಮಾನಿಗಳನ್ನು ನಿರಾಶೆಗೊಳಿಸಬಹುದು. ಏಕೆಂದರೆ ಈ ವೀಡಿಯೊದಲ್ಲಿ ಹೊಸ ಮಹೀಂದ್ರಾ ಥಾರ್ ಎಸ್‌ಯುವಿ ಕಡಲತೀರದಲ್ಲಿ ಹೊರ ಬರಲಾರದ ಸ್ಥಿತಿಯಲ್ಲಿ ಸಿಲುಕಿಕೊಂಡಿದೆ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಕಡಲ ತೀರದಲ್ಲಿ ಸಿಲುಕಿದ್ದ ಥಾರ್ ಎಸ್‌ಯುವಿಯನ್ನು ಹೊರ ತಂದ ಜೆಸಿಬಿ

ನಂತರ ಈ ಎಸ್‌ಯುವಿಯನ್ನು ಜೆಸಿಬಿಯ ಸಹಾಯದಿಂದ ಹೊರತೆಗೆಯಲಾಗುತ್ತದೆ. ಹೊಸ ಮಹೀಂದ್ರಾ ಥಾರ್ ಎಸ್‌ಯುವಿಗೆ ಸಂಬಂಧಿಸಿದ ಈ ವಿಡಿಯೋವನ್ನು ನಿಶಾಂತ್ ನರಿಯಾನಿ ಎಂಬುವವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

ಕಡಲ ತೀರದಲ್ಲಿ ಸಿಲುಕಿದ್ದ ಥಾರ್ ಎಸ್‌ಯುವಿಯನ್ನು ಹೊರ ತಂದ ಜೆಸಿಬಿ

ಈ ಎಸ್‌ಯುವಿಯ ಮಾಲೀಕರು ವಾರಾಂತ್ಯದಲ್ಲಿ ಕಡಲ ತೀರದಲ್ಲಿ ಚಾಲನೆ ಮಾಡುತ್ತಿದ್ದರು. ಈ ವೇಳೆ ಥಾರ್ ಎಸ್‌ಯುವಿ ಅಲ್ಲಿನ ಜೌಗು ಪ್ರದೇಶದಲ್ಲಿ ಸಿಲುಕಿಕೊಂಡಿದೆ. ಇದು ಹೊಸ ಮಹೀಂದ್ರಾ ಥಾರ್ ಎಸ್‌ಯುವಿಯ 2 ವ್ಹೀಲ್ ಡ್ರೈವ್ ಮಾದರಿಯೇ ಅಥವಾ 4 ವ್ಹೀಲ್ ಡ್ರೈವ್ ಮಾದರಿಯೇ ಎಂಬುದು ತಿಳಿದು ಬಂದಿಲ್ಲ.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಕಡಲ ತೀರದಲ್ಲಿ ಸಿಲುಕಿದ್ದ ಥಾರ್ ಎಸ್‌ಯುವಿಯನ್ನು ಹೊರ ತಂದ ಜೆಸಿಬಿ

ಆದರೆ ಈ ಎಸ್‌ಯುವಿ ಜೌಗು ಪ್ರದೇಶದಲ್ಲಿ ಹೊರ ಬರಲಾರದ ಸ್ಥಿತಿಯಲ್ಲಿ ಸಿಕ್ಕಿಬಿದ್ದಿರುವುದು ವೀಡಿಯೊದಿಂದ ಸ್ಪಷ್ಟವಾಗಿದೆ. ಅಲ್ಲಿ ನೆರೆದಿದ್ದವರು ಕೆಸರಿನಲ್ಲಿ ಸಿಲುಕಿದ್ದ ಥಾರ್ ಎಸ್‌ಯುವಿಯನ್ನು ಹೊರ ತೆಗೆಯಲು ಪ್ರಯತ್ನಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು.

ಕಡಲ ತೀರದಲ್ಲಿ ಸಿಲುಕಿದ್ದ ಥಾರ್ ಎಸ್‌ಯುವಿಯನ್ನು ಹೊರ ತಂದ ಜೆಸಿಬಿ

ಆದರೆ ಥಾರ್ ಎಸ್‌ಯುವಿಯ ಎಲ್ಲಾ ವ್ಹೀಲ್'ಗಳು ಸಂಪೂರ್ಣವಾಗಿ ಕೆಸರಿನಲ್ಲಿ ಹೂತು ಹೋಗಿರುವ ಕಾರಣಕ್ಕೆ ಜನರು ಎಷ್ಟೇ ಪ್ರಯತ್ನ ಪಟ್ಟರೂ ಹೊರ ಬರುವುದಕ್ಕೆ ಸಾಧ್ಯವಾಗಿಲ್ಲ.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಕಡಲ ತೀರದಲ್ಲಿ ಸಿಲುಕಿದ್ದ ಥಾರ್ ಎಸ್‌ಯುವಿಯನ್ನು ಹೊರ ತಂದ ಜೆಸಿಬಿ

ಥಾರ್ ಎಸ್‌ಯುವಿಯು ಹಲವು ಕಾಲದವರೆಗೆ ಕೆಸರಿನಲ್ಲಿ ಸಿಲುಕಿಕೊಂಡಿದ್ದರಿಂದ ಸಮುದ್ರದ ಅಲೆಯಲ್ಲಿ ಕೊಚ್ಚಿ ಕೊಂಡು ಹೋಗಬಹುದು ಎಂಬ ಆತಂಕ ಅಲ್ಲಿದ್ದವರಲ್ಲಿ ಮನೆ ಮಾಡಿತ್ತು.

ಕೆಲ ಸಮಯದ ನಂತರ ಮಹೀಂದ್ರಾ ಥಾರ್‌ ಎಸ್‌ಯುವಿ ಮಾಲೀಕರು ಬ್ಯಾಕ್‌ಹೋ ಲೋಡರ್‌ ಅಂದರೆ ಜೆಸಿಬಿಯೊಂದಿಗೆ ಆಗಮಿಸುತ್ತಾರೆ. ಭಾರೀ ಗಾತ್ರದ ವಾಹನವಾದ ಕಾರಣಕ್ಕೆ ಜೆಸಿಬಿ ಚಾಲಕ ಕೂಡ ಕಡಲತೀರದ ಮೇಲೆ ವಾಹನ ಚಲಾಯಿಸಲು ಮೊದಲು ಹಿಂಜರಿದಿದ್ದಾನೆ.

MOST READ:ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಕಡಲ ತೀರದಲ್ಲಿ ಸಿಲುಕಿದ್ದ ಥಾರ್ ಎಸ್‌ಯುವಿಯನ್ನು ಹೊರ ತಂದ ಜೆಸಿಬಿ

ಆದರೆ ಥಾರ್‌ ಮಾಲೀಕರು ಧೈರ್ಯ ತುಂಬಿದ ನಂತರ ಜೆಸಿಬಿ ಚಾಲಕ ಕಾರ್ಯಾಚರಣೆಗೆ ಇಳಿದಿದ್ದಾನೆ. ನಂತರ ಜೆಸಿಬಿ ಚಾಲಕ ಥಾರ್‌ ಎಸ್‌ಯುವಿಯನ್ನು ಸುರಕ್ಷಿತವಾಗಿ ಹೊರಕ್ಕೆ ತಂದಿದ್ದಾನೆ.

ಚಿತ್ರಕೃಪೆ: ನಿಶಾಂತ್ ನರಿಯಾನಿ

Most Read Articles

Kannada
English summary
JCB pulls new Mahindra Thar stuck in beach. Read in Kannada.
Story first published: Thursday, May 6, 2021, 12:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X